ವಿಜಯಪುರ: ಜಾನಪದ ಸಾಹಿತ್ಯ ನಮ್ಮ ಸಂಸ್ಕೃತಿಯ ಉಸಿರು ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯ ವಕ್ತಾರರಾದ ಸಂಗಮೇಶ ಬಬಲೇಶ್ವರ ಹೇಳಿದರು.
ನಗರದ ಕಾಳಿಕಾ ನಗರದಲ್ಲಿರುವ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ನಡೆದ ನವರಾತ್ರಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಅರುಣೋದಯ ಜಾನಪದ ಸಾಹಿತ್ಯ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಾಡಿನ ಜಾನಪದ ಸಾಹಿತ್ಯದ ಸೊಗಡು ಅನನ್ಯವಾದದ್ದು. ನಾವೆಲ್ಲರೂ ಗ್ರಾಮೀಣ ಭಾಗದಲ್ಲಿ ನಮ್ಮ ತಾಯಂದಿರ ಜಾನಪದ ಹಾಡುಗಳನ್ನು ಕೇಳಿ ಬೆಳೆದವರು. ಇಂದು ಜಾನಪದ ಕಲಾವಿದರನ್ನು ಕರೆಸಿ ಕಾರ್ಯಕ್ರಮ ನೆರವೇರಿಸುತ್ತಿರುವುದು ನನಗೆ ಸಂತಸ ತಂದಿದೆ. ಜಾನಪದ ಕಲೆ ಉಳಿದು ಕಲಾವಿದರು ಬೆಳೆಯಬೇಕು ಎನ್ನುವುದು ನಮ್ಮೆಲ್ಲರ ಸದಾಶಯವಾಗಿದೆ ಎಂದು ಬಬಲೇಶ್ವರ ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಧು ಕಲಾದಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆಎಎಸ್ ಅಧಿಕಾರಿ ತಹಸಿಲ್ದಾರ್ ಸಿದ್ದರಾಯ ಭೋಸಗಿ, ಪ್ರಥಮ ದರ್ಜೆ ಗುತ್ತಿಗೆದಾರರಾದ ಬಿ ಎಸ್ ಬಿರಾದಾರ, ಹನುಮಂತ ಚಿಂಚಲಿ, ಅರವಿಂದ್ ಗಬ್ಬುರ, ಡಾ. ಅಜಿತ್ ಗಟಾಟೆ, ಸುಭಾಷ್ ಕರಿಕಬ್ಬಿ, ಡಿ.ಕೆ ರಾಥೋಡ್, ರಮೇಶ್ ಅಂಜಿಕಾಣೆ, ಶ್ರೀಕಾಂತ್ ಮಂತ್ರಿ, ರಾಮಣ್ಣ ಗುದ್ದಿ, ಕನಬೂರ್ ಸರ, ಶಿವಾನಂದ ಹಿರೇಕುರುಬರ್, ಆರ್ ಎಚ್ ಮಂಟೂರ, ಸಂತೋಷ್ ಇಂಡಿ, ಜಿಬಿ ಸಾಲಕ್ಕಿ ಮೊದಲಾದವರು ಉಪಸ್ಥಿತರಿದ್ದರು.
ಅರುಣೋದಯ ಜಾನಪದ ಕಲಾತಂಡ ಪ್ರಸ್ತುತಪಡಿಸಿದ ನೃತ್ಯ ರೂಪಕಗಳು ಹಾಗೂ ಜಾನಪದ ಸಾಹಿತ್ಯದ ಸೊಗಡಿನಿಂದ ಕೂಡಿದ ಅಪರೂಪದ ಹಾಡುಗಳು ನೆರೆದಿದ್ದ ಸಾವಿರಾರು ಜನರ ಹೃದಯವನ್ನು ತಲುಪಿದವು.
ಸಾವಿರಾರು ಜನ ಅಂಬಾ ಭವಾನಿ ಭಕ್ತರು ಪಾಲ್ಗೊಂಡಿದ್ದರು.
Related Posts
Add A Comment