ಆಲಮಟ್ಟಿ: ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಅಂತರ್ ಜಿಲ್ಲಾ ಗಾಂಜಾ ಮಾರಾಟಗಾರರು ಸೇರಿ ಮೂವರನ್ನು ನಿಡಗುಂದಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಧಾರವಾಡ ಜಿಲ್ಲೆಯ ವೆಂಕಟಪುರ ಗ್ರಾಮದ ಹಜರತಅಲಿ ಸಿಕಂದರ್ ಮುಲ್ಲಾ, ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಗಂಬ್ಯಾಪುರ ಗ್ರಾಮದ ಬಾಬಾಜಾನ್ ಅಲ್ಲಾಭಕ್ಷ ಕಿಲ್ಲೆದಾರ್ ಹಾಗೂ ನಿಡಗುಂದಿ ತಾಲ್ಲೂಕಿನ ಕಾಶೀನಕುಂಟಿ ಗ್ರಾಮದ ಉಹಲಮಹ್ಮದ್ ನಬೀಸಾಬ ಚಪ್ಪರಬಂದ್ ಅವರನ್ನು ಬಂಧಿಸಲಾಗಿದೆ.
ನಿಖರ ಮಾಹಿತಿಯ ಮೇರೆಗೆ ಇಲ್ಲಿನ ಬೇನಾಳ ಬ್ರಿಜ್ ಹತ್ತಿರದ ಜಾಕವೆಲ್ ಬಳಿ ದಾಳಿ ನಡೆಸಿದ ನಿಡಗುಂದಿ ತಹಶೀಲ್ದಾರ್ ಎ.ಡಿ. ಅಮರವಾಡಗಿ ಹಾಗೂ ಪಿಎಸ್ ಐ ಶಿವರಾಜ ಧರಿಗೋಣ ಜಂಟಿಯಾಗಿ ದಾಳಿ ನಡೆಸಿ ಆರೋಪಿತರನ್ನು ಬಂಧಿಸಿದ್ದಾರೆ.
ಅವರಿಂದ ೮೧೯೦ ರೂ ಮೌಲ್ಯದ ೮೧೯ ಗ್ರಾಂ ಗಾಂಜಾ, ಬೈಕ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
