ಆರೋಗ್ಯ ಅಂಗಳ
- ಡಾ.ನಂದಿನಿ ಟಕ್ಕಳಕಿ, ವಿಜಯಪುರ
ಹನ್ನೆರಡು ವರ್ಷದ ಹುಡುಗ ತಮ್ಮ ತಂದೆಯ ಜೊತೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ, ಪ್ರಯಾಣದ ದಾರಿಯಲ್ಲಿ ಕಿಟಕಿಯಿಂದ ಕಾಣುವ ಗಿಡ, ಮರ, ಹಣ, ಪಕ್ಷಿ, ನದಿ, ಸೇತುವೆ, ವಾಹನಗಳನ್ನು ಕಂಡು ತುಂಬಾ ಖುಷಿಯಿಂದ ಕುಣಿದು ಉತ್ಸಾಹಪಡುತ್ತಿದ್ದೆ.
ಇದನ್ನೆಲ್ಲಾ ಪಕ್ಕದಲ್ಲೆ ಕುಳಿತಿದ್ದ ಪ್ರಯಾಣಿಕನಿಗೆ ವಿಚಿತ್ರವೆನಿಸುತ್ತಿತ್ತು. ಹುಡುಗನ ಮೊದಲ ರೈಲು ಪ್ರಯಾಣ ಎಂದುಕೊಂಡು ಸುಮ್ಮನಿದ್ದೆ. ಆದರೂ ತುಂಬಾ ಹೊತ್ತಾದ ಬಳಿಕವು ಹುಡುಗನ ಉತ್ಸಾಹ ಕಡಿಮೆಯಾಗದ್ದನ್ನು ನೋಡಿ, ಸ್ವಲ್ಪ ಸಿಡಿಮಿಡಿಯಿಂದ ಅವನ ತಂದೆಯನ್ನು ನೋಡಿ, ಇಷ್ಟು ವಯಸ್ಸಾದ ನಿಮ್ಮ ಮಗ ಗಿಡ-ಮರ ನದಿ ವಾಹನಗಳನ್ನು ನೋಡಿ ಇಷ್ಟೇಕೆ ಉತ್ಸುಕುನಾಗಿದ್ದಾನೆ. ಸ್ವಲ್ಪ ಅವನ ಗಲಾಟೆಯನ್ನು ಕಡಿಮೆ ಮಾಡಲು ಹೇಳಿ ಎಂದ.
ಅದಕ್ಕೆ ಹುಡುಗನ ತಂದೆ “ಇಲ್ಲಾ ಸರ್, ರೈಲಿನಲ್ಲಿ ತುಂಬಾ ಸಲ ಪ್ರಯಾಣಿಸಿದ್ದಾನೆ. ಆದರೆ ಇದೇ ಮೊದಲ ಬಾರಿಗೆ ಅವನ ಕಣ್ಣುಗಳಿಂದ ತನ್ನ ಸುತ್ತಲಿನ ಪರಿಸರವನ್ನು ನೋಡಿ ಅನುಭವಿಸುತ್ತಿದ್ದಾನೆ.”
ಸಹ ಪ್ರಯಾಣಿಕನಿಗೆ ಅವರ ತಂದೆ ಹೇಳಿದ್ದು ಕೇಳಿ ಪ್ರಶ್ನಾರ್ಥಕ ಭಾವದಿಂದ ನೋಡತೊಡಗಿದ. ಹುಡುಗನ ತಂದೆ ತಮ್ಮ ಮಾತು ಮುಂದುವರೆಸಿ, “ಅವನು ೧ ವರ್ಷದವನಿದ್ದಾಗ ಕಾರಣಾಂತರಗಳಿಂದ ತನ್ನ ದೃಷ್ಠಿಯನ್ನು ಕಳೆದುಕೊಂಡಿದ್ದ. ಇಷ್ಟು ವರ್ಷಗಳ ನಂತರ ಯಾರೋ ಪುಣ್ಯಾತ್ಮರು ಮಾಡಿದ ನೇತ್ರದಾನದಿಂದಾಗಿ ನನ್ನ ಮಗನ ಶಸ್ತ್ರಚಿಕಿತ್ಸೆಯಿಂದ ಅವನ ದೃಷ್ಠಿ ಮರಳಿಬಂದಿದೆ” ಎಂದಾಗ ಸಹ ಪ್ರಯಾಣಿಕ ಕಣ್ಣಾಲೆಗಳಲ್ಲಿ ನೀರಾಡುತ್ತಿದ್ದವು.
ಈ ಮೇಲಿನ ಕಥೆ ಉಲ್ಲೇಖಿಸುವ ಉದ್ದೇಶ, ಎಷ್ಟೇ ಮರಣದ ನಂತರ ಮಣ್ಣಲ್ಲಿ ಮಣ್ಣಾಗುವ ಕಣ್ಣುಗಳನ್ನು ದಾನ ಮಾಡುವುದರಿಂದ ದೃಷ್ಠಿ ಹೀನರ ಜೀವನದಲ್ಲಾಗುವ ಬದಲಾವಣೆ ಶಬ್ದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ
*ದೃಷ್ಟಿ (ಕಣ್ಣು) ನಮ್ಮ ೫ ಇಂದ್ರಿಯಗಳಲ್ಲಿ ಅತಿ ಮುಖ್ಯವಾದದ್ದು*
ಆದರೆ, ನಾನಾ ಕಾರಣಗಳಿಂದ ೪-೫ ಕೋಟಿಯಷ್ಟು ಜನ ದೃಷ್ಠಿಹೀನತೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಅರ್ದದಷ್ಟು ದೃಷ್ಟೀಹೀನತೆಯನ್ನು ನೇತ್ರದಾನದಿಂದ ಪರಿಹರಿಸಬಹುದು.
ಮೊದಲು ದೃಷ್ಠಿಹೀನತೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆಯ ಅಷ್ಟು ಅವಕಾಶವಿರಲಿಲ್ಲ. ಆದರೆ ಆಧುನಿಕ ತಂತ್ರಜ್ಞಾನದಿಂದಾಗಿ transplation ಸುಲಭವಾಗಿ ಮಾಡಬಹುದಾಗಿದೆ.
ಆದರೆ ಭಯ ಮತ್ತು ಅರಿವಿನ ಕೊರತೆಯಿಂದಾಗಿ ಜನರು ದೃಷ್ಟಿದಾನಕ್ಕಾಗಿ ಹಿಂದೇಟು ಹಾಕುತ್ತಿದ್ದಾರೆ.
*ಯಾರು ನೇತ್ರದಾನ ಮಾಡಬಹುದು?*
* ಮರಣದ ನಂತರ ಯಾವುದೇ ವ್ಯಕ್ತಿ ವಯಸ್ಸಿನ, ಯಾವುದೇ blood group ನವರು ಲಿಂಗಭೇದವಿಲ್ಲದೆ ಮಾಡಬಹುದು
* ದೂರದೃಷ್ಟಿ ಅಥವಾ ಸಮೀಪ ದೃಷ್ಟಿ ದೋಷ ಇರುವಂತಹವರು ಕನ್ನಡಕ ಉಪಯೋಗಿಸುವವರು.
* ಕ್ಯಾಟರ್ಯಾಕ್ಟ್ ಶಸ್ತ್ರಚಿಕಿತ್ಸೆ ಮಾಡಿಸಿದವರು, ಡೈಯಾಬಿಟಿಸ್, ಅಧಿಕ ರಕ್ತದೊತ್ತಡ ಇರುವಂತವರೂ ಕೂಡ ಮಾಡಬಹದು.
* *AIDS, Hept, B, C, ರೇಬಿಸ್ ಟೆಟಾನಸ್, ಲುಕೆಮಿಯಾದಿಂದ ಬಳಲುತ್ತಿರುವವರು ಮಾತ್ರ ನೇತ್ರದಾನ ಮಾಡಲಾಗುವುದಿಲ್ಲ.*
* ವ್ಯಕ್ತಿಯ ಮರಣದ ನಂತರ eye bank ನಂಬರಗೆ ವಿಷಯ ತಿಳಿಸಬೇಕು.
* ಮರಣದ ೪-೬ ಘಂಟೆಯ ಒಳಗೆ ಕಣ್ಣುಗಳನ್ನು ದಾನ ಮಾಡಬಹುದು.
* ಮರಣದ ನಂತರ ಕಣ್ಣುಗಳು ಒಣಗದಂತೆ ತಕ್ಷಣ ಮುಚ್ಚಿಬಿಡಬೇಕು.
* ಎಸಿ ಫ್ಯಾನ್ ಉಪಯೋಗಿಸಬಾರದು.
• ಆಸ್ಪತ್ರೆಯ ಸಿಬ್ಬಂದಿ ಮನೆಗೆ ಬಂದು ಶಸ್ತ್ರಚಿಕಿತ್ಸೆ ಮಾಡಿ ೨೦-೩೦ ನಿಮಿಷದಲ್ಲಿ ಕಾರ್ಯವನ್ನು ಪೂರ್ಣಗೊಳಿಸುತ್ತಾರೆ. ಮನೆಯವರಿಗೆ ಆಸ್ಪತ್ರೆಗೆ ಹೋಗುವ ಅವಶ್ಯಕತೆಯಿಲ್ಲ.
* ಇದರಿಂದ ವ್ಯಕ್ತಿಯ ಮುಖದ ಮೇಲೆ ಯಾವುದೇ ರೀತಿಯ ಕಲೆ, ವಿಕಾರತೆ ಆಗುವುದಿಲ್ಲ.
ದಾನಗಳಲ್ಲಿ ಎಲ್ಲಾ ದಾನವು ಶ್ರೇಷ್ಠವೇ. ದೇಹದ ಎಲ್ಲಾ ಅಂಗಗಳು ಮುಖ್ಯವಾದವುಗಳೇ. “EYES ARE WINDOWS TO THE SOUL” ಅನ್ನುವ ಹಾಗೆ ದೃಷ್ಟಿ ಇಲ್ಲದಿದ್ದರೆ, ಏನನ್ನೂ ಅನುಭವಿಸುವುದು ಕಷ್ಟ.
ಮರಣದ ನಂತರ ಮಣ್ಣಲ್ಲಿ ಕಣ್ಣುಗಳನ್ನು ವ್ಯರ್ಥ ಮಾಡುವ ಬದಲು ಅವಶ್ಯಕತೆ ಇರುವವರಿಗೆ ದಾನ ಮಾಡಿ. ಮತ್ತೊಬ್ಬರ ಬಾಳಿನಲ್ಲಿ ಅಮೂಲ್ಯವಾದ ಬದಲಾವಣೆ ಮಾಡುವ ಧನ್ಯತೆಯ, ನಮ್ಮ ಕಣ್ಣುಗಳನ್ನು ಅಮರಗೊಳಿಸುವ ಚಿಕ್ಕ ಕೆಲಸ, ಸಮಾಜಕ್ಕೆ ಕೊಡುಗೆ ನಾವೇಕೆ ಮಾಡಬಾರದು? ಯೋಚಿಸಿ..
*DONATE EYES, MAKE A DIFFERENCE.*