ಆರು ತಿಂಗಳ ವೇತನ ಪಾವತಿಗೆ ಆಗ್ರಹಿಸಿ ಆಲಮಟ್ಟಿಯ ವಿವಿಧ ಉದ್ಯಾನದ ಅರಣ್ಯ ಕಾರ್ಮಿಕರ ಧರಣಿ
ಆಲಮಟ್ಟಿ: ಆರು ತಿಂಗಳ ವೇತನ ಪಾವತಿಗೆ ಆಗ್ರಹಿಸಿ ಆಲಮಟ್ಟಿಯ ವಿವಿಧ ಉದ್ಯಾನದ ಕೆಬಿಜೆಎನ್ ಎಲ್ ಅರಣ್ಯ ಕಾರ್ಮಿಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಬುಧವಾರ ಎರಡು ದಿನ ಪೂರೈಸಿತು.
ಎರಡನೇ ದಿನ ಬುಧವಾರದ ಪ್ರತಿಭಟನೆಗೆ ಜಯಕರ್ನಾಟಕ ಜನಪರ ವೇದಿಕೆ ಹಾಗೂ ಬಿಸಿಯೂಟ ಕಾರ್ಯಕರ್ತರ ಸಂಘಟನೆಯವರು ಸೇರಿ ನಾಣಾ ಸಂಘಟನೆಗಳ ಮುಖಂಡರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ,
ವಿವಿಧ ಸಂಘಟನೆಯ ಮುಖಂಡರಾದ ಭರತಕುಮಾರ, ಶೋಭಾ ಬಂಡಿವಡ್ಡರ, ದ್ಯಾಮಣ್ಣ ಬಿರಾದಾರ ಮೊದಲಾದವರು ಮಾತನಾಡಿ, ಪ್ರತಿಭಟನೆ ನಡೆಸಿ ಎರಡೂ ದಿನ ಕಳೆದರೂ ಕೆಬಿಜೆಎನ್ ಎಲ್ ಮುಖ್ಯ ಎಂಜಿನಿಯರ್ ಪ್ರತಿಭಟನಾ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸುವ ಪ್ರಯತ್ನ ನಡೆಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಗುವುದು ನಿತ್ಯ ೫೦೦ ರೂ, ಅಂತಹ ಆರ್ಥಿಕ ಮಟ್ಟದಲ್ಲಿಯೂ ಆರು ತಿಂಗಳ ಕಾಲ ವೇತನ ಆಗದಿದ್ದರೇ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಮಂಗಳವಾರ ರಾತ್ರಿಯಿಡಿ ಚಳಿಯಲ್ಲಿಯೇ ಧರಣಿ ಸ್ಥಳದಲ್ಲಿಯೇ ಮಲಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಎರಡನೇ ದಿನದ ಹೋರಾಟದಲ್ಲಿ ಎಸ್.ಎ. ಕುಂಬಾರ, ಸಂಗಮೇಶ ಯರನಾಳ, ಅವ್ಪಪ್ಪ ತಳೇವಾಡ, ಮುತ್ತು ಬಡಿಗೇರ, ಪ್ರಭು ಹಿರೇಮಠ, ಲಕ್ಷ್ಮಣ ಬ್ಯಾಲ್ಯಾಳ, ಮಲ್ಲಿಕಾರ್ಜುನ ನರಸನಗೌಡರ, ಮೀನಾಕ್ಷಿ ರಾಠೋಡ, ಯಲ್ಲವ್ವ ಮೇಟಿ, ಗುರುಲಿಂಗವ್ವ ಗೌಡರ, ಸುಶಿಲಾ ಪಾಟೀಲ, ರುಕ್ಮವ್ವ ಮಾದರ, ಚೆನ್ನಮ್ಮ ಮಠ ಮತ್ತೀತರರು ಇದ್ದರು.

