Author: editor.udayarashmi@gmail.com

ಮುದ್ದೇಬಿಹಾಳ: ಕೆಪಿಟಿಸಿಎಲ್ ನ ಪತ್ತಿನ ಸಹಕಾರ ಸಂಘದಿಂದ ಸತತ ಮೂರನೇ ಬಾರಿಗೆ ಆಯ್ಕೆಯಾದ ಎಚ್.ಎ.ನಾಯ್ಕೋಡಿ ಅವರನ್ನು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು ಸತ್ಕರಿಸಿದರು. ಈ ವೇಳೆ ಶಾಖಾಧಿಕಾರಿ ಎಸ್.ಎಸ್.ಪಾಟೀಲ, ತಂಹಡಗಿ ಶಾಖಾಧಿಕಾರಿ ಎಂ.ಸ್.ತೆಗ್ಗಿನಮಠ, ಹಿರೇಮುರಾಳ ಶಾಖಾಧಿಕಾರಿ ಆರ್.ಬಿ.ಹಿರೇಮಠ, ಎಇಇ ಹಾದಿಮನಿ, ಎಎಓ ಮಡಿವಾಳರ, ಮಹಾಂತೇಶ ಮೋರ್ಖೆ ಇದ್ದರು.

Read More

ಮುದ್ದೇಬಿಹಾಳ: ಮತಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಗಾರರ ಮೇಲೆ ಹಾಗೂ ಸನ್ನದು ಷರತ್ತುಗಳನ್ನು ಉಲ್ಲಂಘನೆ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಭೀಮ ಸೇನೆಯ ಪದಾಧಿಕಾರಿಗಳು ಶುಕ್ರವಾರ ತಹಶೀಲ್ದಾರ ಗೆ ಮನವಿ ಪತ್ರ ಸಲ್ಲಿಸಿದರು.ಮತಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ರಾಜಾರೋಷವಾಗಿ ಮಾಡುತ್ತಿದ್ದು, ಇದರ ಪರಿಣಾಮವಾಗಿ ಗ್ರಾಮೀಣ ಜನರ ಬದುಕು ಮೂರಾಬಟ್ಟಿಯಾಗಿದೆ. ಪ್ರತಿ ಗ್ರಾಮಗಳಲ್ಲಿ ಸುಮಾರು ನಾಲ್ಕರಿಂದ ಐದಾರು ಜನರು ಅಕ್ರಮ ಮದ್ಯ ಮಾರಾಟವನ್ನು ನಡೆಸುತ್ತಿದ್ದಾರೆ. ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿದರೂ ತಿಳಿಯದ ಹಾಗೆ ಇರುತ್ತಾರೆ.ಇಲ್ಲಿನ ತಹಶೀಲ್ದಾರರ ಕಛೇರಿಯ ಆವರಣದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಸನ್ನದು ನವೀಕರಣ ಸಂದರ್ಭದಲ್ಲಿ ಅಬಕಾರಿ ಆಯುಕ್ತರ ಮಾರ್ಗಸೂಚಿಯನ್ನು ಪಾಲಿಸದೆ ಮತ್ತು ದೂರು ನೀಡಿದರೂ ಕ್ರಮ ಕೈಗೊಳ್ಳದ ಅಬಕಾರಿ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹವು ಸುಮಾರು ೭೨ ದಿನಗಳು ಪೂರೈಸಿದರೂ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗದೆ ಇರುವುದು ತುಂಬಾ ನೋವಿನ ಸಂಗತಿ. ಜನರ ಹಿತ ಕಾಪಾಡಬೇಕು…

Read More

ವಿಜಯಪುರ: ವಿಜಯಪುರ ತಾಲೂಕಿನ ಹೆಸ್ಕಾಂನ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ-ವಿಭಾಗ ವ್ಯಾಪ್ತಿಯ ರೈತರು ಹಾಗೂ ವಿದ್ಯುತ್ ಗ್ರಾಹಕರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಗ್ರಾಹಕರ ಸಂವಾದ ಸಭೆಯನ್ನು ಅಕ್ಟೋಬರ್ ೨೧ ರಂದು ಬೆಳಿಗ್ಗೆ ೧೦ ಗಂಟೆಗೆ ಹೆಸ್ಕಾಂನ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ-ವಿಭಾಗದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಗ್ರಾಮೀಣ ಉಪ ವಿಭಾಗದ ಕಚೇರಿಗೆ ಒಳಪಡುವ ಗ್ರಾಮಗಳ ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

Read More

ಇಂಡಿ, ಆಲಮೇಲ, ಸಿಂದಗಿ ಹಾಗೂ ದೇವರ ಹಿಪ್ಪರ ತಾಲೂಕಿಗೆ ಭೇಟಿ ನೀಡಿ ವಿವಿಧ ಕಾಮಗಾರಿ ಪರಿಶೀಲಿಸಿದ ಡಿಸಿ ಟಿ.ಭೂಬಾಲನ್ ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಶುಕ್ರವಾರ ಇಂಡಿ, ಆಲಮೇಲ, ಸಿಂದಗಿ ಹಾಗೂ ದೇವರ ಹಿಪ್ಪರಗಿ ತಾಲೂಕಿಗೆ ಭೇಟಿ ನೀಡಿ, ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಇಂಡಿ ಸರ್ಕಾರಿ ಆಸ್ಪತ್ರೆಗೆ ದಿಢೀರನೆ ಭೇಟಿ ನೀಡಿ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಒದಗಿಸುತ್ತಿರುವ ವೈದ್ಯಕೀಯ ಹಾಗೂ ಔಷಧೋಪಚಾರ ಹಾಗೂ ಹೊಂದಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ಅಲ್ಲಿನ ಸಿಬ್ಬಂದಿ ಹಾಜರಾತಿ ಪರಿಶೀಲಿಸಿ, ಗೈರುಹಾಜರಿದ್ದ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಇಂದಿರಾ ಕ್ಯಾಂಟೀನಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಒದಗಿಸುತ್ತಿರುವ ಆಹಾರದ ಗುಣಮಟ್ಟ ಮತ್ತು ಪ್ರಮಾಣದ ಕುರಿತಾಗಿ ಪರಿಶೀಲಿಸಿ, ಅಲ್ಲಿ ಸ್ವಚ್ಛತೆ ಕಾಪಾಡಲು ಸೂಚಿಸಿದರು. ಇಂಡಿ ಪುರಸಭೆಗೆ ಭೇಟಿ ನೀಡಿದ ಅವರು, ಆಸ್ತಿ ತೆರಿಗೆ, ಟ್ರೇಡ್ ಲೈಸೆನ್ಸ್, ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಾತಿ ಕುರಿತು ಪರಿಶೀಲನೆ ನಡೆಸಿದರು. ಇಂಡಿ ಮೆಗಾ ಮಾರುಕಟ್ಟೆಗೆ ಭೇಟಿ ನೀಡಿ, ಆರು…

Read More

ಶಿಕ್ಷಕಿಯ ಮಗನಿಗೆ ಐದು ಚಿನ್ನದ ಪದಕ ಸೇರಿದಂತೆ ಒಟ್ಟು 349 ವಿದ್ಯಾರ್ಥಿಗಳಿಗೆ ನಾನಾ ವೈದ್ಯಕೀಯ ಪದವಿ ಪ್ರದಾನ ವಿಜಯಪುರ: ಶಿಕ್ಷಕಿಯ ಮಗನಿಗೆ ಐದು ಚಿನ್ನದ ಪದಕ ಸೇರಿದಂತೆ ಒಟ್ಟು 349 ವಿದ್ಯಾರ್ಥಿಗಳಿಗೆ ನಾನಾ ವೈದ್ಯಕೀಯ ಪದವಿಗಳನ್ನು ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಪ್ರಧಾನ ಮಾಡಲಾಯಿತು.ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಯ ಕುಲಾಧಿಪತಿ ಡಾ. ಎಂ. ಬಿ. ಪಾಟೀಲ, ಸಚಿವ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ ಮುಂತಾದವರು ಪಿ.ಎಚ್.ಡಿ, ಸ್ನಾತಕೋತ್ತರ, ಎಂ.ಬಿ.ಬಿ.ಎಸ್ ಸೇರಿದಂತೆ 349 ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು.ಈ ಘಟಿಕೋತ್ಸವದಲ್ಲಿ 9 ಪಿ.ಎಚ್.ಡಿ, 113 ಸ್ನಾತಕೋತ್ತರ ಪದವಿ, 1 ಎಂ.ಸಿ.ಎಚ್, 4 ಪೆಲೋಶಿಪ್, 205 ಎಂ.ಬಿ.ಬಿ.ಎಸ್, 13 ಬಿ.ಎಸ್.ಸಿ(ಎಂ.ಐ.ಟಿ), 3 ಎಂ.ಎಸ್.ಸಿ ಹಾಗೂ 1 ಎಂ.ಎಚ್.ಎ ಪದವಿಗಳನ್ನು ಮತ್ತು 17 ಚಿನ್ನದ ಪದಕಗಳು ಹಾಗೂ 3 ನಗದು ಬಹುಮಾನಗಳನ್ನು ಪ್ರಧಾನ ಮಾಡಲಾಯಿತು.ಈ ಸಂದರ್ಭದಲ್ಲಿ…

Read More

ವಿಜಯಪುರ: ವಿಶ್ವಾಸದಿಂದ ಜನಸೇವೆ ಮಾಡಿದರೆ ಎಲ್ಲರು ನಮ್ಮ ಕಾಯಕವನ್ನು ಗುರುತಿಸಿ ಗೌರವಿಸುತ್ತಾರೆ ಎಂದು ಮಾಜಿ ಸಚಿವ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.ನಗರದಲ್ಲಿ ನಡೆದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿ ಅವರು ಮಾತನಾಡಿದರು.ಈಗಾಗಲೇ ನನಗೆ ಮೂರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ದೊರಕಿದ್ದು, ಇದು ನಾಲ್ಕನೇಯ ಗೌರವವಾಗಿದೆ. ಇದಕ್ಕೆಲ ನಾವು ಮಾಡುವ ಒಳ್ಳೆಯ ಕೆಲಸಗಳೇ ಕಾರಣ. ನಾನು ಏಳು ಬಾರಿ ಶಾಸಕನಾಗಿದ್ದೇನೆ. ಒಂದು ಬಾರಿ ಸಂಸದನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ನಿಷ್ಠೆಯನ್ನು ಪರಿಗಣಿಸಿ ಪಕ್ಷ ಪ್ರತಿ ಬಾರಿ ನನಗೆ ಅವಕಾಶ ನೀಡಿದೆ ಎಂದು ಅವರು ಹೇಳಿದರು.ಈಗ ಪದವಿ ಪಡೆದಿರುವ ವೈದ್ಯರು ತಾವು ಮಾಡುವ ದುಡಿಮೆಯಲ್ಲಿ ಹತ್ತು ಪೈಸೆಯಷ್ಟಾದರೂ ದಾನ ದರ್ಮದ ಸೇವೆಗೆ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.ಈ ಹಿಂದೆ ಎಸ್. ನಿಜಲಿಂಗಪ್ಪನವರು ಅಧಿಕಾರದಲ್ಲಿದ್ದಾಗ ಬೆಳಗಾವಿ, ಕಲಬುರಗಿ, ದಾವಣಗೆರೆಗಳಿಗೆ ಮೇಡಿಕಲ್ ಕಾಲೇಜುಗಳನ್ನು ನೀಡಿದ್ದರು. ನಂತರ ವಿಜಯಪುರದಲ್ಲಿ ಬಿ.ಎಲ್.ಡಿ.ಇ ಮತ್ತು ಬಾಗಲಕೋಟೆಯಲ್ಲಿ ಬಿ.ವಿ.ವಿ.ಎಸ್ ಮೇಡಿಕಲ್ ಕಾಲೇಜುಗಳು ಆರಂಭವಾಗಿವೆ. ಹೆಚ್ಚೆಚ್ಚು…

Read More

ಬಿಎಲ್ಡಿಇ ಡೀಮ್ಡ್ ವಿವಿದಲ್ಲಿ ನಡೆದ ಘಟಿಕೋತ್ಸವದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಕರೆ ವಿಜಯಪುರ: ಡಿಜಿಟಲ್ ತಂತ್ರಜ್ಞಾನದಿಂದ ಈಗ ಆರೋಗ್ಯ ಸೇವೆಯ ಕ್ಷೇತ್ರ ವಿಸ್ತರಣೆಯಾಗುತ್ತಿದೆ. ವೈದ್ಯರು ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದ ಜನರ ಆರೋಗ್ಯ ಸೇವೆಗೆ ಒತ್ತು ನೀಡಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಕರೆ ನೀಡಿದ್ದಾರೆ.ವಿಜಯಪುರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ 11ನೇ ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಿ ಅವರು ಘಟಿಕೋತ್ಸವ ಭಾಷಣ ಮಾಡಿದರು.ವೈದ್ಯರು ಜನರ ಪಾಲಿಗೆ ಜೀವ ರಕ್ಷಿಸುವ ದೇವರಿದ್ದಂತೆ. ಆದ್ದರಿಂದ ಪ್ರೀತಿ, ಕಾಳಜಿ ಮತ್ತು ಸಹಾನುಭೂತಿಯಿಂದ ಗ್ರಾಮೀಣ ಜನರ ಸೇವೆ ಮಾಡಬೇಕು. ಅವರಲ್ಲಿರುವ ನಂಬಿಕೆಯನ್ನು ಉಳಿಸಿ ಬೆಳೆಸಿಕೊಂಡು ಸೇವಾನಿಷ್ಠೆಯಿಂದ ಕೆಲಸ ಮಾಡಿದರೆ ಗುರಿ ತಲುಪಬಹುದು. ಇದು ನೀವು ಸಮಾಜದಿಂದ ಪಡೆದಿರುವುದುದನ್ನು ಹಿಂದಿರುಗಿಸುವ ಸೇವೆಯೂ ಆಗಿದೆ. ಈವರೆಗೆ ತಾವೆಲ್ಲರು ತಮ್ಮ ತಂದೆ- ತಾಯಿ ಮತ್ತು ಶಿಕ್ಷಕರ ಆಶ್ರಯದಲ್ಲಿದ್ದ ತಾವೆಲ್ಲರೂ ಈಗ ಸ್ವತಂತ್ರರಾಗಿದ್ದೀರಿ. ಹೆತ್ತ ಪೋಷಕರು,…

Read More

ವಿಜಯಪುರ: ಖ್ಯಾತ ಬಾಲಿವುಡ್ ಗಾಯಕ ಕುಮಾರ ಸಾನು ಅವರ 67 ನೇ ಜನ್ಮದಿನದ ಅಂಗವಾಗಿ ಅ.22 ರವಿವಾರ ನಗರದ ಶ್ರೀ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿಸಂಗೀತ ರಸದೌತಣ ಕಾರ್ಯಕ್ರಮ ಆಯೋಜಿಸಿಸಲಾಗಿದೆ.ವಿಜಯಪುರದ ಮ್ಯೂಸಿಕ್ ಹೇವನ್ ಆರ್ಕೆಸ್ಟ್ರಾ ವತಿಯಿಂದ ಹಮ್ಮಿಕೊಳ್ಳಲಾಗುವ ಈ ಕಾರ್ಯಕ್ರಮದಲ್ಲಿ ಅಂದು ಮದ್ಯಾಹ್ನ 12 ರಿಂದ ರಾತ್ರಿ 8.30ರ ವರೆಗೆ ಗಾಯಕ ಕುಮಾರ ಸಾನು 67 ನೇ ಜನ್ಮದಿನದ ಪ್ರಯುಕ್ತ 67 ಹಾಡುಗಳನ್ನು ಸತತ 8 ಗಂಟೆಗಳ ಕಾಲ ಪ್ರಸ್ತುತ ಪಡಿಸಿ ದಕ್ಷಿಣ ಭಾರತದಲ್ಲೆ ಮೊದಲ ಬಾರಿಗೆ ಇಂತಹ ದಾಖಲೆ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಕರ್ನಾಟಕದ ಕುಮಾರ ಸಾನು ಖ್ಯಾತಿಯ ರವಿಕುಮಾರ ಅಥರ್ಗಾರವರು ಸತತವಾಗಿ ಹಾಡುವ ಮೂಲಕ ಹೊಸ ದಾಖಲೆ ನಿರ್ಮಿಸಲಿದ್ದಾರೆ. ಅವರಿಗೆ ವಿಜಯಪುರದ ಸೋನು ನಿಗಮ ಖ್ಯಾತಿಯ ರವಿ ಬರಾಡೆ, ಬಾಲಿವುಡ್ ನಟ, ನಿರ್ದೇಶಕ, ನಿರ್ಮಾಪಕ ಏಜಾಜ್ ಅಹ್ಮದ, ಮುಂಬೈನ ಸುಪ್ರಸಿದ್ದ ಗಾಯಕಿ ಚಾರುಲ್ ಹಾಗೂ ಸ್ಥಳಿಯ ಪ್ರತಿಭೆಗಳು ಎಲ್ಲರನ್ನೂ ರಂಜಿಸಿಲಿದ್ದಾರೆ.ಈ ಸಂಗೀತ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದ್ದು, ಲಘು ಉಪಹಾರದ…

Read More

ವಿಜಯಪುರದಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟ ರಚನೆ ವಿಜಯಪುರ: ರಾಜ್ಯ ಮಟ್ಟದ ಪ್ರೌಢಶಾಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟ ಮೊಟ್ಟಮೊದಲ ಬಾರಿಗೆ ವಿಜಯಪುರ ಜಿಲ್ಲೆಯಲ್ಲಿ ರಚಿಸಿ ಆಸ್ತಿತ್ವಕ್ಕೆ ತರಲಾಗಿದೆ.       ನಗರದ ಬಾಲಕರ ಸರಕಾರಿ ಪ.ಪೂ.ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಸಭೆಯಲ್ಲಿ ಒಕ್ಕೂಟ ರಚನೆಯ ನಿಧಾ೯ರ ಕೈಗೊಂಡು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.       ವಿಜಯಪುರ ನಗರವನ್ನು ರಾಜ್ಯ ಮಟ್ಟದ ಕೇಂದ್ರ ಕಚೇರಿಯನ್ನಾಗಿ ಇರಿಸಿಕೊಂಡು “ನಮ್ಮ ಹುದ್ದೆ- ನಮ್ಮ ಹಕ್ಕು” ಶೀರ್ಷಿಕೆಯಡಿಯಲ್ಲಿ ರಾಜ್ಯ ಪ್ರೌಢಶಾಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟ ಆಸ್ತಿತ್ವಕ್ಕೆ ಬಂದಿದೆ. ಒಕ್ಕೂಟ ರಚನೆ ಬಗ್ಗೆ ಈಗಾಗಲೇ ಎರಡು ಮೂರು ಬಾರಿ ಸಭೆ ಜರುಗಿತ್ತು. ನೂತನ ಪದಾಧಿಕಾರಿಗಳ ಆಯ್ಕೆ ಕುರಿತು ಸುದೀರ್ಘ ಚರ್ಚೆ,ಪರಾಮರ್ಶೆ ನಡೆಸಿ ಅಂತಿಮವಾಗಿ ಈ ಬಗ್ಗೆ ಒಮ್ಮತದಿಂದ ಸಭೆಯಲ್ಲಿ ಪಾಲ್ಗೊಂಡಿದ್ದ ನಿವೃತ್ತ ಹಾಗೂ ಹಾಲಿ ಚಿತ್ರಕಲಾ ಶಿಕ್ಷಕರ ಬಳಗ ಅಧಿಕೃತವಾಗಿ ಅಂಗೀಕಾರದ ಮುದ್ರೆ ಒತ್ತಿ ಸಮ್ಮತಿಸಿದ್ದಾರೆ.     ಚಿತ್ರಕಲಾ ಶಿಕ್ಷಣ…

Read More

ವಿಜಯಪುರ: ನಗರದ ಶಾಂತಿನಿಕೇತನ ನೂತನ ಕ್ಯಾಂಪಸ್ ನಲ್ಲಿ ಹಮ್ಮಿಕೊಂಡ ಶಾಂತಿನಿಕೇತನ ದಾಂಡಿಯಾ ಫೆಸ್ಟ್ 2023ಕ್ಕೆ ಸಂಸದ ರಮೇಶ ಜಿಗಜಿಣಗಿ ಬುಧವಾರ ಸಂಜೆ ಚಾಲನೆ ನೀಡಿದರು.ಸಾನಿಧ್ಯ ವಹಿಸಿದ ಯೋಗೇಶ್ವರಿ ಮಾತಾ ಮಾತನಾಡಿ, ಭಾರತದ ಸನಾತನ ಪರಂಪರೆ, ವಿಶ್ವ ಉತ್ಪತ್ತಿಗೆ ಸ್ತ್ರೀಶಕ್ತಿಯ ಅವಶ್ಯಕತೆ ಇದೆಯೆಂದು ಈ ಶರನ್ನವರಾತ್ರಿ ಆಚರಿಸಲಾಗುತ್ತಿದೆ ಎಂದರು.ಚಲನಚಿತ್ರ ನಟಿ ಮಯೂರಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ಕಲಿಸುವ ಶಾಂತಿನಿಕೇತನ ಸಂಸ್ಥೆ ಇನ್ನೂ ಉನ್ನತ ಹಂತಕ್ಕೇರಲೆಂದು ಆಶಿಸಿದರು.ಸಂಸ್ಥೆಯ ಮುಖ್ಯಸ್ಥ ಸುರೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಾಗರ ಡಿಜೆ, ಯಶ್, ಪಿಎಸೈ ಜ್ಯೋತಿ, ಸೈನಿಕಶಾಲೆಯ ಪ್ರತಿಭಾ, ರೇಶಮ್ ಜೈನ್ ವೇದಿಕೆ ಮೇಲಿದ್ದರು.ಶೀಲಾ ಮೇಡಂ ಸ್ವಾಗತಿಸಿ, ವಂದಿಸಿದರು.ಪ್ರಾಚಾರ್ಯ ಶರತ್, ಅಶೋಕಗೌಡ ಪಾಟೀಲ, ಧಿವ್ಯ ಶರತ್ ಬಿರಾದಾರ ಸೇರಿದಂತೆ ಹಲವರಿದ್ದರು.

Read More