Author: editor.udayarashmi@gmail.com

ಆಯಿಲ್ ಕಂಪನಿ ಮಾರಾಟಾಧಿಕಾರಿಗಳು, ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ್. ಕೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡಿಸೈಲ್ ಸಮರ್ಪಕವಾಗಿ ಸರಬರಾಜಾಗುತ್ತಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಎಲ್ಲ ಆಯಿಲ್ ಕಂಪನಿಯ ಮಾರಾಟಾಧಿಕಾರಿಗಳು ಹಾಗೂ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತೈಲ ಪೂರೈಕೆ ವಿಷಯದಲ್ಲಿ ಕಂಪನಿಗಳು ಜಾಗರೂಕತೆ ವಹಿಸಿ, ಸಮಸ್ಯೆ ಬಾರದ ರೀತಿಯಲ್ಲಿ ಇಂಧನ ಪೂರೈಸಬೇಕು ಎಂದರು.ಉಳಿದ ಎಲ್ಲ ಪೆಟ್ರೋಲ್ ಪಂಪ್‌ಗಳಲ್ಲಿ ಅಗತ್ಯತೆಗೆ ಅನುಸಾರವಾಗಿ ತೈಲ ಲಭ್ಯವಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಇನ್ನೊಂದೆಡೆ ಜಿಲ್ಲೆಯ ಜನತೆ ಗಾಬರಿಯಾಗುವ ಅವಶ್ಯಕತೆ ಇಲ್ಲ. ಆದರೆ ಅವಶ್ಯಕತೆ ಅನುಸಾರ ಮಾತ್ರವೇ ಇಂಧನ ಪಡೆದುಕೊಳ್ಳಬೇಕು ಎಂಬುದನ್ನು ಜಿಲ್ಲಾಧಿಕಾರಿ ಇದೇ ವೇಳೆ ಸಾರ್ವಜನಿಕರಿಗೂ ಸಲಹೆ ಮಾಡಿದರು.ಇನ್ನೊಂದೆಡೆ ಮುಂಗಾರು ಆರಂಭವಾಗಿದೆ.ಏಳುವರೆ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರ ಉಳುಮೆ…

Read More

ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳ ಪರಿಶೀಲನೆ ನಡೆಸಿದ ಜಿಪಂ ಸಿಇಒ ರಿಷಿ ಆನಂದ ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳಾದ ರಿಷಿ ಆನಂದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಂಡಿ ತಾಲೂಕಿನ ಹೊರ್ತಿ ಮತ್ತು ಇತರೆ ೩೧ ಗ್ರಾಮಗಳಿಗೆ ಹಾಗೂ ಚಡಚಣ ತಾಲೂಕಿನ ಇಂಚಗೇರಿ ಮತ್ತು ಇತರೆ ೪೧ ಗ್ರಾಮಗಳಿಗೆ ನೀರು ಪೂರೈಸುವ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳ ಜಲಮೂಲಗಳು ಹಾಗೂ ನೀರು ಸಂಸ್ಕರಣಾ ಘಟಕಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು,ಇಂಡಿ ತಾಲೂಕಿನ ಅರ್ಜನಾಳ ಮತ್ತು ಹಂಜಗಿ ಕೆರೆಗಳಿಗೆ ಭೇಟಿ ನೀಡಿದ ಅವರು, ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳ ಪ್ರಮುಖ ಜಲಮೂಲಗಳಾದ ಕೆರೆ ಹಾಗೂ ಜಲಾಶಯ ಒತ್ತುವರಿ ಹಾಗೂ ಸಂಗ್ರಹವಾಗಿರುವ ನೀರಿನ ಪ್ರಮಾಣವನ್ನು ಪರಿಶೀಲಿಸಿದ ಅವರು, ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಉಂಟಾಗದಂತೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಲ್ಲಿನ ಸರ್ಕಾರಿ ಪ್ರಥಮ ದಜೇ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಲ್ಲಿ ಬಿ.ಕಾಂ (ಎ.ಇ.ಡಿ.ಪಿ) ಬ್ಯಾಂಕಿಂಗ್ ಹಣಕಾಸು ಸೇವೆಗಳು ಹಾಗೂ ವಿಮೆ (ಇನ್ಸುರೆನ್ಸ್) ಪದವಿ ಕೋರ್ಸ್ನ್ನು ಆರಂಭಿಸಲಾಗಿದೆ.ಈ ನೂತನ ಕೋರ್ಸಿನ ಪ್ರಮುಖ ವೈಶಿಷ್ಟ್ಯಗಳೆನೆಂದರೆ ವಿದ್ಯಾರ್ಥಿಗಳಿಗೆ ಮೊದಲ ೨ವರ್ಷಗಳ ವರೆಗೆ ತರಗತಿ ಮತ್ತು ಪರೀಕ್ಷೆ ಇರಲಿವೆ. ೩ನೇ ವರ್ಷ ಪೂರ್ಣ ಪ್ರಮಾಣದ ತರಬೇತಿ ನೀಡಲಾಗುತ್ತಿದ್ದು ಈ ಅವಧಿಯಲ್ಲಿ ರೂ.೮ ಸಾವಿರದಿಂದ ೧೫ ಸಾವಿರ ರೂವರೆಗೆ ಸ್ಟೈಫಂಡ್ ನೀಡಲಾಗುವುದು. ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ೩ವರ್ಷ ಪೂರ್ಣಗೊಂಡ ನಂತರ ಬಿ.ಕಾಂ ಪದವಿ ಆಧಾರದ ಮೇಲೆ ಎಮ್ ಕಾಂ ಮತ್ತು ಎಂ.ಬಿ.ಎ ಸ್ನಾತ್ತಕೋತ್ತರ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶವಿರುತ್ತದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆಯೂ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲರ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ನೆರೆ ರಾಜ್ಯದ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ಬೆಂಗಳೂರು: ಮೇಕೆದಾಟು ಯೋಜನೆಯನ್ನು ನಿಲ್ಲಿಸುವ ಹಕ್ಕು ತಮಿಳು ನಾಡು ಸರ್ಕಾರಕ್ಕೆ ಇಲ್ಲ, ತಮಿಳು ನಾಡಿಗೆ ಯಾವುದೇ ಹಕ್ಕಿಲ್ಲ, ತಮಿಳು ನಾಡು ಕಾವೇರಿ ಜಲ ಸಮಿತಿ(CWC) ಮುಂದೆ ದೂರು ನೀಡಿದರೆ, ಸಿಡಬ್ಲ್ಯುಸಿಯವರು ಕರ್ನಾಟಕ ಸರ್ಕಾರ ಪರವಾಗಿ ಅರ್ಜಿ ವಜಾ ಮಾಡಲಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಬಗ್ಗೆ ನಾವು ಡಿಪಿಆರ್ ಸಿದ್ಧ ಮಾಡಿದ್ದೇವೆ. ಮೇಕೆದಾಟು ಕಚೇರಿ ತೆರೆದಿದ್ದೇವೆ, ಜಮೀನು ಗುರುತಿಸಿದ್ದೇವೆ. ಹೊಸ ಡಿಪಿಆರ್ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರ ಅನುಮತಿ ನೀಡಿದ ಮೇಲೆ ಭೂಮಿಪೂಜೆ ನೆರವೇರಿಸುತ್ತೇವೆ ಎಂದರು. “ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದೆ. ಯೋಜನೆಗಾಗಿ ಪ್ರತ್ಯೇಕ ಕಚೇರಿಯನ್ನೂ ಆರಂಭಿಸಲಾಗಿದೆ. ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಪರಿಹಾರ ನೀಡಲು ಭೂಮಿಯನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು.” – ಡಿ.ಕೆ.ಶಿವಕುಮಾರ್ಉಪ ಮುಖ್ಯಮಂತ್ರಿ ತಮಿಳುನಾಡಿನಲ್ಲಿ…

Read More

ಕರ್ನಾಟಕ ಬಾಲವಿಕಾಸ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಟ್ಕಳ ತಾಲೂಕಿನ ಪಳ್ಳಿಹೊಳೆಯಲ್ಲಿ ಏಕಾಏಕಿ ನೀರಿನ ಮಟ್ಟ ಹೆಚ್ಚಾಗಿ ಹತ್ತು ಜನ ಸಾವಿಗೀಡಾಗಿದ್ದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ದುರ್ಘಟನೆಯಿಂದಾಗಿ 24 ಮಕ್ಕಳ ಬದುಕು ಅತಂತ್ರವಾಗಿದೆ. ಈ ಮಕ್ಕಳು ಅನಾಥರಾಗಿದ್ದು, ತಕ್ಷಣ ಅವರ ಶಿಕ್ಷಣ ಮುಗಿಯುವವರೆಗೆ ವಸತಿಯುತ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಬೇಕು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ.ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಈ ಕುಟುಂಬಗಳಿಗೆ ತುರ್ತು ಪರಿಹಾರ ಘೋಷಿಸಿರುವ ಮುಖ್ಯಮಂತ್ರಿಗಳ ಕಳಕಳಿಗೆ ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕರ್ನಾಟಕದಲ್ಲಿರುವ ಅನಾಥ ಮಕ್ಕಳು ಸರಕಾರ ನಡೆಸುವ ಬಾಲಮಂದಿರದಲ್ಲಿ ಹಾಗೂ ವಿವಿಧ ಮಠಮಾನ್ಯಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ನಾಡಿನ ಎಲ್ಲಾ ಅನಾಥ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಚಡಚಣ ತಾಲೂಕು ಘಟಕದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶನಿವಾರ ತಾಲೂಕಿನ ಶಿಕ್ಷಕರ ಸೊಸೈಟಿ ಸಭಾಂಗಣದಲ್ಲಿ ನೆರವೇರಿತು.ಸತತ ನಾಲ್ಕನೇ ಬಾರಿ ಅವಿರೋಧವಾಗಿ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಎ.ಎಸ್. ಸೊನ್ನಗಿ ಅವರು ಅಧಿಕಾರ ಸ್ವೀಕರಿಸಿದರು.ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳೂ ಅಧಿಕೃತವಾಗಿ ಜವಾಬ್ದಾರಿ ವಹಿಸಿಕೊಂಡರು.ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಸಿ. ಉಮರಾಣಿ, ಗೌರವಾಧ್ಯಕ್ಷೆಯಾಗಿ ಆರ್.ಜೆ. ಬಿರಾದಾರ, ಉಪಾಧ್ಯಕ್ಷರಾಗಿ ಎಲ್.ಎಸ್. ಬಿರಾದಾರ, ಮಹಿಳಾ ಉಪಾಧ್ಯಕ್ಷೆಯಾಗಿ ಆರ್.ವ್ಹಿ. ಝಳಕಿ, ಖಜಾಂಚಿಯಾಗಿ ವ್ಹಿ.ಬಿ. ಭೈರಗೊಂಡ, ಸಹಕಾರ್ಯದರ್ಶಿಯಾಗಿ ಎಸ್.ಎಂ. ಬಗಲಿ, ಮಹಿಳಾ ಸಹಕಾರ್ಯದರ್ಶಿಯಾಗಿ ಎಸ್.ಪಿ. ಹಿರೇಮಠ, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಎಸ್. ಅವಟಿ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಎಸ್.ಎಸ್. ಸೂರಗೊಂಡ, ಕ್ರೀಡಾ ಕಾರ್ಯದರ್ಶಿಯಾಗಿ ರಿಯಾಜ್ ಅಹ್ಮದ್ ಮುಲ್ಲಾ, ಮಾಧ್ಯಮ ಸಂಚಾಲಕರಾಗಿ ಗೋಪಾಲ ಜಾಧವ ಹಾಗೂ ಜಿಲ್ಲಾ ಪ್ರತಿನಿಧಿಯಾಗಿ ಎಸ್.ಎಸ್. ಯಳಮೇಲಿ ಅಧಿಕಾರ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲೆಗಳ ನೂರಾರು ಶಿಕ್ಷಕರು, ಶಿಕ್ಷಣಾಭಿಮಾನಿಗಳು ಹಾಗೂ ಗಣ್ಯರು ಭಾಗವಹಿಸಿ…

Read More

ಲೇಖನ- ರಶ್ಮಿ ಕೆ. ವಿಶ್ವನಾಥ್ಮೈಸೂರು ಉದಯರಶ್ಮಿ ದಿನಪತ್ರಿಕೆ ‘ಮನಸ್ಸಿದ್ದರೆ ಮಾರ್ಗ’ ಎಂಬ ಮಾತನ್ನು ಎಲ್ಲಾ ಕೆಲಸಗಳಿಗೂ, ಎಲ್ಲಾ ಸಂದರ್ಭಕ್ಕು ಅನ್ವಯಿಸಿಕೊಳ್ಳಲಾಗುವುದಿಲ್. ಕೆಲವೊಮ್ಮೆ ‘ಹಣೆಬರಹಕ್ಕೆ ಹೊಣೆ ಯಾರು’ ಎಂದೂ ಸಹ ಹೇಳಿಕೊಂಡು ಸಮಾಧಾನ ಮಾಡಿಕೊಳ್ಳಬೇಕಾಗುತ್ತದೆ.ಎಂಬುದನ್ನು ಈ ಕಥೆಗಳು ಹೇಳಹೊರಟಿವೆ.ಅವರು ಮೂವರು ಮಕ್ಕಳು. ಮೂವರೂ ಸಹ ಒಳ್ಳೆಯ ನೌಕರಿ ಹಿಡಿದವರೆ. ಆದರೆ ಹಿರಿಯವ ತುಸು ಗಿಡ್ಡ. ಆದ್ದರಿಂದಲೇ ಇರಬೇಕು ಅವನನ್ನು ವರಿಸಲು ಯಾವ ಮಧುಮಗಳು ಒಪ್ಪಲೇ ಇಲ್ಲ. ಅಗ್ರಜ ಮದುವೆ ಆಗುವವರೆಗೆ ಉಳಿದಿಬ್ಬರು ಆಗುವಂತಿಲ್ಲವಲ್ಲ.’ಮದುವೆ ಆಗುವವರೆಗೆ ಹುಚ್ಚು ಬಿಡೋಲ್ಲ. ಹುಚ್ಚು ಬಿಡುವವರೆಗೆ ಮದುವೆ ಆಗೋಲ್ಲ’ ಎಂಬಂತೆ ಹೆಣ್ಣು ನೋಡುವ ಶಾಸ್ತ್ರ ಮಾಡಿದ್ದೇ ಮಾಡಿದ್ದು. ಎಲ್ಲಿಯವರೆಗೆ ನೋಡುವುದು. ಏನು ಪ್ರಯೋಜನ. ಅದಕ್ಕೂ ಒಂದು ವಯಸ್ಸು ಉಂಟಲ್ಲ. ವಯಸಿದ್ದಾಗಲೇ ಯಾರು ವರಿಸಲಿಲ್ಲ. ಇನ್ನು ಇವಾಗ 40-45 ದಾಟಿದ ಮೇಲೆ ಯಾರು ಮೆಚ್ಚಿಯಾರು? 50ರ ಗಡಿ ದಾಟುತ್ತಿರುವವ ಹೋಗಿ ಹೇಗೆ ಹೆಣ್ಣು ಕೇಳುವುದು?ಅಲ್ಲಿಗೆ ಮದುವೆ ಆಸೆ ಬಿಟ್ಟಂತಯೇ. ಇದು ಅಣ್ಣನ ಕರ್ಮ ಅಥವಾ ಶಾಪ ಅಥವಾ ದುರಾದೃಷ್ಟ ಎಂದುಕೊಳ್ಳಬೇಕಾ?…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲ್ಲೂಕಿನ ಬಣಜಿಗ ಕ್ಷೇಮಾಭಿವೃದ್ದಿ ಸಂಘದಿಂದ ಜೂನ ತಿಂಗಳ ಕೊನೆಯ ವಾರ ಆಲಮೇಲ ಪಟ್ಟಣದಲ್ಲಿ ಸಮಾವೇಶ ಆಯೋಜನೆ ಮಾಡುತ್ತಿದ್ದು, ಸದರಿ ಸಮಾವೇಶದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ ೯೦% ಕಿಂತ ಹೆಚ್ಚು ಅಂಕಗಳನ್ನು ಪಡೆದ ಬಣಜಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ತೀರ್ಮಾನಿಸಲಾಗಿದ್ದು, ಅರ್ಹರಾದ ಬಣಜಿಗ ಸಮಾಜದ ವಿದ್ಯಾರ್ಥಿಗಳು ಜೂನ ೧೦ ರೊಳಗಾಗಿ ತಮ್ಮ ಆಧಾರಕಾರ್ಡ, ಎರಡು‌ಭಾವಚಿತ್ರ, ಧೃಡೀಕೃತ ಅಂಕಪಟ್ಟಿಯೊಂದಿಗೆ ತಾಲ್ಲೂಕು ಅಧ್ಯಕ್ಷ ಸಿದ್ಧಲಿಂಗ ಸುಭೇದಾರ ಹಾಗೂ ಪ್ರಧಾನ ಕಾರ್ಯದರ್ಶಿ ರವಿ ವಾರದ ಅವರನ್ನು ಸಂಪರ್ಕಿಸಲು ಕೋರಲಾಗಿದೆ.ಸಂಪರ್ಕಕ್ಕಾಗಿ: 9972914151, 9741970555

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನಲ್ಲಿ ಶನಿವಾರ ಸಂಜೆ ೬ ಗಂಟೆಗೆ ಮತ್ತು ರಾತ್ರಿ ಬೀಸಿದ ಗಾಳಿ ಮಳೆಗೆ ಬಾಳೆಗಿಡ ನಾಶವಾಗಿವೆ.ಸಾಲೋಟಗಿ ಗ್ರಾಮದ ರೈತ ಧರ್ಮರಾಯ ಚನ್ನಪ್ಪ ನರಳೆ ಇವರಿಗೆ ಸೇರಿದ ೨೦೫೫ ಬಾಳೆ ಗಿಡಗಳು ಮತ್ತು ಸಿದ್ದು ದೇವೆಂದ್ರ ನರಳೆ ಇವರಿಗೆ ಸೇರಿದ ೧೯೫೦ ಬಾಳೆ ಗಿಡಗಳು ಸಂಪೂರ್ಣ ನೆಲಸಮವಾಗಿವೆ.ಬಾಳೆ ಗಿಡಗಳು ಕೇವಲ ೧೫ ದಿನದಲ್ಲಿ ಮಾರಾಟಕ್ಕೆ ಹೋಗುವ ಸ್ಥಿತಿಯಲ್ಲಿ ಇದ್ದವು.ಘಟನಾ ಸ್ಥಳಕ್ಕೆ ಜೆಡಿ ಎಸ್ ಧುರೀಣರಾದ ಬಿ.ಡಿ.ಪಾಟೀಲ ಭೇಟಿ ನೀಡಿದ್ದು ಪೃಕೃತಿ ವಿಕೋಪ ಪರಿಹಾರದ ಅಡಿಯಲ್ಲಿ ರೈತರಿಗೆ ಪರಿಹಾರ ನೀಡಲು ಆಗ್ರಹಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಶನಿವಾರ ರಾತ್ರಿ ಸುರಿದ ಗುಡುಗು-ಗಾಳಿ ಸಹಿತ ಮಳೆಗೆ ತಾಲೂಕಿನ ವಿವಿಧೆಡೆ ಸಾಕಷ್ಟು ಬೆಳೆ ಹಾನಿಯಾಗಿವೆ.ತಾಲೂಕಿನ ಸಾಲೋಟಗಿ ಗ್ರಾಮದ ರೈತ ಧರ್ಮರಾಯ ಚನ್ನಪ್ಪ ನರಳೆ ಇವರಿಗೆ ಸೇರಿದ ೨೦೫೫ ಬಾಳೆ ಗಿಡಗಳು ಮತ್ತು ಸಿದ್ದು ದೇವೆಂದ್ರ ನರಳೆ ಇವರಿಗೆ ಸೇರಿದ ೧೯೫೦ ಬಾಳೆ ಗಿಡಗಳು ಸಂಪೂರ್ಣ ನೆಲಸಮವಾಗಿವೆ.ಬಾಳೆ ಗಿಡಗಳು ಕೇವಲ ೧೫ ದಿನದಲ್ಲಿ ಮಾರಾಟಕ್ಕೆ ಹೋಗುವ ಸ್ಥಿತಿಯಲ್ಲಿ ಇದ್ದವು. ಹೀಗಾಗಿ ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಸಿ ನೆಟ್ಟು, ಗೊಬ್ಬರಹಾಕಿ, ಔಷಧಿ ಸಿಂಪರಣೆ ಮಾಡಿದ್ದ ರೈತರಿಗೆ ತಾವು ಖರ್ಚು ಮಾಡಿದ ಹಣವೂ ಸಹ ಕೈಗೆ ಸಿಗದಂತಾಗಿದೆ.ತಾಲೂಕಿನ ತಾಂಬಾ ಗ್ರಾಮದ ರೈತ ಮಹಿಳೆ ಕಸ್ತೂರಬಾಯಿ ಈರಣ್ಣ ತೆಗ್ಗೆಳ್ಳಿ ಅವರ ೧ ಎಕರೆ ಜಮೀನಿನಲ್ಲಿ ಬೆಳೆದ ಡ್ರೆöÊಗನ್ ಬೆಳೆ ಸಂಪೂರ್ಣವಾಗಿ ನೆಲಕ್ಕುರುಳಿವೆ.ತಾಲೂಕಿನ ಶಿರಗೂರ ಇನಾಂ ಗ್ರಾಮದ ಸಿದರಾಯ ದೇವಸ್ಥಾನದ ಆವರಣದಲ್ಲಿ ೮೦ ಲಕ್ಷ ರೂವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಮಾಲಗಂಬ ೪೪ ಅಡಿ ನಿರ್ಮಾಣವಾಗಿತ್ತು.…

Read More