ಆಲಮಟ್ಟಿ: ಎಳೆಯ ಮೊಗದ ಬಾಲೆಯರು ದಿಟ್ಟತನದ ರೂಪ ತಾಳಿ ತಮ್ಮ ಹಾವಭಾವದ ಮೂಲಕ ಮನೋಜ್ಞವಾಗಿ ನಟನಾ ಕೌಶಲ್ಯ ಪ್ರದಶಿ೯ಸಿದರು. ಅವರು ಅಂತಿಂಥ ರೂಪಧಾರಣೆ ಮಾಡಿರಲಿಲ್ಲ. ರೋಷಾಗ್ನಿವೇಶದ ಓನಕೆ ಓಬವ್ವ,ಪ್ರಸನ್ನ ಭಾವದ ನಾಡದೇವತೆ, ವೀರಾವೇಷದ ಕಿತ್ತೂರ ರಾಣಿ ಚೆನ್ನಮ್ಮ ಸೇರಿದಂತೆ ಕರುನಾಡು ಕಂಡ ಮಹಾನ ನಾಯಕಿಯರ ವೇಷಭೂಷಣದಲ್ಲಿ ಕಂಗೊಳಿಸಿ ಭೇಷ್ ಎನಿಸಿಕೊಂಡರು !
ಹೌದು ! ಇವೆಲ್ಲ ರೋಮಾಂಚಕ ದೃಶ್ಯ ವೈಭವ ಕಂಡಿದ್ದು ಆಲಮಟ್ಟಿಯ ಮಂಜಪ್ಪ ಹಡೇ೯ಕರ ಕನ್ನಡ ಮಾದ್ಯಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ !
ಬುಧವಾರ ಕರುನಾಡವೇ 50 ರ ಕನಾ೯ಟಕ ರಾಜ್ಯೋತ್ಸವ ಸಂಭ್ರಮದಲ್ಲಿ ಮೊಳಗಿತ್ತು. ಇಲ್ಲಿಯೂ ಸಡಗರಕ್ಕೇನೂ ಕೊರತೆ ಇರಲಿಲ್ಲ. ಶಾಲಾ ಗುರುಮಾತೆಯರು, ಚಿಕ್ಕ ಮಕ್ಕಳು, ಬಾಲೆಯರು ಕನ್ನಡೋತ್ಸವದಲ್ಲಿ ತೇಲಿ ಸಂತಸ ಪಟ್ಟರು.
ಶಿಕ್ಷಕಿಯರ ಮಾರ್ಗದರ್ಶನದಲ್ಲಿ ಪುಟ್ಟ ಬಾಲೆಯರು ವೀರ ಮಹಿಳೆಯರ ರೂಪದಲ್ಲಿ ಪ್ರದಶಿ೯ಸಿದ ಅಭಿಯನ ಎಲ್ಲರ ಚಿತ್ತ ತಮ್ಮತ್ತ ನೆಡುವಂತೆ ಮಾಡಿತು. ಮುಖ್ಯ ಶಿಕ್ಷಕಿ ಕೆ.ಎನ್.ಹಿರೇಮಠ, ಶಿಕ್ಷಕಿಯರಾದ ಯಮನಕ್ಕ ಬಿರಾದಾರ, ಪವಿತ್ರಾ ಪಾಟೀಲ, ಮಂಜುಳಾ ಭಂಡಾರಿ,ಪ್ರಿಯಾಂಕಾ ಚಿಲ್ಲಾಳ,ಅಯಾ ಅಂಜು ಚಿಲ್ಲಾಳ ಮಕ್ಕಳಿಗೆ ಹುರಿದುಂಬಿಸಿ ಕನ್ನಡ ರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸಿ ಸಂಭ್ರಮಿಸಿದರು.
Related Posts
Add A Comment