ಬಸವನಬಾಗೇವಾಡಿ: ತಾಲೂಕಿನ ಯರನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ಬಸವನಬಾಗೇವಾಡಿಯ ಅಕ್ಕನಾಗಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜು ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಂಗವಾಗಿ ಬುಧವಾರ ಸ್ವಚ್ಛತಾ ಕಾರ್ಯಕೈಗೊಳ್ಳುವ ಮೂಲಕ ಶಿಬಿರಾರ್ಥಿಗಳು ಶ್ರಮದಾನ ಕೈಗೊಂಡರು.
ಗ್ರಾಮದ ವಿರಕ್ತಮಠದ ಆವರಣ, ವಿದ್ಯಾರ್ಥಿಗಳ ವಸತಿ ನಿಲಯದ ಆವರಣದಲ್ಲಿ ಮಂಗಳವಾರ ಶಿಬಿರಾರ್ಥಿಗಳು ಸ್ವಚ್ಛತಾ ಕಾರ್ಯ ಕೈಗೊಂಡಿದ್ದರು.
ಶ್ರಮದಾನದಲ್ಲಿ ಕಾಲೇಜಿನ ಉಪನ್ಯಾಸಕ ಜಿ.ಎಸ್.ಹಿರೇಮಠ, ವಿದ್ಯಾರ್ಥಿ ವಸತಿ ನಿಲಯದ ಸಹಾಯಕ ಗುರುಬಟ್ಟಿ, ವಿದ್ಯಾರ್ಥಿನಿಯರಾದ ಸಹನಾ ಪೂಜಾರಿ, ರಜನಿ ಬೆಲ್ಲದ, ಬೋರಮ್ಮ ಬಾಗೇವಾಡಿ, ಸುರೇಖಾ ಜೈನಾಪೂರ, ಐಶ್ವಯ ಬಿದರಕುಂದಿ, ಐಶ್ವಯ ಚಲವಾದಿ, ಭೂಮಿಕಾ ಹೊಸಮನಿ, ನಿರ್ಮಲ ವಡ್ಡರ, ಭೂಮಿಕಾ ದಿನ್ನಿ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

