ಮುದ್ದೇಬಿಹಾಳ: ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದಲ್ಲಿ ಬುಧವಾರ ”ನನ್ನ ಮಣ್ಣು ನನ್ನ ದೇಶ” ಅಭಿಯಾನದ ಅಮೃತ ಕಳಸ ಯಾತ್ರೆ ಜರುಗಿತು.
ಪಟ್ಟಣದ ತಾಲೂಕು ಪಂಚಾಯತ ಕಾರ್ಯಾಲದ ಎದುರು ಜಾಥಾಗೆ ಚಾಲನೆ ನೀಡಲಾಯಿತು. ನಂತರ ಆರಂಭಗೊಂಡ ಜಾಥಾ ರಾಣಿ ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಡಾ.ಬಿ.ಅರ್.ಅಂಬೇಡ್ಕರ್ ವೃತ್ತಗಳವರೆಗೆ ಸಂಚರಿಸಿ “ನನ್ನ ಮಣ್ಣು ನನ್ನ ದೇಶ” ಜಾಗೃತಿ ಫಲಕಗಳು ಹಾಗೂ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ದೇಶಭಿಮಾನದ ಭಾವ ಮೂಡಿಸುತ್ತ ಬಸವೇಶ್ವರ ವೃತ್ತಕ್ಕೆ ಬಂದು ತಲುಪಿತು.
ತಾಲೂಕಿನ ೨೧ ಗ್ರಾಮ ಪಂಚಾಯತಿಗಳು ಮಣ್ಣು ಮತ್ತು ಅಕ್ಕಿ ಸಂಗ್ರಹಿಸಿ ತಂದಿದ್ದ “ಅಮೃತ ಕಳಸ”ಗಳು ಜಾಥಾದ ಪ್ರಮುಖ ಆಕರ್ಷಣೆಯ ಬಿಂದುಗಳಾಗಿದ್ದವು. ನಂತರ ತಾಲೂಕು ಪಂಚಾಯತಿ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿ ನಿವೃತ್ತ ಯೋಧ ಬಿ.ಹೆಚ್.ನಾಗರಬೆಟ್ಟ ಹಾಗೂ ಬಿ.ಆರ್.ಹಳ್ಳೂರ ಅವರುಗಳನ್ನು ಗೌರವಿಸಿ ಸನ್ಮಾನ ಮಾಡಲಾಯಿತು. “ಪಂಚಪ್ರಾಣ ಶಪಥ” ಹಾಗೂ “ಸಂವಿಧಾನ ಪೀಠಿಕೆ” ಬೋಧಿಸಲಾಯಿತು. ತಾಲೂಕು ಮಟ್ಟದ “ಅಮೃತ ಕಳಸ” ವನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ನೆಹರು ಯುವ ಕೇಂದ್ರದ ಸ್ವಯಂ ಸೇವಕರಾದ ಎಸ್.ಎಂ.ಕೊರಬು ಅವರಿಗೆ ಹಸ್ತಾಂತರಿಸಿದರು.
ಸನ್ಮಾನಿತರ ಪರವಾಗಿ ನಿವೃತ್ತ ಯೋಧ ಬಿ.ಹೆಚ್.ನಾಗರಬೆಟ್ಟ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಪ್ರಭಾರ ಯೋಜನಾಧಿಕಾರಿ ಖುಬಾಸಿಂಗ್ ಜಾಧವ್, ವ್ಯಸ್ಥಾಪಕಿ ನಿರ್ಮಲಾ ತೋಟದ, ಸಹಾಯಕ ಲೆಕ್ಕಾಧಿಕಾರಿ ವೀರೇಶ ಹೂಗಾರ, ಪಿಡಿಒ ಪಿ.ಎಸ್.ನಾಯ್ಕೋಡಿ ಹಾಗೂ ಎಲ್ಲಾ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಿಬ್ಬಂದಿವರ್ಗದವರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಮಹಿಳಾ-ಸ್ವ ಸಹಾಯ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

