ಬಾಲ್ಯವಿವಾಹ ಮುಕ್ತ ಕರ್ನಾಟಕ ಅಭಿಯಾನದ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ
ದೇವರಹಿಪ್ಪರಗಿ: ಬಾಲ್ಯವಿವಾಹ ಎಂಬ ಅನಿಷ್ಟ ಪದ್ದತಿಗೆ ಕಡಿವಾಣ ಹಾಕಿ, ಅದನ್ನು ಸಂಪೂರ್ಣವಾಗಿ ತೊಡೆದು ಹಾಕಲು ನಾವೆಲ್ಲರೂ ದೃಢ ನಿರ್ಧಾರ ಮಾಡಬೇಕಾಗಿದೆ ಎಂದು ಸಿಂದಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಹರೀಶ ಜಾಧವ್ ಹೇಳಿದರು.
ತಾಲ್ಲೂಕಿನ ಮುಳಸಾವಳಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸಿಂದಗಿ ಹಾಗೂ ಶಿಕ್ಷಣ ಇಲಾಖೆ ಸಿಂದಗಿ ಇವರ ಸಹಯೋಗದಲ್ಲಿ ಜರುಗಿದ ಬಾಲ್ಯವಿವಾಹ ಮತ್ತು ಬಾಲ್ಯವಿವಾಹ ಮುಕ್ತ ಕರ್ನಾಟಕ ಅಭಿಯಾನದ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಲ್ಯವಿವಾಹದಿಂದ ಎದುರಾಗುವ ಸಮಸ್ಯೆಗಳು, ಕಾನೂನು, ದಂಡ, ಶಿಕ್ಷೆ ಮುಂತಾದವುಗಳನ್ನು ತಿಳಿಸಿ, ಕಡ್ಡಾಯವಾಗಿ ಕಾನೂನಿನ ಪ್ರಕಾರ ಬಾಲಕರಿಗೆ ೨೧ ಬಾಲಕಿಯರಿಗೆ ೧೮ ವರ್ಷಗಳ ನಂತರ ಮದುವೆ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಮಾತನಾಡಿ, ಕರೋನಾ ಸೇರಿದಂತೆ ಹಲವಾರು ಮಾರಕ ರೋಗಗಳನ್ನು ನಾವು ಮಟ್ಟಹಾಕಿದ್ದು, ನಾವೆಲ್ಲರೂ ಒಗ್ಗೂಡಿ ಸಾಮಾಜಿಕ ಕಳಂಕವಾಗಿರುವ ಬಾಲ್ಯವಿವಾಹವನ್ನು ತಡೆಯೋಣ ಎಂದರು.
ವಕೀಲ ಎಸ್.ಎಮ್.ಕಾಚೂರ ಮಾತನಾಡಿದರು.
ವಕೀಲರ ಸಂಘದ ಎನ್.ಎಮ್.ದೊಡ್ಡಮನಿ, ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಐ.ಎಸ್.ನರೂಣಿ, ಸಿಆರ್‌ಪಿ ಎಸ್.ಎಮ್.ರೋಡಗಿ, ಎಸ್‌ಡಿಎಮ್‌ಸಿ ಅಧ್ಯಕ್ಷ ಮನೋಹರ ಪೂಜಾರಿ, ಎನ್.ಎಸ್. ರೋಡಗಿ, ಜಿ.ಎಸ್.ರೋಡಗಿ, ರಾಮಚಂದ್ರ ತೇಲಿ, ಅರ್ಜುನ ವಾಲೀಕಾರ, ಈರಣ್ಣ ಬಸರಕೋಡ, ಪ್ರದೀಪ ಹದರಿ ಸೇರಿದಂತೆ ಶಾಲಾಮಕ್ಕಳು ಇದ್ದರು.