ಭಾವರಶ್ಮಿ
- ರೇಣುಕಾ ಶಿವಕುಮಾರ್
ಗೌತಮ ಮುನಿಗಳು ಕಾಡಿನಲ್ಲಿ ವಾಸವಾಗಿದ್ದು ತಮ್ಮ ಕಾರ್ಯಗಳನ್ನು ಮಾಡಿಕೊಂಡು ಪತ್ನಿ ಅಹಲ್ಯಯೊಂದಿಗೆ ಸುಖವಾಗಿ ವಾಸಿಸುತ್ತಿದ್ದರು.
ಅಂದು ದಿನ ಹೀಗೆ ಅವರ ಜೀವನ ಸಾಗುತ್ತಿರುವಾಗ ಅವರ ಸುಂದರವಾದ ಬದುಕಿನಲ್ಲಿ ಸಿಡಿಲಿನಂತೆ ಇಂದ್ರನ ಆಗಮನವಾಗುತ್ತೆ.
ಅಹಲ್ಯೆಯ ಸೌಂದರ್ಯಕ್ಕೆ ಮರುಳಾದ ಇಂದ್ರ ಹೇಗಾದರೂ ಅಹಲ್ಯೆಯನ್ನು ವಶ ಪಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಮಹಾ ಪತಿವ್ರತೆಯಾದ ಅಹಲ್ಯೆಯ ಮುಂದೆ ಇವನ ಆಟ ನಡಿಯೊದಿಲ್ಲಾ ಎಂದು ತಿಳಿದಾಗ ಇಂದ್ರ ಅಡ್ಡ ದಾರಿಯಲ್ಲಿ ಹೋಗಲು ನಿರ್ದರಿಸುತ್ತಾನೆ. ಬೆಳಗಿನ ಜಾವ ಸೂರ್ಯೋದಯಕ್ಕೆ ಬಹಳ ಮುಂಚೆ ಗೌತಮ ಮುನಿಗಳ ಆಶ್ರಮದ ಬಳಿ ಹೋಗಿ ಕೋಳಿ ಕೂಗಿದ ಹಾಗೆ ಕೂಗುತ್ತಾನೆ.
ಇದೇನು ಇನ್ನೂ ಇಷ್ಟೊಂದು ಕತ್ತಲಿದೆ, ಆಗಲೇ ಬೆಳಗಾಗಿ ಬಿಟ್ಟಿತಾ? ಎಂದು ಗೌತಮ ಮುನಿಗಳಿಗೆ ಅನುಮಾನ ಬರುತ್ತೆ. ಆದರೆ ಕೋಳಿ ಕೂಗಿತಲ್ಲ ಬೆಳಗಾಗಿರಬೇಕು ಅಂತ ನಿದ್ರೆಯಿಂದ ಎದ್ದು ತಮ್ಮ ಪ್ರಾತಃ ಕಾಲದ ಕೆಲಸಗಳನ್ನು ಪ್ರಾರಂಬಿಸಲು ನದಿ ಕಡೆ ಹೊರಡುತ್ತಾರೆ.
ಅವರು ಆ ಕಡೆ ಹೊರಡುತ್ತಿದ್ದ ಹಾಗೆ ಇಂದ್ರ ಗೌತಮರ ರೂಪದರಿಸಿ ಗೌತಮರ ಆಶ್ರಮದ ಒಳಗೆ ಹೋಗಿ ಅಹಲ್ಲೆಯನ್ನು ಕೂಡುತ್ತಿರುತ್ತಾರೆ. ಅಹಲ್ಲೆಗೆ ಇದ್ಯಾವುದರ ಬಗ್ಗೆ ಅನುಮಾನವೇ ಬರುವುದಿಲ್ಲ.
ಹೀಗೇ ಇಂದ್ರನ ವ್ಯವಹಾರ ನಡೆಯುತ್ತಿರುವಾಗ ಒಂದು ದಿನ ಎಂದಿನಂತೆ ನದಿಗೆ ಹೊಗಿದ್ದ ಗೌತಮರು ತಮ್ಮ ಕುಟೀರಕ್ಕೆ ಹಿಂದಿರಿಗಿ ಬಂದಾಗ ಇಂದ್ರ ಮತ್ತು ಗೌತಮರ ಮುಖಾಮುಖಿ ಆಗುತ್ತೆ. ಒಳಗಿನಿಂದ ಹೊರಬಂದ ಅಹಲ್ಲೆಗೆ ಇಬ್ಬರು ಮುನಿಗಳು ಎದುರು ಬದಿರಾಗಿ ನಿಂತಿರುವ ದ್ರುಶ್ಯ ನೋಡಿ, ಇವರಲ್ಲಿ ನಿಜವಾದ ಗೌತಮರು ಯಾರು ಎಂದು ತಿಳಿಯದೆ ತಬ್ಬಿಬ್ಬು ಆಗುತ್ತದೆ ಇಂದ್ರ ಇನ್ನೂ ಇಲ್ಲಿದ್ದರೆ ಕೆಟ್ಟೆ ಅಂತ ಅಲ್ಲಿಂದ ಕಾಲು ಕೀಳುತ್ತಾನೆ.
ಕುತಂತ್ರದಲ್ಲಿ ಅಯಲ್ಲೆಯದೂ ಕೈವಾಡವಿದೆ ಎಂದು ಭಾವಿಸಿ ಅಹಲ್ಯ ಗೆ ಶಿಲೆಯಾಗುವಂತೆ ಶಾಪ ಕೊಡುತ್ತಾರೆ. ಅಹಲ್ಲೆ ತಾನು ನಿರಪರಾದಿ ಇದರಲ್ಲಿ ತನ್ನ ತಪ್ಪೇನು ಇಲ್ಲವೆಂದು ಪರಿ ಪರಿಯಾಗಿ ಬೇಡುತ್ತಾಳೆ. ಆಗ ಗೌತಮ ಮುನಿಗಳು ತಮ್ಮ ದಿವ್ಯ ದೃಷ್ಟಿಯಿಂದ ನೋಡಿದಾಗ ಇದು ಇಂದ್ರನದೇ ಕೈವಾಡ ಎಂದು ತಿಳಿದು ಅವನಿಗೂ ಶಾಪ ಕೊಡುತ್ತಾರೆ.
ಹೀಗೆ ಕೊಟ್ಟ ಶಾಪ ಹಿಂದಕ್ಕೆ ಪಡೆಯಲಾಗದ ಕಾರಣ ಅಹಲ್ಯ ಗೆ ನೀನು ಶಿಲೆಯಾಗಿಯೇ ಇರು ತ್ರೇತಾಯುಗದಲ್ಲಿ ಶ್ರೀ ರಾಮನ ಪಾದ ಸ್ಪರ್ಷ ನಿನ್ನ ಶಿಲೆಗೆ ಆದಾಗ ನಿನಗೆ ಶಾಪ ವಿಮೋಚನೆ ಆಗುತ್ತೆ ಎಂದು ಹೇಳಿ ತಪಸ್ಸಿಗೆ ಹೊರಟುಹೊಗುತ್ತಾರೆ.
ಹೀಗೇ ಇಂದ್ರನ ವ್ಯವಹಾರ ನಡೆಯುತ್ತಿರುವಾಗ ಒಂದು ದಿನ ಎಂದಿನಂತೆ ನದಿಗೆ ಹೊಗಿದ್ದ ಗೌತಮರು ತಮ್ಮ ಕುಟೀರಕ್ಕೆ ಹಿಂದಿರಿಗಿ ಬಂದಾಗ ಇಂದ್ರ ಮತ್ತು ಗೌತಮರ ಮುಖಾಮುಖಿ ಆಗುತ್ತೆ. ಒಳಗಿನಿಂದ ಹೊರಬಂದ ಅಹಲ್ಲೆಗೆ ಇಬ್ಬರು ಮುನಿಗಳು ಎದುರು ಬದಿರಾಗಿ ನಿಂತಿರುವ ದ್ರುಶ್ಯ ನೋಡಿ, ಇವರಲ್ಲಿ ನಿಜವಾದ ಗೌತಮರು ಯಾರು ಎಂದು ತಿಳಿಯದೆ ತಬ್ಬಿಬ್ಬು ಆಗುತ್ತದೆ ಇಂದ್ರ ಇನ್ನೂ ಇಲ್ಲಿದ್ದರೆ ಕೆಟ್ಟೆ ಅಂತ ಅಲ್ಲಿಂದ ಕಾಲು ಕೀಳುತ್ತಾನೆ.
ಕುತಂತ್ರದಲ್ಲಿ ಅಯಲ್ಲೆಯದೂ ಕೈವಾಡವಿದೆ ಎಂದು ಭಾವಿಸಿ ಅಹಲ್ಯ ಗೆ ಶಿಲೆಯಾಗುವಂತೆ ಶಾಪ ಕೊಡುತ್ತಾರೆ. ಅಹಲ್ಲೆ ತಾನು ನಿರಪರಾದಿ ಇದರಲ್ಲಿ ತನ್ನ ತಪ್ಪೇನು ಇಲ್ಲವೆಂದು ಪರಿ ಪರಿಯಾಗಿ ಬೇಡುತ್ತಾಳೆ. ಆಗ ಗೌತಮ ಮುನಿಗಳು ತಮ್ಮ ದಿವ್ಯ ದೃಷ್ಟಿಯಿಂದ ನೋಡಿದಾಗ ಇದು ಇಂದ್ರನದೇ ಕೈವಾಡ ಎಂದು ತಿಳಿದು ಅವನಿಗೂ ಶಾಪ ಕೊಡುತ್ತಾರೆ.
ಕೊಟ್ಟ ಶಾಪ ಹಿಂದಕ್ಕೆ ಪಡೆಯಲಾಗದ ಕಾರಣ ಅಹಲ್ಯ ಗೆ ನೀನು ಶಿಲೆಯಾಗಿಯೇ ಇರು ತ್ರೇತಾಯುಗದಲ್ಲಿ ಶ್ರೀ ರಾಮನ ಪಾದ ಸ್ಪರ್ಷ ನಿನ್ನ ಶಿಲೆಗೆ ಆದಾಗ ನಿನಗೆ ಶಾಪ ವಿಮೋಚನೆ ಆಗುತ್ತೆ ಎಂದು ಹೇಳಿ ತಪಸ್ಸಿಗೆ ಹೊರಟುಹೊಗುತ್ತಾರೆ.
ಅಯೋಧ್ಯಾನಗರಿಯ ರಾಜಕುಮಾರನಾದ ಶ್ರೀರಾಮನು ಮಹರ್ಷಿ ವಿಶ್ವಾಮಿತ್ರರೊಡನೆ ಮಿಥಿಲೆಗೆ ಆಗಮಿಸುತ್ತಿದ್ದಾಗ, ಅವರು ನಿರ್ಜನವಾಗಿದ್ದ ಆಶ್ರಮವೊಂದನ್ನು ತಲುಪುತ್ತಾರೆ. ಆ ಆಶ್ರಮದ ಮಧ್ಯಭಾಗದಲ್ಲಿ ಶಿಲೆಯೊಂದಿರುತ್ತದೆ. ಆ ಶಿಲೆಯಿ೦ದ ತುಳಸೀ ಗಿಡವೊ೦ದು ಬೆಳೆಯುತ್ತಿರುತ್ತದೆ. ಆಗ ರಾಮನು ಹೀಗೆ ಹೇಳುತ್ತಾನೆ, ‘ಮಹರ್ಷಿ ವಿಶ್ವಾಮಿತ್ರರೇ, ಇದ೦ತೂ ನಿಜಕ್ಕೂ ವಿಸ್ಮಯಕರವಾಗಿದೆ. ಈ ಆಶ್ರಮದಲ್ಲ೦ತೂ ಯಾರೂ ವಾಸವಿರುವಂತೆ ಕಾಣುತ್ತಿಲ್ಲ. ಆದರೂ ಸಹ ತುಳಸಿ ಗಿಡವೊ೦ದು ಅದರಲ್ಲೂ ಶಿಲೆಯೊಂದರಿಂದ ಬೆಳೆಯುತ್ತಿದೆ’, ಎ೦ದು ಉದ್ಗರಿಸುತ್ತಾನೆ.
ಆಗ ವಿಶ್ವಾಮಿತ್ರರು ಹೀಗೆ ಹೇಳುತ್ತಾರೆ, ‘ಈ ಶಿಲೆಯ ಒಳಭಾಗದಲ್ಲಿ ಸ್ತ್ರೀಯೋರ್ವಳ ಆತ್ಮವು ನೆಲೆಯಾಗಿದೆ. ಆ ಸ್ತ್ರೀಯು ಓರ್ವನಿಂದ ಶಪಿಸಲ್ಪಟ್ಟು, ಮತ್ತೋರ್ವನಿ೦ದ ಮೋಸಹೋದವಳಾಗಿರುತ್ತಾಳೆ. ಎಲೈ ರಾಮನೇ, ತಪ್ಪುಮಾಡಿದವರನ್ನು ದೂಷಿಸಿ, ಶಿಕ್ಷಿಸುವುದನ್ನು ಎಲ್ಲರೂ ಬಲ್ಲರು. ಆದರೆ, ಕೇವಲ ವಿಶೇಷರಾದ ಮಹಾನ್ ವ್ಯಕ್ತಿಗಳಿಗೆ ಮಾತ್ರವೇ ತಪ್ಪಿತಸ್ಥರನ್ನೂ ಕ್ಷಮಿಸುವ ಸಾಮರ್ಥ್ಯವಿರುತ್ತದೆ ಹಾಗೂ ಅಂತಹವರನ್ನೇ ಪತಿತಪಾವನ ಎಂದು ಕರೆಯುತ್ತಾರೆ. ಎಲೈ ರಾಮನೇ, ನೀನು ಅಂತಹ ವಿಶೇಷವಾದ ವ್ಯಕ್ತಿಯು. ಹೀಗಾಗಿ, ನೀನು ನಿನ್ನ ಪಾದದಿ೦ದ ಆ ಶಿಲೆಯನ್ನು ಸ್ಪರ್ಶಿಸಿದಲ್ಲಿ, ನೀನು ಅಹಲ್ಯೆಯನ್ನು ಶಾಪದಿಂದ ಮುಕ್ತಗೊಳಿಸಿದಂತಾಗುವುದು’ ಎಂದು ಹೇಳುತ್ತಾರೆ.