ಬಸವನ ಬಾಗೇವಾಡಿ: ಅಗಸಬಾಳ ಹಾಗೂ ಹೂವಿನಹಿಪ್ಪರಗಿ ಕೆರೆ ಭರ್ತಿಗೆ ತುರ್ತಾಗಿ ಹ್ಯಾಳ ನಿರ್ಮಿಸಿ ಸಂಪೂರ್ಣ ಕೆರೆ ಭರ್ತಿ ಮಾಡಿದ ನಂತರ ಪೈಪ ಲೈನ್ ಕಾಮಗಾರಿ ಪ್ರಾರಂಭಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳಿಗೆ ಒತ್ತಾಯಿಸಿದರು
ಮಂಗಳವಾರದಂದು ವಿಜಯಪುರದಲ್ಲಿ ಧರಣಿ ನಡೆಸಿದ ಪರಿಣಾಮವಾಗಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳಾದ ಗೋವಿಂದ ರಾಠೋಡ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸೂಳಿಭಾವಿ, ಹೊನ್ನಕಸ್ತೂರಿ ಸೇರಿದಂತೆ ಇನ್ನಿತರ ನೀರಾವರಿ ಇಲಾಖೆ ಅಧಿಕಾರಿಗಳು ಬುಧವಾರದಂದು ಪೈಪ ಲೈನ್ ಕಾಮಗಾರಿ ಮಾಡುವ ಸ್ಥಳಕ್ಕೆ ಬೇಟಿಕೊಟ್ಟು ಪರಿಶೀಲನೆ ಮಾಡಿ, ೨೫೦ ಮೀಟರ್ ಉದ್ದದ ಹ್ಯಾಳವನ್ನು ನಿರ್ಮಿಸಿ ತುರ್ತಾಗಿ ಕೆರೆಗೆ ನೀರು ಹರಿಸಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭ ಅರವಿಂದ ಕುಲಕರ್ಣಿ ಮಾತನಾಡಿ ಭೀಕರ ಬರಗಾಲ ಸಂದರ್ಭದಲ್ಲಿ ಜಾನುವಾರುಗಳಿಗೆ ಕುಡಿಯಲು ನೀರಿನ ಸಮಸ್ಯ ತಿರ್ವವಾಗಿದೆ. ಹೂವಿನಹಿಪ್ಪರಗಿ ಬಾಗದ ಸುಮಾರು ೧೫ ಹಳ್ಳಿಗಳ ಈ ಎರಡು ಕೆರೆಗಳ ಮೇಲೆ ಅವಲಂಬಿತವಾಗಿವೆ. ಆದ್ದರಿಂದ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಕೆರೆಗೆ ನೀರು ಹರಿಸಬೇಕು ಮಧ್ಯದಲ್ಲಿ ನೀರು ಪೋಲಾಗದಂತೆ ಅಧಿಕಾರಿಗಳು ನಿಗಾವಹಿಸಬೇಕು ಈ ನಿಟ್ಟಿನಲ್ಲಿ ರೈತರು ಸಹ ಕೆರೆ ಭರ್ತಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರಭಂಟನಾಳದ ಶಿವಕುಮಾರ ಸ್ವಾಮೀಜಿ, ಹಣಮಂತ್ರಾಯ ಗುಣಕಿ, ಮೋಹನಗೌಡ ಪಾಟೀಲ, ಶಂಕರಗೌಡ ಮ್ಯಾಗೇರಿ, ಬಸವರಾಜಗೌಡ ಪಾಟೀಲ, ಮಲ್ಲನಗೌಡ ನಾಡಗೌಡ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

