ಇಂಡಿ: ನಗರದ ವಿಜಯಪುರ ರಸ್ತೆಯಲ್ಲಿರುವ ಭಾರತ ಗ್ಯಾಸ್ ಅಡುಗೆ ಅನಿಲ ಘಟಕವನ್ನು ನಗರದಿಂದ ಹೊರಗೆ ಸ್ಥಳಾಂತರ ಮಾಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರು ಪ್ರತಿಭಟನೆ ಮಾಡಿ ಕಂದಾಯ ಉಪವಿಭಾಗ ಕಛೇರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸೋಮವಾರ ಪಟ್ಟಣದ ತಾಲೂಕು ಆಡಳಿತ ಸೌಧದ ಉಪವಿಭಾಗ ಅಧಿಕಾರಿಗಳ ಕಾರ್ಯಾಲಯಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರು ತೆರಳಿ, ನಗರದಲ್ಲಿ ಇರುವ ಭಾರತ ಗ್ಯಾಸ್ ಘಟಕ, ನಗರದಾಚೆ ಸ್ಥಳಾಂತರ ಮಾಡಬೇಕು ಎಂದು ಮನವಿ ಸಲ್ಲಿಸಿದರು.
ಅಲ್ಲಿ ಸಂಬಂಧಿಸಿದ ಭಾರತ ಗ್ಯಾಸ್ ಏಜೆನ್ಸಿ ಮತ್ತು ಕಾರ್ಮಿಕರು ಕ್ರಮಬದ್ಧವಾಗಿ, ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದೆ ಸರ್ಕಾರದ ನಿಯಮ ಗಾಳಿಗೆ ತೂರಿ ಬೇಕಾಬಿಟ್ಟಿ ಬೇಜವಾಬ್ದಾರಿತನದಿಂದ, ಕಾರ್ಯನಿರ್ವಹಿಸುತ್ತಿದ್ದು, ಸುತ್ತಮುತ್ತಲಿನ ಜನರು ಭಯದಲ್ಲಿ, ಜೀವ ಕೈಯಲ್ಲಿ ಹಿಡಿದು ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಈ ಬಗ್ಗೆ ದೂರು ಸಲ್ಲಿಸಲಾಗಿದ್ದು, ಕ್ರಮ ವಹಸಿದೇ ಮೌನವಾಗಿದ್ದು, ಜನಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಿರುವುದು ಮೇಲ್ನೊಟಕ್ಕೆ ಕಂಡು ಬಂದಿರುತ್ತದೆ. ನಗರದ ಜನರ ಹಿತ ದೃಷ್ಟಿಯಿಂದ ಭಾರತ ಗ್ಯಾಸ್ ಏಜಿನ್ಸಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡರು.
ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ರೆ, ಮುಂಬರುವ ಸಮಸ್ಯೆಗಳಿಗೆ ತಾವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಅಶೋಕ ಜಾಧವ, ತಾಲೂಕು ಅಧ್ಯಕ್ಷ ಗಣಪತಿ ರಾಠೋಡ, ಲಕ್ಷ್ಮಣ ಚಡಚಣ, ಮಲ್ಲಿಕಾರ್ಜುನ ಬಿರಾದಾರ, ಸುರೇಶ ನಿಮ್ಮೊಣಿ, ಅಜೀತ ಬಾವಿಕಟ್ಟಿ, ಅನೀಲ ಕಪಾಲಿ ಉಪಸ್ಥಿತರಿದ್ದರು.
Related Posts
Add A Comment