Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 05, 2026

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ಬೇಡ

ಉಚಿತ ಬಸ್ ಪಾಸ್ ಶುಲ್ಕ ಮರುಪಾವತಿಗೆ ನೋಂದಣಿಗೆ ಅವಕಾಶ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಧನಾತ್ಮಕ ಯೋಚನೆ ನಾನೂ ಮಾಡಬಹುದೇ?
ವಿಶೇಷ ಲೇಖನ

ಧನಾತ್ಮಕ ಯೋಚನೆ ನಾನೂ ಮಾಡಬಹುದೇ?

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು,
ದ.ಕ ಜಿಲ್ಲೆ ೫೭೪೧೯೮
ದೂ: ೯೭೪೨೮೮೪೧೬೦

ಉದಯರಶ್ಮಿ ದಿನಪತ್ರಿಕೆ

ಧನಾತ್ಮಕವಾದ ಚಿಂತನೆಯು ವ್ಯಕ್ತಿಯೊಬ್ಬನಿಗೆ ತನ್ನ ಹುಟ್ಟಿನಿಂದಲೇ ಬರುವ ವರವಂತೂ ಖಂಡಿತಾ ಅಲ್ಲ. ಅದೇ ರೀತಿ ಧನಾತ್ಮಕ ಚಿಂತನೆಯ ವ್ಯಕ್ತಿಗಳು ಹುಟ್ಟಿನಿಂದಲೆ ಧನಾತ್ಮಕ ಚಿಂತಕರಾಗಿ ಹುಟ್ಟಿರುವುದಿಲ್ಲ. ಅದು ವ್ಯಕ್ತಿಗೆ ಗುರುಗಳು ಅಥವಾ ಆತನ ಜೀವನವು ಕಲಿಸಿಕೊಟ್ಟ ಒಂದು ಪಾಠವಾಗಿರುತ್ತದೆ. ಧನಾತ್ಕ ಚಿಂತನೆಯು ಸಾಮಾನ್ಯವಾಗಿ ಎಲ್ಲರ ತರ್ಕ ಅಥವಾ ಮನೋಭಾವ ಎಂದರೆ ತಪ್ಪಾಗಲಾರದು. ಅಥವಾ ವ್ಯಕ್ತಿಯೊಬ್ಬ ಯಾವುದೇ ಒಂದು ಸನ್ನಿವೇಶವನ್ನು ನೋಡುವ ಮತ್ತು ಅದನ್ನು ಸ್ವೀಕರಿಸುವ ರೀತಿಯೇ ಆಗಿದೆ. ಧನಾತ್ಮಕ ಚಿಂತನೆ ಯಾರಲ್ಲಿ ಇದನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇದೆಯೋ ಅವರನ್ನು ಆಧರಿಸಿರುತ್ತದೆ.
ನಾನು ಮಾಡುವ ಯಾವ ಕೆಲಸವೂ ಯಶಸ್ವಿ ಆಗುವುದಿಲ್ಲ, ನನ್ನಿಂದ ನನ್ನ ಮುಂದೆ ಇರುವ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ. ನಾನು ಯಾವುದಕ್ಕೂ ಲಾಯಕ್ಕಲ್ಲ ಎನ್ನುವಂತಹ ಋಣಾತ್ಮಕವಾಗಿ (ನೆಗೆಟಿವ್) ಯೋಚನೆ ಮಾಡುವ ಬದಲಿಗೆ ಈ ಎಲ್ಲಾ ಸನ್ನಿವೇಶಗಳನ್ನು ತದ್ವಿರುದ್ಧವಾಗಿ ಯೋಚಿಸುವುದೇ ಧನಾತ್ಮಕ ಚಿಂತನೆ. ಮನಸ್ಸಿನಲ್ಲಿ ಬರುವ ಋಣಾತ್ಮಕ ಚಿಂತನೆಯನ್ನು ತೊಡೆದು ಹಾಕಿ ಧನಾತ್ಮಕ ಚಿಂತನೆಯನ್ನು ನಮ್ಮಲ್ಲಿ ಹುಟ್ಟುಹಾಕಲು ಕೆಲವು ಸಲಹೆಗಳಿವೆ. ಅವುಗಳೆಂದರೆ,


ವರ್ತನೆಗಳನ್ನು ನಿಗ್ರಹಿಸಿ ಅಥವಾ ನಿಯಂತ್ರಿಸಿ
ಕೆಲವೊಂದು ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಋಣಾತ್ಮಕವಾದ ಚಿಂತನೆಯನ್ನು ಮಾಡದೇ, ನನ್ನ ಈ ನಿರ್ಧಾರದಿಂದ ಒಳ್ಳೆಯದೇ ಆಗುತ್ತದೆ ಎನ್ನುವ ನಂಬಿಕೆಯು ವ್ಯಕ್ತಿಯ ಜೀವನದ ದೃಷ್ಟಿಕೋನವನ್ನು ರೂಪಿಸುತ್ತದೆ. ಒಂದಷ್ಟು ಮಂದಿಯು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಪ್ಪುಗಳನ್ನು ಮಾಡುತ್ತಾರೆ. ಅಥವಾ ತಮ್ಮ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರುವಾಗ ಅವುಗಳನ್ನು ಸಮರ್ಪಕವಾಗಿ ನಿರ್ದೇಶಿಸುವಲ್ಲಿ ತಾವೇ ಎಡವುತ್ತಾರೆ. ಹಾಗಾಗಿ ವ್ಯಕ್ತಿಯು ಇಂತಹ ತಪ್ಪುಗಳು ತಾನು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಆಗದಂತೆ ಕಾಳಜಿವಹಿಸಬೇಕು.
ಧ್ಯಾನವು ಚಿಂತನಾ ಲಹರಿಯನ್ನು ಬದಲಾಯಿಸುತ್ತದೆ
ವೇದಗಳ ಕಾಲದಲ್ಲಿ ಋಷಿ ಮುನಿಗಳು ನಿರ್ದಿಷ್ಟ ವಿಚಾರದಲ್ಲಿನ ಯಶಸ್ಸಿಗಾಗಿ ವರ್ಷಾನುಗಟ್ಟಲೆ ಧ್ಯಾನದಲ್ಲಿ ತೊಡಗಿರುತ್ತಿದ್ದರು. ಆಧುನಿಕ ಹಿಂದಿನ ಯುಗದಲ್ಲೂ ವೇದಗಳ ಕಾಲದ ಪದ್ಧತಿಯನ್ನೇ ಅನುಸರಿಸುವ ಅಗತ್ಯವಿದ್ದು, ಧ್ಯಾನದ ಮೊರೆ ಹೋಗುವುದು ಅವಶ್ಯಕವಾಗಿದೆ. ಅಧ್ಯಯನಗಳ ಪ್ರಕಾರ ಧ್ಯಾನವನ್ನು ಮಾಡಿದಾಗ ಮನುಷ್ಯನ ಮನಸ್ಸಿನ ಚಿಂತನೆಯು ನಿರ್ದಿಷ್ಟವಾದ ವಿಚಾರದಲ್ಲೆ ಕೇಂದ್ರೀಕೃತವಾಗಿ ಇರುತ್ತದೆ. ಇದರಿಮದ ವ್ಯಕ್ತಿಯ ದೇಹ ಹಾಗೂ ಮನಸ್ಸಿನೊಳಗೆ ನಿರ್ದಿಷ್ಟವಾದ ಶಕ್ತಿಯ ಪಸರಿಸುವಿಕೆ ಆರಂಭವಾಗುತ್ತದೆ. ಈ ವಿಶೇಷ ಶಕ್ತಿಯು ವ್ಯಕ್ತಿಯ ಜೀವನದಲ್ಲಿ ಬರುವ ಸಮಸ್ಯೆಗಳ ಪರಿಣಾಮಗಳನ್ನು ತಡೆದುಕೊಳ್ಳುವ ಮತ್ತು ಸಮಸ್ಯೆಗಳನ್ನು ಗೆಲ್ಲುವಲ್ಲಿ ಸಹಾಯ ಮಾಡುತ್ತದೆ. ದಿನದಲ್ಲಿ ಸುಮಾರು ೧೦-೧೫ ನಿಮಿಷಗಳ ಕಾಲ ಏಕಾಂತವಿರುವ ಮತ್ತು ಶಾಂತವಾದ ಕೊಠಡಿಯಲ್ಲಿ ಕಣ್ಣು ಮುಚ್ಚಿ ಕುಳಿತು ಉಸಿರನ್ನು ಶ್ವಾಸಕೋಶದ ಒಳಗೆ ನಿಧಾನವಾಗಿ ಎಳೆದುಕೊಂಡು ಸಾಧ್ಯವಾದಷ್ಟು ಹೊತ್ತು ಉಸಿರನ್ನು ಶ್ವಾಸಕೋಶದ ಒಳಗೆ ಹಿಡಿದಿಟ್ಟುಕೊಮಡು ನಿಧಾನವಾಗಿ ಶ್ವಾಸವನ್ನು ಹೊರಬಿಡುವ ಕ್ರಿಯೆಯನ್ನು ಮಾಡಬೇಕು. ಪ್ರಾರಂಭದಲ್ಲಿ ತುಸು ಕಷ್ಟ ಎಂದು ಎನಿಸಿದರೂ ನಂತರ ಅಭ್ಯಾಸವಾಗಿ ಬಿಡುತ್ತದೆ.


ಧನಾತ್ಮಕ ಚಿಂತನೆಗಳು ತುಂಬಿರುವ ವ್ಯಕ್ತಿಗಳ ಭೇಟಿ
ಈ ಭೂಮಿಯಲ್ಲಿ ಇರುವ ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಕಲಿಯಬಹುದಾದ ಮತ್ತು ಅಳವಡಿಸಿಕೊಳ್ಳಬಹುದಾದ ವಿಷಯಗಳು ಇರುತ್ತವೆ. ಹೀಗಿರುವಾಗ ಧನಾತ್ಮಕವಾದ ಚಿಂತನೆಗಳು ಮತ್ತು ಧನಾತ್ಮಕವಾಗಿ ಬದುಕುತ್ತಾ ಇರುವ ವ್ಯಕ್ತಿಗಳನ್ನು ಆಗಾಗ ಭೇಟಿ ಮಾಡಿ, ನಮ್ಮ ಬದುಕಿನ ಗುರಿಗಳನ್ನು ಸಾಧಿಸಲು ಯಾವ ರೀತಿಯಾಗಿ ಧನಾತ್ಮಕವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಅವರಲ್ಲಿ ಚರ್ಚೆಯನ್ನು ಮಾಡಬೇಕು. ಎಲ್ಲವನ್ನೂ ಋಣಾತ್ಮಕವಾಗಿ ನೋಡುವವರು ಮತ್ತು ಯೋಚಿಸುವವರು ನಮ್ಮಲ್ಲಿರುವ ಕೊಂಚಿತ್ತು ಸಕಾರಾತ್ಮಕ ಮನೋಭಾವವನ್ನೂ ಹಾಳು ಮಾಡಬಹುದು. ಆದ್ದರಿಂದ ವ್ಯಕ್ತಿಗಳ ಆಯ್ಕೆಯಲ್ಲಿ ಎಚ್ಚರ ವಹಿಸಬೇಕು.
ಜೀವನದ ಗುರಿಗೆ ಸದಾ ಬದ್ಧರಾಗಿರಬೇಕು
ವ್ಯಕ್ತಿಯೊಬ್ಬನ ಜೀವನದ ಗುರಿಯು ಸ್ಪಷ್ಟವಾಗಿ ಇರಬೇಕಲ್ಲದೇ ಆ ಗುರಿಯನ್ನು ತಲುಪುವುದು ಕಷ್ಟ ಎಂಬ ವಿಚಾರವನ್ನು ಮನಸ್ಸಿನ ಮೂಲೆಯಲ್ಲೂ ತಂದುಕೊಳ್ಳಬಾರದು. ಗುರಿಯನ್ನು ತಲುಪುವುದಕ್ಕಾಗಿ ಸತತವಾದ ಪ್ರಯತ್ನವನ್ನು ಮಾಡುತ್ತಾ ಇರಬೇಕು. ಇದರಿಂದ ಬದುಕಿನ ದೃಷ್ಟಿಕೋನವೂ ಧನಾತ್ಮಕವಾಗಿ ಬದಲಾಗುತ್ತದೆ. ಒಂದು ಪ್ರಯತ್ನದಲ್ಲಿ ವಿಫಲರಾದರೆ ಮತ್ತೊಂದು ಬಾರಿ, ಮೊಗದೊಂದು ಬಾರಿ ಹೀಗೆ ನಿರಂತರವಾದ ಪ್ರಯತ್ನವನ್ನು ಮಾಡುತ್ತಲೇ ಇರಬೇಕು. ಇದರಿಂದ ಸೋಲುವ ಭಯವು ದೂರವಾಗಿ ಗೆಲ್ಲುವ ಛಲವು ಮೂಡಿ ಗುರಿಯನ್ನು ಸುಲಭವಾಗಿ ಸಾಧಿಸಬಹುದು.
ಬದುಕಿನ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕು
ಹಲವು ರೀತಿಯ ಸಂದರ್ಭ ಮತ್ತು ಸನ್ನಿವೇಶಗಳಿಗೆ ನಾವು ಪ್ರತಿಕ್ರಿಯಿಸುವ ರೀತಿಯು ನಮ್ಮ ಚಿಂತನೆಯನ್ನು ಅವಲಂಬಿಸಿ ಇರುತ್ತದೆ. ಎಲ್ಲಾ ವಿಷಯಗಳಿಗೂ ಧನಾತ್ಮಕವಾಗಿಯೇ ಪ್ರತಿಕ್ರಿಯಿಸುವುದರಿಂದ ಭವಿಷ್ಯದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವುದಲ್ಲದೇ ಕೈಗೆತ್ತಿಕೊಳ್ಳುವ ಯಾವುದೇ ಕೆಲಸವಿರಲಿ ಅದು ಸಲೀಸಾಗಿ ಆಗುವಂತೆ ಮಾಡುತ್ತದೆ. ಋಣಾತ್ಮಕವಾದ ಯೋಚನೆಗಳು ಭವಿಷ್ಯದ ಎಲ್ಲಾ ಕೆಲಸಗಳನ್ನು ಕಠಿಣವಾಗುವಂತೆ ಮಾಡುತ್ತದೆ. ಆದ್ದರಿಂದ ಬದುಕಿನ ದೃಷ್ಟಿಕೋನವನ್ನು ಬದಲಾಯಿಸಿಕೊಂಡು ಪ್ರತಿಯೊಂದನ್ನೂ ವಿನೂತನವಾಗಿ ನೋಡಿದಾಗ ನಮ್ಮ ಯೋಚನೆಗಳನ್ನು ಧನಾತ್ಮಕ ಮಾಡಿಕೊಳ್ಳಬಹುದು.
ಆಗಿಂದಾಗ್ಗೆ ವರ್ತನೆಯನ್ನು ವಿಮರ್ಷಿಸಿಕೊಳ್ಳಬೇಕು
ಮನುಷ್ಯನ ಪ್ರಮುಖ ಗುಣಗಳ ಪೈಕಿ ಹೊಸ ಬದಲಾವಣೆಯನ್ನು ವಿರೋಧಿಸುವುದೂ ಒಂದು. ಅದೇ ರೀತಿ ವ್ಯಕ್ತಿಯೊಬ್ಬನು ತನ್ನ ಪ್ರತಿಯೊಂದು ವರ್ತನೆಯನ್ನೂ ಪ್ರಶ್ನಿಸುತ್ತಾ ವಿಮರ್ಷೆ ಮಾಡಿದರೆ ನಮ್ಮಲ್ಲಿ ಧನಾತ್ಮಕವಾದ ಚಿಂತನೆಗಳು ಮೂಡುತ್ತವೆ. ಇದರಿಂದ ವ್ಯಕ್ತಿಯ ಹಲವು ಆಂತರಿಕ ಸಮಸ್ಯೆ ಮತ್ತು ದುಗುಡಗಳು ನಿವಾರಣೆಯಾಗಿ ನಮ್ಮನ್ನು ಮತ್ತಷ್ಟು ಉತ್ಸಾಹದಿಂದ ಇರುವಂತೆ ಮಾಡಿ ಸದಾ ನಮ್ಮನ್ನು ಧನಾತ್ಮಕವಾಗಿ ಚಿಂತಿಸುವಂತೆ ಪ್ರೇರೇಪಿಸುತ್ತದೆ.
ಧನಾತ್ಮಕವಾದ ಯೋಚನೆಯು ಧನಾತ್ಮಕ ವಾತಾವರಣವನ್ನು, ಋಣಾತ್ಮಕವಾದ ಯೋಚನೆಯು ಋಣಾತ್ಮಕ ವಾತಾವರಣವನ್ನು ನಮ್ಮ ಸುತ್ತಲೂ ನಿರ್ಮಿಸುತ್ತದೆ ಎನ್ನುವುದನ್ನು ಮರೆಯಬಾರದು. ಪ್ರತಿಯೊಂದು ಸಂದರ್ಭಗಳಲ್ಲೂ ಧನಾತ್ಮಕವಾಗಿ ಯೋಚನೆಯನ್ನು ಮಾಡುವುದರಿಂದ ಬದುಕಿನ ಎಲ್ಲಾ ಕಠಿಣ ಕೆಲಸಗಳನ್ನು ಪೂರೈಸಿಕೊಂಡು, ಸವಾಲುಗಳನ್ನು ಸುಲಭವಾಗಿ ಮೆಟ್ಟಿನಿಂತು ಕೊನೆಗೆ ಮೌಲ್ಯಯುತ ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 05, 2026

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ಬೇಡ

ಉಚಿತ ಬಸ್ ಪಾಸ್ ಶುಲ್ಕ ಮರುಪಾವತಿಗೆ ನೋಂದಣಿಗೆ ಅವಕಾಶ

ಜು.೭ರಂದು ಉದ್ಯಮಶೀಲತಾ ಅರಿವು ಕಾರ್ಯಕ್ರಮ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 05, 2026
    In ದಿನಪತ್ರಿಕೆ
  • ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ಬೇಡ
    In (ರಾಜ್ಯ ) ಜಿಲ್ಲೆ
  • ಉಚಿತ ಬಸ್ ಪಾಸ್ ಶುಲ್ಕ ಮರುಪಾವತಿಗೆ ನೋಂದಣಿಗೆ ಅವಕಾಶ
    In (ರಾಜ್ಯ ) ಜಿಲ್ಲೆ
  • ಜು.೭ರಂದು ಉದ್ಯಮಶೀಲತಾ ಅರಿವು ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಯುಪಿಎಸ್‌ಸಿ ಪರೀಕ್ಷೆಯ ತರಬೇತಿಗಾಗಿ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ನಿವೃತ್ತ ಸೈನಿಕ ಕಾಶೀರಾಯ ಸನ್ಮಾನ ಇಂದು
    In (ರಾಜ್ಯ ) ಜಿಲ್ಲೆ
  • ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗುವವರೇ ಶಿಕ್ಷಕರು
    In (ರಾಜ್ಯ ) ಜಿಲ್ಲೆ
  • ಯಾಳವಾರ: ಪ್ರೌಢಶಾಲೆ ಸುವರ್ಣ ಮಹೋತ್ಸವ ಇಂದು
    In (ರಾಜ್ಯ ) ಜಿಲ್ಲೆ
  • ದಸರಾದಲ್ಲಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ದಂತ ಮುರಿತ!
    In (ರಾಜ್ಯ ) ಜಿಲ್ಲೆ
  • ತಾಳಿಕೋಟೆ ಪುರಸಭೆಯಿಂದ ಭೀಮನಭಾವಿ ಸ್ವಚ್ಚತೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.