Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ಜಿಲ್ಲಾ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕವು ೨೦೨೨-೨೩ ನೇ ಸಾಲಿನ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ವೈದ್ಯಕೀಯ, ಎಜನಿಯರಿಂಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದೆ. ೨೦೨೨-೨೩ ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.೮೦ ರಷ್ಟು, ಪಿಯುಸಿ ಪರೀಕ್ಷೆಯಲ್ಲಿ ಶೇ. ೭೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಜ.೫ ರೊಳಗೆ ತಮ್ಮ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಬಸವನಬಾಗೇವಾಡಿ, ಕೊಲ್ಹಾರ ತಾಲೂಕಿನ ಪ್ರತಿಭಾ ಪುರಸ್ಕಾರಕ್ಕೆ ಒಳಪಡುವ ವಿದ್ಯಾರ್ಥಿಗಳು ಸಂಘದ ಅಧ್ಯಕ್ಷ ಕೆ.ಎಂ.ಬೇಲಿ ಮೊ- ೯೦೧೯೪೪೨೨೪೮, ಪಿ.ಎಂ.ರತ್ನಾಕರ ಮೊ-೯೯೦೦೬೭೧೦೮೨, ಸಿ.ಟಿ.ಮಾದರ ಮೊ- ೮೬೧೮೨೬೦೭೯೪, ಎಸ್.ಬಿ.ಮಾದರ ಮೊ- ೯೪೮೧೫೭೧೦೭೮, ಎಚ್.ಎಂ. ಹೊಸಮನಿ ಮೊ- ೮೪೩೧೮೩೭೫೧೬ ಇವರಿಗೆ ಸಂಪರ್ಕಿಸಿ ಮಾಹಿತಿ ನೀಡಬೇಕು. ಜ.೭ ರಂದು ಪಟ್ಟಣದ ಮಸಬಿನಾಳ ರಸ್ತೆಯಲ್ಲಿರುವ ಯಲ್ಲಾಲಿಂಗ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಸಮಾಜದ ಪುರಸಭೆ, ಪಟ್ಟಣ ಪಂಚಾಯತ ಸದಸ್ಯರನ್ನು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರನ್ನು ಹಾಗೂ ಹೊಸದಾಗಿ ಸರ್ಕಾರಿ ನೌಕರಿಗೆ…
ಬಸವನಬಾಗೇವಾಡಿ: ಆಗಿನ ಕಾಲದ ಸಾಮಾಜಿಕ, ಸಮಾನತೆ, ದೀನದಲಿತರ, ಹಿಂದುಳಿದವರ ಶೈಕ್ಷಣಿಕ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸುಧಾರಣೆ ತಂದ ಮಹಾತ್ಮರಲ್ಲಿ ಸಾವಿತ್ರಿಬಾಯಿ ಪುಲೆಯವರು ಅಗ್ರಗಣ್ಯರು. ಅವರ ಆರ‍್ಶ ಸರಳ ಜೀವನವು ಎಲ್ಲರಿಗೂ ಮಾದರಿಯಾಗಿದೆ ಎಂದು ಮಾಳಿ ಸಮಾಜದ ಯುವ ಮುಖಂಡ ಜಟ್ಟಿಂಗರಾಯ ಮಾಲಗಾರ ಹೇಳಿದರು.ಪಟ್ಟಣದ ನಾಗೂರ ರಸ್ತೆಯಲ್ಲಿ ಮಾಳಿ ಸಮಾಜ ಬಾಂಧವರು ಬುಧವಾರ ಹಮ್ಮಿಕೊಂಡಿದ್ದ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರ ೧೯೩ ನೇ ಜಯಂತಿ ಕರ‍್ಯಕ್ರಮದಲ್ಲಿ ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ನಂತರ ಮಾತನಾಡಿದ ಅವರು, ಸಾವಿತ್ರಿಬಾಯಿ ಅವರು ಮಹಿಳಾ ಹಕ್ಕುಗಳ ಧ್ವನಿ ಎತ್ತಿದರು. ಸಾಮಾಜಿಕ ನಿಯಮಗಳ ವಿರುದ್ಧ ಅವರು ಹೋರಾಡಿದರು. ಅವರು ನೀಡಿರುವ ಕೊಡುಗೆಗಳು ದೇಶದ ಸಾಮಾಜಿಕ ರಚನೆಯಲ್ಲಿ ಅಳಿಸಲಾಗದ ಛಾಪು ಮೂಡಿಸಿವೆ ಎಂದರು.ಈ ಸಂದರ‍್ಭದಲ್ಲಿ ಅಪ್ಪಾಶಿ ಮಾಲಗಾರ, ಸಿದ್ದಣ್ಣ ಕಲ್ಲೂರ, ಬಸವರಾಜ ಮಾಲಗಾರ, ಪಾವಡೆಪ್ಪ ಮಾಲಗಾರ, ರಾಜು ಮಾಳಿ, ರಮೇಶ ಮಾಲಗಾರ, ಮುತ್ತು ಮಾಲಗಾರ, ಸಂಗಪ್ಪ ತೋಟದ, ಲಕ್ಷ್ಮಣ…
ಸಿಂದಗಿ: ಇಡೀ ರಾಜ್ಯದಲ್ಲಿ ರೈತರ ಕಬ್ಬು ಕಾರ್ಖಾನೆಗೆ ಹೋಗುತ್ತಿದೆ. ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಈಗಾಗಲೇ ನನಗೆ ಸಾಕಷ್ಟು ದೂರುಗಳು ಬಂದಿವೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಎಪಿಎಂಸಿಗೆ ದಿಡೀರನೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ಮೋಸ ಸೇರಿದಂತೆ ರೈತರಿಗೆ ವಂಚಿಸುವುದನ್ನು ತಡೆಯಲು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಬ್ಬಿನ ತೂಕದಲ್ಲಿ ಮೋಸ ನಡೆಯುತ್ತಿರುವ ಕುರಿತು ಹಲವಾರು ಬಾರಿ ರೈತ ಸಂಘಟನೆಗಳಿಂದ ನನಗೆ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ತೂಕ ಮಾಡಲು ಡಿಜಿಟಲ್ ತೂಕದ ಯಂತ್ರ ಅಳವಡಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ. ಏಕೆಂದರೆ ಡಿಜಿಟಲ್ ತೂಕದ ಯಂತ್ರಗಳನ್ನು ಬಳಸುವುದರಿಂದ ತೂಕದಲ್ಲಿ ರೈತರಿಗೆ ಯಾವುದೇ ಮೋಸವಾಗುವುದಿಲ್ಲ. ಈಗಾಗಲೇ ಕಾರ್ಖಾನೆಯವರಿಗೆ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಕೆಲವು ಕಾರ್ಖಾನೆಯ ಮಾಲೀಕರು ಅಳವಡಿಸಿದರೇ ಇನ್ನೂ ಕೆಲವು ಕಾರ್ಖಾನೆಯ ಮಾಲೀಕರು ಅಳವಡಿಸಿದೆ ಇಲ್ಲದಿರುವುದು ಕಂಡುಬಂದಿದೆ. ಕೆಲವು ಕಾರ್ಖಾನೆಯವರು ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ನನಗೆ…
ಸಿಂದಗಿ: ಸಾವಿತ್ರಿಬಾಯಿ ಪುಲೆ ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದರು ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಚನ್ನಪ್ಪಗೌಡ ಬಿರಾದಾರ ಹೇಳಿದರು.ತಾಲೂಕಿನ ಹಂದಿಗನೂರ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಸಾವಿತ್ರಿಬಾಯಿ ಪುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಎನಿಸಿಕೊಂಡಿದ್ದಾರೆ. ಮಹಿಳಾ ಶಿಕ್ಷಣಕ್ಕೆ ಅವರ ಕೊಡುಗೆ ಅನನ್ಯ. ಇಂದಿಗೂ ಮಹಿಳೆಯರಿಗೆ ಅವರು ಸ್ಫೂರ್ತಿಯಾಗಿದ್ದರೆ ಎಂದರು.ಈ ವೇಳೆ ಗ್ರಾಮ ಪಂಚಾಯತ್ ವತಿಯಿಂದ ಶಾಲೆಗೆ ೨೦ ಡೆಸ್ಕ ಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಆಯ್.ಎಂ.ಬಿರಾದಾರ, ಸಿದ್ದಣ್ಣ ಪಟ್ಟಣಶೆಟ್ಟಿ, ನಾನಾಗೌಡ ಬಿರಾದಾರ, ಭೀಮರಾಯ ಬಿಂಗೋಳ್ಳಿ, ಮಡಿವಾಳಪ್ಪ ಗುಬ್ಬೇವಾಡ, ಶಾಲೆಯ ಮುಖ್ಯಗುರು ಎಸ್.ಎಸ್. ಬುಲಬುಲೆ, ವ್ಹಿ.ಎಸ್.ಕುಲಕರ್ಣಿ, ವಿಜಯಕುಮಾರ ಚಿಂಚೋಳ್ಳಿ, ಶ್ರೀಕಾಂತ ಹಿರೇಮಠ, ಸೋಮಶೇಖರ ಪತ್ತಾರ ಸೇರಿದಂತೆ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಇದ್ದರು.
ಮುದ್ದೇಬಿಹಾಳ: ಪಟ್ಟಣದ ಹಡಲಗೇರಿಯಲ್ಲಿನ ಮಾದರಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆಯನ್ನು ಬುಧವಾರ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ನೆರವೇರಿಸಿದರು.ಈ ವೇಳೆ ಮಾತನಾಡಿದ ಅವರು ನಾವುಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುತ್ತಿದ್ದು ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು. ಸರಕಾರದ ಸವಲತ್ತು ಸೌಲಭ್ಯಗಳ ಸದುಪಯೋಗ ಪಡಿಸಿಕೊಂಡು ಬದುಕು ಸುಂದರವಾಗಿ ಕಟ್ಟಿಕೊಳ್ಳಬೇಕು ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಮ್.ಜಿ.ವ್ಹಿ.ಸಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಎ.ಗೂಳಿ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಬಸವರಾಜ ನಾಡಗೌಡ ಮಾತನಾಡಿ, ವಿದ್ಯಾರ್ಥಿಗಳು ಶ್ರದ್ಧೆ, ಆಸಕ್ತಿ ಏಕಾಗ್ರತೆಯಿಂದ ಶಿಕ್ಷಣ ಪಡೆದು ಮೌಲ್ಯಯುತ ಜೀವನ ರೂಪಿಸಿಕೊಳ್ಳಬೇಕು. ಮೊಬೈಲ್‌ನ್ನು ಗ್ರಂಥಾಲಯದಂತೆ ಬಳಸಿ ಜ್ಞಾನಾರ್ಜನೆಯ ಜೊತೆಗೆ ಕೌಶಲ್ಯ ರೂಪಿಸಿಕೊಂಡು ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕೃತಿಕ, ಕ್ರೀಡೆ ಹಾಗೂ ಎನ್.ಎಸ್.ಎಸ್. ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದೈಹಿಕ ಮತ್ತು ಮಾನಸಿಕ ಸದೃಡತೆ ಬೆಳೆಸಿಕೊಂಡು ವ್ಯಕ್ತಿತ್ವ ವಿಕಸನದ ಮೂಲಕ ಉತ್ತಮ ನಾಗರಿಕರಾಗಿ ಬೆಳೆಯಬೇಕು ಎಂದರು.ಪ್ರಾಚಾರ್ಯ ಡಾ.ಎಸ್.ಎಲ್ ಪಾಟೀಲ ಅಧ್ಯಕ್ಷೀಯ ನುಡಿಗಳನ್ನಾಡಿದರು.…
ಆರು ತಿಂಗಳ ವೇತನ ಪಾವತಿಗೆ ಆಗ್ರಹಿಸಿ ಆಲಮಟ್ಟಿಯ ವಿವಿಧ ಉದ್ಯಾನದ ಅರಣ್ಯ ಕಾರ್ಮಿಕರ ಧರಣಿ ಆಲಮಟ್ಟಿ: ಆರು ತಿಂಗಳ ವೇತನ ಪಾವತಿಗೆ ಆಗ್ರಹಿಸಿ ಆಲಮಟ್ಟಿಯ ವಿವಿಧ ಉದ್ಯಾನದ ಕೆಬಿಜೆಎನ್ ಎಲ್ ಅರಣ್ಯ ಕಾರ್ಮಿಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಬುಧವಾರ ಎರಡು ದಿನ ಪೂರೈಸಿತು.ಎರಡನೇ ದಿನ ಬುಧವಾರದ ಪ್ರತಿಭಟನೆಗೆ ಜಯಕರ್ನಾಟಕ ಜನಪರ ವೇದಿಕೆ ಹಾಗೂ ಬಿಸಿಯೂಟ ಕಾರ್ಯಕರ್ತರ ಸಂಘಟನೆಯವರು ಸೇರಿ ನಾಣಾ ಸಂಘಟನೆಗಳ ಮುಖಂಡರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. , ವಿವಿಧ ಸಂಘಟನೆಯ ಮುಖಂಡರಾದ ಭರತಕುಮಾರ, ಶೋಭಾ ಬಂಡಿವಡ್ಡರ, ದ್ಯಾಮಣ್ಣ ಬಿರಾದಾರ ಮೊದಲಾದವರು ಮಾತನಾಡಿ, ಪ್ರತಿಭಟನೆ ನಡೆಸಿ ಎರಡೂ ದಿನ ಕಳೆದರೂ ಕೆಬಿಜೆಎನ್ ಎಲ್ ಮುಖ್ಯ ಎಂಜಿನಿಯರ್ ಪ್ರತಿಭಟನಾ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸುವ ಪ್ರಯತ್ನ ನಡೆಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿಗುವುದು ನಿತ್ಯ ೫೦೦ ರೂ, ಅಂತಹ ಆರ್ಥಿಕ ಮಟ್ಟದಲ್ಲಿಯೂ ಆರು ತಿಂಗಳ ಕಾಲ ವೇತನ ಆಗದಿದ್ದರೇ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.ಮಂಗಳವಾರ…
ಮುದ್ದೇಬಿಹಾಳ: ಜ.೪ ರಿಂದ ಚಿತ್ರದುರ್ಗ ಜಿಲ್ಲೆಯ ಚಳ್ಳಿಕೆರೆಯ ಟ್ಯಾಲೆಂಟ್ ಡೆವಲಪ್‌ಮೆಂಟ್ ಸೆಂಟರ್ (ಭಾರತೀಯ ವಿಜ್ಞಾನ ಸಂಸ್ಥೆ) ನಲ್ಲಿ ನಡೆಯುವ ೧೦ ದಿನಗಳ ವಿಜ್ಞಾನ ತರಬೇತಿಗೆ ತಾಲೂಕಿನಿಂದ ಮುದ್ದೇಬಿಹಾಳ ಸರ್ಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಎ.ಎಸ್.ಬಾಗವಾನ ಆಯ್ಕೆಯಾಗಿದ್ದಾರೆ.
ಮುದ್ದೇಬಿಹಾಳ: ಪಟ್ಟಣದ ಮೆಹಬೂಬ ನಗರದ ಸರಕಾರಿ ರ‍್ದು ಪ್ರೌಢಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ೧೯೩ ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಈ ವೇಳೆ ಮುಖ್ಯೋಪಾಧ್ಯಾಯ ಎ.ಸಿ.ಕೆರೂರ ಮಾತನಾಡಿ, ಮದುವೆಯ ಸಮಯದಲ್ಲಿ ಸಾವಿತ್ರಿಬಾಯಿ ಅನಕ್ಷರಸ್ಥರಾಗಿದ್ದರು. ತೋಟದಲ್ಲಿ ಕೆಲಸ ಮಾಡುತ್ತ ಶಿಕ್ಷಣ ಪಡೆದು ಮೊದಲ ಭಾರತೀಯ ಮಹಿಳಾ ಶಿಕ್ಷಕಿ ಮತ್ತು ಮುಖ್ಯೋಪಾಧ್ಯಾಯನಿಯಾಗಿ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದವರು. ಅವರ ಆರ‍್ಶಗಳನ್ನು ಇಂದಿನ ವಿದ್ಯರ‍್ಥಿಗಳು ಪಾಲಿಸಬೇಕು ಎಂದರು.ಕರ‍್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಎಲ್.ಎಮ್.ನಾಯ್ಕೋಡಿ ವಹಿಸಿದ್ದರು. ರೇಣುಕವ್ವ ಎಸ್.ಬಿ, ತಬಸ್ಸುಮ್ ಖಾಜಿ, ಯಾಸ್ಮೀನ ಮುಲ್ಲಾ, ವಿದ್ಯರ‍್ಥಿಗಳು ಸೇರಿದಂತೆ ಮತ್ತೀತರರು ಇದ್ದರು. ಕೆ.ಎಸ್.ಚಟ್ಟಿ ಸ್ವಾಗತಿಸಿದರು. ಸಂತೋಷ ಕುಮಾರ ವಂದಿಸಿದರು.
ಮುದ್ದೇಬಿಹಾಳ: ಸಿದ್ದೇಶ್ವರ ಶ್ರೀ ಗಳು ತಮ್ಮ ಜೀವನವನ್ನು ಸರಳವಾಗಿ ನಡೆಸುವ ಮೂಲಕ ಇಡೀ ಜಗತ್ತಿಗೇ ಮಾದರಿಯಾದರು ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ ಹೇಳಿದರು.ಪಟ್ಟಣದ ಹುಡ್ಕೋದಲ್ಲಿರುವ ಸಾರ್ವಜನಿಕ ಉದ್ಯಾನವನದಲ್ಲಿ ಹಸಿರು ತೋರಣ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಜಯಪುರ ಜ್ಞಾನ ಯೋಗಾಶ್ರಮದ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶ್ರೀಗಳು ಜಗತ್ತಿನ ದೊಡ್ಡ ದಾರ್ಶನಿಕರು. ಮುದ್ದೇಬಿಹಾಳದೊಂದಿಗೆ ಅವರು ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದರು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.ಸಾಹಿತಿ ಚಂದ್ರಶೇಖರ ಇಟಗಿ, ವಚನ ಸಾಹಿತಿ ಆರ್.ಜಿ.ಕಿತ್ತೂರ, ಉಪನ್ಯಾಸಕ ಪರಶುರಾಮ ಚೌಡಕೇರ, ಬಳಗದ ಅಧ್ಯಕ್ಷ ರವಿ ಗೂಳಿ ಮಾತನಾಡಿ, ಶ್ರೀಗಳ ಜೀವನವೇ ನಮಗೆ ಮಾದರಿ. ಅವರು ಮಾತಿಗಿಂತ ಕೃತಿ ಲೇಸೆಂದು ಬದುಕಿದವರು. ಬುದ್ಧನ ಜ್ಞಾನ, ಮಹಾತ್ಮಾ ಗಾಂಧಿಯವರ ಸರಳತೆ, ಮಾನವ ಜೀವನ ಪ್ರೀತಿ ಅಳವಡಿಸಿಕೊಂಡಿದ್ದರು. ಜನಸಾಮಾನ್ಯರ ಅರಿವಿನ ಮಿತಿಗೆ ಸಿಗದ ಶ್ರೇಷ್ಠ ಯತಿಗಳಾಗಿದ್ದರು. ಆಧ್ಯಾತ್ಮಿಕ ಸಂದೇಶದೊಂದಿಗೆ ಪ್ರಕೃತಿ, ಕಲೆ, ಸಾಹಿತ್ಯ ಕುರಿತು ಅಪಾರ ಜ್ಞಾನದ ಆಗರವಾಗಿದ್ದರು. ನಾವು…
ಆಲಮಟ್ಟಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಬುಧವಾರ ರಾತ್ರಿ ರೈಲೊಂದರ ಆಗಮನದ ಕುರಿತಾಗಿ ಪ್ರಕಟಿಸಿದ ದ್ವನಿ ಮುದ್ರಿತ ಆನೌನ್ಸ್ ಗೊಂದಲಮಯದಿಂದ ಸಾಕಷ್ಟು ರೈಲ್ವೆ ಪ್ರಯಾಣಿಕರು ಗಲಿಬಿಲಿಗೊಂಡು ಕಕ್ಕಾಬಿಕ್ಕಯಾದ ಘಟನೆ ನಡೆಯಿತು. ರೈಲು ಯಾವ ಪ್ಲಾಟ್ ಫಾರ್ಮ್ ದಲ್ಲಿ ಬರುತ್ತದೆ ಎಂದು ಪ್ರಯಾಣಿಕರು ಪರಸ್ಪರ ವಿಚಾರಿಸುತ್ತಿದ್ದಾಗಲೇ ಕತ್ತಲೆಯಲ್ಲಿ ಆ ರೈಲು ಹೆಡ್ ಲೈಟ್ ಬೆಳಕಿನೊಂದಿಗೆ ಹಾನ್೯ದ ಕರ್ಕಶ್ ಶಬ್ದ ಕೂಕಾಕುತ್ತಾ ಪ್ಲಾಟ್ ಫಾರ್ಮ್ ಒಳಗೆ ಏಂಟ್ರಿ ಕೊಟ್ಟಿತ್ತು. ರೈಲು ಆಗಮಿಸುತ್ತಿರುವ ದೃಶ್ಯ ಕಂಡು ಪ್ರಯಾಣಿಕರು ಹೌಹಾರಿದರು. ಗಾಬರಿಗೊಂಡು ಅತ್ತಂದಿತ್ತ ರೈಲ್ವೆ ಮೇಲ್ಸೇತುವೆ ಏರಿಳಿದು ಸುಸ್ತಾದರು. ಸಖತ್ ಹೈರಾಣಕ್ಕಿಡಾಗಿ ಫಜೀತಿಗೊಂಡರು.ಹುಬ್ಬಳ್ಳಿಯಿಂದ ಗದಗ, ಬಾಗಲಕೋಟ, ಮೂಲಕ ಆಲಮಟ್ಟಿ ಮಾರ್ಗವಾಗಿ ವಿಜಯಪುರ ಹಾಗೂ ಸೋಲಾಪೂರಕ್ಕೆ ಹೊರಟಿದ್ದ ಎಸ್.ಎಸ್. ಹುಬ್ಬಳ್ಳಿ-ಸೋಲಾಪುರ ಈ ರೈಲು ಆಲಮಟ್ಟಿ ರೈಲ್ವೆ ಸ್ಟೇಷನ್ ನಲ್ಲಿ ಆಗಮನದ ಕುರಿತಾದ ಆನೌನ್ಸ್ ಪ್ರಯಾಣಿಕರಿಗೆ ಭಾರೀ ಕಿರಿಕಿರಿ,ತಲೆನೋವು ಉಂಟು ಮಾಡಿತು. ಮಧ್ಯದ ಹಳಿಯಲ್ಲಿ ಗೂಡ್ಸ್ ರೈಲೊಂದು ಇದೇ ಸಮಯದಲ್ಲಿ ಬಂದು ನಿಂತಿದ್ದರಿಂದ ಮತ್ತಷ್ಟು ಪ್ರಯಾಣಿಕರಿಗೆ ತೊಂದರೆವಾಗಿತ್ತು.ವಯೋವೃದರು,ಚಿಕ್ಕಮಕ್ಕಳು, ಮಹಿಳೆಯರು ತೊಂದರೆ ಪಟ್ಟರು.…
