Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಹಿರಿಯ ಸಾಹಿತಿ ಸಿದ್ಧರಾಮ ಉಪ್ಪಿನ ಗೆ ’ಉದಯರಶ್ಮಿ’ ಸಂಪಾದಕರಿಂದ ಸನ್ಮಾನ ವಿಜಯಪುರ: ಆಲಮೇಲದ ಹಿರಿಯ ಬಂಡಾಯ ಸಾಹಿತಿ ಸಿದ್ಧರಾಮ ಉಪ್ಪಿನ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಅವರು ಸನ್ಮಾನಿಸಿ, ಗೌರವಿಸಿದರು. ’ಉದಯರಶ್ಮಿ’ ಸಂಪಾದಕರೂ ಆಗಿರುವ ಇಂದುಶೇಖರ ಅವರ ಸ್ವಗೃಹ ’ರಮ್ಯರಶ್ಮಿ’ಗೆ ಭಾನುವಾರ ಆಗಮಿಸಿದ ಸಾಹಿತಿ ಉಪ್ಪಿನ ಅವರು ಪತ್ರಿಕೆಯ ಬೆಳವಣಿಗೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭ ಮಾತನಾಡಿದ ಅವರು, ಪ್ರಸ್ತುತ ಸಾಲಿನ ’ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ಯ ಆಯ್ಕೆಯಲ್ಲಿ ಸರಕಾರವು ತಾರತಮ್ಯ ಧೋರಣೆ ಅನುಸರಿಸದೆ, ಅಪಸ್ವರಗಳಿಗೆ ಆಸ್ಪದ ನೀಡದಂತೆ ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ನೀಡಬೇಕು. ಅರ್ಹ ಸಾಹಿತಿಗಳಿಗೆ, ಸಾಧಕರಿಗೆ ಗೌರವ ಸಿಗಬೇಕೆಂಬ ಆಶಯ ವ್ಯಕ್ತಪಡಿಸಿದರು.ಪತ್ರಕರ್ತ ಶಿವಕುಮಾರ ಉಪ್ಪಿನ, ಚಲನಚಿತ್ರ ನಟ ಸಂತೋಷ ಉಪ್ಪಿನ ಇದ್ದರು.
ಜ.2ರ ಸಿದ್ದೇಶ್ವರ ಶ್ರೀ ಗುರುನಮನ ಕಾರ್ಯಕ್ರಮದ ರೂಪುರೇಷೆ ಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲ ಅಭಿಮತ ವಿಜಯಪುರ: ಮುಂಬರುವ ಜನೇವರಿ 2 ರಂದು ನಡೆಯಲಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮದ ರೂಪುರೇಷೆಗಳ ಸುತ್ತೂರು ಮತ್ತು ಕನೇರಿ ಮಠದ ಶ್ರೀಗಳ ಚರ್ಚಿಸಿ ಕುರಿತು ಜ್ಞಾನಯೋಗಾಶ್ರಮ ಸಮಿತಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ನಗರದ ಜ್ಞಾನಯೋಗಾಶ್ರಮದಲ್ಲಿ ಸೋಮವಾರ ರಾತ್ರಿ ನಾನಾ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಮತ್ತು ಜ್ಞಾನಯೋಗಾಶ್ರಮದ ಕುರಿತು ಯಾವ ಕೆಲಸ ವಹಿಸಿದರೂ ಭಕ್ತಿಪೂರ್ವಕವಾಗಿ ಮಾಡುತ್ತೇನೆ ಎಂದು ಹೇಳಿದರು.ಸಿದ್ಧೇಶ್ವರ ಸ್ವಾಮೀಜಿಯವರ ಜೀವನ ವಿಭಿನ್ನವಾಗಿತ್ತು. ಅವರೊಬ್ಬ ಸಂತ ಮಾತ್ರವಲ್ಲ, ಸರಳ, ಶ್ರೇಷ್ಠ ಹಾಗೂ ಅರ್ಥಪೂರ್ಣ ಬದುಕು ಸಾಗಿಸಿದರು. ಅವರ ಜೀವನದ ಪಯಣದಲ್ಲಿ ವಿಶೇಷವಾಗಿ ಗ್ರಾಮೀಣ ಜನರ, ರೈತರ ಬದುಕಿನ ಬಗ್ಗೆ ಕಾಳಜಿ ಮತ್ತು ಬದ್ಧತೆ…
ವಿಜಯಪುರ: ಬರ ಸಮಸ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು ಮತ್ತು ವಿದ್ಯುತ್ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಇಂದು ಮಂಗಳವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅವರು, ರೈತರ ಸಮಸ್ಯೆಗಳಿಗೆ ಕೂಡಲೆ ಸ್ಪಂದಿಸಿದರು. ಅಲ್ಲದೇ, ಸಂಬಂಧಿಸಿದ ಅಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ಕೂಡಲೇ ಕ್ರಮ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು.ತಿಡಗುಂದಿ ಸುತ್ತಮುತ್ತಲಿನ ನಾನಾ ಗ್ರಾಮಗಳಿಂದ ಆಗಮಸಿದ್ದ ರೈತರು, ಮುಳವಾಡ ಏತ ನಿರಾವರಿ ಯೋಜನೆಯ ತಿಡಗುಂದಿ ಅಕ್ವಾಡಕ್ಟ್ ಮೂಲಕ ಕೆರೆಗಳಿಗೆ ನೀರು ಹರಿಸಬೇಕು. ಇದರಿಂದ ಮಖಣಾಪುರ, ಡೋಮನಾಳ, ತಿಡಗುಂದಿ, ಬೊಮ್ಮನಳ್ಳಿ, ಮಿಂಚನಾಳ, ಗುಣಕಿ ಸೇರಿದಂತೆ ನಾನಾ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಸಚಿವರ ಬಳಿ ಅಳಲು ತೋಡಿಕೊಂಡರು. ಆಗ ಕೂಡಲೇ ಸ್ಪಂದಿಸಿದ ಸಚಿವರು ಕೆಬಿಜೆಎನ್ಎಲ್ ಸೂಪರಿಂಟೆಂಡೆಂಟ್…
ವಿಜಯಪುರ: ಬಿ. ಎಲ್. ಡಿ. ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಅಕ್ಟೋಬರ್ 18 ರಿಂದ 31ರ ವರೆಗೆ ಮುಟ್ಟು ನಿಂತ ಮೇಲಿನ ಸಮಸ್ಯೆ, ಆ ವಯೋಮಾನದಲ್ಲಿ ಉಂಟಾಗುವ ಹಾರ್ಮೋನ್ ವತ್ಯಾಸದ ತಪಾಸಣೆ ಹಾಗೂ ಮೂಳೆ ಸವೆತದ ಪರೀಕ್ಷೆ ಉಚಿತ ಶಿಬಿರ ನಡೆಯಲಿದೆ.ಮಹಾವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ ವತಿಯಿಂದ ಆಯೋಜಿಸಲಾಗಿರುವ ಈ ಶಿಬಿರದಲ್ಲಿ ಈ ವ್ಯಾದಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವದು. ಸಾರ್ವಜನಿಕರು ಈ ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.ಆಸಕ್ತರು ಮೋಬೈಲ್ ಸಂಖ್ಯೆ: 9481603060 ಮತ್ತು 9513397413 ಸಂಪರ್ಕಿಸಬಹುದಾಗಿದೆ.
ದೇವರಹಿಪ್ಪರಗಿ: ಜಾಲವಾದ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಅಶ್ವಿನಿ ಶಂಕ್ರೆಪ್ಪ ಚಿತ್ತಾಪೂರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಸರಪಳಿ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಎಂ.ಕೆ.ಕುಡಚಿ, ದೈಹಿಕ ಶಿಕ್ಷಕ ಗುರುರಾಜ್ ಕುಳೇಕುಮಟಗಿ, ಅಶೋಕ ಪತ್ತಾರ ಶುಭ ಕೋರಿದ್ದಾರೆ.
ದೇವರ ಹಿಪ್ಪರಗಿ: ಪಡಗಾನೂರ ಗ್ರಾಮದ ಜಿ.ಎಮ್.ಪಿ.ಎಸ್ ಶಾಲೆಯ ವಿದ್ಯಾರ್ಥಿನಿ ಅಮೃತಾ ಹಣಮಂತ ಮುರಾಳ ಜಿಲ್ಲಾ ಮಟ್ಟದ ಕ್ರೀಡಾಕೂಟದ ಚಕ್ರ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿದ್ಯಾರ್ಥಿನೀಯ ಸಾಧನೆಗೆ ಮಲ್ಲಿಕಾರ್ಜುನ ತಳಕೇರಿ, ಎನ್.ಎಸ್.ಹಿರೇಮಠ, ಡಿ.ಎಚ್.ರಾಠೋಡ ಶುಭ ಕೋರಿದ್ದಾರೆ.
ದೇವರ ಹಿಪ್ಪರಗಿ: ಪಡಗಾನೂರ ಗ್ರಾಮದ ವೆಂಕಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಅವಿನಾಶ ಮಲ್ಲಿಕಾರ್ಜುನ ತಳಕೇರಿ ಜಿಲ್ಲಾ ಮಟ್ಟದ ಕ್ರೀಡಾಕೂಟದ ಚಕ್ರಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಮುಖ್ಯಗುರು ಎಮ್.ಎಸ್.ದಿನ್ನಿ, ದೈಹಿಕ ಶಿಕ್ಷಕ ಎಸ್.ಐ.ಹಿರೇಮಠ, ಎ.ಎಸ್.ಪತ್ತಾರ, ಎಸ್.ಎನ್.ಪೂಜಾರಿ, ಹಾಜೀಲಾಲ್, ಶಂಕರ ಕೆಂಭೋಗಿ ಶುಭ ಹಾರೈಸಿದ್ದಾರೆ.
ಯಡ್ರಾಮಿ: ಪಟ್ಟಣದ ಗ್ರಾಮದೇವತೆ ಮಹಿಳಾ ಮಂಡಳಿಯ ಸದಸ್ಯರು ನವರಾತ್ರೋತ್ಸವದ ಎರಡನೆಯ ದಿನವಾದ ಸೋಮವಾರ ಶ್ವೇತವರ್ಣದ ಸೀರೆಯನ್ನುಟ್ಟು ಸಂಭ್ರಮಿಸಿದರು.ಮಂಡಳಿಯ ಪ್ರಮುಖರಾದ ಜಯಶ್ರಿ ಬೆಲ್ಲದ, ಗಿರಿಜಾ ಪುರಾಣಿಕ, ಹರಿನಿತಾ ಡಂಬಳ, ಪವಿತ್ರಾ ಡಂಬಳ, ಮಂಗಳಾ ಭಾವಿಕಟ್ಟಿ, ಕವಿತಾ ದೇಸಾಯಿ ಸೇರಿದಂತೆ ಹಲವರಿದ್ದರು.
ಕಲಕೇರಿ: ಸಮೀಪದ ಬೆಕಿನಾಳ ಗ್ರಾಮದಲ್ಲಿ ವಿಶ್ವ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭವನ ಕಟ್ಟಡ ನಿರ‍್ಮಾಣದ ಭೂಮಿ ಪೂಜೆ ನೆರವೇರಿಸಲಾಯಿತು.ಈ ವೇಳೆ ಊರಿನ ಹಿರಿಯರಾದ ಶರಣಪ್ಪ ಛಲವಾದಿ, ಬಸಪ್ಪ ಕಟ್ಟಿಮನಿ, ಚನ್ನಪ್ಪ ಕಟ್ಟಿಮನಿ, ಬಸಪ್ಪ ಲಿಂಗದಳ್ಳಿ, ಯಮನಪ್ಪ ನಾಟಿಕಾರ, ಮುಖಂಡರಾದ ಶ್ರೀಶೈಲ್ ವಾಲಿಕಾರ, ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಕಪ್ಪ ಬಡಿಗೇರ, ರಾಜಶೇಖರ ಹೊಸಮನಿ, ಚಂದ್ರಕಾಂತ್ ಬಡಿಗೇರ, ಮಲ್ಲು ನಾವಿ ಪರಶುರಾಮ್ ಬಡಿಗೇರ ಹಾಗೂ ಊರಿನ ಯುವ ಮುಖಂಡರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ಪ್ರದೇಶಕ್ಕೆ ಜಲಾಶಯದಲ್ಲಿ ಒಳಹರಿವು ಸ್ಥಗಿತಗೊಂಡ ನಂತರ ೧೪ ಚಾಲೂ ಮತ್ತು ೧೦ ದಿನ ಬಂದ್ ಪದ್ಧತಿ ಮೂಲಕ ನೀರು ಹರಿಸಲು ಮುಂಗಾರು ಹಂಗಾಮಿನ ನಿರಾವರಿ ಸಲಹಾ ಸಮಿತಿ ಸಭೆಯ ನಿರ್ಣಯವನ್ನು ಪರಿಷ್ಕರಿಸಿ ಜಲಾಶಯಕ್ಕೆ ಒಳಹರಿವು ಬಂದಿರುವುದರಿಂದ ಚಾಲೂ-ಬಂದ್ ಪದ್ಧತಿಯನ್ನು ಪರಿಷ್ಕರಿಸಿ ೧೪ ದಿನ ಚಾಲೂ ಮತ್ತು ೮ ದಿನ ಬಂದ್ ಪದ್ಧತಿ ಅನುಸರಿಸಲಾಗಿದೆ ಎಂದು ಕೃಷ್ಣಾ ಭಾಗ್ಯ ಜಲನಿಗದಮ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.ದಿನಾಂಕ : ೧೭-೧೦-೨೦೨೩ರಿಂದ ಚಾಲೂ ಮಾಡುವ ಬದಲು ದಿನಾಂಕ : ೧೪-೧೦-೨೦೨೩ರಿಂದ ಚಾಲೂ ಮಾಡಿ ಹಾಗೂ ಮುಂಗಾರು ಹಂಗಾಮಿಗೆ ದಿನಾಂಕ : ೨೩-೧೧-೨೦೨೩ರವರೆಗೆ ನೀರಾವರಿಗೆ ನೀರು ಹರಿಸಲು ತೆಗೆದುಕೊಂಡ ನಿರ್ಣಯವನ್ನು ಸಹ ದಿನಾಂಕ : ೧೦-೧೨-೨೦೨೩ರವರೆಗೆ ವಿಸ್ತರಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿಗಾಗಿ ನೀರು ಹರಿಸುವುದನ್ನು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರ ಹಿತಕಾಪಾಡಲು ಕ್ರಮ ಕೈಗೊಳ್ಳಲಾಗಿರುವುದಾಗಿ ನೀರಾವರಿ ಸಲಹಾ…
