Author: editor.udayarashmi@gmail.com

ಚಡಚಣ: ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆಯ ವತಿಯಿಂದ ಆಯೋಜಿಸಿದ್ದ ವಿಶ್ವ ಶಿಕ್ಷಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಮೀಪದ ಉಮರಜ ಗ್ರಾಮದ ಶಿಕ್ಷಕ ಸಾಹಿತಿ ಪ್ರಮೋದಕುಮಾರ ಮಠಪತಿ ಇವರ ಶೈಕ್ಷಣಿಕ ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ ವೇದಿಕೆಯ ಅಧ್ಯಕ್ಷ ಪ್ರೊ ಎಲ್.ಎಚ್.ಪೆಂಡಾರಿಯವರು ಪ್ರಶಸ್ತಿ ಪ್ರಧಾನ ಮಾಡಿದರು.ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ದಾವಣಗೆರೆಯ ಗಣೇಶ ಶೆಣೈ, ಚಿಕ್ಕಬಳ್ಳಾಪುರದ ಎ ಸರಸಮ್ಮಾ, ಅಮೇರಿಕಾದ ರೂಪ ಮಂಜುನಾಥ, ಗಡಿನಾಡ ಸಾಹಿತಿ ಗುರುಸಿದ್ಧಯ್ಯಾ ಸ್ವಾಮಿ, ನಿವೃತ್ತ ಡಿಡಿಪಿಐ ಡಾ. ಎನ. ಚಂದ್ರೇಗೌಡ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.ಪ್ರಮೋದಕುಮಾರ ಮಠಪತಿಯವರು ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮಾಚಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Read More

ವಿಜಯಪುರ: ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಜವಳಿ ಮಂತ್ರಾಲಯ ಭಾರತ ಸರ್ಕಾರ,ನೇಕಾರರ ಸೇವಾ ಕೇಂದ್ರ ಬೆಂಗಳೂರು ಇವರ ಸಹಯೋಗದಲ್ಲಿ ಅ.೧೯ ರಿಂದ ಅ.೨೫ ರವರೆಗೆ ನಡೆಯುವ ಜಿಲ್ಲಾ ಮಟ್ಟದ ಕೈಮಗ್ಗ ಮೇಳ-೨೦೨೩ ‘ತಾನಾ-ಬಾನಾ’ ಉದ್ಘಾಟನಾ ಕಾರ್ಯಕ್ರಮವನ್ನು ಅ.೧೯ರ ಮಧ್ಯಾಹ್ನ ೪ ಗಂಟೆಗೆ ನಗರದ ಜಿಲ್ಲಾ ಕೋರ್ಟ್ ಎದುರಿಗೆ ಇರುವ ಕೆಇಬಿ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ಡಾ.ಎಂ.ಬಿ.ಪಾಟೀಲ ಇವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ಘನ ಉಪಸ್ಥಿತರಿರುವರು. ವಿಜಯಪುರ ನಗರ ಶಾಸಕರಾದ ಬಸನಗೌಡ ಆರ್.ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ-೨ ಪ್ರಕಾಶ ಹುಕ್ಕೇರಿ, ಸಂಸದ ರಮೇಶ ಜಿಗಜಿಣಗಿ, ಶಾಸಕರುಗಳಾದ ಯಶವಂತರಾಯಗೌಡ ಪಾಟೀಲ, ಹಣಮಂತ ಆರ್.ನಿರಾಣಿ, ಪ್ರಕಾಶ ರಾಠೋಡ, ಸುನೀಲಗೌಡ ಬಿ.ಪಾಟೀಲ, ಪಿ.ಎಚ್.ಪೂಜಾರ, ಅಪ್ಪಾಜಿ ಸಿ.ಎಸ್.ನಾಡಗೌಡ, ವಿಠ್ಠಲ ಕಟಕದೊಂಡ, ಭೀಮನಗೌಡ (ರಾಜುಗೌಡ) ಬಸನಗೌಡ ಪಾಟೀಲ…

Read More

ಇಂಡಿ: ಬಡವರು ಹಸಿವಿನಿಂದ ಬಳಲಬಾರದು ಎಂದು ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರಕಾರ ಪಡಿತರದಾರರಿಗೆ ಉಚಿತ ಅಕ್ಕಿ ನೀಡಿ ಹಸಿವು ಮುಕ್ತ ರಾಜ್ಯ ಮಾಡಲು ಹೋರಟಿರುವುದು ನಿಜಕ್ಕೂ ಶ್ಲಾಘನೀಯ. ಆದರೆ ಸಂತೆಯಲ್ಲಿ ಮತ್ತು ಜನರ ಮನೆ ಮನೆಗೆ ತೆರಳಿ, ಅವರ ಆರ್ಥಿಕ ದುರ್ಬಲತೆ ಕಂಡು ಖದಿಮರು ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಬೇರೆ ಕಡೆಗೆ ವರ್ಗಾವಣೆ ಮಾಡುವಾಗ ಪೋಲಿಸರ ಜಾಲಕ್ಕೆ ಬಿದ್ದ ಘಟನೆ ತಾಲೂಕಿನ ಸಾಲೋಟಗಿ ಹತ್ತಿರ ನವಲಿ ವಸ್ತಿಯಲ್ಲಿ ನಡೆದಿದೆ.ಹೌದು, ಪೋಲಿಸರ ಖಚಿತ ಮಾಹಿತಿ ಮೇಲೆ ಸಿಪಿಐ ಎಮ್ ಎಮ್ ಡಪ್ಪಿನ ನೇತೃತ್ವದಲ್ಲಿ ಪೋಲಿಸರು ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ವೇಳೆ ದಾಳಿಗೈದು ಮೂವರನ್ನು ವಶಕ್ಕೆ ಪಡೆದಿದ್ದಾರೆ.ಅಪ್ತಾಬ್ ಶೇಕ್, ಸಮೀರ ಬಾಗವಾನ್, ಸಾಧಿಕ್ ಸುಂಬಡ, ಸೈಯದ್ ಸುಂಬಡ ಬಂಧಿತ ಆರೋಪಿಗಳು.ಆರೋಪಿಗಳು ಟಂಟಂ ಗಾಡಿಯಲ್ಲಿ 930 ಕೆಜಿ ಅಕ್ಕಿ ಸಾಗಾಟ ಮಾಡುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು ಅಕ್ಕಿಯನ್ನು ಜಪ್ತಿಗೈದಿದ್ದಾರೆ.ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ…

Read More

ಬಾಲ್ಯವಿವಾಹ ಮುಕ್ತ ಕರ್ನಾಟಕ ಅಭಿಯಾನದ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ದೇವರಹಿಪ್ಪರಗಿ: ಬಾಲ್ಯವಿವಾಹ ಎಂಬ ಅನಿಷ್ಟ ಪದ್ದತಿಗೆ ಕಡಿವಾಣ ಹಾಕಿ, ಅದನ್ನು ಸಂಪೂರ್ಣವಾಗಿ ತೊಡೆದು ಹಾಕಲು ನಾವೆಲ್ಲರೂ ದೃಢ ನಿರ್ಧಾರ ಮಾಡಬೇಕಾಗಿದೆ ಎಂದು ಸಿಂದಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಹರೀಶ ಜಾಧವ್ ಹೇಳಿದರು.ತಾಲ್ಲೂಕಿನ ಮುಳಸಾವಳಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸಿಂದಗಿ ಹಾಗೂ ಶಿಕ್ಷಣ ಇಲಾಖೆ ಸಿಂದಗಿ ಇವರ ಸಹಯೋಗದಲ್ಲಿ ಜರುಗಿದ ಬಾಲ್ಯವಿವಾಹ ಮತ್ತು ಬಾಲ್ಯವಿವಾಹ ಮುಕ್ತ ಕರ್ನಾಟಕ ಅಭಿಯಾನದ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಬಾಲ್ಯವಿವಾಹದಿಂದ ಎದುರಾಗುವ ಸಮಸ್ಯೆಗಳು, ಕಾನೂನು, ದಂಡ, ಶಿಕ್ಷೆ ಮುಂತಾದವುಗಳನ್ನು ತಿಳಿಸಿ, ಕಡ್ಡಾಯವಾಗಿ ಕಾನೂನಿನ ಪ್ರಕಾರ ಬಾಲಕರಿಗೆ ೨೧ ಬಾಲಕಿಯರಿಗೆ ೧೮ ವರ್ಷಗಳ ನಂತರ ಮದುವೆ ಮಾಡಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಮಾತನಾಡಿ, ಕರೋನಾ ಸೇರಿದಂತೆ ಹಲವಾರು ಮಾರಕ ರೋಗಗಳನ್ನು ನಾವು ಮಟ್ಟಹಾಕಿದ್ದು, ನಾವೆಲ್ಲರೂ ಒಗ್ಗೂಡಿ ಸಾಮಾಜಿಕ ಕಳಂಕವಾಗಿರುವ…

Read More

ಉದಯರಶ್ಮಿ’ ವರದಿಗೆ ತಕ್ಷಣ ಸ್ಪಂದಿಸಿದ ಪಪಂ ಮುಖ್ಯಾಧಿಕಾರಿ ಮುಲ್ಲಾ ದೇವರಹಿಪ್ಪರಗಿ: ಪಟ್ಟಣದಲ್ಲಿ ಸ್ಥಳೀಯ ಆಡಳಿತವು ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಬೀದಿ ದೀಪಗಳನ್ನು ಅಳವಡಿಸುವುದರ ಮೂಲಕ ಸಾರ್ವಜನಿಕರ ಬೇಡಿಕೆ ಈಡೇರಿಸಿದೆ.ಈ ಕುರಿತು ’ಉದಯರಶ್ಮಿ’ ಪತ್ರಿಕೆಯು ಅ.17 ರ ಸಂಚಿಕೆಯಲ್ಲಿ ಈ ಸಮಸ್ಯೆ ಕುರಿತು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು “ದೇವರಹಿಪ್ಪರಗಿಯಲ್ಲಿ ಬೆಳಗದ ಬೀದಿದೀಪಗಳು” ಶಿರೋನಾಮೆಯಡಿ ವಿವರವಾದ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಸ್ಥಳೀಯ ಆಡಳಿತವು ಬುಧವಾರ ಅಗತ್ಯವಿದ್ದಲ್ಲಿ ಬೀದಿದೀಪಗಳನ್ನು ಅಳವಡಿಸುವ ಕಾರ್ಯ ಮಾಡಿದೆ.ಪಟ್ಟಣದ ಅಂಬೇಡ್ಕರ್ ವೃತ್ತದ ಹೈಮಾಸ್ಟ್ ದೀಪ ಸರಿಪಡಿಸುವುದರ ಜೊತೆಗೆ ಇಂಡಿ ರಸ್ತೆಯಲ್ಲಿನ ಬೀದಿದೀಪಗಳನ್ನು ರಿಪೇರಿಗೊಳಿಸುವ ಕುರಿತಂತೆ ಸೋಮವಾರವಷ್ಟೇ ಪತ್ರಿಕೆ ವರದಿ ಮಾಡಿತ್ತು. ವರದಿಗೆ ತಕ್ಷಣ ಸ್ಪಂದಿಸಿದ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಹೈಮಾಸ್ಟ್ ದೀಪ ಹಾಗೂ ಬೀದಿದೀಪಗಳನ್ನು ಸರಿಗೊಳಿಸಿ ಸಾರ್ವಜನಿಕರಿಗೆ ಹಾಗೂ ಮುಖ್ಯವಾಗಿ ನವರಾತ್ರಿ ಪೂಜೆ ಕೈಗೊಂಡಿರುವ ಮಹಿಳೆಯರ ಮನವಿಗೆ ಸ್ಪಂದಿಸಿದ್ದಾರೆ.ದೀಪಗಳ ಕುರಿತು ಅಗತ್ಯ ಕ್ರಮ ಕೈಗೊಂಡ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ…

Read More

ಬಸವನಬಾಗೇವಾಡಿ: ತಾಲೂಕಿನ ಯರನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ಬಸವನಬಾಗೇವಾಡಿಯ ಅಕ್ಕನಾಗಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜು ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಂಗವಾಗಿ ಬುಧವಾರ ಸ್ವಚ್ಛತಾ ಕಾರ್ಯಕೈಗೊಳ್ಳುವ ಮೂಲಕ ಶಿಬಿರಾರ್ಥಿಗಳು ಶ್ರಮದಾನ ಕೈಗೊಂಡರು.ಗ್ರಾಮದ ವಿರಕ್ತಮಠದ ಆವರಣ, ವಿದ್ಯಾರ್ಥಿಗಳ ವಸತಿ ನಿಲಯದ ಆವರಣದಲ್ಲಿ ಮಂಗಳವಾರ ಶಿಬಿರಾರ್ಥಿಗಳು ಸ್ವಚ್ಛತಾ ಕಾರ್ಯ ಕೈಗೊಂಡಿದ್ದರು.ಶ್ರಮದಾನದಲ್ಲಿ ಕಾಲೇಜಿನ ಉಪನ್ಯಾಸಕ ಜಿ.ಎಸ್.ಹಿರೇಮಠ, ವಿದ್ಯಾರ್ಥಿ ವಸತಿ ನಿಲಯದ ಸಹಾಯಕ ಗುರುಬಟ್ಟಿ, ವಿದ್ಯಾರ್ಥಿನಿಯರಾದ ಸಹನಾ ಪೂಜಾರಿ, ರಜನಿ ಬೆಲ್ಲದ, ಬೋರಮ್ಮ ಬಾಗೇವಾಡಿ, ಸುರೇಖಾ ಜೈನಾಪೂರ, ಐಶ್ವಯ ಬಿದರಕುಂದಿ, ಐಶ್ವಯ ಚಲವಾದಿ, ಭೂಮಿಕಾ ಹೊಸಮನಿ, ನಿರ್ಮಲ ವಡ್ಡರ, ಭೂಮಿಕಾ ದಿನ್ನಿ ಇತರರು ಭಾಗವಹಿಸಿದ್ದರು.

Read More

ಬಸವನ ಬಾಗೇವಾಡಿ: ಅಗಸಬಾಳ ಹಾಗೂ ಹೂವಿನಹಿಪ್ಪರಗಿ ಕೆರೆ ಭರ್ತಿಗೆ ತುರ್ತಾಗಿ ಹ್ಯಾಳ ನಿರ್ಮಿಸಿ ಸಂಪೂರ್ಣ ಕೆರೆ ಭರ್ತಿ ಮಾಡಿದ ನಂತರ ಪೈಪ ಲೈನ್ ಕಾಮಗಾರಿ ಪ್ರಾರಂಭಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳಿಗೆ ಒತ್ತಾಯಿಸಿದರುಮಂಗಳವಾರದಂದು ವಿಜಯಪುರದಲ್ಲಿ ಧರಣಿ ನಡೆಸಿದ ಪರಿಣಾಮವಾಗಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳಾದ ಗೋವಿಂದ ರಾಠೋಡ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸೂಳಿಭಾವಿ, ಹೊನ್ನಕಸ್ತೂರಿ ಸೇರಿದಂತೆ ಇನ್ನಿತರ ನೀರಾವರಿ ಇಲಾಖೆ ಅಧಿಕಾರಿಗಳು ಬುಧವಾರದಂದು ಪೈಪ ಲೈನ್ ಕಾಮಗಾರಿ ಮಾಡುವ ಸ್ಥಳಕ್ಕೆ ಬೇಟಿಕೊಟ್ಟು ಪರಿಶೀಲನೆ ಮಾಡಿ, ೨೫೦ ಮೀಟರ್ ಉದ್ದದ ಹ್ಯಾಳವನ್ನು ನಿರ್ಮಿಸಿ ತುರ್ತಾಗಿ ಕೆರೆಗೆ ನೀರು ಹರಿಸಲಾಗುವುದೆಂದು ಭರವಸೆ ನೀಡಿದರು.ಈ ಸಂದರ್ಭ ಅರವಿಂದ ಕುಲಕರ್ಣಿ ಮಾತನಾಡಿ ಭೀಕರ ಬರಗಾಲ ಸಂದರ್ಭದಲ್ಲಿ ಜಾನುವಾರುಗಳಿಗೆ ಕುಡಿಯಲು ನೀರಿನ ಸಮಸ್ಯ ತಿರ್ವವಾಗಿದೆ. ಹೂವಿನಹಿಪ್ಪರಗಿ ಬಾಗದ ಸುಮಾರು ೧೫ ಹಳ್ಳಿಗಳ ಈ ಎರಡು ಕೆರೆಗಳ ಮೇಲೆ ಅವಲಂಬಿತವಾಗಿವೆ. ಆದ್ದರಿಂದ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಕೆರೆಗೆ ನೀರು…

Read More

ಮುದ್ದೇಬಿಹಾಳ: ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದಲ್ಲಿ ಬುಧವಾರ ”ನನ್ನ ಮಣ್ಣು ನನ್ನ ದೇಶ” ಅಭಿಯಾನದ ಅಮೃತ ಕಳಸ ಯಾತ್ರೆ ಜರುಗಿತು.ಪಟ್ಟಣದ ತಾಲೂಕು ಪಂಚಾಯತ ಕಾರ್ಯಾಲದ ಎದುರು ಜಾಥಾಗೆ ಚಾಲನೆ ನೀಡಲಾಯಿತು. ನಂತರ ಆರಂಭಗೊಂಡ ಜಾಥಾ ರಾಣಿ ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಡಾ.ಬಿ.ಅರ್.ಅಂಬೇಡ್ಕರ್ ವೃತ್ತಗಳವರೆಗೆ ಸಂಚರಿಸಿ “ನನ್ನ ಮಣ್ಣು ನನ್ನ ದೇಶ” ಜಾಗೃತಿ ಫಲಕಗಳು ಹಾಗೂ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ದೇಶಭಿಮಾನದ ಭಾವ ಮೂಡಿಸುತ್ತ ಬಸವೇಶ್ವರ ವೃತ್ತಕ್ಕೆ ಬಂದು ತಲುಪಿತು.ತಾಲೂಕಿನ ೨೧ ಗ್ರಾಮ ಪಂಚಾಯತಿಗಳು ಮಣ್ಣು ಮತ್ತು ಅಕ್ಕಿ ಸಂಗ್ರಹಿಸಿ ತಂದಿದ್ದ “ಅಮೃತ ಕಳಸ”ಗಳು ಜಾಥಾದ ಪ್ರಮುಖ ಆಕರ್ಷಣೆಯ ಬಿಂದುಗಳಾಗಿದ್ದವು. ನಂತರ ತಾಲೂಕು ಪಂಚಾಯತಿ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿ ನಿವೃತ್ತ ಯೋಧ ಬಿ.ಹೆಚ್.ನಾಗರಬೆಟ್ಟ ಹಾಗೂ ಬಿ.ಆರ್.ಹಳ್ಳೂರ ಅವರುಗಳನ್ನು ಗೌರವಿಸಿ ಸನ್ಮಾನ ಮಾಡಲಾಯಿತು. “ಪಂಚಪ್ರಾಣ ಶಪಥ” ಹಾಗೂ “ಸಂವಿಧಾನ ಪೀಠಿಕೆ” ಬೋಧಿಸಲಾಯಿತು. ತಾಲೂಕು ಮಟ್ಟದ “ಅಮೃತ ಕಳಸ” ವನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ನೆಹರು ಯುವ ಕೇಂದ್ರದ…

Read More

ಮುದ್ದೇಬಿಹಾಳ: ಐಎನ್‌ಬಿಸಿಡಬ್ಲೂಎಫ್ ರಾಜ್ಯ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಸಂಗೀತಾ ನಾಡಗೌಡ ಅವರನ್ನು ಲಯನ್ಸ್ ಕ್ಲಬ್ ನ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.ಈ ವೇಳೆ ದೀಪಾ ದೇಸಾಯಿ, ಇಂಚರ ಸಿದರೆಡ್ಡಿ, ರಜನಿ ಓಸ್ವಾಲ, ಪ್ರಭಾ ಹೆಬ್ಬಾರ, ಶರಣಯ್ಯ ಹಿರೇಮಠ, ಸಂಗಣ್ಣ ನಾಶಿ, ಸುನೀಲ ಇಲ್ಲೂರ, ವಾಸು ಶಾಸ್ತ್ರಿ, ಮಹೇಂದ್ರ ಓಸ್ವಾಲ, ಮಲ್ಲಿಕಾರ್ಜುನ ಬಿದರಕುಂದಿ ಸೇರಿದಂತೆ ಮತ್ತೀತರರು ಇದ್ದರು.

Read More

ವಿಜಯಪುರ: ಈಗಾಗಲೇ ಅವಧಿ ಮುಕ್ತಾಯವಾಗಿರುವ ನಗರ ಸ್ಥಳೀಯ ಸಂಸ್ಥೆಯಾದ ಚಡಚಣ ಪಟ್ಟಣ ಪಂಚಾಯತಿಯ ಸಾರ್ವತ್ರಿಕ ಚುನಾವಣೆ ಜರುಗಿಸಲು ವಾರ್ಡುವಾರು ಕರಡು ಮತದಾರರ ಪಟ್ಟಿಯನ್ನು ತಹಶೀಲದಾರ ಕಾರ್ಯಾಲಯಗಳಲ್ಲಿ ಹಾಗೂ ಸಂಬಂಧಿಸಿದ ಮತಗಟ್ಟೆ ಮಟ್ಟದಲ್ಲಿ ತಹಶೀಲದಾರ ಚಡಚಣ ಇವರು ಸಾರ್ವಜನಿಕರ ತಿಳುವಳಿಕೆಗಾಗಿ ಪ್ರಚುರಪಡಿಸಿರುತ್ತಾರೆ.ಸದರಿ ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನವಾಗಿದ್ದು, ಸ್ವೀಕೃತವಾದ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ, ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 31ರಂದು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More