ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಮೇ.೧೮ ರಂದು ಪಟ್ಟಣದ ಅಭ್ಯುದಯ ಕಾಲೇಜು ಆವರಣದಲ್ಲಿ ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದೆ ಆಸಕ್ತರು ಹೆಸರನ್ನು ನೊಂದಾಯಿಸಿಕೊಳ್ಳಬಹುದು ಎಂದು ಅಹಿಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ತಿಳಿಸಿದರು.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನನ್ನ ಜೇಷ್ಠ ಸುಪುತ್ರ ಕಿರಣ ಮದರಿ ಕಲ್ಯಾಣೋತ್ಸವದ ಅಂಗವಾಗಿ ಈ ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡಿದ್ದೇನೆ. ವರನಿಗೆ ೨೧ ವರ್ಷ ಮತ್ತು ವಧುವಿಗೆ ೧೮ ವರ್ಷ ಪೂರ್ಣಗೊಂಡಿದ್ದು ಸಾಮೂಹಿಕವಾಗಿ ಮದುವೆಯಾಗಲು ಇಚ್ಛಿಸುವವರು ವಧು-ವರರ ೩ ಭಾವಚಿತ್ರಗಳು, ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ, ಶಾಲಾ ದೃಢೀಕರಣ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಮತ್ತು ಗುರುತಿನ ಚೀಟಿಯೊಂದಿಗೆ ಎ.೩೦ ರ ಒಳಗಾಗಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಮೊ: ೯೯೮೦೫೨೯೭೭೨, ೯೯೮೦೩೯೪೭೧೦, ೯೯೦೨೨೬೩೫೪೮, ೮೯೦೪೦೧೦೦೭೮, ೯೯೪೫೩೬೬೬೩೦, ೯೪೮೧೦೮೧೫೮೮ ಮತ್ತು ೭೪೧೧೭೭೩೪೧೪