ಇಂಡಿ: ಬಡವರು ಹಸಿವಿನಿಂದ ಬಳಲಬಾರದು ಎಂದು ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರಕಾರ ಪಡಿತರದಾರರಿಗೆ ಉಚಿತ ಅಕ್ಕಿ ನೀಡಿ ಹಸಿವು ಮುಕ್ತ ರಾಜ್ಯ ಮಾಡಲು ಹೋರಟಿರುವುದು ನಿಜಕ್ಕೂ ಶ್ಲಾಘನೀಯ. ಆದರೆ ಸಂತೆಯಲ್ಲಿ ಮತ್ತು ಜನರ ಮನೆ ಮನೆಗೆ ತೆರಳಿ, ಅವರ ಆರ್ಥಿಕ ದುರ್ಬಲತೆ ಕಂಡು ಖದಿಮರು ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಬೇರೆ ಕಡೆಗೆ ವರ್ಗಾವಣೆ ಮಾಡುವಾಗ ಪೋಲಿಸರ ಜಾಲಕ್ಕೆ ಬಿದ್ದ ಘಟನೆ ತಾಲೂಕಿನ ಸಾಲೋಟಗಿ ಹತ್ತಿರ ನವಲಿ ವಸ್ತಿಯಲ್ಲಿ ನಡೆದಿದೆ.
ಹೌದು, ಪೋಲಿಸರ ಖಚಿತ ಮಾಹಿತಿ ಮೇಲೆ ಸಿಪಿಐ ಎಮ್ ಎಮ್ ಡಪ್ಪಿನ ನೇತೃತ್ವದಲ್ಲಿ ಪೋಲಿಸರು ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ವೇಳೆ ದಾಳಿಗೈದು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಅಪ್ತಾಬ್ ಶೇಕ್, ಸಮೀರ ಬಾಗವಾನ್, ಸಾಧಿಕ್ ಸುಂಬಡ, ಸೈಯದ್ ಸುಂಬಡ ಬಂಧಿತ ಆರೋಪಿಗಳು.
ಆರೋಪಿಗಳು ಟಂಟಂ ಗಾಡಿಯಲ್ಲಿ 930 ಕೆಜಿ ಅಕ್ಕಿ ಸಾಗಾಟ ಮಾಡುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು ಅಕ್ಕಿಯನ್ನು ಜಪ್ತಿಗೈದಿದ್ದಾರೆ.
ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂದರ್ಭದಲ್ಲಿ ಆಹಾರ ನೀರಿಕ್ಷಕ ಪರಮಾನಂದ ಹೂಗಾರ ಹಾಗೂ ಪೋಲಿಸ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.
Related Posts
Add A Comment