ಚಡಚಣ: ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆಯ ವತಿಯಿಂದ ಆಯೋಜಿಸಿದ್ದ ವಿಶ್ವ ಶಿಕ್ಷಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಮೀಪದ ಉಮರಜ ಗ್ರಾಮದ ಶಿಕ್ಷಕ ಸಾಹಿತಿ ಪ್ರಮೋದಕುಮಾರ ಮಠಪತಿ ಇವರ ಶೈಕ್ಷಣಿಕ ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ ವೇದಿಕೆಯ ಅಧ್ಯಕ್ಷ ಪ್ರೊ ಎಲ್.ಎಚ್.ಪೆಂಡಾರಿಯವರು ಪ್ರಶಸ್ತಿ ಪ್ರಧಾನ ಮಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ದಾವಣಗೆರೆಯ ಗಣೇಶ ಶೆಣೈ, ಚಿಕ್ಕಬಳ್ಳಾಪುರದ ಎ ಸರಸಮ್ಮಾ, ಅಮೇರಿಕಾದ ರೂಪ ಮಂಜುನಾಥ, ಗಡಿನಾಡ ಸಾಹಿತಿ ಗುರುಸಿದ್ಧಯ್ಯಾ ಸ್ವಾಮಿ, ನಿವೃತ್ತ ಡಿಡಿಪಿಐ ಡಾ. ಎನ. ಚಂದ್ರೇಗೌಡ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
ಪ್ರಮೋದಕುಮಾರ ಮಠಪತಿಯವರು ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮಾಚಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Related Posts
Add A Comment