Author: editor.udayarashmi@gmail.com

ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೃಷಿಗೆ ಸಂಬಂಧಿಸಿದ ವಿಷಯಗಳ ಕುರಿತು ಜನವರಿ-೨೦೨೪ರ ಮಾಹೆಯಲ್ಲಿ ತರಬೇತಿಗಳನ್ನು ಆಯೋಜಿಸಲಾಗಿದ್ದು, ಆಸಕ್ತ ರೈತರು ತರಬೇತಿಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.ಜನವರಿ ೦೩ ರಂದು ಸಿಂದಗಿ ರೈತ ಸಂಪರ್ಕ ಕೇಂದ್ರದಲ್ಲಿ ಸಮಗ್ರ ಕೃಷಿ ಪದ್ಧತಿಯು ರೈತರ ಆರ್ಥಿಕ ಮಟ್ಟವನ್ನು ದ್ವಿಗುಣಗೊಳಿಸಲೊಂದು ಸುಲಭೋಪಾಯ, ಜ.೦೪ರಂದು ದೇವರಹಿಪ್ಪರಗಿ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೇಸಾಯ ತಾಂತ್ರಿಕತೆಗಳು, ಜ.೦೫ರಂದು ಆಲಮೇಲ ರೈತ ಸಂಪರ್ಕ ಕೇಂದ್ರದಲ್ಲಿ ರಾಸಾಯನಿಕ ಮುಕ್ತ ಕೃಷಿ ಪದ್ಧತಿಗಳು, ಜ.೦೯ ರಂದು ಇಂಡಿ ರೈತ ಸಂಪರ್ಕ ಕೇಂದ್ರದಲ್ಲಿ ಕೋಯ್ಲೋತ್ತರ ತಾಂತ್ರಿಕತೆಗಳು, ಜ.೧೦ರಂದು ಚಡಚಣ ರೈತ ಸಂಪರ್ಕ ಕೇಂದ್ರದಲ್ಲಿ ಆದಾಯ ಉತ್ಪನ್ನ ಚಟುವಟಿಕೆಗಳು, ಜ.೧೧ ರಂದು ಚಡಚಣ ತಾಲೂಕಿನ ಬಳ್ಳೊಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಕಿರುಧಾನ್ಯಗಳು ಹಾಗೂ ಮೌಲ್ಯವರ್ಧನೆ ಮತ್ತು ಜ.೧೨ ರಂದು ಮುದ್ದೇಬಿಹಾಳ ರೈತ ಸಂಪರ್ಕ ಕೇಂದ್ರದಲ್ಲಿ ಹಣ್ಣು ಹಾಗೂ ತರಕಾರಿಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕುರಿತು ಒಂದು…

Read More

ವಿಜಯಪುರ: ತೋಟಗಾರಿಕೆ ಇಲಾಖೆ ವತಿಯಿಂದ ಪ್ರಕಸ್ತ ೨೦೨೩-೨೪ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ (ಹನಿ ನೀರಾವರಿ) ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಎರಡು ಹೆಕ್ಟೇರ್‌ವರೆಗೆ ಶೇ.೯೦ ಮತ್ತು ಸಾಮಾನ್ಯ ವರ್ಗದ ರೈತರಿಗೆ ಶೆ.೭೫ ರಷ್ಟು ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಈ ಹಿಂದೆ ಅಳವಡಿಸಿಕೊಂಡಿದ್ದ ಸೂಕ್ಷ್ಮ ನೀರಾವತಿ ಪದ್ಧತಿ ಹಾಳಾಗಿದ್ದಲ್ಲಿ- ಘಟಕ ಕಾರ್ಯನಿರ್ವಹಿಸದೇ ಇದ್ದಲ್ಲಿ ೭ ವರ್ಷಗಳ ನಂತರ ಅದೇ ಜಮೀನಿಗೆ ಮತ್ತೊಮ್ಮೆ ಸೂಕ್ಷ್ಮ ನೀರಾವತಿ ಪದ್ಧತಿಯನ್ನು ಅಳವಡಿಸಿಕೊಂಡು ಸಹಾಯ ಪಡೆದುಕೊಳ್ಳಬಹುದಾಗಿದೆ.ಜಿಲ್ಲೆಯ ತೋಟಗಾರಿಕೆ ಬೆಳೆಗಳನ್ನು ಬೆಳೆದ ಹಾಗೂ ಬೆಳೆಯುವ ರೈತರು ಈ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಎಡಿಸಿ ಮಹಾದೇವ ಮುರಗಿ ಆಶಯ ವಿಜಯಪುರ: ಕಲೆ ಎಂದೆಂದಿಗೂ ಶಾಶ್ವತ, ಅಮರಶಿಲ್ಪಿ ಜಕಣಾಚಾರಿಯಂತಹ ಮಹನೀಯರ ಕುರಿತಾಗಿ ತಕಳಿದುಕೊಳ್ಳುವ ಮೂಲಕ ಅವರ ಕಲೆಯ ಕುರಿತು ಸ್ಫೂರ್ತಿ ಪಡೆದುಕೊಂಡು, ಶಿಲ್ಪಕಲೆಯಲ್ಲಿ ಸಾಧನೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರುಗಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಜಗತ್ತು ಮರೆಯದ ಅಮರ ಶಿಲ್ಪಕಲೆಗಳನ್ನು ಕೊಟ್ಟ ಕೀರ್ತಿ ಜಕಣಾಚಾರಿ ಅವರಿಗೆ ಸಲ್ಲುತ್ತದೆ. ಅಮರಶಿಲ್ಪಿ ಜಕಣಾಚಾರಿಯ ಸಾಧನೆಯು ನಮಗೆ ಪ್ರೇರಣೆ ಆಗಬೇಕು ಎಂದು ಸಲಹೆ ನೀಡಿದರು.ಜಕಣಾಚಾರಿ ಅವರು ಹೇಗೆ ತಮ್ಮ ಶಿಲ್ಪಕಲೆಗಳನ್ನು ಕೆತ್ತಲೂ ಕೆಲಸದ ಮೂಲಕ ತಪಸ್ಸು ಮಾಡುತ್ತಿದ್ದರೋ ಹಾಗೆ ಇಂದಿನ ಜನರು ತಮ್ಮ ತಮ್ಮ ವೃತ್ತಿಯಲ್ಲಿ ಯಶಸ್ಸು ಹೊಂದಲು ತಮ್ಮ ವೃತ್ತಿಯ ಗೌರವ ಹೊಂದಿ, ಆ ದಿಸೆಯಲ್ಲಿ ಸಾಧನೆ ಮಾಡಬೇಕು…

Read More

ವಿಜಯಪುರ: ಪ್ರತಿ ವರ್ಷದಂತೆ ಈ ವರ್ಷವೂ ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಸಮಿತಿ ವತಿಯಿಂದ ಭಾರತದ ಪ್ರಥಮ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ರಾಜ್ಯ ಮಟ್ಟದಲ್ಲಿ ಜನ್ಮ ಜಯಂತಿಯನ್ನು ಆಚರಣೆ ಜೊತೆಗೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀನಾಥ್ ಪೂಜಾರಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.ಜನವರಿ ೦೩ ರಂದು ಮಾತೇ ಸಾವಿತ್ರಿಬಾಯಿ ಫುಲೆ ಅವರ ೧೯೩ ನೇ ಜನ್ಮ ಜಯಂತಿ ಪ್ರಯುಕ್ತ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮತ್ತು ಮಾಡುತ್ತಿರುವ ಮಹಿಳಾ ಸಾಧಕಿಯರನ್ನು ಗುರುತಿಸಿ ರಾಜ್ಯ ಮಟ್ಟದ “ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ” ನೀಡಲಾಗುತ್ತಿದೆ.ಸದರಿ ಕಾರ್ಯಕ್ರಮದ ಉದ್ಘಾಟಕರಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಡಾ. ಎಂ. ಬಿ. ಪಾಟೀಲ ಆಗಮಿಸುತ್ತಿದ್ದು, ಫಾದರ್ ಟಿಯೋಲ ಮೆಚಡೊ ಅವರು ದಿವ್ಯ ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರು, ಹಿರಿಯ ಹೋರಾಟಗಾರರಾದ ಬಿ. ಗೋಪಾಲ್, ಹಿರಿಯ ಪತ್ರಕರ್ತರಾದ ಅನಿಲ್ ಹೊಸಮನಿ,…

Read More

ಬ್ರಹ್ಮದೇವನಮಡು: ಪ್ರತಿಯೊಬ್ಬರೂ ಧಮ೯ದ ಹಾದಿಯಲ್ಲಿ ನಡೆದಾಗ ಮಾತ್ರ ಸನ್ಮಾಗ೯ ಸಿಗಲಿದೆ. ನಂಬಿಕೆ,ಭಕ್ತಿ,ದಯ,ಸಹನೆಯಿಂದ ಗುರು ಹಿರಿಯರನ್ನು ಗೌರವಿಸುತ್ತ ಜೀವನ ನಡೆಸಬೇಕು ಎಂದು ಶ್ರೀಮಠದ ಶಿವಾಚಾಯ೯ ರತ್ನ ಪ್ರಶಸ್ತಿ ಪುರಸ್ಕ್ರತ ಡಾ.ವಿಶ್ವರಾಧ್ಶ ಶಿವಾಚಾಯ೯ರು ಹೇಳಿದರು.ಸಮೀಪದ ಸುಕ್ಷೇತ್ರ ಮಾಗಣಗೇರಿ ಬೃಹನ್ಮಠದಗುರು ಚನ್ನವೃಷಬೇಂದ್ರ ಶಿವಯೋಗಿಗಳ ಮತ್ತು ಕೆಂಭಾವಿ ಗುರು ಅಯ್ಯಪ್ಪಯ್ಯ ಶಿವಾಚಾರ್ಯರ ರಥೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ಮಹಾಪುರಾಣದ ತೊಟ್ಟಿಲೋತ್ಸವ ಕಾಯ೯ಕ್ರಮದಲ್ಲಿ ಅವರು ಆಶೀವ೯ಚನ ನೀಡಿದರು.ಸತ್ಶ, ಶುದ್ದ ಕಾಯಕದೊಂದಿಗೆ ಧಮ೯ದಿಂದ ನಡೆದರೆ ಜೀವನ ಸಾಥ೯ಕವಾಗುತ್ತದೆ ಎಂದರು.ಈ ವೇಳೆ ನಾಗೇಶ ಧನಶೆಟ್ಟಿ ,ಪತ್ರಕತ೯ ಮಲ್ಲು ಕೆಂಭಾವಿ ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.ಅರಳಹಳ್ಳಿಯ ಪ್ರವಚನಕಾರ ಬಸವರಾಜ ಶಾಸ್ತ್ರಿಗಳು ಪ್ರವಚನ ನೀಡಿದರು. ಗದುಗಿನ ಮಲ್ಲಿಕಾಜು೯ನ ನರಸಲಗಿ ಸಂಗೀತ ಸೇವೆಯೊಂದಿಗೆ ಅಕಾಶ ಹಿರೇಮಠ ತಬಲ್ ಸಾತ್ ನೀಡಿದರು.

Read More

ದೇವಾಂಗ ಸಂಘದ ಪದಾಧಿಕಾರಿಗಳ ಆಯ್ಕೆ & ಸಂಘಟನಾ ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಆನಂದ ಹುಲಮನಿ ಅಭಿಮತ ಮುದ್ದೇಬಿಹಾಳ: ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಲು ಸಂಘಟನೆ ಪ್ರಮುಖ ಅಸ್ತ್ರವಾಗಿದ್ದು ಸಂಘಟಿತರಾದಾಗ ಮಾತ್ರ ನಮಗೆ ಸೌಲಭ್ಯಗಳು ದೊರಕಲು ಸಾಧ್ಯವಿದೆ ಎಂದು ಕರ್ನಾಟಕ ರಾಜ್ಯ ದೇವಾಂಗ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಆನಂದ ಹುಲಮನಿ ಹೇಳಿದರು.ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ದೇವಾಂಗ ಸಂಘದ ತಾಲ್ಲೂಕಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು.ಒಳಪಂಗಡಗಳಲ್ಲಿರುವ ಭಿನ್ನಾಭಿಪ್ರಾಯಗಳನ್ನು ಒಟ್ಟುಗೂಡಿಸಿ ನೇಕಾರ ಸಮುದಾಯದ ಹೆಸರಿನಲ್ಲಿ ಸಂಘಟನೆ ಬಲಗೊಳಿಸಬೇಕಿದೆ ಎಂದರು.ಹಂಪಿ ಶ್ರೀ ಗಾಯತ್ರಿ ಮಹಾಸಂಸ್ಥಾನ ಮಠದ ಟ್ರಸ್ಟಿ ನಾಗೇಶ ಭಾವಿಕಟ್ಟಿ, ಜಿಲ್ಲಾಧ್ಯಕ್ಷ ಬಸವರಾಜ ಚಿತ್ತರಗಿ ಮಾತನಾಡಿ, ದೇವಾಂಗ ಸಮಾಜದ ಬಾಂಧವರು ಸಂಕಷ್ಟದಲ್ಲಿದ್ದಾಗ, ಮಕ್ಕಳಿಗೆ ಶಿಕ್ಷಣದ ಸಲುವಾಗಿ ಸಹಾಯ ಬೇಕಾದಾಗ ಸಮಾಜದ ಸಂಘಟನೆ ಅಗತ್ಯವೆನಿಸುತ್ತದೆ. ಜಿಲ್ಲೆಯ ಸಮುದಾಯದ ಬಾಂಧವರಲ್ಲಿ ಸಂಘಟನೆಯ ಬಗ್ಗೆ ಜಾಗೃತಿ ಮೂಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.ನೇಕಾರ ಸಮುದಾಯಗಳ…

Read More

ಮುದ್ದೇಬಿಹಾಳ: ದೇಶವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಉನ್ನತೀಕರಿಸಲು ಭೂಮಿಕೆಯಾಗಿ ಮೂಡಿಬಂದಿರುವ ಕೃಷಿ ವಲಯದ ಆಧಾರ ಸ್ತಂಭದಂತಿರುವ ರೈತರು ತಮಗೆ ಒದಗಿ ಬಂದಿರುವ ಸಂಕಷ್ಟಗಳ ನಿವಾರಣೆಗೆ ನಮ್ಮ ಅಭಿವೃದ್ಧಿಗಾಗಿ ನಾವು ಎಂಬ ಕ್ರಿಯಾತ್ಮಕ ಹೆಜ್ಜೆ ಇಡಲು ರೈತರು ಮುಂದಾಗಬೇಕು ಎಂದು ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠದ ಅಧ್ಯಕ್ಷ ಅರವಿಂದ ಕೊಪ್ಪ ಹೇಳಿದರು.ತಾಲೂಕಿನ ಬಸರಕೋಡ ಗ್ರಾಮದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಏರ್ಪಡಿಸಲಾಗಿದ್ದ ಪ್ರಸಾದಿ ಆಹಾರ ಭದ್ರತಾ ಮಹಿಳಾ ಸ್ವ ಸಹಾಯ ಸಂಘದ ರಚನೆ, ಗುಂಪು ಕೌಶಲ್ಯ ತರಬೇತಿ ಹಾಗೂ ಬಲವರ್ಧನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬೇಕಿರುವ ಸಹಾಯಕ್ಕೆ ಯಾರನ್ನೂ ಎದುರು ನೋಡದೇ ಸ್ವ ಸಾಮರ್ಥ್ಯದ ಮೇಲೆ ಸ್ವಾವಲಂಬಿ ಬದುಕಿಗೆ ಅಗತ್ಯವಿರುವ ಸವಲತ್ತುಗಳನ್ನು ಒದಗಿಸಿ ರೈತರ ಸ್ವ ಅಭಿವೃದ್ಧಿಗೆ ರೈತ ಅಸಕ್ತ ಗುಂಪುಗಳು ಉತ್ತಮ ಭೂಮಿಕೆಯಾಗಿವೆ ಎಂದರು.ಸಂಪನ್ಮೂಲ ವ್ಯಕ್ತಿ ಎಸ್.ಎನ್.ದೇಸಾಯಿ ಮಾತನಾಡಿದರು.ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಸಂಗಮೇಶ ಸಜ್ಜನ ಮಾತನಾಡಿದರು.ತಾಂತ್ರಿಕ ಗೋಷ್ಠಿಯಲ್ಲಿ ಗುಂಪು ರಚನೆಯ ಉದ್ದೇಶ, ಕಾರ್ಯ ಯೋಜನೆಗಳು, ದಾಖಲೆಗಳ ನಿರ್ವಹಣೆ,…

Read More

ವಿಜಯಪುರ: ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕ ಬೆಂಗಳೂರು ಅವರು ಭಾರತದ ಮೊದಲ ಶಿಕ್ಷಕಿ ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆ ಜನ್ಮದಿನದ ಪ್ರಯುಕ್ತ ಶಿಕ್ಷಣದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ ಕೊಡುವ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರಾಜ್ಯಪ್ರಶಸ್ತಿಗೆ ವಿಜಯಪುರ ಜಿಲ್ಲೆಯಿಂದ ಶ್ರೀಮತಿ ಶರಣಮ್ಮ ಪಾಗಿ ಅವರು ಆಯ್ಕೆಯಾಗಿದ್ದಾರೆ,ಬುಧವಾರ ೩ನೇ ತಾರಿಖಿನಂದು ವಿಜಯಪುರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ನಡೆಯುವ ೧೯೩ನೇ ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆ ಜನ್ಮದಿನದ ಪ್ರಯುಕ್ತ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಕೊಟ್ಟು ಗೌರವಿಸಲಾಗುವುದು ಎಂದು ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ ಹಾಗೂ ಜಿಲ್ಲಾ ಸಂಚಾಲಕ ಅಕ್ಷಯ ಅಜಮನಿ ಅವರು ಪತ್ರಿಕೆಗೆ ತಿಳಿಸಿದ್ದಾರೆ.

Read More

ಆಲಮಟ್ಟಿ: ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಅಂತರ್ ಜಿಲ್ಲಾ ಗಾಂಜಾ ಮಾರಾಟಗಾರರು ಸೇರಿ ಮೂವರನ್ನು ನಿಡಗುಂದಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.ಧಾರವಾಡ ಜಿಲ್ಲೆಯ ವೆಂಕಟಪುರ ಗ್ರಾಮದ ಹಜರತಅಲಿ ಸಿಕಂದರ್ ಮುಲ್ಲಾ, ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಗಂಬ್ಯಾಪುರ ಗ್ರಾಮದ ಬಾಬಾಜಾನ್ ಅಲ್ಲಾಭಕ್ಷ ಕಿಲ್ಲೆದಾರ್ ಹಾಗೂ ನಿಡಗುಂದಿ ತಾಲ್ಲೂಕಿನ ಕಾಶೀನಕುಂಟಿ ಗ್ರಾಮದ ಉಹಲಮಹ್ಮದ್ ನಬೀಸಾಬ ಚಪ್ಪರಬಂದ್ ಅವರನ್ನು ಬಂಧಿಸಲಾಗಿದೆ.ನಿಖರ ಮಾಹಿತಿಯ ಮೇರೆಗೆ ಇಲ್ಲಿನ ಬೇನಾಳ ಬ್ರಿಜ್ ಹತ್ತಿರದ ಜಾಕವೆಲ್ ಬಳಿ ದಾಳಿ ನಡೆಸಿದ ನಿಡಗುಂದಿ ತಹಶೀಲ್ದಾರ್ ಎ.ಡಿ. ಅಮರವಾಡಗಿ ಹಾಗೂ ಪಿಎಸ್ ಐ ಶಿವರಾಜ ಧರಿಗೋಣ ಜಂಟಿಯಾಗಿ ದಾಳಿ ನಡೆಸಿ ಆರೋಪಿತರನ್ನು ಬಂಧಿಸಿದ್ದಾರೆ.ಅವರಿಂದ ೮೧೯೦ ರೂ ಮೌಲ್ಯದ ೮೧೯ ಗ್ರಾಂ ಗಾಂಜಾ, ಬೈಕ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಆಲಮಟ್ಟಿಯ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ಆಲಮಟ್ಟಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ. ಎಲ್ಲಾ ೨೮ ಕ್ಷೇತ್ರದಲ್ಲೂ ಗೆಲುವಿನ ಯಶಸ್ವಿಗಾಗಿ ಈಗಿನಿಂದಲೇ ತಮ್ಮ ಬಿಜೆಪಿ ಪಕ್ಷ ಅಗತ್ಯ ಕಾರ್ಯತಂತ್ರ ರೂಪಿಸುತ್ತಿದ್ದು ಆ ಗುರಿ ತಲುಪುವ ಆಚಲ ವಿಶ್ವಾಸ ಇದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನುಡಿದರು.ಆಲಮಟ್ಟಿಯಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉತ್ತರಕರ್ನಾಟಕ ಅಭಿವೃದ್ಧಿಗೆ ನಮ್ಮ ತಂದೆ ಯಡಿಯೂರಪ್ಪ ಹಾಗೂ ಬಿಜೆಪಿಯ ಕೊಡುಗೆ ಅಪಾರ ಎಂದರು.ಕಾಂಗ್ರೆಸ್ ಸರ್ಕಾರ ಕೇವಲ ಶಂಕುಸ್ಥಾಪನೆ ಮಾಡುತ್ತದೆ, ಆದರೆ ಆ ಕೆಲಸ ಪೂರ್ಣಗೊಳಿಸುವುದಿಲ್ಲ, ಆದರೆ ಬಿಜೆಪಿ ಶಂಕುಸ್ಥಾಪನೆ ಜತೆಗೆ ಕಾಮಗಾರಿ ಪೂರ್ಣಗೊಳಿಸಿ ಅದರ ಉದ್ಘಾಟನೆಯನ್ನು ಮಾಡುತ್ತದೆ, ಉತ್ತರಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆ, ಬಸವಕಲ್ಯಾಣ ಅಭಿವೃದ್ಧಿ, ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ ಸೇರಿದಂತೆ ಪ್ರತಿಯೊಂದಕ್ಕೂ ಯಡಿಯೂರಪ್ಪನವರು ವಿಶೇಷ ಕಾಳಜಿ ವಹಿಸಿ ಅಭಿವೃದ್ಧಿ ಮಾಡಿದ್ದಾರೆ ಎಂದರು.ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ೨೮ ಕ್ಷೇತ್ರಗಳಲ್ಲಿ ಗೆಲ್ಲಲು ಅಗತ್ಯ ಕಾರ್ಯತಂತ್ರ…

Read More