ಸಿಂದಗಿ: ತಳವಾರ ಸಮಾಜ ಇಂದು ರಾಜಕೀಯ, ಆರ್ಥಿಕ, ಶೈಕ್ಷ ಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಮುಖ್ಯಗುರು ಎಸ್.ಆಯ್.ರಾಂಪೂರ ಹೇಳಿದರು.
ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಚಿಕ್ಕ ಹಣಮಂತ ದೇವಸ್ಥಾನದಲ್ಲಿ ತಳವಾರ ಸಮಾಜ ಹಾಗೂ ತಳವಾರ ಸಮಾಜದ ನೌಕರ ಮಹಾಸಭಾ ಸಿಂದಗಿ ವತಿಯಿಂದ ನೂತನ ಸಿಂದಗಿ ಬ್ಲಾಕ ಕಾಂಗ್ರೆಸ್ ಉಪಾಧ್ಯಕ್ಷ ಚಂದ್ರಕಾಂತ ಬೂದಿಹಾಳ ಹಾಗೂ ಚಿಕ್ಕಸಿಂದಗಿ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸದಸ್ಯ ಸಂಜೀವ ಬಮ್ಮನಳ್ಳಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಸಮಾಜ, ಸಂಘ, ಸಂಘಟನೆ ತುಂಬಾ ಮುಖ್ಯವಾಗಿದೆ. ಒಗ್ಗಟ್ಟಿನಿಂದ ಎಲ್ಲರೂ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಸಮಾಜ ನಿಂತ ನೀರಾಗಿರದೆ ಚಲಿಸುತ್ತಿರಬೇಕು. ಸಮಾಜ ಸಂಘಟನೆಯಲ್ಲಿ ಯುವಕರಿಗೆ ಜವಾಬ್ದಾರಿ ನೀಡಬೇಕು ಎಂದು ಸಲಹೆ ನೀಡಿದರು.
ತಾಲೂಕು ನೌಕರ ಸಂಘದ ಅಧ್ಯಕ್ಷ ರಾಜಶೇಖರ ನರಗೋಧಿ ಮಾತನಾಡಿ, ಸಮಾಜವು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಸದೃಢವಾಗಬೇಕಾದರೆ ಸಂಘಟನೆ ಬಹಳ ಅಗತ್ಯವಾಗಿದೆ ಎಂದರು.
ಸರಳ ಸಮಾರಂಭದಲ್ಲಿ ಸಿಂದಗಿ ಬ್ಲಾಕ ಕಾಂಗ್ರೆಸ್ ನೂತನ ಉಪಾಧ್ಯಕ್ಷ ಚಂದ್ರಕಾಂತ ಸಿದ್ದಪ್ಪ ಬೂದಿಹಾಳ ಹಾಗೂ ಚಿಕ್ಕಸಿಂದಗಿ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸದಸ್ಯ ಸಂಜೀವ ಬಾಳಪ್ಪ ಬಮ್ಮನಳ್ಳಿ ಆಯ್ಕೆಯಾಗಿದ್ದಕ್ಕೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾಂಗ್ರೆಸ್ ಮುಖಂಡ ಮಲ್ಲು ಅವಟಿ,
ಶಿಕ್ಷಕ ಸಾಹಿತಿ ಗುಂಡಣ್ಣ ಮೋರಟಗಿ, ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ಶಾಂತಪ್ಪ ದುಳಖೇಡ, ನರಸಪ್ಪ ಮೋರಟಗಿ. ಚಂದ್ರಮ ಬಮ್ಮನಳ್ಳಿ, ಸಂಗಮೇಶ ಬೂದಿಹಾಳ, ಶರಣು
ಬಮ್ಮನಳ್ಳಿ ಸೇರಿದಂತೆ ಹಲವರಿದ್ದರು.
ಶಿಕ್ಷಕಿ ಕನ್ಯಕುಮಾರಿ ದೂಳಖೇಡ ಸ್ವಾಗತಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

