ಹಿರಿಯ ಸಾಹಿತಿ ಸಿದ್ಧರಾಮ ಉಪ್ಪಿನ ಗೆ ’ಉದಯರಶ್ಮಿ’ ಸಂಪಾದಕರಿಂದ ಸನ್ಮಾನ
ವಿಜಯಪುರ: ಆಲಮೇಲದ ಹಿರಿಯ ಬಂಡಾಯ ಸಾಹಿತಿ ಸಿದ್ಧರಾಮ ಉಪ್ಪಿನ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಅವರು ಸನ್ಮಾನಿಸಿ, ಗೌರವಿಸಿದರು. ’ಉದಯರಶ್ಮಿ’ ಸಂಪಾದಕರೂ ಆಗಿರುವ ಇಂದುಶೇಖರ ಅವರ ಸ್ವಗೃಹ ’ರಮ್ಯರಶ್ಮಿ’ಗೆ ಭಾನುವಾರ ಆಗಮಿಸಿದ ಸಾಹಿತಿ ಉಪ್ಪಿನ ಅವರು ಪತ್ರಿಕೆಯ ಬೆಳವಣಿಗೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಪ್ರಸ್ತುತ ಸಾಲಿನ ’ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ಯ ಆಯ್ಕೆಯಲ್ಲಿ ಸರಕಾರವು ತಾರತಮ್ಯ ಧೋರಣೆ ಅನುಸರಿಸದೆ, ಅಪಸ್ವರಗಳಿಗೆ ಆಸ್ಪದ ನೀಡದಂತೆ ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ನೀಡಬೇಕು. ಅರ್ಹ ಸಾಹಿತಿಗಳಿಗೆ, ಸಾಧಕರಿಗೆ ಗೌರವ ಸಿಗಬೇಕೆಂಬ ಆಶಯ ವ್ಯಕ್ತಪಡಿಸಿದರು.
ಪತ್ರಕರ್ತ ಶಿವಕುಮಾರ ಉಪ್ಪಿನ, ಚಲನಚಿತ್ರ ನಟ ಸಂತೋಷ ಉಪ್ಪಿನ ಇದ್ದರು.