Author: editor.udayarashmi@gmail.com

ವಿಜಯಪುರ: ನಗರ ಮಹಾನಗರ ಪಾಲಿಕೆ ಮಹಾಪೌರ ಹಾಗೂ ಉಪಮಹಾಪೌರ ಆಯ್ಕೆಗೆ ಅಕ್ಟೋಬರ್ ೩೦ರಂದು ನಿಗದಿಗೊಳಿಸಲಾದ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಅಧ್ಯಕ್ಷಾಧಿಕಾರಿಗಳಾದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟೆಣವರ ತಿಳಿಸಿದ್ದಾರೆ.ವಿಜಯಪುರ ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪ ಮಹಾಪೌರ ಸ್ಥಾನಗಳ ಮೀಸಲಾತಿಯನ್ನು ಪ್ರಶ್ನಿಸಿ ಕಲಬುರಗಿ ಉಚ್ಛ ನ್ಯಾಯಾಲಯದಲ್ಲಿ ದಾಖಲಾದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ದಿನಾಂಕ : ೨೭-೧೦-೨೦೨೩ ರಂದು ಪ್ರಕರಣದ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ದಿನಾಂಕ : ೩೦-೧೦-೨೦೨೩ ರಂದು ಮುಂದೂಡಿದ ಹಿನ್ನಲೆಯಲ್ಲಿ ಪ್ರಕರಣ ಇತ್ಯರ್ಥವಾಗುವರೆಗೆ ಚುನಾವಣೆ ನಡೆಸಲು ಯಾವುದೇ ಕ್ರಮ ತೆಗೆದುಕೊಳ್ಳದಂತೆ ಕಲುಬುರಗಿ ಪೀಠದ ಹೆಚ್ಚುವರಿ ಅಡ್ವೋಕೆಟ್ ಜನರಲ್ ಇವರು ತಿಳಿಸಿರುವುದರಿಂದ ಮಹಾನಗರ ಪಾಲಿಕೆ ಚುನಾವಣೆ ಮುಂದೂಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Read More

೪ ಪಾಳೆಗಳಲ್ಲಿ ೫೧೫ ಕೃಷಿ ಪಂಪಸೆಟ್ ಫೀಡರಗಳಿಗೆ ತ್ರಿಫೇಸ್ ವಿದ್ಯುತ್ ಪೂರೈಕೆ ವಿಜಯಪುರ: ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ರೈತರ ಕೃಷಿ ಪಂಪಸೆಟ್‌ಗಳಿಗೆ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ಜಿಲ್ಲೆಯ ಒಟ್ಟು ೫೧೫ ಕೃಷಿ ಪಂಸೆಟ್ ಪೀಡರ್‌ಗಳಿಗೆ ೪ ಪಾಳೆಗಳಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದರು.ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ನಾಲ್ಕು ೨೨೦ ಕೆವ್ಹಿ ಸ್ವೀಕರಣಾ ಕೇಂದ್ರಗಳು, ೧೧೦ಕೆವ್ಹಿ ೪೪ ಕೇಂದ್ರಗಳು ಹಾಗೂ ೩೩ಕೆವ್ಹಿ ೩೧ ವಿತರಣಾ ಕೇಂದ್ರಗಳಿದ್ದು, ಈ ಕೇಂದ್ರಗಳಿಂದ ೪ ಪಾಳೆಗಳಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ೨೫ ವಿದ್ಯುತ್ ವಿತರಣಾ ಕೇಂದ್ರಗಳಿಂದ ಸತತವಾಗಿ ೬ ಗಂಟೆ ೩ ಫೇಸ್ ವಿದ್ಯುತ್, ೨೧ ವಿತರಣಾ ಕೇಂದ್ರಗಳಿಂದ ಹಗಲು ೪ ಗಂಟೆ ಮತ್ತು ರಾತ್ರಿ ೨ ಗಂಟೆ ೩ ಫೇಸ್ ವಿದ್ಯುತ್, ೧೬ ವಿದ್ಯುತ್ ವಿತರಣಾ ಕೇಂದ್ರಗಳಿಂದ ಹಗಲು ೩ ಗಂಟೆ ಮತ್ತು ರಾತ್ರಿ ೩ ಗಂಟೆ ೩ ಫೇಸ್ ವಿದ್ಯುತ್, ೩…

Read More

ವಿಜಯಪುರ: ಹೃದಯಾಘಾತ ಮತ್ತು ಪ್ರಥಮ ಚಿಕಿತ್ಸೆ ಕುರಿತ ಕಾರ್ಯಾಗಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಸಂಗನಬಸವ ಮಹಾಸ್ವಾಮೀಜಿ ಫಾರ್ಮಸಿ ಕಾಲೇಜಿನಲ್ಲಿ ಗುರುವಾರ ನಡೆಯಿತು.ಪಾರ್ಮಸಿ ಕಾಲೇಜು ಮತ್ತು ರಾಘವೇಂದ್ರ ಕಾರ್ಡಿಯೊ ಕೇರ್ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಾಗಾರವನ್ನು ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಡಾ. ಸಿ. ಸಿ. ಪಾಟೀಲ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಹೃದಯ ರೋಗ ಖ್ಯಾತ ವೈದ್ಯರಾದ ಡಾ. ಕಿರಣ ಚುಳಕಿ ಮತ್ತು ಡಾ. ದೀಪಕ ಕಡೇಲಿ ಅವರು ಹೃದಯಾಘಾತ ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರವಾಗಿ ಪ್ರಾತ್ಯಕ್ಷಿಕೆ ಮೂಲಕ ಮನದಟ್ಟು ಮಾಡಿದರು. ಅಲ್ಲದೇ, ಹೃದಯದಲ್ಲಿರುವ ನಾನಾ ಅಂಗಾಂಗಳು, ರಕ್ತಸಂಚಾರ ನಾಳಗಳು, ಅವುಗಳ ಕಾರ್ಯಗಳ ಕುರಿತು ವಿವರಿಸಿದರು. ಇದೇ ವೇಳೆ, ಹೃದಯಾಘಾತ ಸಂಭವಿಸಿದಾಗ ಮತ್ತು ಚಿಕಿತ್ಸೆ ಸಂದರ್ಭದಲ್ಲಿ ನೀಡಬೇಕಾದ ಔಷಧಿಗಳ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಫಾರ್ಮಸಿ ಪ್ರಾಕ್ಟೀಸ್ ವಿಭಾಗದ ಮುಖ್ಯಸ್ಥ ಡಾ. ಎಸ್. ಝಡ್ ಇನಾಮದಾರ, ಡಾ. ಸುಶೀಲ್ಲ ಪಿ. ಎಲ್, ಡಾ.…

Read More

ಭಾವರಶ್ಮಿ ಗೌತಮ ಮುನಿಗಳು ಕಾಡಿನಲ್ಲಿ ವಾಸವಾಗಿದ್ದು ತಮ್ಮ ಕಾರ್ಯಗಳನ್ನು ಮಾಡಿಕೊಂಡು ಪತ್ನಿ ಅಹಲ್ಯಯೊಂದಿಗೆ ಸುಖವಾಗಿ ವಾಸಿಸುತ್ತಿದ್ದರು. ಅಂದು ದಿನ‌ ಹೀಗೆ ಅವರ ಜೀವನ ಸಾಗುತ್ತಿರುವಾಗ ಅವರ ಸುಂದರವಾದ ಬದುಕಿನಲ್ಲಿ ಸಿಡಿಲಿನಂತೆ ಇಂದ್ರನ ಆಗಮನವಾಗುತ್ತೆ.ಅಹಲ್ಯೆಯ ಸೌಂದರ್ಯಕ್ಕೆ ಮರುಳಾದ ಇಂದ್ರ ಹೇಗಾದರೂ ಅಹಲ್ಯೆಯನ್ನು ವಶ ಪಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಮಹಾ ಪತಿವ್ರತೆಯಾದ ಅಹಲ್ಯೆಯ ಮುಂದೆ ಇವನ ಆಟ ನಡಿಯೊದಿಲ್ಲಾ ಎಂದು ತಿಳಿದಾಗ ಇಂದ್ರ ಅಡ್ಡ ದಾರಿಯಲ್ಲಿ ಹೋಗಲು ನಿರ್ದರಿಸುತ್ತಾನೆ. ಬೆಳಗಿನ ಜಾವ ಸೂರ್ಯೋದಯಕ್ಕೆ ಬಹಳ ಮುಂಚೆ ಗೌತಮ ಮುನಿಗಳ ಆಶ್ರಮದ ಬಳಿ ಹೋಗಿ ಕೋಳಿ ಕೂಗಿದ ಹಾಗೆ ಕೂಗುತ್ತಾನೆ. ಇದೇನು ಇನ್ನೂ ಇಷ್ಟೊಂದು ಕತ್ತಲಿದೆ, ಆಗಲೇ ಬೆಳಗಾಗಿ ಬಿಟ್ಟಿತಾ? ಎಂದು ಗೌತಮ ಮುನಿಗಳಿಗೆ ಅನುಮಾನ ಬರುತ್ತೆ. ಆದರೆ ಕೋಳಿ ಕೂಗಿತಲ್ಲ ಬೆಳಗಾಗಿರಬೇಕು ಅಂತ ನಿದ್ರೆಯಿಂದ ಎದ್ದು ತಮ್ಮ ಪ್ರಾತಃ ಕಾಲದ ಕೆಲಸಗಳನ್ನು ಪ್ರಾರಂಬಿಸಲು ನದಿ ಕಡೆ ಹೊರಡುತ್ತಾರೆ.ಅವರು ಆ ಕಡೆ ಹೊರಡುತ್ತಿದ್ದ ಹಾಗೆ ಇಂದ್ರ ಗೌತಮರ ರೂಪದರಿಸಿ ಗೌತಮರ ಆಶ್ರಮದ ಒಳಗೆ ಹೋಗಿ ಅಹಲ್ಲೆಯನ್ನು…

Read More

ಕಾವ್ಯ ರಶ್ಮಿ ನಿನ್ನೊಲವ ತುಂಬಿದ ಹೃದಯದ ಗೂಡುಒಲವಿಂದ ಬಂದು ನೀನೊಮ್ಮೆ ನೋಡು ನೀನಗಾಗಿಯೇ ಮಿಡಿಯುತಿದೆ ಈ ಹೃದಯಎದೆಯ ಬಡಿತ ಕೇಳಿಸದೆಯಾ? ನನ್ನೀನಿಯ ನೀನ್ಹೆಸರೆ ನನ್ನುಸಿರಾಗಿದೆ, ನೀನೆ ನನ್ನ ಜೀವಶಬರಿಯಂತೆ ನಾ ಕಾಯುವೆ ನೀನೆ ನನ್ನ ದೈವ ನೀ ಕೇಳುವೆಯಾ ನನ್ನ ಮನದ ಮೊರೆಯಬಾಳಿಗೆ ಬೆಳಕಾಗಿ ಬರುವೆಯಾ ನನ ಗೆಳೆಯ

Read More

ಪ್ರಶಸ್ತಿ ಆಯ್ಕೆ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸೂಚನೆ ಎಲ್ಲ ಜಾತಿ, ಧರ್ಮ, ಲಿಂಗಗಳಿಗೂ ಪ್ರಾತಿನಿಧ್ಯ | ಸಂಘ ಸಂಸ್ಥೆಗಳಿಗೆ 10 ಪ್ರಶಸ್ತಿ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ( ಅಕ್ಟೋಬರ್ 26) ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಉನ್ನತ ಮಟ್ಟದ ಸಭೆ ಜರುಗಿತು.ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಅರ್ಹರಿಗೆ ಪ್ರಶಸ್ತಿ ನೀಡಬೇಕು. ಪ್ರಾದೇಶಿಕ ನ್ಯಾಯ ಕಡ್ಡಾಯವಾಗಿ ಪಾಲಿಸಬೇಕು. ಎಲ್ಲಾ ಜಾತಿ, ಧರ್ಮ, ಲಿಂಗಗಳಿಗೂ ಪ್ರಾತಿನಿಧ್ಯ ದೊರಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಕನ್ನಡದ ಪರವಾಗಿ ಕಾರ್ಯನಿರ್ವಹಿಸಿರುವ ಸಂಘ ಸಂಸ್ಥೆಗಳಿಗೆ ಒಟ್ಟಾರೆ 10 ಪ್ರಶಸ್ತಿಗಳನ್ನು ನೀಡಬೇಕು ಎಂದು ಆಯ್ಕೆ ಸಮಿತಿ ಸದಸ್ಯರು ಸಭೆಯಲ್ಲಿ ತಿಳಿಸಿದರು.ಈ ಬಾರಿ 68 ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಬೇಕಿದ್ದು, ಕರ್ನಾಟಕ ಸಂಭ್ರಮದ ಪ್ರಯುಕ್ತ ಸಂಘ ಸಂಸ್ಥೆಗಳಿಗೆ 10 ಪ್ರಶಸ್ತಿಗಳನ್ನು ನೀಡಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಅರ್ಜಿ ಕೊಡುವವವರು ಹೆಚ್ಚಿದ್ದ ಕಾರಣ, ಅದಕ್ಕೆ ಕಡಿವಾಣ…

Read More

ಸಿಂದಗಿ: ತಳವಾರ ಸಮಾಜ ಇಂದು ರಾಜಕೀಯ, ಆರ್ಥಿಕ, ಶೈಕ್ಷ ಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಮುಖ್ಯಗುರು ಎಸ್.ಆಯ್.ರಾಂಪೂರ ಹೇಳಿದರು.ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಚಿಕ್ಕ ಹಣಮಂತ ದೇವಸ್ಥಾನದಲ್ಲಿ ತಳವಾರ ಸಮಾಜ ಹಾಗೂ ತಳವಾರ ಸಮಾಜದ ನೌಕರ ಮಹಾಸಭಾ ಸಿಂದಗಿ ವತಿಯಿಂದ ನೂತನ ಸಿಂದಗಿ ಬ್ಲಾಕ ಕಾಂಗ್ರೆಸ್ ಉಪಾಧ್ಯಕ್ಷ ಚಂದ್ರಕಾಂತ ಬೂದಿಹಾಳ ಹಾಗೂ ಚಿಕ್ಕಸಿಂದಗಿ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸದಸ್ಯ ಸಂಜೀವ ಬಮ್ಮನಳ್ಳಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಸಮಾಜ, ಸಂಘ, ಸಂಘಟನೆ ತುಂಬಾ ಮುಖ್ಯವಾಗಿದೆ. ಒಗ್ಗಟ್ಟಿನಿಂದ ಎಲ್ಲರೂ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಸಮಾಜ ನಿಂತ ನೀರಾಗಿರದೆ ಚಲಿಸುತ್ತಿರಬೇಕು. ಸಮಾಜ ಸಂಘಟನೆಯಲ್ಲಿ ಯುವಕರಿಗೆ ಜವಾಬ್ದಾರಿ ನೀಡಬೇಕು ಎಂದು ಸಲಹೆ ನೀಡಿದರು.ತಾಲೂಕು ನೌಕರ ಸಂಘದ ಅಧ್ಯಕ್ಷ ರಾಜಶೇಖರ ನರಗೋಧಿ ಮಾತನಾಡಿ, ಸಮಾಜವು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಸದೃಢವಾಗಬೇಕಾದರೆ ಸಂಘಟನೆ ಬಹಳ ಅಗತ್ಯವಾಗಿದೆ ಎಂದರು.ಸರಳ ಸಮಾರಂಭದಲ್ಲಿ ಸಿಂದಗಿ ಬ್ಲಾಕ ಕಾಂಗ್ರೆಸ್ ನೂತನ ಉಪಾಧ್ಯಕ್ಷ ಚಂದ್ರಕಾಂತ…

Read More

ಆರೋಗ್ಯ ಅಂಗಳ ಹನ್ನೆರಡು ವರ್ಷದ ಹುಡುಗ ತಮ್ಮ ತಂದೆಯ ಜೊತೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ, ಪ್ರಯಾಣದ ದಾರಿಯಲ್ಲಿ ಕಿಟಕಿಯಿಂದ ಕಾಣುವ ಗಿಡ, ಮರ, ಹಣ, ಪಕ್ಷಿ, ನದಿ, ಸೇತುವೆ, ವಾಹನಗಳನ್ನು ಕಂಡು ತುಂಬಾ ಖುಷಿಯಿಂದ ಕುಣಿದು ಉತ್ಸಾಹಪಡುತ್ತಿದ್ದೆ.ಇದನ್ನೆಲ್ಲಾ ಪಕ್ಕದಲ್ಲೆ ಕುಳಿತಿದ್ದ ಪ್ರಯಾಣಿಕನಿಗೆ ವಿಚಿತ್ರವೆನಿಸುತ್ತಿತ್ತು. ಹುಡುಗನ ಮೊದಲ ರೈಲು ಪ್ರಯಾಣ ಎಂದುಕೊಂಡು ಸುಮ್ಮನಿದ್ದೆ. ಆದರೂ ತುಂಬಾ ಹೊತ್ತಾದ ಬಳಿಕವು ಹುಡುಗನ ಉತ್ಸಾಹ ಕಡಿಮೆಯಾಗದ್ದನ್ನು ನೋಡಿ, ಸ್ವಲ್ಪ ಸಿಡಿಮಿಡಿಯಿಂದ ಅವನ ತಂದೆಯನ್ನು ನೋಡಿ, ಇಷ್ಟು ವಯಸ್ಸಾದ ನಿಮ್ಮ ಮಗ ಗಿಡ-ಮರ ನದಿ ವಾಹನಗಳನ್ನು ನೋಡಿ ಇಷ್ಟೇಕೆ ಉತ್ಸುಕುನಾಗಿದ್ದಾನೆ. ಸ್ವಲ್ಪ ಅವನ ಗಲಾಟೆಯನ್ನು ಕಡಿಮೆ ಮಾಡಲು ಹೇಳಿ ಎಂದ.ಅದಕ್ಕೆ ಹುಡುಗನ ತಂದೆ “ಇಲ್ಲಾ ಸರ್, ರೈಲಿನಲ್ಲಿ ತುಂಬಾ ಸಲ ಪ್ರಯಾಣಿಸಿದ್ದಾನೆ. ಆದರೆ ಇದೇ ಮೊದಲ ಬಾರಿಗೆ ಅವನ ಕಣ್ಣುಗಳಿಂದ ತನ್ನ ಸುತ್ತಲಿನ ಪರಿಸರವನ್ನು ನೋಡಿ ಅನುಭವಿಸುತ್ತಿದ್ದಾನೆ.”ಸಹ ಪ್ರಯಾಣಿಕನಿಗೆ ಅವರ ತಂದೆ ಹೇಳಿದ್ದು ಕೇಳಿ ಪ್ರಶ್ನಾರ್ಥಕ ಭಾವದಿಂದ ನೋಡತೊಡಗಿದ. ಹುಡುಗನ ತಂದೆ ತಮ್ಮ ಮಾತು ಮುಂದುವರೆಸಿ, “ಅವನು ೧…

Read More

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ ಹುಲಿ ಉಗುರು, ಆನೆ ದಂತ, ನವಿಲು ಗರಿ, ಜಿಂಕೆ – ಹುಲಿಯ ಚರ್ಮ, ಮೀನಿನ ವಾಸ್ತು, ಹಾವಿನ ವಿಷ, ಸಾರಂಗದ ಕೊಂಬು, ಆನೆ – ಕರಡಿಯ ಕೂದಲು ಹೀಗೆ ಕೆಲವು ಸಂರಕ್ಷಿತ ಪ್ರಾಣಿಗಳ ವಸ್ತುಗಳನ್ನು ಉಪಯೋಗಿಸುವ ಖಯಾಲಿ..ಪ್ರಕೃತಿಯ ಮಡಿಲಿನ ರಾಷ್ಟ್ರಕವಿ ಕುವೆಂಪು ಒಂದು ಕಡೆ ಹೇಳುತ್ತಾರೆ ” ಹೂವು ಬಳ್ಳಿಗೆ ಅಲಂಕಾರವೇ ಹೊರತು ವಿಗ್ರಹಕ್ಕಲ್ಲ”. ಹಾಗೆಯೇ ವಚನಕಾರ ಅಂಬಿಗರ ಚೌಡಯ್ಯ ಒಂದು ವಚನದಲ್ಲಿ ಹೇಳುವ ಸಾರಾಂಶ ಹೀಗಿದೆ..”ಆರೈಕೆಗೆ ಬಿತ್ತಿದ ಗಿಡದ ಹೂವನ್ನು ಕೊಯ್ದು, ಊರಿನವರು ಬಾಯಾರಿಕೆಗಾಗಿ ಕಟ್ಟಿಸಿದ ಕೆರೆಯ ನೀರನ್ನು ತಂದು, ನಾಡಿನ ಜನರೆಲ್ಲ ನೋಡಲಿ ಎಂದು ಆಡಂಬರಕ್ಕಾಗಿ, ಬಹಿರಂಗವಾಗಿ ಪೂಜೆ ಮಾಡುವುದು ತಪ್ಪು. ಹಾಗೆ ಪೂಜೆ ಮಾಡುವುದರಿಂದ ಅದರ ಪುಣ್ಯ ಹೂವಿಗೋ, ನೀರಿಗೋ ಅಥವಾ ಪೂಜಿಸಿದ ಮನುಷ್ಯನಿಗೋ ನನಗಂತೂ ಗೊತ್ತಿಲ್ಲ. ನಿನಗಾದರೂ ಗೊತ್ತಿದ್ದರೆ ಹೇಳು ಎಂದು ಅಂಬಿಗರ ಚೌಡಯ್ಯ ತನ್ನ ಇಷ್ಟ ದೈವವನ್ನು ಕೇಳುತ್ತಾರೆ “ಆದರೆ ಈ ಮೂರ್ಖ – ಅಮಾನವೀಯ ಕೆಲವು ಜ್ಯೋತಿಷ್ಯ…

Read More