ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ಪ್ರದೇಶಕ್ಕೆ ಜಲಾಶಯದಲ್ಲಿ ಒಳಹರಿವು ಸ್ಥಗಿತಗೊಂಡ ನಂತರ ೧೪ ಚಾಲೂ ಮತ್ತು ೧೦ ದಿನ ಬಂದ್ ಪದ್ಧತಿ ಮೂಲಕ ನೀರು ಹರಿಸಲು ಮುಂಗಾರು ಹಂಗಾಮಿನ ನಿರಾವರಿ ಸಲಹಾ ಸಮಿತಿ ಸಭೆಯ ನಿರ್ಣಯವನ್ನು ಪರಿಷ್ಕರಿಸಿ ಜಲಾಶಯಕ್ಕೆ ಒಳಹರಿವು ಬಂದಿರುವುದರಿಂದ ಚಾಲೂ-ಬಂದ್ ಪದ್ಧತಿಯನ್ನು ಪರಿಷ್ಕರಿಸಿ ೧೪ ದಿನ ಚಾಲೂ ಮತ್ತು ೮ ದಿನ ಬಂದ್ ಪದ್ಧತಿ ಅನುಸರಿಸಲಾಗಿದೆ ಎಂದು ಕೃಷ್ಣಾ ಭಾಗ್ಯ ಜಲನಿಗದಮ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ದಿನಾಂಕ : ೧೭-೧೦-೨೦೨೩ರಿಂದ ಚಾಲೂ ಮಾಡುವ ಬದಲು ದಿನಾಂಕ : ೧೪-೧೦-೨೦೨೩ರಿಂದ ಚಾಲೂ ಮಾಡಿ ಹಾಗೂ ಮುಂಗಾರು ಹಂಗಾಮಿಗೆ ದಿನಾಂಕ : ೨೩-೧೧-೨೦೨೩ರವರೆಗೆ ನೀರಾವರಿಗೆ ನೀರು ಹರಿಸಲು ತೆಗೆದುಕೊಂಡ ನಿರ್ಣಯವನ್ನು ಸಹ ದಿನಾಂಕ : ೧೦-೧೨-೨೦೨೩ರವರೆಗೆ ವಿಸ್ತರಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿಗಾಗಿ ನೀರು ಹರಿಸುವುದನ್ನು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರ ಹಿತಕಾಪಾಡಲು ಕ್ರಮ ಕೈಗೊಳ್ಳಲಾಗಿರುವುದಾಗಿ ನೀರಾವರಿ ಸಲಹಾ ಸಮಿತಿಯಿಂದ ಅನುಮೋದನೆ ಪಡೆಯಲಾಗಿದೆ.
ಅದರಂತೆ ಅಣೆಕಟ್ಟು ವೃತ್ತ, ಆಲಮಟ್ಟಿ ಅಡಿ ಬರುವ ಆಲಮಟ್ಟಿ ಎಡದಂಡೆ ಏತ ನೀರಾವರಿ, ಚಿಮ್ಮಲಗಿ ಪಶ್ಚಿಮ ಕಾಲುವೆ, ಆಲಮಟ್ಟಿ ಎಡದಂಡೆ ಕಾಲುವೆ, ತಿಮ್ಮಾಪುರ ಏತ ನೀರಾವರಿ, ಮುರೋಳ ಏತ ನಿರಾವರಿ ಹಂತ-೧ರ ಪೂರ್ವ ಮತ್ತು ಪಶ್ಚಿಮ ಕಾಲುವೆಗಳ ಜಾಲದ ಅಡಿಯಲ್ಲಿ ಬಾಕಿ ಉಳಿದಿರುವ ಮುಂಗಾರು ಹಂಗಾಮಿನ ದಿನಗಳಿಗೆ ಕಾಲುವೆ ಚಾಲೂ ಇರುವ ದಿನಾಂಕ : ೧೪-೧೦-೨೦೨೩ ರಿಂದ ೨೭-೧೦-೨೦೨೩ರವರೆಗೆ ೧೪ ದಿನ, ದಿನಾಂಕ : ೦೫-೧೧-೨೦೨೩ರಿಂದ ೧೮-೧೧-೨೦೨೩ರವರೆಗೆ ೧೪ ದಿನ ಹಾಗೂ ದಿನಾಂಕ : ೨೭-೧೧-೨೦೨೩ ರಿಂದ ೧೦-೧೨-೨೦೨೩ರವರೆಗೆ ೧೪ ದಿನ. ಕಾಲುವೆ ಬಂದ ಇರುವ ದಿನಾಂಕ : ೨೮-೧೦-೨೦೨೩ ರಿಂದ ೦೪-೧೧-೨೦೨೩ ರವರೆಗೆ ೮ ದಿನ ಹಾಗೂ ದಿನಾಂಕ : ೧೯-೧೧-೨೦೨೩ ರಿಂದ ೨೬-೧೧-೨೦೨೩ರವರೆಗೆ ೦೮ ದಿನ ಹೀಗೆ ೧೪ ದಿನ ಚಾಲೂ ಹಾಗೂ ೦೮ ದಿನ ಬಂದ್ ಪದ್ಧತಿಯನ್ನು ಅನುಸರಿಸಲಾಗುವುದು.
ಅಚ್ಚುಕಟ್ಟು ಪ್ರದೇಶದ ರೈತರು ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಲು ಮನವಿ ಮಾಡಿಕೊಳ್ಳಲಾಗಿದ್ದು, ಕಬ್ಬು, ಬಾಳೆ ಮತ್ತು ಭತ್ತದ ಬೆಳೆಗಳನ್ನು ನೀರಾವರಿ ಆಶ್ರಯದಲ್ಲಿ ಬೆಳೆಯುವುದನ್ನು ನಿಷೇಧಿಸಲಾಗಿದೆ ಹಾಗೂ ನೀರು ಪೂರೈಕೆಯನ್ನು ನಿರ್ಬಂಧಿಸಲಾಗಿದೆ. ಮರೋಳ ಹನಿ ನೀರಾವರಿ ಯೋಜನೆಗೆ ಯಾವುದೇ ಬಂದ್ ಅನುಸರಿಸದೇ ಸತತವಾಗಿ ನೀರು ಪೂರೈಸಲಾಗುವುದು. ಮುಂಬರುವ ಹಿಂಗಾರು ಹಂಗಾಮಿಗೆ ಸಧ್ಯದ ಪರಿಸ್ಥಿತಿಯಲ್ಲಿ ನೀರಾವರಿ ಆಶ್ರಯದಲ್ಲಿ ಬೆಳೆಯುವ ಬೆಳೆಗಳಿಗೆ ಕಾಲುವೆ ಮೂಲಕ ನೀರು ಪೂರೈಸಲು ಸಾಧ್ಯವಾಗುವುದಿಲ್ಲ. ರೈತರು ಮಿತವಾಗಿ ನೀರು ಬಳಕೆ ಮಾಡುವ ಮೂಲಕ ಕೃಷ್ಣಾ ಭಾಗ್ಯ ಜಲ ನಿಗಮದದೊಂದಿಗೆ ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಲುವೆ ಜಾಲಕ್ಕೆ ನೀರು ಹರಿಸುವ ಚಾಲು-ಬಂದ್ ಪದ್ಧತಿ ಪರಿಷ್ಕರಣೆ
Related Posts
Add A Comment