ಮುದ್ದೇಬಿಹಾಳ: ದೇಶವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಉನ್ನತೀಕರಿಸಲು ಭೂಮಿಕೆಯಾಗಿ ಮೂಡಿಬಂದಿರುವ ಕೃಷಿ ವಲಯದ ಆಧಾರ ಸ್ತಂಭದಂತಿರುವ ರೈತರು ತಮಗೆ ಒದಗಿ ಬಂದಿರುವ ಸಂಕಷ್ಟಗಳ ನಿವಾರಣೆಗೆ ನಮ್ಮ ಅಭಿವೃದ್ಧಿಗಾಗಿ ನಾವು ಎಂಬ ಕ್ರಿಯಾತ್ಮಕ ಹೆಜ್ಜೆ ಇಡಲು ರೈತರು ಮುಂದಾಗಬೇಕು ಎಂದು ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠದ ಅಧ್ಯಕ್ಷ ಅರವಿಂದ ಕೊಪ್ಪ ಹೇಳಿದರು.
ತಾಲೂಕಿನ ಬಸರಕೋಡ ಗ್ರಾಮದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಏರ್ಪಡಿಸಲಾಗಿದ್ದ ಪ್ರಸಾದಿ ಆಹಾರ ಭದ್ರತಾ ಮಹಿಳಾ ಸ್ವ ಸಹಾಯ ಸಂಘದ ರಚನೆ, ಗುಂಪು ಕೌಶಲ್ಯ ತರಬೇತಿ ಹಾಗೂ ಬಲವರ್ಧನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೇಕಿರುವ ಸಹಾಯಕ್ಕೆ ಯಾರನ್ನೂ ಎದುರು ನೋಡದೇ ಸ್ವ ಸಾಮರ್ಥ್ಯದ ಮೇಲೆ ಸ್ವಾವಲಂಬಿ ಬದುಕಿಗೆ ಅಗತ್ಯವಿರುವ ಸವಲತ್ತುಗಳನ್ನು ಒದಗಿಸಿ ರೈತರ ಸ್ವ ಅಭಿವೃದ್ಧಿಗೆ ರೈತ ಅಸಕ್ತ ಗುಂಪುಗಳು ಉತ್ತಮ ಭೂಮಿಕೆಯಾಗಿವೆ ಎಂದರು.
ಸಂಪನ್ಮೂಲ ವ್ಯಕ್ತಿ ಎಸ್.ಎನ್.ದೇಸಾಯಿ ಮಾತನಾಡಿದರು.
ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಸಂಗಮೇಶ ಸಜ್ಜನ ಮಾತನಾಡಿದರು.
ತಾಂತ್ರಿಕ ಗೋಷ್ಠಿಯಲ್ಲಿ ಗುಂಪು ರಚನೆಯ ಉದ್ದೇಶ, ಕಾರ್ಯ ಯೋಜನೆಗಳು, ದಾಖಲೆಗಳ ನಿರ್ವಹಣೆ, ಇಲಾಖೆಗಳ ಸೌಲಭ್ಯಗಳು ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು. ಚನ್ನಬಸಪ್ಪ ಯಾಳವಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪವಾಡೆಪ್ಪ ವಡ್ಡರ ನಿರೂಪಿಸಿದರು. ಮುತ್ತು ಮೆಣಸಿನಕಾಯಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

