Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಜಾರಿಗೊಳಿಸುತ್ತಿರುವ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಸೌಲಭ್ಯಕ್ಕಾಗಿ ೨೬ ವರ್ಗಗಳ ಅಸಂಘಟಿತ ಕಾರ್ಮಿಕರು ಈಗಾಗಲೇ ಗುರುತಿಸಿ ನೋಂದಾಯಿಸಲಾಗಿದ್ದು, ಹೊಸದಾಗಿ ಹಿಂದುಳಿದ ವರ್ಗಗಗಳ ಪ್ರವರ್ಗ -೧,೨ಎ,೩ಎ ಮತ್ತು ೩ಬಿಗೆ ಸೇರಿದ ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ ೩೮ ವರ್ಗಗಳು ಹಾಗೂ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಪಂಗಡಗಳ ಕುಲಕಸುಬಿನಲ್ಲಿ ತೊಡಗಿರುವ ೨೭ ವರ್ಗಗಳ ಕಾರ್ಮಿಕರು ಒಳಗೊಂಡಂತೆ ೬೫ ಅಸಂಘಟಿತ ಕಾರ್ಮಿಕರನ್ನು ಹೊಸದಾಗಿ ಸೇರ್ಪಡೆ ಂಆಡಿ ಒಟ್ಟಾರೆ ೯೧ ವರ್ಗಗಳ ಅಸಂಘಟಿತ ಕಾರ್ಮಿಕರ ಸೌಲಭ್ಯ ಪಡೆಯಲು ಆನಲೈನ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.ಅಂಬೇಡ್ಕರ ಕಾರ್ಮಿಕ ಸಹಾಯ ಹಸ್ತ ಯೋಜನೆಯ ಸೌಲಭ್ಯದ ನೋಂದಣಿಗಾಗಿ ಇರಬೇಕಾದ ಅರ್ಹತೆ ರಾಜ್ಯದ ನಿವಾಸಿಗಳಾಗಿರಬೇಕು. ಅರ್ಜಿದಾರರು ೧೮ ರಿಂದ ೬೦ ವರ್ಷದವರಾಗಿರಬೇಕು. ಆದಾಯ ತೆರಗೆ ಪಾವತಿದಾರರಾಗಿರಬಾರದು. ಇಎಸ್‌ಐ ಮತ್ತು ಇಪಿಎಫ್ ಸೌಲಭ್ಯ ಹೊಂದಿರಬಾರದು.\ಪಾಸ್ ಫೋರ್ಟ್ ಅಳತೆಯ ಇತ್ತೀಚಿನ ಭವಚಿತ್ರ, ವಯಸ್ಸಿನ ಪ್ರಮಾಣ ಪತ್ರಕ್ಕಾಗಿ ಆಧಾರ ಕಾರ್ಡ್, ಶಾಲಾ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಏಪ್ರಿಲ್ ೧೪ರಂದು ನಗರದ ಬಿ.ಆರ್.ಅಂಬೇಡ್ಕರ್ ವೃತ್ತದ ಮುಂಭಾಗದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ೧೩೪ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೮ ಗಂಟೆಗೆ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನಡೆಯಲಿದ್ದು, ನಗರದ ಬುದ್ಧವಿಹಾರ ಜಲನಗರದಿಂದ ಬಾಗಲಕೋಟೆ ಕ್ರಾಸ್, ಮಹಾತ್ಮಾ ಗಾಂಧೀ ವೃತ್ತದಿಂದ ಡಾ. ಬಿ.ಆರ್ ಅಂಬೇಡ್ಕರ್ ಭವನದವರೆಗೆ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಶಿಲೆಯಲ್ಲಿ ಕೆತ್ತಿಸಿದ ಸಂವಿಧಾನ ಪೀಠಿಕೆಯ ಉದ್ಘಾಟನಾ ಕಾರ್ಯಕ್ರಮ ನಗರದ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂದು ಬೆಳಿಗ್ಗೆ ೧೦ಕ್ಕೆ ನಡೆಯಲಿದೆ.ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿನ ನವೀಕರಿಸಿದ ಗ್ರಂಥಾಲಯ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಅವರ ಕುರಿತ ಸಂದೇಶ ಸಾರುವ ಛಾಯಾಚಿತ್ರಗಳ ಅನಾವರಣ ಹಾಗೂ ಜಯಂತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ ೧೦:೩೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮವನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ ಅವಧಿಯನ್ನು ದಿನಾಂಕ : ೦೧-೦೫-೨೦೨೫ರವರೆಗೆ ಹಾಗೂ ರೈತರ ನೊಂದಣಿ ಅವಧಿಯನ್ನು ದಿನಾಂಕ : ೨೫-೦೪-೨೦೨೫ರವರೆಗೆ ವಿಸ್ತರಿಸಲಾಗಿದೆ ಎಂದು ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.ಪ್ರತಿ ಕ್ವಿಂಟಾಲ್‌ಗೆ ೭೫೫೦ ರೂ. ಜೊತೆಗೆ ರಾಜ್ಯ ಸರ್ಕಾರದ ಪ್ರೊತ್ಸಾಹಧನ ಪ್ರತಿ ಕ್ವಿಂಟಾಲ್‌ಗೆ ೪೫೦ ರೂ. ಸೇರಿದಂತೆ ಒಟ್ಟು ೮೦೦೦ ರೂ. ಪ್ರತಿ ಕ್ವಿಂಟಾಲ್‌ಗೆ ಖರೀದಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ತೊಗರಿ ಬೆಳೆದ ರೈತರು ತಮ್ಮ ಸಮೀಪದ ಪಿಎಸಿಎಸ್, ಟಿಎಪಿಸಿಎಂಎಸ್, ಎಫ್‌ಪಿಓ ಸಂಘಗಳಲ್ಲಿ ನೊಂದಣಿ ಮಾಡಿಸಿ ತೊಗರಿ ಮಾರಾಟ ಮಾಡಿ, ಬೆಂಬಲ ಬೆಲೆ ಸದುಪಯೋಗ ಪಡೆದುಕೊಳ್ಳುವಂತೆ ಕನಿಷ್ಠ ಬೆಂಬಲ ಬಲೆ ಕಾರ್ಯಪಡೆ ಸಮಿತಿ ಅಧ್ಯಕ್ಷರೂ ಆದ ವಿಜಯಪುರ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಲ್ಲಿಯ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿದ್ದ ಮತ್ತು ಈಗ ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಭಾಗದ ವಿಜ್ಞಾನಿ ಹಾಗೂ ಸಹಾಯಕ ಪ್ರಾಧ್ಯಾಪಕರಾಗಿರುವ ಹರೀಶ್.ಡಿ.ಕೆ. ಅವರು “ನ್ಯಾನೋ ಗೊಬ್ಬರಗಳಿಗೆ ವಿಶೇಷ ಒತ್ತು ನೀಡುವ ಮೂಲಕ ಈರುಳ್ಳಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ನೀಡಿದೆ.ಧಾರವಾಡ ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ.ಎಸ್.ಜಿ.ಅಂಗಡಿ ಅವರ ಮಾರ್ಗದರ್ಶನದಲ್ಲಿ ಹರೀಶ್ ಡಿ.ಕೆ. ಅವರು ಸಂಶೋಧನೆ ಕೈಕೊಂಡು ಮಹಾಪ್ರಬಂಧ ಸಿದ್ದಪಡಿಸಿದ್ದರು. ಈ ಮಹಾಪ್ರಬಂಧವನ್ನು ಮೌಲ್ಯಮಾಪನ ಮಾಡಿದ ತಜ್ಞರು ನೀಡಿದ ಸಕಾರಾತ್ಮಕ ವರದಿಯನ್ನು ಪರಿಗಣಿಸಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯ ಡಾ.ಹರೀಶ್ ಡಿ.ಕೆ. ಅವರಿಗೆ ಪಿಎಚ್‌ಡಿ ಪದವಿ ನೀಡಿ ಅಧಿಸೂಚನೆ ಹೊರಡಿಸಿದೆ.

Read More

ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ 5 ಲಕ್ಷ ರೂ. ಚೆಕ್ ವಿತರಿಸಿದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಬಬಲೇಶ್ವರ ಉದಯರಶ್ಮಿ ದಿನಪತ್ರಿಕೆ ಧಾರವಾಡ: ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಕರ್ನಾಟಕ ಪೊಲೀಸ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಯನ್ನು ಪರಿಶೀಲಿಸಿದರು.ಪೋಲಿಸ್ ಇಲಾಖೆಯ ಸಿಬ್ಬಂದಿಯ ಮಕ್ಕಳಿಗಾಗಿ ನಿರ್ಮಾಣಗೊಂಡಿರುವ ರಾಜ್ಯದ ಮೊದಲ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಪ್ರತಿಷ್ಠಿತ ಶಾಲೆಯ ವಿಶಿಷ್ಟ ಚಟುವಟಿಕೆಗಳ ಬಗ್ಗೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ರವರು ಅಧ್ಯಕ್ಷ ಬಬಲೇಶ್ವರ ಅವರಿಗೆ ಸಮಗ್ರ ಮಾಹಿತಿ ಒದಗಿಸಿದರು.ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಬರಮನಿ, ಸಿಪಿಐ ಮುರುಗೇಶ್ ಚೆನ್ನಣ್ಣವರ್ ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಪರವಾಗಿ ಧಾರವಾಡ ಜಿಲ್ಲೆಯಾದ್ಯಂತ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಸಹಯೋಗದೊಂದಿಗೆ, “ಡ್ರಗ್ಸ್ ಅವೇರ್ನೆಸ್ ಪ್ರೋಗ್ರಾಮನ್ನು” ರೂಪಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಯಿತು.ಗೃಹ ಸಚಿವರ…

Read More

ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ಹಾಸನದಲ್ಲಿ ಏ.12 ಮತ್ತು 13ರಂದು ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಪತ್ರಕರ್ತರ ಕ್ರಿಕೇಟ್ ಕ್ರೀಡಾಕೂಟದ ಲಾಂಛನವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಿ, ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಡಿಸಿಎಂ ಮಾಧ್ಯಮ ಸಲಹೆಗಾರ ಪಿ.ತ್ಯಾಗರಾಜ್ , ಜಾಹೀರಾತು ಪರಿಶೀಲನಾ ಸಮಿತಿ ಅಧ್ಯಕ್ಷ ರಮೇಶ್ ಬಾಬು ಇದ್ದರು.

Read More

ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕು,ದ.ಕ ಜಿಲ್ಲೆ ೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಧನಾತ್ಮಕವಾದ ಚಿಂತನೆಯು ವ್ಯಕ್ತಿಯೊಬ್ಬನಿಗೆ ತನ್ನ ಹುಟ್ಟಿನಿಂದಲೇ ಬರುವ ವರವಂತೂ ಖಂಡಿತಾ ಅಲ್ಲ. ಅದೇ ರೀತಿ ಧನಾತ್ಮಕ ಚಿಂತನೆಯ ವ್ಯಕ್ತಿಗಳು ಹುಟ್ಟಿನಿಂದಲೆ ಧನಾತ್ಮಕ ಚಿಂತಕರಾಗಿ ಹುಟ್ಟಿರುವುದಿಲ್ಲ. ಅದು ವ್ಯಕ್ತಿಗೆ ಗುರುಗಳು ಅಥವಾ ಆತನ ಜೀವನವು ಕಲಿಸಿಕೊಟ್ಟ ಒಂದು ಪಾಠವಾಗಿರುತ್ತದೆ. ಧನಾತ್ಕ ಚಿಂತನೆಯು ಸಾಮಾನ್ಯವಾಗಿ ಎಲ್ಲರ ತರ್ಕ ಅಥವಾ ಮನೋಭಾವ ಎಂದರೆ ತಪ್ಪಾಗಲಾರದು. ಅಥವಾ ವ್ಯಕ್ತಿಯೊಬ್ಬ ಯಾವುದೇ ಒಂದು ಸನ್ನಿವೇಶವನ್ನು ನೋಡುವ ಮತ್ತು ಅದನ್ನು ಸ್ವೀಕರಿಸುವ ರೀತಿಯೇ ಆಗಿದೆ. ಧನಾತ್ಮಕ ಚಿಂತನೆ ಯಾರಲ್ಲಿ ಇದನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇದೆಯೋ ಅವರನ್ನು ಆಧರಿಸಿರುತ್ತದೆ.ನಾನು ಮಾಡುವ ಯಾವ ಕೆಲಸವೂ ಯಶಸ್ವಿ ಆಗುವುದಿಲ್ಲ, ನನ್ನಿಂದ ನನ್ನ ಮುಂದೆ ಇರುವ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ. ನಾನು ಯಾವುದಕ್ಕೂ ಲಾಯಕ್ಕಲ್ಲ ಎನ್ನುವಂತಹ ಋಣಾತ್ಮಕವಾಗಿ (ನೆಗೆಟಿವ್) ಯೋಚನೆ ಮಾಡುವ ಬದಲಿಗೆ ಈ ಎಲ್ಲಾ ಸನ್ನಿವೇಶಗಳನ್ನು ತದ್ವಿರುದ್ಧವಾಗಿ ಯೋಚಿಸುವುದೇ ಧನಾತ್ಮಕ ಚಿಂತನೆ. ಮನಸ್ಸಿನಲ್ಲಿ ಬರುವ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬೆನಕಟ್ಟಿ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿ.ಯು. ಫಲಿತಾಂಶದಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದ್ದಾರೆ.ಪರೀಕ್ಷೆಗೆ ಹಾಜರಾದ ಒಟ್ಟು ೨೬೪ ವಿದ್ಯಾರ್ಥಿಗಳಲ್ಲಿ ೯೪ ಡಿಸ್ಟಿಂಕ್ಷನ್, ೧೫೦ ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿದ್ದಾರೆ. ರಕ್ಷಿತಾ ಸಿಕೇದ್(ಶೇ ೯೭.೬೬) ಕಾಲೇಜಿಗೆ ಪ್ರಥಮ ಮತ್ತು ಜಿಲ್ಲೆಗೆ ತೃತೀಯ, ಶ್ರಾವಣಿ ಬಿರಾದಾರ(ಶೇ.೯೭.೫) ದ್ವಿತೀಯ ಮತ್ತು ಜಿಲ್ಲೆಗೆ ನಾಲ್ಕನೇ ಸ್ಥಾನ, ಸನ್ಮತಿ ತುಪ್ಪದ (ಶೇ ೯೬.೫)ತೃತೀಯ, ಪೂಜಾ ಪವಾರ (ಶೇ ೯೬.೧೬) ನಾಲ್ಕನೇಯ ಸ್ಥಾನ ಹಾಗೂ ಕೀರ್ತಿ ಗಾಯಕವಾಡ (ಶೇ ೯೬) ಐದನೇ ಸ್ಥಾನ ಗಳಿಸಿದ್ದಾರೆ.ಕಾಲೇಜಿನ ವಿದ್ಯಾರ್ಥಿಗಳು ಭೌತಶಾಸ್ತ್ರದಲ್ಲಿ ಮೂವರು, ರಸಾಯನ ಶಾಸ್ತ್ರದಲ್ಲಿ ಇಬ್ಬರು, ಗಣಿತದಲ್ಲಿ ಹನ್ನೆರಡು, ಜೀವಶಾಸ್ತ್ರದಲ್ಲಿ ನಾಲ್ವರು, ಗಣಕಶಾಸ್ತ್ರದಲ್ಲಿ ಮೂವರು, ಕನ್ನಡದಲ್ಲಿ ಎಂಟು ಹಾಗೂ ಸಂಸ್ಕೃತ ವಿಷÀಯದಲ್ಲಿ ಐವರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರ ಈ ಸಾಧನೆಗೆ ಕಾಲೇಜಿನ ಅಧ್ಯಕ್ಷ ಆರ್.ವಿ.ಬೆನಕಟ್ಟಿ, ಕಾರ್ಯದರ್ಶಿ ಹೇಮಲತಾ ಬೆನಕಟ್ಟಿ, ಪ್ರಾಚಾರ್ಯ ಸೂರಜ್ ಉಮದಿ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಮೇ.೧೮ ರಂದು ಪಟ್ಟಣದ ಅಭ್ಯುದಯ ಕಾಲೇಜು ಆವರಣದಲ್ಲಿ ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದೆ ಆಸಕ್ತರು ಹೆಸರನ್ನು ನೊಂದಾಯಿಸಿಕೊಳ್ಳಬಹುದು ಎಂದು ಅಹಿಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ತಿಳಿಸಿದರು.ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನನ್ನ ಜೇಷ್ಠ ಸುಪುತ್ರ ಕಿರಣ ಮದರಿ ಕಲ್ಯಾಣೋತ್ಸವದ ಅಂಗವಾಗಿ ಈ ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡಿದ್ದೇನೆ. ವರನಿಗೆ ೨೧ ವರ್ಷ ಮತ್ತು ವಧುವಿಗೆ ೧೮ ವರ್ಷ ಪೂರ್ಣಗೊಂಡಿದ್ದು ಸಾಮೂಹಿಕವಾಗಿ ಮದುವೆಯಾಗಲು ಇಚ್ಛಿಸುವವರು ವಧು-ವರರ ೩ ಭಾವಚಿತ್ರಗಳು, ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ, ಶಾಲಾ ದೃಢೀಕರಣ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಮತ್ತು ಗುರುತಿನ ಚೀಟಿಯೊಂದಿಗೆ ಎ.೩೦ ರ ಒಳಗಾಗಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಮೊ: ೯೯೮೦೫೨೯೭೭೨, ೯೯೮೦೩೯೪೭೧೦, ೯೯೦೨೨೬೩೫೪೮, ೮೯೦೪೦೧೦೦೭೮, ೯೯೪೫೩೬೬೬೩೦, ೯೪೮೧೦೮೧೫೮೮ ಮತ್ತು ೭೪೧೧೭೭೩೪೧೪

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಮಹಾವೀರ ಜಯಂತಿಯನ್ನು ಆಚರಿಸಲಾಯಿತು.ಈ ವೇಳೆ ಕಾಲೇಜಿನ ಪ್ರಾಚಾರ್ಯ ಎ.ಕೆ.ಹುನಗುಂದ, ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ, ಆಂಗ್ಲಮಾಧ್ಯಮ ಮುಖ್ಯ ಗುರುಮಾತೆ ರಂಜಿತಾ ಭಟ್ಟ, ಬೋಧಕರಾದ ಅಂಜನಾ ದೇಶಪಾಂಡೆ, ವಿ.ವಿ.ಪಾಟೀಲ್, ಎಸ್.ಎಸ್.ಹೂಗಾರ, ರಮಾದೇವಿ ಮುತಾಲೀಕ್, ಪ್ರಿಯಾಂಕ ಕುಲಕರ್ಣಿ, ಅನ್ನಪೂರ್ಣ ಹೊಸಮನಿ, ಶೋಭಾ ನಾಗೂರ, ಪ್ರದೀಪ ಜಗ್ಗಲ್, ರೂಪಾ ನಾಟೇಕರ್ ಸೇರಿದಂತೆ ಹಲವರು ಇದ್ದರು.

Read More