ಕೊಲ್ಹಾರ: ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲೂಕಾ ಆಡಳಿತದ ಮುಂದಾಳತ್ವದಲ್ಲಿ ಸ್ಥಳಿಯ ಆಡಳಿತ ಮಂಡಳಿಯ ಸಹಯೋಗದೊಂದಿಗೆ ಕರ್ನಾಟಕ ಏಕೀಕರಣದ ೬೮ನೇ ರಾಜ್ಯೋತ್ಸವ ಹಾಗೂ ಮೈಸೂರು ಎಂಬ ಹೆಸರು ಕರ್ನಾಟಕ ಎಂಬ ಹೆಸರಿನಿಂದ ಮರುನಾಮಕರಣಗೊಂಡ ೫೦ನೇ ವರ್ಷಾಚರಣೆಯ ಕಾರ್ಯಕ್ರಮವು ಬಹು ವಿಜ್ರಂಭಣೆಯಿಂದ ಜರುಗಿತು.
ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಾಲಾ ಕ್ರೀಡಾಂಗಣ ಆವರಣಕ್ಕೆ ಆಗಮಿಸಿದ ನಂತರ ತಹಶೀಲ್ದಾರ ಎಸ್.ಎಸ್.ನಾಯ್ಕಲಮಠ ಅವರು ಕನ್ನಡ ರಾಜ್ಯೋತ್ಸವದ ಧ್ವಜಾರೋಹಣವನ್ನು ರಾಷ್ಟ್ರಧ್ವಜದ ಆರೋಹಣ ನಂತರ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವರ್ಷ ಪೂರ್ತಿ ಕನ್ನಡ ಭಾಷೆಯ ಬಳಕೆಯಾಗಬೇಕು ಕರ್ನಾಟಕ ಏಕೀಕರಣದ ಮಹತ್ವವನ್ನು ನಾಡಿನ ಜನತೆಗೆ ಪರಿಚಯಿಸಬೇಕು ಇಂಗ್ಲೀಷ ವ್ಯಾಮೋಹ ಪದಗಳ ಬಳಕೆ ಕಡಿಮೆ ಮಾಡಿ ಕನ್ನಡ ಭಾಷೆಗೆ ಮಹತ್ವವನ್ನು ಸಾರುವ ಸಲುವಾಗಿ ಸರಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಆಡಳಿತ ಯಂತ್ರದೊಂದಿಗೆ ಸಾರ್ವಜನಿಕರು ಸಹಕರಿಸಿ ಕನ್ನಡ ರಾಜ್ಯೋತ್ಸವವನ್ನು ವರ್ಷ ಪೂರ್ತಿ ಅತ್ಯಂತ ವಿಜ್ರಂಬಣೆಯಿಂದ ಆಚರಿಸೋಣ ಎಂದು ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ರಾಜಶೇಖರ ಉಮರಾಣಿ ಶಿಕ್ಷಕರು ಮಾತನಾಡಿದರು.
ತಾಲೂಕಾ ಆಡಳಿತದ ಕಚೇರಿಗಳು ವಿವಿಧ ಕನ್ನಡಪರ ಸಂಘಟಣೆಗಳ ಪದಾದಿಕಾರಿಗಳು, ಸಂಘ ಸಂಸ್ಥೆಗಳ ಸದಸ್ಯರು, ಪಟ್ಟಣದ ಗಣ್ಯ ವ್ಯಕ್ತಿಗಳು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೀಳಗಿ ಘಟಕದ ವಾಯವ್ಯ ರಸ್ತೆ ಸಾರಿಗೆಯ ಹೊಸ ವಾಹನ ಕನ್ನಡ ಬಾವುಟದೊಂದಿಗೆ ಅಲಂಕೃತಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕನ್ನಡದ ಹಾಡುಗಳ ರಸದೌತಣವನ್ನು ಧ್ವನಿವರ್ಧಕದ ಮೂಲಕ ಕೇಳಿಸಿದ್ದು ಜನರ ಮನಸ್ಸಿಗೆ ಆನಂದವನ್ನು ತಂದಿತು.
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಉಮೇಶ ಚಲವಾದಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಪ್.ಬಿ.ಪಠಾಣ, ಪಟ್ಟಣ ಪಂಚಾಯತಿ ಸದಸ್ಯರಾದ ಚನಮಲ್ಲಪ್ಪ ಗಿಡ್ಡಪ್ಪಗೋಳ, ಅಪ್ಪಸಿ ಮಟ್ಯಾಳ, ಬಾಬು ಭಜಂತ್ರಿ, ನಿಂಗಪ್ಪ ಗಣಿ, ತೌಶಿಪ ಗಿರಗಾಂವಿ, ಶ್ರೀಶೈಲ ಮುಳವಾಡ, ವಿಜಯಮಹಾಂತೇಶ ಗಿಡ್ಡಪ್ಪಗೋಳ, ಸಿದ್ದಪ್ಪ ಗಣಿ, ರಾಜು ವಡ್ಡರ, ಅನೇಕ ಮಹಣಿಯರು ಉಪಸ್ಥಿತರಿದ್ದರು.
Related Posts
Add A Comment