ವಿಜಯಪುರ: ಬಿ. ಎಲ್. ಡಿ. ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಅಕ್ಟೋಬರ್ 18 ರಿಂದ 31ರ ವರೆಗೆ ಮುಟ್ಟು ನಿಂತ ಮೇಲಿನ ಸಮಸ್ಯೆ, ಆ ವಯೋಮಾನದಲ್ಲಿ ಉಂಟಾಗುವ ಹಾರ್ಮೋನ್ ವತ್ಯಾಸದ ತಪಾಸಣೆ ಹಾಗೂ ಮೂಳೆ ಸವೆತದ ಪರೀಕ್ಷೆ ಉಚಿತ ಶಿಬಿರ ನಡೆಯಲಿದೆ.
ಮಹಾವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ ವತಿಯಿಂದ ಆಯೋಜಿಸಲಾಗಿರುವ ಈ ಶಿಬಿರದಲ್ಲಿ ಈ ವ್ಯಾದಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವದು. ಸಾರ್ವಜನಿಕರು ಈ ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಆಸಕ್ತರು ಮೋಬೈಲ್ ಸಂಖ್ಯೆ: 9481603060 ಮತ್ತು 9513397413 ಸಂಪರ್ಕಿಸಬಹುದಾಗಿದೆ.
ಅ.18ರಿಂದ ಹಾರ್ಮೋನ್ ವ್ಯತ್ಯಾಸ & ಮೂಳೆ ಸವೆತದ ಪರೀಕ್ಷೆ ಉಚಿತ ಶಿಬಿರ
Related Posts
Add A Comment