ಕಲಕೇರಿ: ಭಾರತದ ವೀರಪುತ್ರಿ, ಕನ್ನಡನಾಡಿನ ಹೆಮ್ಮೆಯ ಮಹಿಳೆ, ನಿಷ್ಠೆ, ದೈರ್ಯ, ಸಾಹಸದ ಮೂಲಕ ಬ್ರೀಟಿಷ್ ಸೈನ್ಯದ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಿಳೆ, ನಮ್ಮ ಹೆಮ್ಮೆಯ ಕನ್ನಡತಿ ವೀರ ಕಿತ್ತೂರರಾಣಿ ಚನ್ನಮ್ಮಳು ದೇಶದ ಮಣ್ಣಿಗಾಗಿ ತನ್ನ ಪ್ರಾಣವನ್ನೆ ಮುಡುಪಾಗಿಟ್ಟವಳು ಅಂತಹ ಮಹಾನ್ ಮಹಿಳೆ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದ್ದಾಳೆ ಎಂದು ಗುರುಮರುಳಾರಾಧ್ಯ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಸ್ಥಳಿಯ ಮುಖ್ಯ ಬಜಾರದಲ್ಲಿ ಹಮ್ಮಿಕೊಂಡಿರುವ ವೀರರಾಣಿ ಕಿತ್ತೂರ ಚನ್ನಮ್ಮ ಜಯಂತಿ ಆಚರಣೆಯ ವೇಳೆ ಅವರು ಮಾತನಾಡಿದರು.
ಈ ವೇಳೆ ಶರಭಯ್ಯ ಗದ್ಗಿಮಠ, ಈರಣ್ಣ ಝಳಕಿ, ಎಸ್,ಎಮ್, ಬಡಿಗೇರ, ಶಿವು ಸರ್ ಕಡಕೋಳ, ಶಿವಣ್ಣ ಗುಮಶೆಟ್ಟಿ, ಆರ್.ಜಿ. ಗುಮಶೆಟ್ಟಿ, ಬಿ.ಡಿ. ಗುಮಶೆಟ್ಟಿ, ಶೇಖಪ್ಪ ಝಳಕಿ, ದೇವಿಂದ್ರ ಕಡಕೋಳ, ವಿಶ್ವನಾಥ ಸಬರದ, ಈರಘಂಟೆಪ್ಪ ಗುಮಶೆಟ್ಟಿ, ದಯಾನಂದ ಆಲಗೂರ, ಮಡು ಗುಮಶೆಟ್ಟಿ, ಜಗು ವಡ್ಡೋಡಗಿ, ಶರಣು ಕವದಿ, ಸುನೀಲ ಪಾಟೀಲ, ಶ್ರೀಶೈಲ ಆರಳಗುಂಡಗಿ, ಪ್ರವೀಣ ಜಗಶೆಟ್ಟಿ, ಆನಂದ ಗುಡಗುಂಟಿ, ವಾಗೀಶ ನಾಗಠಾಣ, ಮುಕ್ಕಣ್ಣ ಗುಮಶೆಟ್ಟಿ, ಪ್ರಕಾಶ ಯರನಾಳ, ಸುಧಾಕರ ಅಡಕಿ ಸೇರಿದಂತೆ ಅನೇಕರು ಇದ್ದರು.
Related Posts
Add A Comment