ಕಲಕೇರಿ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಪಾಪದ ಹೊರೆ ಕಡಿಮೆಯಾಗಿ ಪುಣ್ಯದ ಫಲ ಪ್ರಾಪ್ತಿಯಾಗುತ್ತದೆ. ಅಲ್ಲದೇ ಮಠಮಾನ್ಯಗಳಲ್ಲಿ ನಡೆಯುವ ಪುರಾಣ ಪುಣ್ಯಕಥೆಗಳನ್ನು ಆಲಿಸುವುದರಿಂದ ಮನುಷ್ಯನ ಆರೋಗ್ಯ ಮತ್ತು ಆಯಸ್ಸು ಹೆಚ್ಚುತ್ತದೆ ಎಂದು ಮಾಗಣಗೇರಿಯ ಡಾ.ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.
ಕಲಕೇರಿ ಗ್ರಾಮದ ಭವಾನಿ ದೇವಸ್ಥಾನದಲ್ಲಿ ಶರನ್ ನವರಾತ್ರಿಯ ದಸರೆಯ ಪ್ರಯುಕ್ತ ರವಿವಾರ ಸಂಜೆ ಹಮ್ಮಿಕೊಂಡ ೩೦ನೇ ವರ್ಷದ ಪರಮೇಶ್ವರಿ ದೇವಿಯ ಪುರಾಣ ಪ್ರಾರಂಭೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಶಿಷ್ಟರ ರಕ್ಷಣೆ ಮತ್ತು ದುಷ್ಠರ ದಮನ ದೇವಿ ಪುರಾಣದ ಮೂಲ ಉದ್ದೇಶವಾಗಿದೆ. ಆಧುನಿಕ ಜೀವನದ ಜಂಜಾಟಗಳಿಂದ ಹೊರ ಬರಲು ಮನಸ್ಸಿನ ಸಂತೃಪ್ತಿಗಾಗಿ ಮಾನಸಿಕ ನೆಮ್ಮದಿ ಹೊಂದಲು ಪುರಾಣ ಪ್ರವಚನ ಆಲಿಸುವುದು ಅತ್ಯವಶ್ಯವಾಗಿದೆ ಎಂದು ಅವರು ಹೇಳಿದರು.
ಕಲಕೇರಿಯ ಗುರುಮರುಳಾರಾಧ್ಯರ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ಮಾತನಾಡಿದರು.
ಹಿರೂರಿನ ಜಯಸಿದ್ದೇಶ್ವರ ಸ್ವಾಮೀಜಿ ಪುರಾಣವನ್ನು ನಡೆಸಿಕೊಟ್ಟರು. ಕಲಕೇರಿ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ಆಶಿರ್ವಚನ ನೀಡಿದರು. ಗದ್ದುಗೆಮಠದ ಗುರುಮಡಿವಾಳೇಶ್ವರ ಶಿವಾಚಾರ್ಯರು, ಜಾಲಹಳ್ಳಿಮಠದ ಡಾ.ವ್ಹಿ ಕೆ ಜಾಲಹಳ್ಳಿಮಠ, ಕುಮಾರಸ್ವಾಮಿ ಜಾಲಹಳ್ಳಿಮಠ ಅಧ್ಯಕ್ಷತೆಯನ್ನು ವಹಿಸಿದ್ದರು, ವೇ.ಮೂ. ಸದಾನಂದ ಹಿರೇಮಠ ನೇತ್ರತ್ವ ವಹಿಸಿದ್ದರು, ಮೃತ್ಯುಂಜಯ ಮಠಪತಿ ಪೂಜಾ ಕೈಂಕರ್ಯ ನೆರವೇರಿಸಿದರು. ಕಡಕೋಳ ಮನೆತನದ ಸುಮಂಗಲೆಯರು ಆರತಿ ಸೇವೆಯನ್ನು ಸಲ್ಲಿಸಿದರು. ದೇವಿ ಉಪಾಸಕ ಮೋತಿಲಾಲ್ ಕುಲಕರ್ಣಿ ಅವರ ನೇತ್ರತ್ವದಲ್ಲಿ ಘಟಸ್ಥಾಪನೆ ಮಾಡಲಾಯಿತು.
ದೇವಿ ಉಪಾಸಕ ಮೋತಿಲಾಲ್ ಕುಲಕರ್ಣಿ, ಅಮರೀಷ ನಾಡಗೌಡ, ಶಾಂತಗೌಡ ಪಾಟೀಲ, ಮಲಕಾಜಪ್ಪಗೌಡ ಬಿರಾದಾರ, ಮಲ್ಲಣ್ಣ ದೇಸಾಯಿ, ಶಾಂತಪ್ಪ ಪಟ್ಟಣಶೆಟ್ಟಿ, ಆರ್ ಡಿ ಪಾಟೀಲ, ಶಿವಾನಂದ ಸಾತಿಹಾಳ, ದೇವಿಂದ್ರ ಜಂಬಗಿ, ಸುಭಾಸ ಅಡಕಿ, ಕನಕರಾಜ್ ವಡ್ಡರ್, ಅರವಿಂದ ಬೇನಾಳ, ದೇವಿಂದ್ರ ಕಡಕೋಳ, ನಿಂಗನಗೌಡ ಗುಂಡಕನಾಳ, ಶ್ರೀಶೈಲ ಬಡಗೇರ ಸೇರಿದಂತೆ ಇತರರು ಇದ್ದರು.
ವೀರೇಶ ಗವಾಯಿಗಳು ಪ್ರಾರ್ಥಿಸಿದರು, ಬಸವರಾಜ್ ಗುಮಶೆಟ್ಟಿ ಸ್ವಾಗತಿಸಿದರು, ಸುಧಾಕರ ಅಡಕಿ ನಿರೂಪಿಸಿದರು.
ಅ.೨೪ ರಂದು ಮಹಿಳೆಯರಿಂದ ರಥೋತ್ಸವ
ಕಲಕೇರಿ ಗ್ರಾಮದ ಶ್ರೀ ಭವಾನಿ ದೇವಿ ದೇವಸ್ಥಾನದ ದಸರಾ ಕಾರ್ಯಕ್ರಮಕ್ಕೆ ೩೦ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಉಪಾಸಕ ಮೋತಿಲಾಲ್ ಕುಲಕರ್ಣಿಯವರ ೫೦ನೇ ವರ್ಷದ ಹುಟ್ಟು ಹಬ್ಬದ ಸಂಕಲ್ಪದಂತೆ ಇದೇ ಮೊದಲ ಬಾರಿಗೆ ಹೊಸ ರಥವನ್ನು ನಿರ್ಮಿಸಿದ್ದು, ಅ.೨೪ ರಂದು ಸಂಜೆ ೪ ಘಂಟೆಗೆ ನೂತನ ರಥದ ಉತ್ಸವ ನಡೆಯಲಿದೆ. ವಿಶೇಷವಾಗಿ ಈ ರಥವನ್ನು ಸುಮಂಗಲೆಯರು ಮಾತ್ರ ಎಳೆಯಲಿದ್ದು, ಭವಾನಿ ದೇವಸ್ಥಾನದಿಂದ ಅಗಸಿ ಹತ್ತಿರದ ಮಲ್ಲಯ್ಯನ ದೇವಸ್ಥಾನದವರೆಗೆ ರಥವನ್ನು ಎಳೆಯಲಾಗುತ್ತದೆ ಎಂದು ದೇವಸ್ಥಾನದ ಯಮನೂರಿ ಕುಲಕರ್ಣಿ ಹೇಳಿದ್ದಾರೆ.