ವಿಜಯಪುರ: ಖ್ಯಾತ ಬಾಲಿವುಡ್ ಗಾಯಕ ಕುಮಾರ ಸಾನು ಅವರ 67 ನೇ ಜನ್ಮದಿನದ ಅಂಗವಾಗಿ ಅ.22 ರವಿವಾರ ನಗರದ ಶ್ರೀ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ
ಸಂಗೀತ ರಸದೌತಣ ಕಾರ್ಯಕ್ರಮ ಆಯೋಜಿಸಿಸಲಾಗಿದೆ.
ವಿಜಯಪುರದ ಮ್ಯೂಸಿಕ್ ಹೇವನ್ ಆರ್ಕೆಸ್ಟ್ರಾ ವತಿಯಿಂದ ಹಮ್ಮಿಕೊಳ್ಳಲಾಗುವ ಈ ಕಾರ್ಯಕ್ರಮದಲ್ಲಿ ಅಂದು ಮದ್ಯಾಹ್ನ 12 ರಿಂದ ರಾತ್ರಿ 8.30ರ ವರೆಗೆ ಗಾಯಕ ಕುಮಾರ ಸಾನು 67 ನೇ ಜನ್ಮದಿನದ ಪ್ರಯುಕ್ತ 67 ಹಾಡುಗಳನ್ನು ಸತತ 8 ಗಂಟೆಗಳ ಕಾಲ ಪ್ರಸ್ತುತ ಪಡಿಸಿ ದಕ್ಷಿಣ ಭಾರತದಲ್ಲೆ ಮೊದಲ ಬಾರಿಗೆ ಇಂತಹ ದಾಖಲೆ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಕರ್ನಾಟಕದ ಕುಮಾರ ಸಾನು ಖ್ಯಾತಿಯ ರವಿಕುಮಾರ ಅಥರ್ಗಾರವರು ಸತತವಾಗಿ ಹಾಡುವ ಮೂಲಕ ಹೊಸ ದಾಖಲೆ ನಿರ್ಮಿಸಲಿದ್ದಾರೆ. ಅವರಿಗೆ ವಿಜಯಪುರದ ಸೋನು ನಿಗಮ ಖ್ಯಾತಿಯ ರವಿ ಬರಾಡೆ, ಬಾಲಿವುಡ್ ನಟ, ನಿರ್ದೇಶಕ, ನಿರ್ಮಾಪಕ ಏಜಾಜ್ ಅಹ್ಮದ, ಮುಂಬೈನ ಸುಪ್ರಸಿದ್ದ ಗಾಯಕಿ ಚಾರುಲ್ ಹಾಗೂ ಸ್ಥಳಿಯ ಪ್ರತಿಭೆಗಳು ಎಲ್ಲರನ್ನೂ ರಂಜಿಸಿಲಿದ್ದಾರೆ.
ಈ ಸಂಗೀತ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದ್ದು, ಲಘು ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಮ್ಯೂಸಿಕ್ ಹೇವನ್ ಸ್ವಾಗತ ಸಮೀತಿ ಸದಸ್ಯ ವಿಜುಗೌಡ ಕಾಳಶೆಟ್ಟಿ ತಿಳಿಸಿದ್ದಾರೆ.
Related Posts
Add A Comment