ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬೆನಕಟ್ಟಿ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿ.ಯು. ಫಲಿತಾಂಶದಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದ್ದಾರೆ.
ಪರೀಕ್ಷೆಗೆ ಹಾಜರಾದ ಒಟ್ಟು ೨೬೪ ವಿದ್ಯಾರ್ಥಿಗಳಲ್ಲಿ ೯೪ ಡಿಸ್ಟಿಂಕ್ಷನ್, ೧೫೦ ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿದ್ದಾರೆ. ರಕ್ಷಿತಾ ಸಿಕೇದ್(ಶೇ ೯೭.೬೬) ಕಾಲೇಜಿಗೆ ಪ್ರಥಮ ಮತ್ತು ಜಿಲ್ಲೆಗೆ ತೃತೀಯ, ಶ್ರಾವಣಿ ಬಿರಾದಾರ(ಶೇ.೯೭.೫) ದ್ವಿತೀಯ ಮತ್ತು ಜಿಲ್ಲೆಗೆ ನಾಲ್ಕನೇ ಸ್ಥಾನ, ಸನ್ಮತಿ ತುಪ್ಪದ (ಶೇ ೯೬.೫)ತೃತೀಯ, ಪೂಜಾ ಪವಾರ (ಶೇ ೯೬.೧೬) ನಾಲ್ಕನೇಯ ಸ್ಥಾನ ಹಾಗೂ ಕೀರ್ತಿ ಗಾಯಕವಾಡ (ಶೇ ೯೬) ಐದನೇ ಸ್ಥಾನ ಗಳಿಸಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳು ಭೌತಶಾಸ್ತ್ರದಲ್ಲಿ ಮೂವರು, ರಸಾಯನ ಶಾಸ್ತ್ರದಲ್ಲಿ ಇಬ್ಬರು, ಗಣಿತದಲ್ಲಿ ಹನ್ನೆರಡು, ಜೀವಶಾಸ್ತ್ರದಲ್ಲಿ ನಾಲ್ವರು, ಗಣಕಶಾಸ್ತ್ರದಲ್ಲಿ ಮೂವರು, ಕನ್ನಡದಲ್ಲಿ ಎಂಟು ಹಾಗೂ ಸಂಸ್ಕೃತ ವಿಷÀಯದಲ್ಲಿ ಐವರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರ ಈ ಸಾಧನೆಗೆ ಕಾಲೇಜಿನ ಅಧ್ಯಕ್ಷ ಆರ್.ವಿ.ಬೆನಕಟ್ಟಿ, ಕಾರ್ಯದರ್ಶಿ ಹೇಮಲತಾ ಬೆನಕಟ್ಟಿ, ಪ್ರಾಚಾರ್ಯ ಸೂರಜ್ ಉಮದಿ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.