Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ ಜಿಲ್ಲಾ ಕೇಂದ್ರವಾಗಿಸುವ ಅಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ೧೭ ಸಂಘಟನೆಗಳ ಮನವಿ ದೇವರಹಿಪ್ಪರಗಿ: ದೇವರಹಿಪ್ಪರಗಿ ತಾಲ್ಲೂಕು ಕೇಂದ್ರವನ್ನು ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡಿ, ಇಲ್ಲವಾದಲ್ಲಿ ತಾಲ್ಲೂಕನ್ನು ವಿಜಯಪುರ ಜಿಲ್ಲೆಯಲ್ಲಿಯೇ ಮುಂದುವರೆಸಿ ಎಂದು ತಾಲ್ಲೂಕಿನ ೧೭ ಸಂಘಟನೆಗಳು ಮನವಿ ಸಲ್ಲಿಸಿ, ಒಕ್ಕೋರಲಿನ ಅಭಿಪ್ರಾಯ ವ್ಯಕ್ತಪಡಿಸಿದವು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಸೃಜಿಸುವ ಬಗ್ಗೆ ಅಭಿಪ್ರಾಯ ಸಂಗ್ರಹಣೆಗಾಗಿ ಇಂಡಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಅಧ್ಯಕ್ಷತೆಯಲ್ಲಿ ಜರುಗಿದ ದೇವರಹಿಪ್ಪರಗಿ ತಾಲ್ಲೂಕು ಸಾರ್ವಜನಿಕರ ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡು ಅಭಿಪ್ರಾಯ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯರ ಸಂಘದ ಅಧ್ಯಕ್ಷ ಆರ್.ಆರ್.ನಾಯಿಕ ಹಾಗೂ ಸದಯ್ಯನಮಠದ ವೀರಗಂಗಾಧರಶ್ರೀಗಳು ಮಾತನಾಡಿದರು.ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್. ಬಸವರೆಡ್ಡಿ, ತಾಲ್ಲೂಕು ರೈತ ಸಂಘದ ಅಜೀಜ್ ಯಲಗಾರ, ಜೆಡಿಎಸ್ ಪಕ್ಷದ ಸಾಯಬಣ್ಣ ಬಾಗೇವಾಡಿ, ಪಟ್ಟಣ ಪಂಚಾಯಿತಿ ಸದಸ್ಯ ಕಾಶೀನಾಥ ಜಮಾದಾರ, ದಲಿತ ಸಂಘರ್ಷ ಸಮೀತಿಯ ಹುಯೋಗಿ ತಳ್ಳೋಳ್ಳಿ, ಪ್ರಕಾಶ…
ವಿಜಯಪುರ: ವೇದಗಳ ಸಾರವನ್ನು, ಬಸವಾದಿ ಶರಣರ ವಚನಗಳ ಆಶಯವನ್ನು ಕಥೆಗಳ ಮೂಲಕ ವಿವರಿಸಿ ಮಹಾನ್ ಉದಾತ್ತ ಚಿಂತನೆಗಳು, ಆದರ್ಶಗಳು ಮನಸಿಗೆ ನಾಟುವಂತೆ ಮಾಡುವ ಅದ್ಭುತ ಶಕ್ತಿ ಶ್ರೀಗಳಲ್ಲಿತ್ತು ಎಂದುಭಾಲ್ಕಿಯ ಗೋರಚಿಂಚೋಲಿ ಮಠದ ಸಿದ್ದರಾಮೇಶ್ವರ ಪಟ್ಟದೇವರು ಹೇಳಿದರು.ಅವರು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಜೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿಶ್ವದ ವಿವಿಧ ದಾರ್ಶನಿಕರ ದರ್ಶನ, ಚಿಂತಕರ ಉದಾತ್ತ ಚಿಂತನೆಗಳನ್ನು ಸುಲಲಿತವಾಗಿ ಹೇಳುವ ಪೂಜ್ಯರು ಸಾಧಕರಿಗೆ ಸನ್ಮಾರ್ಗ ತೋರುವ ದಾರಿದೀಪವಾಗಿದ್ದರು ಎಂದು ಹೇಳಿದರು.ನಾಗಠಾಣದ ಕಲ್ಲಯಾರೂಢ ಮಠದ ಪ್ರಜ್ಞಾನಂದ ಸ್ವಾಮೀಜಿ ಮಾತನಾಡಿದರು.ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿದರು.ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿದ್ದರು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರ ಮೆರವಣಿಗೆಯ ಜೊತೆಗೆ ಮಕ್ಕಳು ಪುಸ್ತಕದ ಕಟ್ಟುಗಳನ್ನು ತಲೆಯ ಮೇಲೆ ಹೊತ್ತು ಸಾಗಿದ್ದು ವಿಶೇಷವಾಗಿತ್ತು.ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ,ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ರಾಘವೇಂದ್ರ ಮೊಗಳ,…
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಎಸ್.ಪಿ. ಕಾಮರ್ಸ್ ಕಾಲೇಜಿನ ಬಿಬಿಎ ವಿಭಾಗ ಇಂದು ಶುಕ್ರವಾರ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿದ್ದ ಜಿಲ್ಲಾ ಮಟ್ಟದ ಮಂಚ್- ಮಚ್ಚಾ ವೃತ್ತಿಪರ ಸ್ಪರ್ಧೆಯಲ್ಲಿ ಶ್ರೀ ಬಿ. ಎಂ. ಪಾಟೀಲ ಪಿಯು ಕಾಲೇಜಿನ ವಿಪ್ರೊ ತಂಡ ಸಮಗ್ರ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಬಿ.ಎಲ್.ಡಿ.ಇ ಸಂಸ್ಥೆಯ ಹೊಸ ಆವರಣದಲ್ಲಿರುವ ಬಿಬಿಎ ಕಾಲೇಜಿನಲ್ಲಿ ನಡೆದ ಈ ವೃತ್ತಿಪರ ಸ್ಪರ್ಧೆಯಲ್ಲಿ ರ್ಯಾಂಪ್ ವಾಕ್, ಟೀಮ್ ಬಿಲ್ಡಿಂಗ್, ರಸಪ್ರಶ್ನೆ, ಅಡುಗೆ, ಛಾಯಾಚಿತ್ರ ಸ್ಪರ್ಧೆಗಳು ನಡೆದವು. ಜಿಲ್ಲೆಯ ನಾನಾ ಭಾಗಗಳಿಂದ 29 ಪಿಯು ಕಾಲೇಜುಗಳ ಸುಮಾರು 500 ಜನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಒಟ್ಟು ಐದು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಸ್ಥಾನ ಪಡೆದವರಿಗೆ ರೂ. 2000 ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ರೂ.1000 ನಗದು ಬಹುಮಾನ ನೀಡಲಾಯಿತು. ಈ ಸ್ಪರ್ಧೆಗಳಲ್ಲಿ ಶ್ರೀ ಬಿ. ಎಂ. ಪಾಟೀಲ ಪಿಯು ಕಾಲೇಜು ಮತ್ತು ಎ.ಎಸ್.ಪಾಟೀಲ ಕಾಮರ್ಸ್…
ವಿಜಯಪುರ: ಇಸ್ರೋ ಮಾಜಿ ಅಧ್ಯಕ್ಷ ಪ್ರೊ. ಎ. ಎಸ್. ಕಿರಣಕುಮಾರ ಅವರು ಇಂದು ಶನಿವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದರುಈ ಸಂದರ್ಭದಲ್ಲಿ ಪ್ರೊ. ಎ.ಎಸ್. ಕಿರಣಕುಮಾರ ಅವರನ್ನು ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಸಮಕುಲಪತಿ ಡಾ. ಅರುಣ ಸಿ ಇನಾಮದಾರ, ಕುಲಸಚಿವ ಡಾ. ಆರ್. ವಿ. ಕುಲಕರ್ಣಿ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಪ್ರೊ. ಎ.ಎಸ್. ಕಿರಣಕುಮಾರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಇತ್ತೀಚಿನ ಸಾಧನೆಗಳು, ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ನಡೆದಿರುವ ಪ್ರಗತಿ ಮತ್ತು ಭಾರತದ ಬಾಹ್ಯಾಕಾಶ ಪರಿಶೋಧನೆ ಪ್ರಯತ್ನಗಳ ಭವಿಷ್ಯ ಪಥದ ಒಳನೋಟಗಳನ್ನು ಹಂಚಿಕೊಂಡರು. ಅಲ್ಲದೇ, ಬಾಹ್ಯಾಕಾಶ ಸಂಶೋಧನೆಯಲ್ಲಿನ ಅನ್ವೇಷಣೆಯ ಸಂದರ್ಭದಲ್ಲಿ ಇಸ್ರೋ ಎದುರಿಸಿದ ಸವಾಲುಗಳು ಮತ್ತು ಯಶಸ್ಸಿನ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ, ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ,…
ಆಲಮಟ್ಟಿ: ಮಕ್ಕಳಲ್ಲಿ ಗಣಿತ ಕೌಶಲ್ಯ ಬೆಳೆಸಿ, ಮಕ್ಕಳಲ್ಲಿ ಸಾಮರ್ಥ್ಯವಾರು ಕಲಿಕಾ ಹಿಂದುಳಿಯುವಿಕೆಯನ್ನು ಗುರುತಿಸಲು ಗಣಿತ ಕಲಿಕಾ ಆಂದೋಲನದ ಸ್ಪರ್ಧೆಗಳು ಪೂರಕವಾಗಿವೆ ಎಂದು ನಿಡಗುಂದಿ ವಲಯದ ಶಿಕ್ಷಣ ಸಂಯೋಜಕ ಉದಯಕುಮಾರ ಬಶೆಟ್ಟಿ ಅಭಿಪ್ರಾಯಪಟ್ಟರು.ಸಮೀಪದ ಬೇನಾಳ ಆರ್.ಎಸ್. ಗ್ರಾಮದ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಅಕ್ಷರ ಫೌಂಡೇಶನ್ ಸಹಯೋಗದಲ್ಲಿ ಶುಕ್ರವಾರ ನಡೆದ ಬೇನಾಳ ಆರ್.ಸಿ. ಪಂಚಾಯ್ತಿ ಮಟ್ಟದ ಮಕ್ಕಳ ಗಣಿತ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಾಥಮಿಕ ಹಂತದಲ್ಲಿ ಸರಳ ಲೆಕ್ಕಾಚಾರ ಮಾಡಲು ಮಕ್ಕಳಲ್ಲಿ ಕಲಿಕೆ ಮಾಡಿಸುವುದು ಅಗತ್ಯ. ಅದಕ್ಕೆ ಪೂರಕವಾಗಿ ಈ ಗಣಿತ ಕಲಿಕಾ ಆಂದೋಲನ ನೆರವಾಗುತ್ತದೆ. ಮಕ್ಕಳಲ್ಲಿ ಗಣಿತ ಸ್ಪರ್ಧೆಯ ಮನೋಭಾವನೆ ಮೂಡಿಸಲಿದೆ ಎಂದರು.ಸಮೂಹ ಸಂಪನ್ಮೂಲ ವ್ಯಕ್ತಿ ಸುರೇಶ ಹುರಕಡ್ಲಿ ಮಾತನಾಡಿದರು.ಪಿಡಿಓ ಬಾದಶಹಾ ಖೀಜಿ, ಮುಖ್ಯ ಶಿಕ್ಷಕ ಹನುಮಂತಪ್ಪ ಇಲ್ಯಾಳ, ರವಿ ಬಿರಾದಾರ, ರಾಘವೇಂದ್ರ ವಂದಗನೂರ, ಚಂದ್ರಶೇಖರ ಕೋಳೇಕರ, ಉತ್ತಮ ಪತ್ತಾರ, ಎನ್.ಬಿ. ಭಜಂತ್ರಿ, ಎಸ್.ಡಿ. ಸಂತೇವೂರ, ಗೀತಾ ಹತ್ತರಕಿಹಾಳ, ಪ್ರಭಾಕರ ಹೆಬ್ಬಾಳ, ಎನ್.ಬಿ.…
Udayarashmi kannada daily newspaper
ಬಸವನಬಾಗೇವಾಡಿ: ತಾಲೂಕಿನ ವಡವಡಗಿ ಗ್ರಾಮದಲ್ಲಿ ಕಾರ್ಯಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪರವಾನಗಿ ಭೂಮಾಪಕರ ಮೇಲೆ ನಡೆದಿರುವ ಹಲ್ಲೆ ಖಂಡನೀಯ. ಭೂಮಾಪಕರಿಗೆ ಕಾರ್ಯಕ್ಷೇತ್ರದಲ್ಲಿ ಸರ್ಕಾರ ಸೂಕ್ತ ಭದ್ರತೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ ಭೂಮಾಪಕರು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.ಅವರು ಸಲ್ಲಿಸಿದ ಮನವಿಯಲ್ಲಿ ತಾಲೂಕಿನ ವಡವಡಗಿ ಗ್ರಾಮದ ಸರ್ವೆ ನಂ.೧೫೬/೧ ರಲ್ಲಿ ತಕರಾರು ಪ್ರಕರಣದ ಅಳತೆ ಕಾರ್ಯಕ್ಕೆ ಪರವಾನಗಿ ಭೂಮಾಪಕರಾದ ಶಿವರಾಜ ಚೌಧರಿ ಅವರು ಹೋದ ಸಂದರ್ಭದಲ್ಲಿ ಏಕಾಏಕಿ ಭೂಮಾಪಕರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಜರುಗಿದೆ. ಈ ಭೂಮಾಪಕರ ಮೇಲೆ ಹಲ್ಲೆ ಮಾಡಿರುವ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.ಭೂಮಾಪಕರು ತಮ್ಮ ಕಾರ್ಯಕ್ಷೇತ್ರಕ್ಕೆ ಹೋದ ಸಂದರ್ಭದಲ್ಲಿ ಯಾವುದೇ ಸೇವಾ ಭದ್ರತೆ ಇಲ್ಲದೇ ಕಾರ್ಯನಿರ್ವಹಿಸುವಂತಾಗಿದೆ. ತಕರಾರು ಪ್ರಕರಣಗಳನ್ನು ಪರವಾನಗಿ ಭೂಮಾಪಕರಿಗೆ ಹಂಚಿಕೆ ಮಾಡಲಾಗುತ್ತಿದೆ. ಕೆಲವು ತಕರಾರು ಪ್ರಕರಣಗಳ ಅಳತೆ ಕಾರ್ಯ ಕಷ್ಟ ಸಾಧ್ಯವಾಗಿದೆ. ಈ ತಕರಾರು ಪ್ರಕರಣಗಳಿಗೆ ಬೇಕಾದ ಬಾಂದ ಜವಾನರು, ಸೇವಾ ಭದ್ರತೆ…
ರಾಜ್ಯದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 702 ಕ್ಕೇರಿಕೆ | ಸೋಂಕಿಗೆ ಬಲಿಯಾದವರ ಸಂಖ್ಯೆ ೧೦ ಕ್ಕೇರಿಕೆ ಬೆಂಗಳೂರು: ಕರ್ನಾಟಕದಲ್ಲಿ ಶುಕ್ರವಾರ 173 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲಿ ಎರಡು ಕೊರೋನವೈರಸ್ ಸಂಬಂಧಿತ ಸಾವುಗಳು ವರದಿಯಾಗಿವೆ.ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಶುಕ್ರವಾರ 173 ಹೊಸ ಕೋವಿಡ್ -19 ಸೋಂಕು ಪ್ರಕರಣಗಳ ದಾಖಲಾತಿಯೊಂದಿಗೆ ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 702ಕ್ಕೆ ಏರಿದೆ. ಈ ಪೈಕಿ 649 ಜನರು ಮನೆಯಲ್ಲಿ ಪ್ರತ್ಯೇಕವಾಗಿರುತ್ತಾರೆ ಮತ್ತು ಉಳಿದ 53 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಂತೆಯೇ ಇಂದು ಇಬ್ಬರು ಸೋಂಕಿತರು ಸಾವನ್ನಪ್ಪಿದ್ದು ಆ ಮೂಲಕ ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 10ಕ್ಕೇರಿದೆ. ಮೃತರು ಕ್ರಮವಾಗಿ 59 ಮತ್ತು 69 ವರ್ಷ ವಯಸ್ಸಿನವರಾಗಿದ್ದಾರೆ, ಇಬ್ಬರೂ ಬೆಂಗಳೂರು ನಗರ ಜಿಲ್ಲೆಯಲ್ಲಿ ದಾಖಲಾಗಿದ್ದಾರೆ. ಇಬ್ಬರಿಗೂ ಜ್ವರ ಮತ್ತು ಕೆಮ್ಮಿನ ಲಕ್ಷಣಗಳಿತ್ತು ಎಂದು ಹೇಳಲಾಗಿದೆ.ಕಳೆದ 24 ಗಂಟೆಗಳಲ್ಲಿ 37 ಸೋಂಕಿತರು ಚೇತರಿಸಿಕೊಂಡಿದ್ದು, ಒಟ್ಟು 8,349…
“ಯುವಕರು ಮತ್ತು ದೇಶಪ್ರೇಮ” ಗೋಷ್ಠಿ ಉದ್ಘಾಟಿಸಿದ ಸಂಸದ ತೇಜಸ್ವಿ ಸೂರ್ಯ ಅಭಿಮತ ವಿಜಯಪುರ: ನಾನು ಶ್ರೀ ಸಿದ್ಧೇಶ್ವರ ಅಪ್ಪನವರನ್ನು ಭೇಟಿಯಾಗಿದ್ದು ಕೆಲವೇ ನಿಮಿಷಗಳು ಮಾತ್ರ. ಆದರೆ ಅವರ ಸಂದೇಶಗಳು ನನ್ನ ಜೀವನದ ಮೇಲೆ ಬೀರಿದ ಪ್ರಭಾವ ಅಪಾರ. ಈ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದು ನನ್ನ ಭಾಗ್ಯ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ “ಯುವಕರು ಮತ್ತು ದೇಶಪ್ರೇಮ” ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ೭ನೇ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶ್ರೀ ಸಿದ್ಧೇಶ್ವರ ಅಪ್ಪನವರು ತಮ್ಮ ಬದುಕೇ ಒಂದು ಸಂದೇಶವೆಂಬಂತೆ ಬದುಕಿದವರು. ಬಿಜ್ಜರಗಿ ಎಂಬ ಒಂದು ಸಣ್ಣ ಗ್ರಾಮದಲ್ಲಿ ಹುಟ್ಟಿ ಸದಾ ಜನರಿಗಾಗಿ ಬದುಕಿ ಇಂದು ದೇವರಾಗಿದ್ದಾರೆ. ಒಬ್ಬ ಮನುಷ್ಯ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ದೇವರಾಗಬಹುದೆಂಬುದು ತೋರಿಸಿಕೊಟ್ಟವರು ಮತ್ತು ಸನ್ಯಾಸಿ ಎನ್ನುವವರು ಹೇಗಿರಬೇಕು ಎಂದು ತೋರಿಸಿಕೊಟ್ಟವರು. ಅಜಾರಮರ ಅಮರತ್ವಕ್ಕೆ ಸಾಕ್ಷಿಯಾದಂತವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಎಂದು ಹೇಳಿದರು.ಹಂಚಿನಾಳ ಭಕ್ತಿ ಯೋಗಾಶ್ರಮದ…
ಕೊಲ್ಹಾರ: ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳು ಅಧ್ಯಾತ್ಮದ ಒಲುವಿನ ಜೊತೆಗೆ ಜ್ಞಾನದ ಬುತ್ತಿಯನ್ನು ನಾಡಿನ ದೇಶದ ಮತ್ತು ವಿದೇಶದಲ್ಲಿರುವ ಪ್ರಜೆಗಳಿಗೆ ಉಣಬಡಿಸಿದ ಆಧುನಿಕ ಜಗದ ಸಂತರಾಗಿದ್ದರು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.೨೦೨೪ರ ಜನವರಿ ತಿಂಗಳ ೧ & ೨ ತಾರೀಖಿನಂದು ಶ್ರೀಗಳು ಲಿಂಗೈಕ್ಯರಾದ ಪ್ರಯುಕ್ತ ನಡೆಯುತ್ತಿರುವ ಗುರು ನುಡಿ ನಮನ ಕಾರ್ಯಕ್ರಮದ ಅಂಗವಾಗಿ ಕೊಲ್ಹಾರ ರೈತ ಭಾಂದವರು ೫ ಕ್ವಿಂಟಾಲ್ ಬುಂದೆ ಅನ್ನಪ್ರಸಾದ ವ್ಯವಸ್ಥೆಯನ್ನು ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ಕಳಿಸಿಕೊಡುವ ಕಾರ್ಯಕ್ರಮಕ್ಕೆ ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನದ ಮುಂದೆ ಚಾಲನೆ ನೀಡಿ ವರದಿಗಾರರೊಂದಿಗೆ ಅವರು ಮಾತನಾಡಿದರು.ಶ್ರೀಗಳ ನುಡಿನಮನ ಕಾರ್ಯಕ್ರಮವು ರಾಜ್ಯಾದ್ಯಂತ ಆಚರಣೆಯಾಗುವದರ ಜೊತೆಗೆ ಇಂದಿನ ಯುಗದ ಜನರಿಗೆ ಅವರು ಹೇಳಿರುವ ಪ್ರವಚನಗಳ ಜ್ಞಾನಗಂಗೆಯ ವಿಡಿಯೋ ದ್ವನಿಸುರುಳಿಗಳನ್ನು ಪ್ರತಿಯೊಬ್ಬರು ಆಲಿಸುವಂತಾಗಲು ಪಠ್ಯಪುಸ್ತಕಗಳಲ್ಲಿಯೂ ಕೂಡ ಸಿದ್ದೇಶ್ವರ ಮಹಾಸ್ವಾಮಿಗಳು ನಡೆದು ಬಂದ ಜೀವನ ಚರಿತ್ರೆ ಪಾಠ ಬೋಧನೆಯಾಗಲು ಸರಕಾರ ಕ್ರಮಕೈಗೊಳ್ಳಬೇಕು ಎಂದು ಬೆಳ್ಳುಬ್ಬಿಯವರು ಹೇಳಿದರು.ಅರಮನೆಯಂತಹ ಮನೆಗೆ ಆಸೆ ಪಡದೇ ದುಡ್ಡಿನ ವ್ಯಾಮೋಹದಿಂದ ದೂರ ಸರಿದು ಆಸೆಯೆಂಬ ಅಭಿಲಾಷೆಯನ್ನು ವ್ಯಕ್ತಪಡಿಸದೇ…
