Author: editor.udayarashmi@gmail.com

ಚಡಚಣ: ಪಟ್ಟಣದ ಎಂಇಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಬೋಧಕ,ಬೋಧಕೇತರ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Read More

ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ವಿಜಯಪುರ: ಕನ್ನಡ ಕೇವಲ ಭಾಷೆಯಲ್ಲ ದೊಡ್ಡ ಶಕ್ತಿ. ಕನ್ನಡ ಭಾಷೆ ವಿಶ್ವದ ಮೂರನೇ ಅತ್ಯಂತ ಹಳೆಯ ಭಾಷೆ. ವಿಶ್ವದ ಸಾವಿರಾರು ಭಾಷೆಗಳಲ್ಲಿ ಓದಿದಂತೆ ಬರೆಯುವ, ಬರೆದಂತೆ ಓದುವ ಹಾಗೂ ವೈಜ್ಞಾನಿಕವಾಗಿ ಅಕ್ಷರಗಳನ್ನು ವಿಂಗಡಿಸಿದ ವಿಶ್ವದ ಏಕೈಕ ಭಾಷೆ ಕನ್ನಡವಾಗಿದೆ ಎಂದು ಹಾಸ್ಯ ಭಾಷಣಕಾರರು ಹಾಗೂ ಎಸ್ .ಬಿ ವಿಸ್ಡಮ್ ಕರಿಯರ್ ಅಕಾಡೆಮಿಯ ಕನ್ನಡ ಉಪನ್ಯಾಸಕ ಭಾಗೇಶ ಮುರಡಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಅಡಿಯಲ್ಲಿ ಜರುಗಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಡ ಬೆಳವಣಿಗೆಗೆ ನಮ್ಮ ಪೂರ್ವಜರ ಕೂಡುಗೆ ಅನನ್ಯವಾಗಿದೆ. ಇಂದು ಕನ್ನಡ ಭಾಷೆ ಉಳಿದಿರುವುದು ವಿದ್ಯಾವಂತರಿಂದಲ್ಲ, ಸಾಮಾನ್ಯ ಗ್ರಾಮೀಣ ಪ್ರದೇಶದ ಜನರಿಂದ ಆದ್ದರಿಂದ ನಾವು ಕನ್ನಡವನ್ನು ಎಲ್ಲ ವಲಯಗಳಲ್ಲಿ ಹೆಚ್ಚು ಹೆಚ್ಚು ಬಳಸುವ ಮೂಲಕ ಉಳಿಸಬೇಕು. ಅಂದಾಗ ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ…

Read More

ಆಲಮಟ್ಟಿ : ಆಂಗ್ಲ ಮಾದ್ಯಮದ ಶಾಲೆ ಇದು. ಆದರೂ ಕನ್ನಡ ಮೋಹ ಉಮ್ಮಳಿಸಿ ಚಿತ್ತಾರದ ರೂಪದಲ್ಲಿ ಪರಿಮಳಿಸಿತು. ಇಲ್ಲಿ ಕನ್ನಡ ರಾಜ್ಯೋತ್ಸವದ ಕಹಳೆ ಕಂಪಾಗಿ, ಇಂಪಾಗಿ, ತಂಪಾಗಿ ಮೂಡಿಬಂತು. ಇಲ್ಲಿನ ಎಂ.ಎಚ್.ಎಂ.ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಗುರುಮಾತೆಯರು ಹಾಗೂ ಮಕ್ಕಳು ಕನ್ನಡ ಬಾವುಟ ಬಣ್ಣದ ಉಡುಪುಗಳನ್ನು ತೊಟ್ಟು ಕನ್ನಡ ಸಂಭ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಕನ್ನಡ ಬೆಳಗಲಿ ಎಂಬ ಭಾವದಿಂದ ದೀಪಗಳನ್ನು ಹಚ್ಚಿ ಪ್ರಾಥಿ೯ಸಿದ ನೋಟ ಗಮನ ಸೆಳೆಯಿತು. ಇನ್ನೊಂದೆಡೆ ಹಳಕಟ್ಟಿ ಪ್ರೌಢಶಾಲೆಯ ಮುಖ್ಯ ಗುರು ಜಿ.ಎಂ.ಕೋಟ್ಯಾಳ ಅವರನ್ನು ಶಾಲಾವರಣದಲ್ಲಿ ಚಿಣ್ಣರು ಭೇಟಿ ಮಾಡಿ ಕನ್ನಡ ರಾಜ್ಯೋತ್ಸವದ ಸವಿ ಶುಭಾಶಯ ಹಂಚಿಕೊಂಡು ಖುಷಿಪಟ್ಟಿದ್ದು ವಿಶೇಷವಾಗಿತ್ತು.

Read More

ಆಲಮಟ್ಟಿ: ಎಳೆಯ ಮೊಗದ ಬಾಲೆಯರು ದಿಟ್ಟತನದ ರೂಪ ತಾಳಿ ತಮ್ಮ ಹಾವಭಾವದ ಮೂಲಕ ಮನೋಜ್ಞವಾಗಿ ನಟನಾ ಕೌಶಲ್ಯ ಪ್ರದಶಿ೯ಸಿದರು. ಅವರು ಅಂತಿಂಥ ರೂಪಧಾರಣೆ ಮಾಡಿರಲಿಲ್ಲ. ರೋಷಾಗ್ನಿವೇಶದ ಓನಕೆ ಓಬವ್ವ,ಪ್ರಸನ್ನ ಭಾವದ ನಾಡದೇವತೆ, ವೀರಾವೇಷದ ಕಿತ್ತೂರ ರಾಣಿ ಚೆನ್ನಮ್ಮ ಸೇರಿದಂತೆ ಕರುನಾಡು ಕಂಡ ಮಹಾನ ನಾಯಕಿಯರ ವೇಷಭೂಷಣದಲ್ಲಿ ಕಂಗೊಳಿಸಿ ಭೇಷ್ ಎನಿಸಿಕೊಂಡರು !ಹೌದು ! ಇವೆಲ್ಲ ರೋಮಾಂಚಕ ದೃಶ್ಯ ವೈಭವ ಕಂಡಿದ್ದು ಆಲಮಟ್ಟಿಯ ಮಂಜಪ್ಪ ಹಡೇ೯ಕರ ಕನ್ನಡ ಮಾದ್ಯಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ !ಬುಧವಾರ ಕರುನಾಡವೇ 50 ರ ಕನಾ೯ಟಕ ರಾಜ್ಯೋತ್ಸವ ಸಂಭ್ರಮದಲ್ಲಿ ಮೊಳಗಿತ್ತು. ಇಲ್ಲಿಯೂ ಸಡಗರಕ್ಕೇನೂ ಕೊರತೆ ಇರಲಿಲ್ಲ. ಶಾಲಾ ಗುರುಮಾತೆಯರು, ಚಿಕ್ಕ ಮಕ್ಕಳು, ಬಾಲೆಯರು ಕನ್ನಡೋತ್ಸವದಲ್ಲಿ ತೇಲಿ ಸಂತಸ ಪಟ್ಟರು.ಶಿಕ್ಷಕಿಯರ ಮಾರ್ಗದರ್ಶನದಲ್ಲಿ ಪುಟ್ಟ ಬಾಲೆಯರು ವೀರ ಮಹಿಳೆಯರ ರೂಪದಲ್ಲಿ ಪ್ರದಶಿ೯ಸಿದ ಅಭಿಯನ ಎಲ್ಲರ ಚಿತ್ತ ತಮ್ಮತ್ತ ನೆಡುವಂತೆ ಮಾಡಿತು. ಮುಖ್ಯ ಶಿಕ್ಷಕಿ ಕೆ.ಎನ್.ಹಿರೇಮಠ, ಶಿಕ್ಷಕಿಯರಾದ ಯಮನಕ್ಕ ಬಿರಾದಾರ, ಪವಿತ್ರಾ ಪಾಟೀಲ, ಮಂಜುಳಾ ಭಂಡಾರಿ,ಪ್ರಿಯಾಂಕಾ ಚಿಲ್ಲಾಳ,ಅಯಾ ಅಂಜು ಚಿಲ್ಲಾಳ ಮಕ್ಕಳಿಗೆ ಹುರಿದುಂಬಿಸಿ…

Read More

ಸರ್ಕಾರಿ ಶಾಲೆಗೆ ಉಚಿತ ವಿದ್ಯುತ್, ನೀರು ಪೂರೈಕೆಗೆ ಸಿಎಂ ಆದೇಶಕ್ಕೆ ಶಿಕ್ಷಕರ ಸಂಘ ಸ್ವಾಗತ ಆಲಮಟ್ಟಿ: ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ಉಚಿತ ಕುಡಿಯುವ ನೀರು ಪೂರೈಕೆಗೆ ಕನ್ನಡ ನಾಡಿನ 50 ನೇ ರಾಜ್ಯೋತ್ಸವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸ್ವಾಗತಿಸಿದೆ.ಈ ಬಗ್ಗೆ ಪ್ರಕಟಣೆ ನೀಡಿರುವ ಸಂಘಟನೆಯ ಪದಾಧಿಕಾರಿಗಳುಕಳೆದ ಕೆಲ ದಿನಗಳ ಹಿಂದೆಯೂ ಸಂಘ ಈ ಕುರಿತು ಮನವಿ ಸಲ್ಲಿಸಿತ್ತು. ಅಲ್ಲದೇ ಬುಧವಾರ ಬೆಳಿಗ್ಗೆ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ಮುಖ್ಯಮಂತ್ರಿಗಳಿಗೆ ಸಂಘ ಮತ್ತೊಮ್ಮೆ ಮನವಿ ಸಲ್ಲಿಸಿತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ತಮ್ಮ ರಾಜ್ಯೋತ್ಸವ ಭಾಷಣದಲ್ಲಿ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ಉಚಿತ ಕುಡಿಯುವ ನೀರಿನ ಘೋಷಣೆ ಮಾಡಿದ್ದಾರೆ. 50 ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಘೋಷಣೆ ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಿದಂತಾಗಿದೆ.ಇದರಿಂದ ರಾಜ್ಯದ ಸುಮಾರು 50…

Read More

ಇಂಡಿ: ಆಡಳಿತದ ಎಲ್ಲ ಹಂತಗಳಲ್ಲೂ ಕನ್ನಡ ಅನುಷ್ಠಾನವಾಗಬೇಕು. ಆದ್ಯತೆ ಬದ್ಧತೆ ಆಗಬೇಕು. ಕರ್ನಾಟಕದಲ್ಲಿ ನೆಲೆಸಿರುವ ಪ್ರತಿಯೊಬ್ಬರಲ್ಲೂ ಕನ್ನಡ ಮೇಳೈಸಲಿ, ಕನ್ನಡವೆಂದರೆ ಜನಜಂಗುಳಿಯಲ್ಲ ಅದು ಜೀವನಶೈಲಿ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಹೇಳಿದರು.ಪಟ್ಟಣದ ಪೋಲಿಸ್ ಪರೇಡ್ ಮೈದಾನದಲ್ಲಿ ತಾಲೂಕಾ ಆಡಳಿತ ವತಿಯಿಂದ ನಡೆದ ೬೮ ನೆಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಉಪನ್ಯಾಸ ನೀಡಿ ಮಾತನಾಡಿದ ಕಲಬುರಗಿ ಶರಣ ಬಸವೇಶ್ವರ ವಿವಿ ಕನ್ನಡ ಅಧ್ಯಯನ ಪೀಠದ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕ ನಾನಾಸಾಹೇಬ ಹಚಡದ ಮಾತನಾಡಿ, ಭಾರತದಲ್ಲಿ ಕನ್ನಡ ೨೧ ನೆಯ ಸ್ಥಾನದಲ್ಲಿದೆ. ನಮ್ಮ ನಾಡು ಕರ್ನಾಟಕವೆಂದು ಮರುನಾಮಕರಣಗೊಂಡು ೫೦ ವರ್ಷಗಳು ಕಳೆದಿವೆ. ಕರ್ನಾಟಕದ ಏಕೀಕರಣಕ್ಕೆ ಅನೇಕ ಸಾಹಿತಿಗಳು, ಕಲಾವಿಧರು, ಚಿಂತಕರು, ಸಂಶೋಧಕರು, ಸಂಘ ಸಂಸ್ಥೆಗಳು ಬೆಂಬಲಿಸಿ ೧೯೭೩ ನ. ೧ ರಂದು ಕರ್ನಾಟಕ ಎಂದು ನಾಮಕರಣ ಮಾಡಿದ್ದು,ದೇಶದಲ್ಲೇ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗೆ ಪಾತ್ರವಾದಂಥ ಭಾಷೆಯು ಸಮಗ್ರ ಅಭಿವೃದ್ಧಿಯಾಗಬೇಕಾಗಿದೆ. ಕನ್ನಡದ ಹಿತವನ್ನು ಒಡಲಲ್ಲಿಟ್ಟುಕೊಂಡು ಕನ್ನಡ ಭಾಷಾ ಮತ್ತು ಸಮಗ್ರ ಅಭಿವೃದ್ಧಿ…

Read More

ಚಡಚಣ: ನಾಡು ನುಡಿಯ ಬಗ್ಗೆ ಅಭಿಮಾನ ಮೂಡಿಸುವ, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವ ಗೀತೆ, ಕವನಗಳನ್ನು ನಾಡಿನ ಹೆಮ್ಮೆಯ ಕವಿಗಳು ರಚಿಸಿದ್ದು, ಇವುಗಳ ಕೇಳುವಿಕೆಯು ನಮ್ಮಲ್ಲಿ ಅಭಿಮಾನವನ್ನು ಮೂಡಿಸುತ್ತದೆ. ಕನ್ನಡ ನಾಡು-ನುಡಿಯ ಶ್ರೇಷ್ಠತೆಯನ್ನು ಸಾರುವುದೇ ಕನ್ನಡ ರಾಜ್ಯೋತ್ಸವವಾಗಿದೆ ಎಂದು ರೇವತಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರು ಆರ್.ಎಚ್.ನದಾಫ್‌ ಹೇಳಿದರು.ಗುರುವಾರದಂದು ರೇವತಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಜಗತ್ತಿನ ಅಭಿವೃದ್ಧಿಗಾಗಿ ನಾಡು, ನುಡಿ, ಸಂಸ್ಕೃತಿ ಮರೆತು ಮೂಢರಾದೇ ನಮ್ಮತನದ ಅಭಿಮಾನವನ್ನು ತನು-ಮನದಲ್ಲಿ ಮೆರೆಯಲೇಬೇಕಿದೆ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ರಾಷ್ಟçಕವಿ ಕುವೆಂಪು ವಿರಚಿತ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ”, ಹುಯಿಲಗೊಳ ನಾರಾಯಣರಾವ್ ವಿರಚಿತ “ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು”, ಸಾಹಿತಿ ಚನ್ನವೀರ ಕಣವಿಯವರ ವಿರಚಿತ “ಹೆಸರಾಯಿತು ಕರ್ನಾಟಕ”, ಸಿದ್ಧಯ್ಯ ಪುರಾಣಿಕ ವಿರಚಿತ “ ಹೊತ್ತಿತೋ ಹೊತ್ತಿತೋ ಕನ್ನಡದ ದೀಪ” ಹಾಗೂ ದ.ರಾ.ಭೇಂದ್ರೆಯವರ ವಿರಚಿತ “ಒಂದೇ…

Read More

ಚಡಚಣ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಹಮ್ಮಿಕೊಳ್ಳಲಾದ ಕರ್ನಾಟಕ ಸುವರ್ಣ ಸಿರಿ ರಾಜ್ಯ ಪ್ರಶಸ್ತಿಗೆ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಉಮರಜ ಗ್ರಾಮದವರಾದ ಶಿಕ್ಷಕ ಸಾಹಿತಿ ಶ್ರೀಪ್ರಮೋದಕುಮಾರ ಮಠಪತಿ ಭಾಜನರಾಗಿದ್ದಾರೆ.ಶ್ರೀಯುತರ ಶೈಕ್ಷಣಿಕ ಮತ್ತು ಕನ್ನಡ ನಾಡು, ನುಡಿಗಾಗಿನ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸುವರ್ಣ ಸಿರಿ ರಾಜ್ಯ ಪ್ರಶಸ್ತಿಗೆ ಆಯ್ಕೆಮಾಡಿ ಅಭಿನಂದಿಸಲಾಗಿದೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಮುಖ್ಯಸ್ಥರಾದ ಸಾಲಿ ಗ್ರಾಮಶೆಣೈರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರಮೋದಕುಮಾರ ಮಠಪತಿ ಇವರು ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಮಾಚಹಳ್ಳಿ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕೊಲ್ಹಾರ: ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲೂಕಾ ಆಡಳಿತದ ಮುಂದಾಳತ್ವದಲ್ಲಿ ಸ್ಥಳಿಯ ಆಡಳಿತ ಮಂಡಳಿಯ ಸಹಯೋಗದೊಂದಿಗೆ ಕರ್ನಾಟಕ ಏಕೀಕರಣದ ೬೮ನೇ ರಾಜ್ಯೋತ್ಸವ ಹಾಗೂ ಮೈಸೂರು ಎಂಬ ಹೆಸರು ಕರ್ನಾಟಕ ಎಂಬ ಹೆಸರಿನಿಂದ ಮರುನಾಮಕರಣಗೊಂಡ ೫೦ನೇ ವರ್ಷಾಚರಣೆಯ ಕಾರ್ಯಕ್ರಮವು ಬಹು ವಿಜ್ರಂಭಣೆಯಿಂದ ಜರುಗಿತು.ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಾಲಾ ಕ್ರೀಡಾಂಗಣ ಆವರಣಕ್ಕೆ ಆಗಮಿಸಿದ ನಂತರ ತಹಶೀಲ್ದಾರ ಎಸ್.ಎಸ್.ನಾಯ್ಕಲಮಠ ಅವರು ಕನ್ನಡ ರಾಜ್ಯೋತ್ಸವದ ಧ್ವಜಾರೋಹಣವನ್ನು ರಾಷ್ಟ್ರಧ್ವಜದ ಆರೋಹಣ ನಂತರ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ವರ್ಷ ಪೂರ್ತಿ ಕನ್ನಡ ಭಾಷೆಯ ಬಳಕೆಯಾಗಬೇಕು ಕರ್ನಾಟಕ ಏಕೀಕರಣದ ಮಹತ್ವವನ್ನು ನಾಡಿನ ಜನತೆಗೆ ಪರಿಚಯಿಸಬೇಕು ಇಂಗ್ಲೀಷ ವ್ಯಾಮೋಹ ಪದಗಳ ಬಳಕೆ ಕಡಿಮೆ ಮಾಡಿ ಕನ್ನಡ ಭಾಷೆಗೆ ಮಹತ್ವವನ್ನು ಸಾರುವ ಸಲುವಾಗಿ ಸರಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಆಡಳಿತ ಯಂತ್ರದೊಂದಿಗೆ ಸಾರ್ವಜನಿಕರು ಸಹಕರಿಸಿ ಕನ್ನಡ ರಾಜ್ಯೋತ್ಸವವನ್ನು ವರ್ಷ ಪೂರ್ತಿ ಅತ್ಯಂತ ವಿಜ್ರಂಬಣೆಯಿಂದ ಆಚರಿಸೋಣ ಎಂದು ಕರೆ ಕೊಟ್ಟರು.ಈ ಸಂದರ್ಭದಲ್ಲಿ ಉಪನ್ಯಾಸಕರಾಗಿ…

Read More

ತಾಳಿಕೋಟಿ. ಕನ್ನಡ ನಾಡು- ನುಡಿ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಹೋರಾಡುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ಇದಕ್ಕಾಗಿ ನಾವೆಲ್ಲರೂ ಕಂಕಣಭದ್ಧರಾಗೋಣ ಎಂದು ಶಾಸಕ ಸಿ .ಎಸ್. ನಾಡಗೌಡ ಅಪ್ಪಾಜಿ ಹೇಳಿದರು.ಬುಧವಾರ ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕ ಆಡಳಿತದ ವತಿಯಿಂದ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಾಡ ಧ್ವಜಾರೋಹಣ ನೆರವೇರಿಸಿ ನಂತರ ಅವರು ಮಾತನಾಡಿದರು.ಕರ್ನಾಟಕದ ಅಖಂಡತೆಯನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ ಮಹಾತ್ಮ ಗಾಂಧೀಜಿಯವರು ದೇಶದ ಅಖಂಡತೆಯನ್ನು ಬಯಸಿದ್ದರು. ನಾವು ರಾಜಕೀಯ ಹಿತಾಸಕ್ತಿ ಗಳಿಗಾಗಿ ರಾಜ್ಯದ ಇಬ್ಬಾಗವನ್ನು ಬಯಸುವುದು ಸರಿಯಲ್ಲ. ಸಮಗ್ರ ಕರ್ನಾಟಕದ ಪ್ರಗತಿ ಹಾಗೂ ಅಭಿವೃದ್ಧಿ ನಮ್ಮೆಲ್ಲರ ಪರಿಕಲ್ಪನೆ ಆಗಬೇಕು. ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಹಾಗೂ ಐಟಿಬಿಟಿರಂಗದಲ್ಲಿ ವಿಶ್ವದ ಗಮನಸೆಳೆದ ರಾಜ್ಯವಾಗಿದೆ. ಇಂದಿನ ಯುವ ಪೀಳಿಗೆಗೆ ನಾಡಿನ ಈ ಸಂಸ್ಕೃತಿಯನ್ನು ವರ್ಗಾಯಿಸುವ ಅಗತ್ಯ ಇದೆ ಎಂದರು.ಸಾಹಿತಿ ಅಶೋಕ ಹಂಚಲಿ ಮಾತನಾಡಿದರು.ತಹಶೀಲ್ದಾರ್ ಕೀರ್ತಿ ಚಾಲಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಮಯದಲ್ಲಿ ತಾಲೂಕ…

Read More