ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ ಅವಧಿಯನ್ನು ದಿನಾಂಕ : ೦೧-೦೫-೨೦೨೫ರವರೆಗೆ ಹಾಗೂ ರೈತರ ನೊಂದಣಿ ಅವಧಿಯನ್ನು ದಿನಾಂಕ : ೨೫-೦೪-೨೦೨೫ರವರೆಗೆ ವಿಸ್ತರಿಸಲಾಗಿದೆ ಎಂದು ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಪ್ರತಿ ಕ್ವಿಂಟಾಲ್‌ಗೆ ೭೫೫೦ ರೂ. ಜೊತೆಗೆ ರಾಜ್ಯ ಸರ್ಕಾರದ ಪ್ರೊತ್ಸಾಹಧನ ಪ್ರತಿ ಕ್ವಿಂಟಾಲ್‌ಗೆ ೪೫೦ ರೂ. ಸೇರಿದಂತೆ ಒಟ್ಟು ೮೦೦೦ ರೂ. ಪ್ರತಿ ಕ್ವಿಂಟಾಲ್‌ಗೆ ಖರೀದಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ತೊಗರಿ ಬೆಳೆದ ರೈತರು ತಮ್ಮ ಸಮೀಪದ ಪಿಎಸಿಎಸ್, ಟಿಎಪಿಸಿಎಂಎಸ್, ಎಫ್‌ಪಿಓ ಸಂಘಗಳಲ್ಲಿ ನೊಂದಣಿ ಮಾಡಿಸಿ ತೊಗರಿ ಮಾರಾಟ ಮಾಡಿ, ಬೆಂಬಲ ಬೆಲೆ ಸದುಪಯೋಗ ಪಡೆದುಕೊಳ್ಳುವಂತೆ ಕನಿಷ್ಠ ಬೆಂಬಲ ಬಲೆ ಕಾರ್ಯಪಡೆ ಸಮಿತಿ ಅಧ್ಯಕ್ಷರೂ ಆದ ವಿಜಯಪುರ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
