ತಾಳಿಕೋಟಿ. ಕನ್ನಡ ನಾಡು- ನುಡಿ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಹೋರಾಡುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ಇದಕ್ಕಾಗಿ ನಾವೆಲ್ಲರೂ ಕಂಕಣಭದ್ಧರಾಗೋಣ ಎಂದು ಶಾಸಕ ಸಿ .ಎಸ್. ನಾಡಗೌಡ ಅಪ್ಪಾಜಿ ಹೇಳಿದರು.
ಬುಧವಾರ ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕ ಆಡಳಿತದ ವತಿಯಿಂದ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಾಡ ಧ್ವಜಾರೋಹಣ ನೆರವೇರಿಸಿ ನಂತರ ಅವರು ಮಾತನಾಡಿದರು.
ಕರ್ನಾಟಕದ ಅಖಂಡತೆಯನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ ಮಹಾತ್ಮ ಗಾಂಧೀಜಿಯವರು ದೇಶದ ಅಖಂಡತೆಯನ್ನು ಬಯಸಿದ್ದರು. ನಾವು ರಾಜಕೀಯ ಹಿತಾಸಕ್ತಿ ಗಳಿಗಾಗಿ ರಾಜ್ಯದ ಇಬ್ಬಾಗವನ್ನು ಬಯಸುವುದು ಸರಿಯಲ್ಲ. ಸಮಗ್ರ ಕರ್ನಾಟಕದ ಪ್ರಗತಿ ಹಾಗೂ ಅಭಿವೃದ್ಧಿ ನಮ್ಮೆಲ್ಲರ ಪರಿಕಲ್ಪನೆ ಆಗಬೇಕು. ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಹಾಗೂ ಐಟಿಬಿಟಿರಂಗದಲ್ಲಿ ವಿಶ್ವದ ಗಮನಸೆಳೆದ ರಾಜ್ಯವಾಗಿದೆ. ಇಂದಿನ ಯುವ ಪೀಳಿಗೆಗೆ ನಾಡಿನ ಈ ಸಂಸ್ಕೃತಿಯನ್ನು ವರ್ಗಾಯಿಸುವ ಅಗತ್ಯ ಇದೆ ಎಂದರು.
ಸಾಹಿತಿ ಅಶೋಕ ಹಂಚಲಿ ಮಾತನಾಡಿದರು.
ತಹಶೀಲ್ದಾರ್ ಕೀರ್ತಿ ಚಾಲಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಮಯದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಬಿರಾದಾರ, ಉಪ ತಹಸಿಲ್ದಾರ್ ಜೈನಾಪುರ, ಪುರಸಭೆ ಮುಖ್ಯ ಅಧಿಕಾರಿ ಮೋಹನ ಜಾದವ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್ .ಎಲ್. ಕೊಪ್ಪದ, ಕರವೇ ಜಿಲ್ಲಾ ಉಪಾಧ್ಯಕ್ಷ ಜೈ ಭೀಮ ಮುತ್ತಗಿ, ಮುಖಂಡರಾದ ಜಿ.ಎಸ್ .ಕಶಟ್ಟಿ, ಎಂ.ಜಿ. ಪಾಟೀಲ, ಎಸ್.ಬಿ. ಕಟ್ಟಿಮನಿ, ಸಿದ್ದನಗೌಡ ಪಾಟೀಲ, ಅಲ್ಲಾಭಕ್ಷ ನಮಾಜಕಟ್ಟಿ, ವಿಜಯಸಿಂಗ ಹಜೇರಿ, ಪ್ರಭುಗೌಡ ಮದರ್ಕಲ್, ಎಂ. ಕೆ. ಚೋರಗಸ್ತಿ, ಇಬ್ರಾಹಿಂ ಮನ್ಸೂರ, ಪ್ರಕಾಶ ಹಜೇರಿ, ಮಂಜುನಾಥ್ ಶೆಟ್ಟಿ, ರಾಘು ಚೌಹಾಣ್, ಮುದುಕಪ್ಪ ಬಡಿಗೇರ, ಶಿಕ್ಷಕ ರಾಜು ವಿಜಾಪುರ, ಇರಾಜ್ ಸರ್, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಕನ್ನಡಪರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ವಿವಿಧ ಇಲಾಖೆ ಅಧಿಕಾರಿಗಳು, ಪಟ್ಟಣದ ಗಣ್ಯರು, ಮತ್ತಿತರರು ಇದ್ದರು.
Related Posts
Add A Comment