ವಿಜಯಪುರ: ವೇದಗಳ ಸಾರವನ್ನು, ಬಸವಾದಿ ಶರಣರ ವಚನಗಳ ಆಶಯವನ್ನು ಕಥೆಗಳ ಮೂಲಕ ವಿವರಿಸಿ ಮಹಾನ್ ಉದಾತ್ತ ಚಿಂತನೆಗಳು, ಆದರ್ಶಗಳು ಮನಸಿಗೆ ನಾಟುವಂತೆ ಮಾಡುವ ಅದ್ಭುತ ಶಕ್ತಿ ಶ್ರೀಗಳಲ್ಲಿತ್ತು ಎಂದು
ಭಾಲ್ಕಿಯ ಗೋರಚಿಂಚೋಲಿ ಮಠದ ಸಿದ್ದರಾಮೇಶ್ವರ ಪಟ್ಟದೇವರು ಹೇಳಿದರು.
ಅವರು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಜೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವದ ವಿವಿಧ ದಾರ್ಶನಿಕರ ದರ್ಶನ, ಚಿಂತಕರ ಉದಾತ್ತ ಚಿಂತನೆಗಳನ್ನು ಸುಲಲಿತವಾಗಿ ಹೇಳುವ ಪೂಜ್ಯರು ಸಾಧಕರಿಗೆ ಸನ್ಮಾರ್ಗ ತೋರುವ ದಾರಿದೀಪವಾಗಿದ್ದರು ಎಂದು ಹೇಳಿದರು.
ನಾಗಠಾಣದ ಕಲ್ಲಯಾರೂಢ ಮಠದ ಪ್ರಜ್ಞಾನಂದ ಸ್ವಾಮೀಜಿ ಮಾತನಾಡಿದರು.
ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರ ಮೆರವಣಿಗೆಯ ಜೊತೆಗೆ ಮಕ್ಕಳು ಪುಸ್ತಕದ ಕಟ್ಟುಗಳನ್ನು ತಲೆಯ ಮೇಲೆ ಹೊತ್ತು ಸಾಗಿದ್ದು ವಿಶೇಷವಾಗಿತ್ತು.
ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ,
ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ರಾಘವೇಂದ್ರ ಮೊಗಳ, ಭೀಮಾಶಂಕರ ಕೋರೆ,ಜಯಶ್ರೀ ಬಂಗಾರಿ, ಬಸಮ್ಮ ವಡಗೇರಿ,ರೂಪಾ ಶಹಾಪುರ, ಮಧುಮತಿ ನಿಕ್ಕಂ,
ಸರೋಜಿನಿ ಕಟ್ಟಿಮನಿ, ಲಕ್ಷ್ಮೀ ಮೇತ್ರಿ,ರೇಣುಕಾ ಭಜಂತ್ರಿ, ವೀರೇಶ ಹುಣಶ್ಯಾಳ ಸೇರಿದಂತೆ ಗ್ರಾಮಸ್ಥರು, ಶಾಲಾ ಮಕ್ಕಳು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
ಸಿದ್ದೇಶ್ವರ ಶ್ರೀ ಸನ್ಮಾರ್ಗ ತೋರುವ ದಾರಿದೀಪ :ಸಿದ್ದರಾಮೇಶ್ವರ ಶ್ರೀ
Related Posts
Add A Comment

