ವಿಜಯಪುರ: ನಗರದ ಶಾಂತಿನಿಕೇತನ ನೂತನ ಕ್ಯಾಂಪಸ್ ನಲ್ಲಿ ಹಮ್ಮಿಕೊಂಡ ಶಾಂತಿನಿಕೇತನ ದಾಂಡಿಯಾ ಫೆಸ್ಟ್ 2023ಕ್ಕೆ ಸಂಸದ ರಮೇಶ ಜಿಗಜಿಣಗಿ ಬುಧವಾರ ಸಂಜೆ ಚಾಲನೆ ನೀಡಿದರು.
ಸಾನಿಧ್ಯ ವಹಿಸಿದ ಯೋಗೇಶ್ವರಿ ಮಾತಾ ಮಾತನಾಡಿ, ಭಾರತದ ಸನಾತನ ಪರಂಪರೆ, ವಿಶ್ವ ಉತ್ಪತ್ತಿಗೆ ಸ್ತ್ರೀಶಕ್ತಿಯ ಅವಶ್ಯಕತೆ ಇದೆಯೆಂದು ಈ ಶರನ್ನವರಾತ್ರಿ ಆಚರಿಸಲಾಗುತ್ತಿದೆ ಎಂದರು.
ಚಲನಚಿತ್ರ ನಟಿ ಮಯೂರಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ಕಲಿಸುವ ಶಾಂತಿನಿಕೇತನ ಸಂಸ್ಥೆ ಇನ್ನೂ ಉನ್ನತ ಹಂತಕ್ಕೇರಲೆಂದು ಆಶಿಸಿದರು.
ಸಂಸ್ಥೆಯ ಮುಖ್ಯಸ್ಥ ಸುರೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾಗರ ಡಿಜೆ, ಯಶ್, ಪಿಎಸೈ ಜ್ಯೋತಿ, ಸೈನಿಕಶಾಲೆಯ ಪ್ರತಿಭಾ, ರೇಶಮ್ ಜೈನ್ ವೇದಿಕೆ ಮೇಲಿದ್ದರು.
ಶೀಲಾ ಮೇಡಂ ಸ್ವಾಗತಿಸಿ, ವಂದಿಸಿದರು.
ಪ್ರಾಚಾರ್ಯ ಶರತ್, ಅಶೋಕಗೌಡ ಪಾಟೀಲ, ಧಿವ್ಯ ಶರತ್ ಬಿರಾದಾರ ಸೇರಿದಂತೆ ಹಲವರಿದ್ದರು.


