Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಹೆಣ್ಣೆಂದರೆ ಅಷ್ಟೇ ಸಾಕೇ?

ಬಿರುಗಾಳಿ ಮರವನ್ನು ಬೀಳಿಸಬಹುದು ಆದರೆ..?

ಕರುನಾಡ ಮನೆಮನೆಯ ರಾಣಿಯರಿಗೆ ಕಲರ್ಸ್ ಕನ್ನಡದ ವಿಶೇಷ ನಮನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಳೆ ಅಭಾವದಿಂದ ವಿದ್ಯುತ್ ಬೇಡಿಕೆ ಹೆಚ್ಚಳ :ಡಿಸಿ ಟಿ.ಭೂಬಾಲನ್
(ರಾಜ್ಯ ) ಜಿಲ್ಲೆ

ಮಳೆ ಅಭಾವದಿಂದ ವಿದ್ಯುತ್ ಬೇಡಿಕೆ ಹೆಚ್ಚಳ :ಡಿಸಿ ಟಿ.ಭೂಬಾಲನ್

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

೪ ಪಾಳೆಗಳಲ್ಲಿ ೫೧೫ ಕೃಷಿ ಪಂಪಸೆಟ್ ಫೀಡರಗಳಿಗೆ ತ್ರಿಫೇಸ್ ವಿದ್ಯುತ್ ಪೂರೈಕೆ

ವಿಜಯಪುರ: ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ರೈತರ ಕೃಷಿ ಪಂಪಸೆಟ್‌ಗಳಿಗೆ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ಜಿಲ್ಲೆಯ ಒಟ್ಟು ೫೧೫ ಕೃಷಿ ಪಂಸೆಟ್ ಪೀಡರ್‌ಗಳಿಗೆ ೪ ಪಾಳೆಗಳಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ನಾಲ್ಕು ೨೨೦ ಕೆವ್ಹಿ ಸ್ವೀಕರಣಾ ಕೇಂದ್ರಗಳು, ೧೧೦ಕೆವ್ಹಿ ೪೪ ಕೇಂದ್ರಗಳು ಹಾಗೂ ೩೩ಕೆವ್ಹಿ ೩೧ ವಿತರಣಾ ಕೇಂದ್ರಗಳಿದ್ದು, ಈ ಕೇಂದ್ರಗಳಿಂದ ೪ ಪಾಳೆಗಳಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ೨೫ ವಿದ್ಯುತ್ ವಿತರಣಾ ಕೇಂದ್ರಗಳಿಂದ ಸತತವಾಗಿ ೬ ಗಂಟೆ ೩ ಫೇಸ್ ವಿದ್ಯುತ್, ೨೧ ವಿತರಣಾ ಕೇಂದ್ರಗಳಿಂದ ಹಗಲು ೪ ಗಂಟೆ ಮತ್ತು ರಾತ್ರಿ ೨ ಗಂಟೆ ೩ ಫೇಸ್ ವಿದ್ಯುತ್, ೧೬ ವಿದ್ಯುತ್ ವಿತರಣಾ ಕೇಂದ್ರಗಳಿಂದ ಹಗಲು ೩ ಗಂಟೆ ಮತ್ತು ರಾತ್ರಿ ೩ ಗಂಟೆ ೩ ಫೇಸ್ ವಿದ್ಯುತ್, ೩ ವಿದ್ಯುತ್ ವಿತರಣಾ ಕೇಂದ್ರಗಳಿಂದ ಸತತವಾಗಿ ೫ ಗಂಟೆ ೩ಫೇಸ್ ವಿದ್ಯುತ್ ಹಾಗೂ ೩೩ಕೆವ್ಹಿಯ ೨ ವಿದ್ಯುತ್ ವಿತರಣಾ ಕೇಂದ್ರಗಳಿಂದ ಹಲಗು ೩ ಗಂಟೆ ಮತ್ತು ರಾತ್ರಿ ೨ ಗಂಟೆ ತ್ರಿಫೇಸ್ ವಿದ್ಯುತ್ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ೫೧೫ ಕೃಷಿ ಪಂಪಸೆಟ್ ಫೀಡರ್‌ಗಳಿಗೆ ಸಂಜೆ ೬ ರಿಂದ ರಾತ್ರಿ ೧೦ ಗಂಟೆವರೆಗೆ ತೋಟದ ಮನೆ, ಗೃಹ ಬಳಕೆಗೆ ಪೂರೈಸಲಾಗುತ್ತಿದೆ. ಈ ವೇಳೆಯಲ್ಲಿ ೩೯೬ ಫೀಡರ್‌ಗಳಿಗೆ ಯಾವುದೇ ಅಡಚಣೆಯಿಲ್ಲದೇ ವಿದ್ಯುತ್ ಪೂರೈಕೆಯಾಗುತ್ತಿದೆ.
ಸರ್ಕಾರದ ಆದೇಶದಂತೆ ರೈತರು ೬ ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಕಬ್ಬು ನುರಿಸುವ ಹಂಗಾಮು ಆರಂಭದಿಂದ ಹೆಚ್ಚುವರಿಯಾಗಿ ವಿದ್ಯುತ್ ದೊರಕಲಿದ್ದು, ಸಮಸ್ಯೆ ಬಗೆಹರಿಯಲಿದೆ. ಆದ ಕಾರಣ ರೈತರು ಶಾಂತತೆಯನ್ನು ಕಾಪಾಡಿಕೊಳ್ಳುವ ಮೂಲಕ ಸಹಕರಿಸುವಂತೆ ಅವರು ಮನವಿ ಮಾಡಿಕೊಂಡರು.
ಕಾಲುವೆ ಜಾಲಗಳಿಗೆ ನೀರು ಹರಿಸುವಿಕೆ ಸಹಕರಿಸಲು ಮನವಿ: ಜಿಲ್ಲೆಯಲ್ಲಿ ಬರುವ ಬಳೂತಿ, ಹಣಮಾಪುರ ಮಸೂತಿ ಜಾಕವೆಲ್‌ಗಳ ಮೂಲಕ ವಿಜಯಪುರ ಮುಖ್ಯ ಕಾಲುವೆಗೆ ಹಾಗೂ ಆಲಮಟ್ಟಿ ಎಡದಂಡೆ ಕಾಲುವೆ, ಚಿಮ್ಮಲಗಿ ಪಶ್ಚಿಮ ಕಾಲುವೆಯ ಅಚ್ಚುಕಟ್ಟು ಪ್ರದೇಶದ ಅಧಿಸೂಚಿತ ಕ್ಷೇತ್ರಕ್ಕೆ ಮತ್ತು ಚಿಮ್ಮಲಗಿ ಪೂರ್ವ ಮುಖ್ಯ ಕಾಲುವೆ ಹಾಗೂ ಇದರಡಿಯಲ್ಲಿ ಬರುವ ನಾಗಠಾಣ ಹಾಗೂ ಕೋರವಾರ ಶಾಖಾ ಕಾಲುವೆ ಅಡಿಯಲ್ಲಿನ ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯತ್ ಕೆರೆಗಳಿಗೆ ಕಾಲುವೆ ಜಾಲಗಳ ಮೂಲಕ ನೀರು ಹರಿಸಲಾಗುತ್ತಿದು, ಈ ಸಂದರ್ಭದಲ್ಲಿ ಕಾಲುವೆಗಳಿಂದ ಅಕ್ರಮ ಪಂಪಸೆಟ್ ಮೂಲಕ ನೀರು ಪಡೆಯುವುದಾಗಲೀ ಕೆರೆ ಹಾಗೂ ಕಾಲುವೆಗಳಿಗೆ ಯಾವುದೇ ರೀತಿಯ ಹಾನಿ ಮಾಡುವುದಾಗಲಿ ಮಾಡದೆ ರೈತರು ಸಹಕರಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಋಷಿಕೇಷ ಸೋನಾನವರ ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತರ ಜಿ.ಕೆ.ಗೊಟ್ಯಾಳ, ಕೆಬಿಜೆಎನ್‌ಎಲ್ ಅಧೀಕ್ಷಕ ಅಭಿಯಂತರ ಗೋವಿಂದರಾಜು ಉಪಸ್ಥಿತರಿದ್ದರು.
ಕಾಲುವೆ ಜಾಲಗಳಿಗೆ ನೀರು ೧೪೪ರನ್ವಯ ನಿಷೇಧ: ಜಿಲ್ಲೆಯಲ್ಲಿ ಬರುವ ಕಾಲುವೆ ಜಾಲಗಳಾದ ಆಲಮಟ್ಟಿ ಎಡದಂಡೆ ಕಾಲುವೆ, ಚಿಮ್ಮಲಗಿ ಪಶ್ಚಿಮ ಕಾಲುವೆಯ ಅಚ್ಚುಕಟ್ಟು ಪ್ರದೇಶದ ಅಧಿಸೂಚಿತ ಕ್ಷೇತ್ರಕ್ಕೆ ಮತ್ತು ಚಿಮ್ಮಲಗಿ ಪೂರ್ವ ಮುಖ್ಯ ಕಾಲುವೆ ಹಾಗೂ ಇದರಡಿಯಲ್ಲಿ ಬರುವ ನಾಗಠಾಣ ಹಾಗೂ ಕೋರವಾರ ಶಾಖಾ ಕಾಲುವೆ ಅಡಿಯಲ್ಲಿನ ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯತ್ ಕೆರೆಗಳಿಗೆ ಕಾಲುವೆ ಜಾಲಗಳ ಕೊನೆಯ ಭಾಗದವರೆಗೆ ನೀರನ್ನು ಪೂರೈಸಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಕಾಲುವೆಗಳ ಎಡ-ಬಲ ೧೦೦ ಅಡಿ ವ್ಯಾಪ್ತಿಯಲ್ಲಿ ದಿನಾಂಕ : ೨೬-೧೦-೨೦೨೩ ರಿಂದ ೦೪-೧೨-೨೦೨೩ ರವರೆಗೆ ಕಲಂ ೧೪೪ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.
ಕಾಲುವೆ ಜಾಲಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ದಡದ ೧೦೦ ಅಡಿ ಸುತ್ತಮುತ್ತಲಿನ ಪ್ರದೇಶದಲ್ಲಿ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಹೆಣ್ಣೆಂದರೆ ಅಷ್ಟೇ ಸಾಕೇ?

ಬಿರುಗಾಳಿ ಮರವನ್ನು ಬೀಳಿಸಬಹುದು ಆದರೆ..?

ಕರುನಾಡ ಮನೆಮನೆಯ ರಾಣಿಯರಿಗೆ ಕಲರ್ಸ್ ಕನ್ನಡದ ವಿಶೇಷ ನಮನ

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸರ್ವಾಂಗೀಣ ಬೆಳವಣಿಗೆ ಹೊಂದಬೇಕು

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಹೆಣ್ಣೆಂದರೆ ಅಷ್ಟೇ ಸಾಕೇ?
    In ವಿಶೇಷ ಲೇಖನ
  • ಬಿರುಗಾಳಿ ಮರವನ್ನು ಬೀಳಿಸಬಹುದು ಆದರೆ..?
    In ವಿಶೇಷ ಲೇಖನ
  • ಕರುನಾಡ ಮನೆಮನೆಯ ರಾಣಿಯರಿಗೆ ಕಲರ್ಸ್ ಕನ್ನಡದ ವಿಶೇಷ ನಮನ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸರ್ವಾಂಗೀಣ ಬೆಳವಣಿಗೆ ಹೊಂದಬೇಕು
    In (ರಾಜ್ಯ ) ಜಿಲ್ಲೆ
  • ಮಕ್ಕಳು ಒಳ್ಳೆಯ ಮೌಲ್ಯ, ಸಂಸ್ಕಾರ ಬೆಳೆಸಿಕೊಳ್ಳಲಿ :ಪಟ್ಟಿಹಾಳ
    In (ರಾಜ್ಯ ) ಜಿಲ್ಲೆ
  • ಪುರುಷರಷ್ಟೇ ಕೆಲಸ ಮಾಡುತ್ತಿದ್ದರೂ ಮಹಿಳೆಯರ ಮೇಲೆ ನಿಲ್ಲದ ದೌರ್ಜನ್ಯ
    In (ರಾಜ್ಯ ) ಜಿಲ್ಲೆ
  • ಕೆ.ಡಿ.ಜಂಬಗಿ: ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
    In (ರಾಜ್ಯ ) ಜಿಲ್ಲೆ
  • ಡಾ.ಅಂಬೇಡ್ಕರ್ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
    In (ರಾಜ್ಯ ) ಜಿಲ್ಲೆ
  • ಮಾ.೧೦ ರಂದು ಕೊಲ್ಹಾರದಲ್ಲಿ ಬೃಹತ್ ಹಿಂದೂ ಸಮ್ಮೇಳನ
    In (ರಾಜ್ಯ ) ಜಿಲ್ಲೆ
  • ಗುರು ಮುಟ್ಟಿ ಗುರುವಾಗಲು ನಿಷ್ಟೆಯಿಂದ ನಡೆಯಿರಿ :ಶ್ರೀಶೈಲ ಶ್ರೀ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.