ಕಾವ್ಯ ರಶ್ಮಿ
- ಸರೋಜಾದೇವಿ ನಿನ್ನೆಕರ್
ನಿನ್ನೊಲವ ತುಂಬಿದ ಹೃದಯದ ಗೂಡು
ಒಲವಿಂದ ಬಂದು ನೀನೊಮ್ಮೆ ನೋಡು
ನೀನಗಾಗಿಯೇ ಮಿಡಿಯುತಿದೆ ಈ ಹೃದಯ
ಎದೆಯ ಬಡಿತ ಕೇಳಿಸದೆಯಾ? ನನ್ನೀನಿಯ
ನೀನ್ಹೆಸರೆ ನನ್ನುಸಿರಾಗಿದೆ, ನೀನೆ ನನ್ನ ಜೀವ
ಶಬರಿಯಂತೆ ನಾ ಕಾಯುವೆ ನೀನೆ ನನ್ನ ದೈವ
ನೀ ಕೇಳುವೆಯಾ ನನ್ನ ಮನದ ಮೊರೆಯ
ಬಾಳಿಗೆ ಬೆಳಕಾಗಿ ಬರುವೆಯಾ ನನ ಗೆಳೆಯ