ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾನಗರ ಪಾಲಿಕೆಯ ಪ್ರಸಕ್ತ ಆರ್ಥಿಕ ವರ್ಷದ ಬಜೆಟ್ ೨೬೫ ಕೋಟಿ ರೂ.ಗಳಾಗಿದ್ದು ಅದರಲ್ಲಿ ಆದಾಯ ಹಾಗೂ ವೆಚ್ಚಗಳನ್ನು ಸರಿದೂಗಿಸಿ ೧೨ ಲಕ್ಷ ರೂ.ಗಳ ಉಳಿತಾಯ ಬಜೆಟ್‌ನ್ನು ಮೇಯರ್ ಎಂ.ಎಸ್. ಕರಡಿ ಶುಕ್ರವಾರ ಮಂಡಿಸಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಬಜೆಟ್ ಸಭೆಯಲ್ಲಿ ವಿಸ್ತçತವಾಗಿ ವಿವರಣೆ ನೀಡುವ ಮೂಲಕ ಕರಡಿ ಬಜೆಟ್ ಮಂಡಿಸಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಹಾನಗರ ಪಾಲಿಕೆಯ ಆಯ್ಯ ವ್ಯಯಕ್ಕೆ ಸಂಬAಧಿಸಿದAತೆ ೨೬೫.೨೦ ಕೋಟಿ ರೂ.ಗಳು ಸ್ವೀಕೃತಿಯಾಗಿದ್ದು ಅದರಲ್ಲಿ ೨೬೫.೦೮ ಕೋಟಿ ರೂ.ಗಳು ವೆಚ್ಚವಾಗಿದ್ದು ಒಟ್ಟು ೧೨ ಲಕ್ಷ ರೂ. ಉಳಿತಾಯದ ಬಜೆಟ್ ಇದಾಗಿದೆ ಎಂದು ಕರಡಿ ವಿಶ್ಲೇಷಿಸಿದರು.
ಆರ್ಥಿಕ ಅಂಶಗಳ ಕುರಿತು ವಿವರಣೆ ನೀಡಿದ ಅವರು, ೨೦೨೬-೨೭ ನೇ ಸಾಲಿನಲ್ಲಿ ರಾಜಸ್ವ ಸ್ವೀಕೃತಿ ೧೭೨.೦೬ ಕೋಟಿ ರೂ. ಇದ್ದು, ಬಂಡವಾಳ ಸ್ವೀಕೃತಿ ೫೮.೪೮ ಕೋಟಿ ರೂ., ಅಸಾಧಾರಣ ಸ್ವೀಕೃತಿ ೩೪.೬೬ ಕೋಟಿ ರೂ. ಇದೆ ಎಂದು ವಿವರಿಸಿದರು.
೨೦೨೬-೨೭ ನೇ ಸಾಲಿನಲ್ಲಿ ವೆಚ್ಚಗಳಿಗೆ ಸಂಬAದಿಸಿದAತೆ ೧೬೫.೯೦ ಕೋಟಿ ರೂ. ರಾಜಸ್ವ ಪಾವತಿ, ೬೪.೫೧ ಕೋಟಿ ರೂ. ಬಂಡವಾಳ ಪಾವತಿ ಹಾಗೂ ಅಸಾಧಾರಣ ಪಾವತಿ ೩೪.೭ ಕೋಟಿ ರೂ. ಇದೆ ಎಂದು ಸಭೆಗೆ ಬಜೆಟ್ ಮಂಡನೆ ವೇಳೆ ಮಾಹಿತಿ ನೀಡಿದರು.
೧೭೨೦೬.೧೦ ಲಕ್ಷ ರೂ. ರಾಜಸ್ವ ಆದಾಯ
೨೦೨೬-೨೭ ನೇ ಸಾಲಿನಲ್ಲಿ ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ ರೂಪದಲ್ಲಿ ೪೨೭೫.೦೧ ಲಕ್ಷ ರೂ., ಕಟ್ಟಡ ಬಾಡಿಗೆ, ವಾಣಿಜ್ಯ ಸಂಕೀರ್ಣ ಬಾಡಿಗೆ ರೂಪದಲ್ಲಿ ೨೫೦ ಲಕ್ಷ ರೂ., ಸಾಮಾನ್ಯ ಆಡಳಿತದಿಂದ ೨೫೮೬.೫೦ ಲಕ್ಷ ರೂ., ವಿವಿಧ ಸಾಮಾನ್ಯ ರಾಜಸ್ವಗಳಿಂದ ೪೫೩.೫೪ ಲಕ್ಷ ರೂ., ಕಟ್ಟಡ ಕಾಯ್ದೆಗಳಿಗೆ ಸಂಬAಧಿಸಿದ ಶುಲ್ಕಗಳ ರೂಪವಾಗಿ ೩೪೦.೦೧ ಲಕ್ಷ ರೂ., ರಸ್ತೆ ಅಗೆತ ಶುಲ್ಕ ೭೫ ಲಕ್ಷ ರೂ., ವ್ಯಾಪಾರ ಪರವಾನಿಗೆ ಶುಲ್ಕ ೧೩೫ ಲಕ್ಷ ರೂ., ನೈರ್ಮಲೀಕರಣ – ಘನತ್ಯಾಜ್ಯ ನಿರ್ವಹಣೆಗೆ ಸಂಬAಧಿಸಿದAತೆ ೫೫೧.೦೪ ಲಕ್ಷ ರೂ., ಸಂತೆ, ಜಾತ್ರೆ ಹಾಗೂ ಇತರ ನೆಲ ಬಾಡಿಗೆಗೆ ಸಂಬAಧಿಸಿದAತೆ ೮೦ ಲಕ್ಷ ರೂ. ಸೇರಿದಂತೆ ವಿವಿಧ ಮೂಲಗಳಿಂದ ೧೭೨೦೬.೧೯ ಲಕ್ಷ ರೂ. ಆದಾಯ ಇದೆ ಎಂದು ವಿವರಿಸಿದರು.
ಈ ಆದಾಯವನ್ನು ಖರ್ಚು ಮಾಡುವ ನಿಟ್ಟಿನಲ್ಲಿಯೂ ಆರ್ಥಿಕ ವಿವರಣೆ ನೀಡಿದ ಮೇಯರ್ ಕರಡಿ, ಸಾಮಾನ್ಯ ಆಡಳಿತಕ್ಕೆ ೪೭೯೬.೪೯ ಲಕ್ಷ ರೂ., ರಸ್ತೆ-ಕಲ್ಲು ಹಾಸುಗಳು ಹಾಗೂ ಚರಂಡಿಗಳ ನಿರ್ವಹಣೆಗೆ ಸಂಬAಧಿಸಿದAತೆ ೧೦೦ ಲಕ್ಷ ರೂ., ಬೀದಿ ದೀಪಗಳ ನಿರ್ವಹಣೆಗೆ ೮೩೦೦ ಲಕ್ಷ ರೂ., ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ೧೬೦೬ ಲಕ್ಷ ರೂ., ಉದ್ಯಾನವನ ದುರಸ್ತಿ ಹಾಗೂ ನಿರ್ವಹಣೆಗೆ ೨೨೦ ಲಕ್ಷ ರೂ. ಸೇರಿದಂತೆ ವಿವಿಧ ಕಾಮಗಾರಿಗಳಿಗೆ ೧೬೫೯೪.೧೪ ಲಕ್ಷ ರೂ. ವೆಚ್ಚವಾಗಿದೆ ಎಂದು ವಿವರಿಸಿದರು.
ಪ್ರಮುಖ ಯೋಜನೆಗಳ ವಿವರ
ಪ್ರತಿ ವಾರ್ಡ್ಗಳಲ್ಲಿ ತುರ್ತು ಒಳಚರಂಡಿ ಕಾಮಗಾರಿ ಕೈಗೊಳ್ಳಲು ತಲಾ ೧೦ ಲಕ್ಷ ರೂ. ಅನುದಾನ ಹಂಚಿಕೆ ಮಾಡುವ ನಿಟ್ಟಿನಲ್ಲಿ ೩೫೦ ಲಕ್ಷ ರೂ. ಮೀಸಲು
ಪ್ರತಿ ವಾರ್ಡ್ಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ೨೦ ಲಕ್ಷ ರೂ.ಗಳಂತೆ ಅನುದಾನ ಹಂಚಿಕೆ ಮಾಡಲು ೭೦೦ ಲಕ್ಷ ರೂ. ಮೀಸಲು
ಸ್ಮಶಾನಗಳ ಅಭಿವೃದ್ಧಿಗೆ ೫೦ ಲಕ್ಷ ರೂ.
ಶಿವಾಜಿ ವೃತ್ತದಿಂದ ಬಾಬು ಜಗಜೀವನರಾಂ ವೃತ್ತದವರೆಗಿನ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಗಾಗಿ ೩೦೦ ಲಕ್ಷ ರೂ.
ವಿಶೇಷಚೇತನರ ಪ್ರಗತಿಗಾಗಿ ಕ್ರೀಡೆಗಾಗಿ ೨ ಮೂವಿಂಗ್ ಪೋಲ್ಸ್, ಕ್ರಿಕೆಟ್ ಪಿಚ್ ಟೇಬಲ್ ಹಾಗೂ ವಿವಿಧ ಕಾಮಗಾರಿಗಳಿಗಾಗಿ ೧೦ ಲಕ್ಷ ರೂ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಹಾಗೂ ಉದ್ಯೋಗಕ್ಕಾಗಿ ಸಹಾಯಧನ ನೀಡುವುದಕ್ಕಾಗಿ ೨೦ ಲಕ್ಷ ರೂ.
ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆ ಹಾಗೂ ನಿಯಮಿತ ಅವಧಿಯವರೆಗೆ ಪಾಲನೆಗಾಗಿ ೬೨ ಲಕ್ಷ ರೂ. ಅನುದಾನ
ಬೇಗಂ ತಲಾಬ್ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ೭೦೦ ಲಕ್ಷ ರೂ. ಹಾಗೂ ಭೂತನಾಳ ಕೆರೆ ಅಭಿವೃದ್ಧಿಗಾಗಿ ೧೩೦೦ ಲಕ್ಷ ರೂ.
ಘನತ್ಯಾಜ್ಯ ಕಸ ವಿಲೇವಾರಿಗೆ ೨೦ ಹೊಸ ವಾಹನ ಖರೀದಿಗೆ ೨೬೦ ಲಕ್ಷ ರೂ.
ವಾರ್ಡ್ ನಂ.೮ ರಲ್ಲಿ ಮಾದರಿ ಉದ್ಯಾನವನ ನಿರ್ಮಾಣಕ್ಕಾಗಿ ೬೦ ಲಕ್ಷ ರೂ. ನಿಗದಿ

