ಆಲಮಟ್ಟಿ: ಮಕ್ಕಳಲ್ಲಿ ಗಣಿತ ಕೌಶಲ್ಯ ಬೆಳೆಸಿ, ಮಕ್ಕಳಲ್ಲಿ ಸಾಮರ್ಥ್ಯವಾರು ಕಲಿಕಾ ಹಿಂದುಳಿಯುವಿಕೆಯನ್ನು ಗುರುತಿಸಲು ಗಣಿತ ಕಲಿಕಾ ಆಂದೋಲನದ ಸ್ಪರ್ಧೆಗಳು ಪೂರಕವಾಗಿವೆ ಎಂದು ನಿಡಗುಂದಿ ವಲಯದ ಶಿಕ್ಷಣ ಸಂಯೋಜಕ ಉದಯಕುಮಾರ ಬಶೆಟ್ಟಿ ಅಭಿಪ್ರಾಯಪಟ್ಟರು.
ಸಮೀಪದ ಬೇನಾಳ ಆರ್.ಎಸ್. ಗ್ರಾಮದ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಅಕ್ಷರ ಫೌಂಡೇಶನ್ ಸಹಯೋಗದಲ್ಲಿ ಶುಕ್ರವಾರ ನಡೆದ ಬೇನಾಳ ಆರ್.ಸಿ. ಪಂಚಾಯ್ತಿ ಮಟ್ಟದ ಮಕ್ಕಳ ಗಣಿತ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಥಮಿಕ ಹಂತದಲ್ಲಿ ಸರಳ ಲೆಕ್ಕಾಚಾರ ಮಾಡಲು ಮಕ್ಕಳಲ್ಲಿ ಕಲಿಕೆ ಮಾಡಿಸುವುದು ಅಗತ್ಯ. ಅದಕ್ಕೆ ಪೂರಕವಾಗಿ ಈ ಗಣಿತ ಕಲಿಕಾ ಆಂದೋಲನ ನೆರವಾಗುತ್ತದೆ. ಮಕ್ಕಳಲ್ಲಿ ಗಣಿತ ಸ್ಪರ್ಧೆಯ ಮನೋಭಾವನೆ ಮೂಡಿಸಲಿದೆ ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ಸುರೇಶ ಹುರಕಡ್ಲಿ ಮಾತನಾಡಿದರು.
ಪಿಡಿಓ ಬಾದಶಹಾ ಖೀಜಿ, ಮುಖ್ಯ ಶಿಕ್ಷಕ ಹನುಮಂತಪ್ಪ ಇಲ್ಯಾಳ, ರವಿ ಬಿರಾದಾರ, ರಾಘವೇಂದ್ರ ವಂದಗನೂರ, ಚಂದ್ರಶೇಖರ ಕೋಳೇಕರ, ಉತ್ತಮ ಪತ್ತಾರ, ಎನ್.ಬಿ. ಭಜಂತ್ರಿ, ಎಸ್.ಡಿ. ಸಂತೇವೂರ, ಗೀತಾ ಹತ್ತರಕಿಹಾಳ, ಪ್ರಭಾಕರ ಹೆಬ್ಬಾಳ, ಎನ್.ಬಿ. ದಾಸರ, ಜಿ.ಡಿ. ಆಸಂಗಿ, ಸೀತಾರಾಮ ರಾಠೋಡ, ಬೀಳೇಕುದರಿ ಇತರರು ಇದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

