Author: editor.udayarashmi@gmail.com

ವಿಜಯಪುರ: ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಲಾಗುವ ವಿಜಯಪುರ ರೈತ ಸಂಪರ್ಕ ಕೇಂದ್ರ ಕಟ್ಟಡಕ್ಕೆ ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ಅವರು ಸೋಮವಾರ ಭೂಮಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಪ್ರಕಾಶ ಆರ್.ಚವ್ಹಾಣ, ಉಪ ಕೃಷಿ ನಿರ್ದೇಶಕ ಚಂದ್ರಕಾಂತ ಪವಾರ, ಸಹಾಯಕ ಕೃಷಿ ನಿರ್ದೇಶಕ ಎಸ್.ಎ.ಇನಾಂದಾರ, ಕೃಷಿ ಅಧಿಕಾರಿ ಶ್ರೀಮತಿ ಜಯಪ್ರದಾ ದಶವಂತ, ಮಾಜಿ ತಾಲೂಕಾ ಪಂಚಾಯತ್ ಸದಸ್ಯರಾದ ರಾಮನಗೌಡ ಬಗಲಿ, ನಿಂಗಪ್ಪ ಪೂಜಾರಿ, ಸಿದ್ದು ಕಬಾಡಗಿ ಸೇರಿದಂತೆ ವಿಜಯಪುರ ತಾಲೂಕಿನ ವಿವಿಧ ರೈತರು ಉಪಸ್ಥಿತರಿದ್ದರು.ಸಹಾಯಕ ಕೃಷಿ ನಿರ್ದೇಶಕ ಜಿ.ಎ.ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು.

Read More

ಕಲಕೇರಿ: ಭಾರತದ ವೀರಪುತ್ರಿ, ಕನ್ನಡನಾಡಿನ ಹೆಮ್ಮೆಯ ಮಹಿಳೆ, ನಿಷ್ಠೆ, ದೈರ್ಯ, ಸಾಹಸದ ಮೂಲಕ ಬ್ರೀಟಿಷ್ ಸೈನ್ಯದ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಿಳೆ, ನಮ್ಮ ಹೆಮ್ಮೆಯ ಕನ್ನಡತಿ ವೀರ ಕಿತ್ತೂರರಾಣಿ ಚನ್ನಮ್ಮಳು ದೇಶದ ಮಣ್ಣಿಗಾಗಿ ತನ್ನ ಪ್ರಾಣವನ್ನೆ ಮುಡುಪಾಗಿಟ್ಟವಳು ಅಂತಹ ಮಹಾನ್ ಮಹಿಳೆ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದ್ದಾಳೆ ಎಂದು ಗುರುಮರುಳಾರಾಧ್ಯ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಸ್ಥಳಿಯ ಮುಖ್ಯ ಬಜಾರದಲ್ಲಿ ಹಮ್ಮಿಕೊಂಡಿರುವ ವೀರರಾಣಿ ಕಿತ್ತೂರ ಚನ್ನಮ್ಮ ಜಯಂತಿ ಆಚರಣೆಯ ವೇಳೆ ಅವರು ಮಾತನಾಡಿದರು.ಈ ವೇಳೆ ಶರಭಯ್ಯ ಗದ್ಗಿಮಠ, ಈರಣ್ಣ ಝಳಕಿ, ಎಸ್,ಎಮ್, ಬಡಿಗೇರ, ಶಿವು ಸರ್ ಕಡಕೋಳ, ಶಿವಣ್ಣ ಗುಮಶೆಟ್ಟಿ, ಆರ್.ಜಿ. ಗುಮಶೆಟ್ಟಿ, ಬಿ.ಡಿ. ಗುಮಶೆಟ್ಟಿ, ಶೇಖಪ್ಪ ಝಳಕಿ, ದೇವಿಂದ್ರ ಕಡಕೋಳ, ವಿಶ್ವನಾಥ ಸಬರದ, ಈರಘಂಟೆಪ್ಪ ಗುಮಶೆಟ್ಟಿ, ದಯಾನಂದ ಆಲಗೂರ, ಮಡು ಗುಮಶೆಟ್ಟಿ, ಜಗು ವಡ್ಡೋಡಗಿ, ಶರಣು ಕವದಿ, ಸುನೀಲ ಪಾಟೀಲ, ಶ್ರೀಶೈಲ ಆರಳಗುಂಡಗಿ, ಪ್ರವೀಣ ಜಗಶೆಟ್ಟಿ, ಆನಂದ ಗುಡಗುಂಟಿ, ವಾಗೀಶ ನಾಗಠಾಣ, ಮುಕ್ಕಣ್ಣ ಗುಮಶೆಟ್ಟಿ, ಪ್ರಕಾಶ ಯರನಾಳ, ಸುಧಾಕರ ಅಡಕಿ…

Read More

ವಿಜಯಪುರ: ದಸರಾ ಹಬ್ಬದ ಅಂಗವಾಗಿ ದುಗಾ೯ಮಾತೆ ದೇವಿಯನ್ನು ತನುಮನಗಳಲ್ಲಿ ಪೂಜಿಸಿ ಮಹಿಳೆಯರು ಭಕ್ತಿ ಸಮಪಿ೯ಸಿದರು. ನವರಾತ್ರಿ ಎಂಟನೇ ದಿನದಂದು ಭಾನುವಾರ ಇಲ್ಲಿನ ಆಲಕುಂಟೆ ನಗರದ ವಸುಂಧರೆಯರು ನಸುಕಿನಲ್ಲಿ ಗುಲಾಬಿ ಬಣ್ಣದ ಸೀರೆಯನ್ನುಟ್ಟು ದೇವಿ ದಿವ್ಯತೆಯ ಬೆಳಕಿನ ದೀಪೋತ್ಸವದಲ್ಲಿ ಕಂಗೊಳಿಸಿದರು.

Read More

ವಿಜಯಪುರ: ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಹಿಟ್ಟಿನಹಳ್ಳಿ ತಾಂಡಾದಲ್ಲಿ ಲಂಬಾಣಿ ಮಹಿಳೆಯರು ಪೂರ್ಣಕುಂಬ ಕಳಸ ಹೊತ್ತು ದುಗಾ೯ಮಾತೆ ಆರಾಧನೆಯಲ್ಲಿ ಮಿಂದ ದೃಶ್ಯ.ಅರ್ಚನಾ ಚವ್ಹಾಣ ಒಡನಾಡಿಗಳಾದ ಸವಿತಾ,ರೋಹಿಣಿ, ಅಂಕಿತಾ ಸೇರಿದಂತೆ ಹಲವಾರು ಮಹಿಳಾ ಮಣಿಗಳು ನವರಾತ್ರಿ ಎಂಟನೇ ದಿನ ಸಂಭ್ರಮಿಸಿದರು.

Read More

ಆಲಮಟ್ಟಿ: ಕೃಷ್ಣೆ ತಟದ ಗುಲಾಬಿ ಹೂಮೊಗ್ಗು ನಾರಿಮಣಿಗಳ ಖುಷಿ, ಸಂಭ್ರಮ ಕಂಪಾಗಿ, ಇಂಪಾಗಿ ಭಾನುವಾರ ಪರಿಮಳಿಸಿತು.ನವರಾತ್ರಿ ಎಂಟನೇ ದಿನದಂದು ಗುಲಾಬಿ ಬಣ್ಣದ ಸೀರೆಯನ್ನುಟ್ಟು ಅತ್ಯೋತ್ಸಾಹದಲ್ಲಿ ಮಿನುಗಿದರು. ಆಲಮಟ್ಟಿ ಎಂ.ಎಚ್.ಎಂ.ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆ ಮುಖ್ಯ ಗುರುಮಾತೆ ಶ್ರೀಮತಿ ತನುಜಾ ಪೂಜಾರಿ ತಮ್ಮ ಸ್ನೇಹಿತೆ ಬಳಗದೊಂದಿಗೆ ರವಿವಾರ ಗುಲಾಬಿ ಕಲರ್ಸನಲ್ಲಿ ಪ್ರಸನ್ನ ಭಾವ ಬೀರಿ ಸಂತಸ ಹಂಚಿಕೊಂಡರು.

Read More

ವಿಜಯಪುರ: ಜಾನಪದ ಸಾಹಿತ್ಯ ನಮ್ಮ ಸಂಸ್ಕೃತಿಯ ಉಸಿರು ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯ ವಕ್ತಾರರಾದ ಸಂಗಮೇಶ ಬಬಲೇಶ್ವರ ಹೇಳಿದರು.ನಗರದ ಕಾಳಿಕಾ ನಗರದಲ್ಲಿರುವ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ನಡೆದ ನವರಾತ್ರಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಅರುಣೋದಯ ಜಾನಪದ ಸಾಹಿತ್ಯ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡ ನಾಡಿನ ಜಾನಪದ ಸಾಹಿತ್ಯದ ಸೊಗಡು ಅನನ್ಯವಾದದ್ದು. ನಾವೆಲ್ಲರೂ ಗ್ರಾಮೀಣ ಭಾಗದಲ್ಲಿ ನಮ್ಮ ತಾಯಂದಿರ ಜಾನಪದ ಹಾಡುಗಳನ್ನು ಕೇಳಿ ಬೆಳೆದವರು. ಇಂದು ಜಾನಪದ ಕಲಾವಿದರನ್ನು ಕರೆಸಿ ಕಾರ್ಯಕ್ರಮ ನೆರವೇರಿಸುತ್ತಿರುವುದು ನನಗೆ ಸಂತಸ ತಂದಿದೆ. ಜಾನಪದ ಕಲೆ ಉಳಿದು ಕಲಾವಿದರು ಬೆಳೆಯಬೇಕು ಎನ್ನುವುದು ನಮ್ಮೆಲ್ಲರ ಸದಾಶಯವಾಗಿದೆ ಎಂದು ಬಬಲೇಶ್ವರ ನುಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಮಧು ಕಲಾದಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆಎಎಸ್ ಅಧಿಕಾರಿ ತಹಸಿಲ್ದಾರ್ ಸಿದ್ದರಾಯ ಭೋಸಗಿ, ಪ್ರಥಮ ದರ್ಜೆ ಗುತ್ತಿಗೆದಾರರಾದ ಬಿ ಎಸ್ ಬಿರಾದಾರ, ಹನುಮಂತ ಚಿಂಚಲಿ, ಅರವಿಂದ್ ಗಬ್ಬುರ, ಡಾ. ಅಜಿತ್ ಗಟಾಟೆ, ಸುಭಾಷ್ ಕರಿಕಬ್ಬಿ,…

Read More

ವಿದ್ಯಾರ್ಥಿ ನಿಧಿ ರಾಮಾಪುರವೆಂಬ ಊರಿನ ಮಧ್ಯೆ ಭಾಗದಲ್ಲಿ ವಿಶಾಲವಾಗುವಂತಹ ಮಾವಿನಮರ ಬೆಳೆದಿತ್ತು. ಆ ಮರದ ಕೆಳಗೆ ಆ ಊರಿನ ಗ್ರಾಮಸ್ಥರು ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಅಕ್ಕಪಕ್ಕದ ಊರುಗಳಿಗೆ ಹೋಗುವಂತಹ ಗ್ರಾಮಸ್ಥರು ಮಾರ್ಗಯಾಸ ಪರಿಹಾರ ಮಾಡಿಕೊಳ್ಳಲು ಇದೇ ಮರದ ಕೆಳಗೆ ಕೆಲಕಾಲತಂಗಿ ಮುಂದೆ ಹೋಗುತ್ತಿದ್ದರು. ಹೀಗೆ ಈ ವಿಶಾಲವಾದಂತಹ ಮಾವಿನಮರ ನೂರಾರು ಪಕ್ಷಿಗಳಿಗೆ ಜಾನುವಾರುಗಳಿಗೆ, ಜನರಿಗೆ ಆಶ್ರಯ ತಾಣವಾಗಿ ನಿಂತಿತ್ತು. ಹೀಗಿರಲು ಒಂದು ದಿನ ಆ ಮರದ ಕೆಳಗಿನ ಹುತ್ತದೊಳಗೆ ದೂರದ ಕಾಡಿನಿಂದ ಬಂದಂತಹ ಕರಿನಾಗರ ಆಶ್ರಯ ಪಡೆದಿತ್ತು. ಹೀಗೆ ಸೇರಿಕೊಂಡ ಹಾವು ಆ ಮರದ ಕೆಳಗೆ ವಿಶ್ರಾಂತಿ ಪಡೆಯಲು ಬರುತ್ತಿದ್ದ ಜನರಿಗೆ ಕಚ್ಚಿ ಉಪಟಳ ಕೊಡುತ್ತಿತ್ತು. ಹೀಗೆ ಕಚ್ಚಿ ಹಲವಷ್ಟು ಜನ ಪ್ರಾಣವನ್ನೇ ಕಳೆದುಕೊಂಡಿದ್ದರು . ಹೀಗಾಗಿ ಮಾವಿನ ಮರದ ಕೆಳಗೆ ಹೋಗಲು ಜನ ಭಯಪಡಬೇಕಾದಂತಹ ವಾತಾವರಣ ನಿರ್ಮಾಣವಾಯಿತು. ಈ ಹಾವಿನ ವಿಷಯ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ಆ ಮರದ ಹತ್ತಿರ ಬರುವುದನ್ನು ನಿಲ್ಲಿಸಿಬಿಟ್ಟರು.ಕಾಲ ಕಳೆಯುತ್ತಿರಲು ಒಂದು ದಿನ ಆ ಮರದ…

Read More

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಚಿವರು & ಅಧಿಕಾರಿಗಳಿಂದ ಮಾಹಿತಿ ಪಡೆದ ಸಿದ್ದರಾಮಯ್ಯ ಅವರು ಇದೇ ವೇಳೆ, ಹಲವು ಪ್ರಮುಖ ಸೂಚನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ನೀಡಿರುವ ಆದೇಶ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಾಗಬೇಕು ಅಂದುಕೊಂಡಿದ್ದವರಿಗೂ ಗುಡ್ ನ್ಯೂಸ್ ಕೊಟ್ಟಿದೆ.ಜೆಎನ್‌ಯು ನಲ್ಲಿ ಕನ್ನಡ ಅಧ್ಯಯನ ಪೀಠದ ಬಗ್ಗೆ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ಪಡೆದು ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿದರು. ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಕಾರ್ಯಚಟುವಟಿಕೆಗಳು ಭಿನ್ನ ಅವಧಿಗೆ ನಡೆಯುವುದರಿಂದ ಅಭ್ಯರ್ಥಿಗಳಿಗೆ ಅನಾನುಕೂಲ ಆಗುವುದರಿಂದ, ಏಕರೂಪದ ಕ್ಯಾಲೆಂಡರ್‌ ಆಫ್‌ ಇವೆಂಟ್ಸ್‌ ಜಾರಿಗೊಳಿಸಲು ಸೂಚಿಸಿದರು. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಪರಿಷತ್ತು ಕಾರ್ಯ ನಿರತವಾಗಿದೆ ಎಂದು ಅಧಿಕಾರಿಗಳು ಸಿಎಂಗೆ ಮಾಹಿತಿ ನೀಡಿದರು.ಶಿಕ್ಷಣ ಕ್ಷೇತ್ರದ ಗುಣಮಟ್ಟ ಕಾಯ್ದುಕೊಳ್ಳಲು ಬೋಧಕ ಸಿಬ್ಬಂದಿ ನೇಮಕ ಅತಿ ಅಗತ್ಯವಾಗಿದೆ. ಈ ಹಿನ್ನೆಲೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ & ಬ್ಯಾಕ್‌ಲಾಗ್‌ ಹುದ್ದೆಗಳನ್ನು ಮೊದಲಿಗೆ ಭರ್ತಿ ಮಾಡುವಂತೆ ಹಾಗೂ ನಂತರ…

Read More

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಮರುಸ್ಥಾಪನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಮರುಸ್ಥಾಪನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿ, ಅರ್ಜಿದಾರರಿಗೆ ₹ 1 ಲಕ್ಷ ದಂಡ ವಿಧಿಸಿದೆ.ನ್ಯಾಯವಾದಿ ಅಶೋಕ ಪಾಂಡೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾ.ಬಿ.ಆರ್.ಗವಾಯಿ ನೇತೃತ್ವದ ಪೀಠವು, ಅರ್ಜಿದಾರರ ಯಾವುದೇ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿಲ್ಲ, ಹೀಗಾಗಿ ಅರ್ಜಿಯು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ಹೇಳಿತು.‘ಮೋದಿ’ ಉಪನಾಮ ಕುರಿತು ಟೀಕೆಗಾಗಿ ಸಂಬಂಧಿಸಿದ ಪ್ರಕರಣದಲ್ಲಿ ದೋಷ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯವು ಆ.4ರಂದು ತಡೆಯಾಜ್ಞೆ ನೀಡಿದ ಬಳಿಕ ಲೋಕಸಭಾ ಸಚಿವಾಲಯವು ರಾಹುಲ್ ಅವರ ಸದಸ್ಯತ್ವವನ್ನು ಮರುಸ್ಥಾಪಿಸಿತ್ತು.ಮಾರ್ಚ್ 2023ರಲ್ಲಿ ಕೆಳಮನೆಯಿಂದ ಅನರ್ಹಗೊಂಡ ಕಾಂಗ್ರೆಸ್ ನಾಯಕನನ್ನು ವಯನಾಡ್ ಸಂಸದರಾಗಿ ಮರುಸ್ಥಾಪಿಸಲಾಯಿತು.

Read More

ಕಾವ್ಯರಶ್ಮಿ ತಿಂಗಳ ಸಂಬಳವಿಲ್ಲದ ನಿರಂತರ…ದುಡಿತಬಯಸುತ ಮನದಿ ಮನೆಯವರೆಲ್ಲರ ಹಿತತನ್ನ ತನುಮನವನು ಅನವರತ ದಂಡಿಸುತಇರುತ್ತಾಳೀಕೆ ಗೃಹಿಣಿ ಗೃಹಮುಚ್ಯತೆ ಎನುತ ಇವಳಿಲ್ಲದಿರೆ ಮನೆಗಿಲ್ಲ ಶೋಭೆ ಎನ್ನುವರುಇವಳಿದ್ದರೆ ಮಾತ್ರ ನಿರಾಳತೆ ಹೊಂದುವರುಆದರೂ ಅಲ್ಪ ಪ್ರೀತಿಯವಳಿಗೆ ತೋರಿಸರುದುಡಿಯುವ ತಾನೇ ಮೇಲೆಂದು ಹೇಳುವರು ಗೃಹಿಣಿಗೂ ಮನವುಂಟು…ಆಸೆಯುಂಟುಹೇಳಬೇಕೆನ್ನುವ ಹಲವು ಕನಸುಗಳುಂಟುಹೇಳಿದರೆ ನಗುವರೆಂಬ ಭಯವೂ ಉಂಟುಸಿಗದ ಗಗನಕುಸುಮವಿದೆಂಬ ಅರಿವುಂಟು ತಂದಿತ್ತರೆ ಈ ಗಗನಕುಸುಮವನು ಅವಳಿಗೆನೋಡಿಯಾಗ ಲಕ್ಷ್ಮೀ ಬರುವವಳು ನಿನ್ನೆಡೆಗೆಸಂಸಾರವಾಗುವುದು ಸುಖದಸಾಗರ ನಿನಗೆಭುವಿಯೇ ಸ್ವರ್ಗದಂತೆ ಎನಿಸುವುದು ಕೊನೆಗೆ

Read More