ಆಲಮಟ್ಟಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಬುಧವಾರ ರಾತ್ರಿ ರೈಲೊಂದರ ಆಗಮನದ ಕುರಿತಾಗಿ ಪ್ರಕಟಿಸಿದ ದ್ವನಿ ಮುದ್ರಿತ ಆನೌನ್ಸ್ ಗೊಂದಲಮಯದಿಂದ ಸಾಕಷ್ಟು ರೈಲ್ವೆ ಪ್ರಯಾಣಿಕರು ಗಲಿಬಿಲಿಗೊಂಡು ಕಕ್ಕಾಬಿಕ್ಕಯಾದ ಘಟನೆ ನಡೆಯಿತು. ರೈಲು ಯಾವ ಪ್ಲಾಟ್ ಫಾರ್ಮ್ ದಲ್ಲಿ ಬರುತ್ತದೆ ಎಂದು ಪ್ರಯಾಣಿಕರು ಪರಸ್ಪರ ವಿಚಾರಿಸುತ್ತಿದ್ದಾಗಲೇ ಕತ್ತಲೆಯಲ್ಲಿ ಆ ರೈಲು ಹೆಡ್ ಲೈಟ್ ಬೆಳಕಿನೊಂದಿಗೆ ಹಾನ್೯ದ ಕರ್ಕಶ್ ಶಬ್ದ ಕೂಕಾಕುತ್ತಾ ಪ್ಲಾಟ್ ಫಾರ್ಮ್ ಒಳಗೆ ಏಂಟ್ರಿ ಕೊಟ್ಟಿತ್ತು. ರೈಲು ಆಗಮಿಸುತ್ತಿರುವ ದೃಶ್ಯ ಕಂಡು ಪ್ರಯಾಣಿಕರು ಹೌಹಾರಿದರು. ಗಾಬರಿಗೊಂಡು ಅತ್ತಂದಿತ್ತ ರೈಲ್ವೆ ಮೇಲ್ಸೇತುವೆ ಏರಿಳಿದು ಸುಸ್ತಾದರು. ಸಖತ್ ಹೈರಾಣಕ್ಕಿಡಾಗಿ ಫಜೀತಿಗೊಂಡರು.
ಹುಬ್ಬಳ್ಳಿಯಿಂದ ಗದಗ, ಬಾಗಲಕೋಟ, ಮೂಲಕ ಆಲಮಟ್ಟಿ ಮಾರ್ಗವಾಗಿ ವಿಜಯಪುರ ಹಾಗೂ ಸೋಲಾಪೂರಕ್ಕೆ ಹೊರಟಿದ್ದ ಎಸ್.ಎಸ್. ಹುಬ್ಬಳ್ಳಿ-ಸೋಲಾಪುರ ಈ ರೈಲು ಆಲಮಟ್ಟಿ ರೈಲ್ವೆ ಸ್ಟೇಷನ್ ನಲ್ಲಿ ಆಗಮನದ ಕುರಿತಾದ ಆನೌನ್ಸ್ ಪ್ರಯಾಣಿಕರಿಗೆ ಭಾರೀ ಕಿರಿಕಿರಿ,ತಲೆನೋವು ಉಂಟು ಮಾಡಿತು. ಮಧ್ಯದ ಹಳಿಯಲ್ಲಿ ಗೂಡ್ಸ್ ರೈಲೊಂದು ಇದೇ ಸಮಯದಲ್ಲಿ ಬಂದು ನಿಂತಿದ್ದರಿಂದ ಮತ್ತಷ್ಟು ಪ್ರಯಾಣಿಕರಿಗೆ ತೊಂದರೆವಾಗಿತ್ತು.
ವಯೋವೃದರು,ಚಿಕ್ಕಮಕ್ಕಳು, ಮಹಿಳೆಯರು ತೊಂದರೆ ಪಟ್ಟರು. ಬುಧವಾರ ರಾತ್ರಿ 7 ಗಂಟೆ 6 ನಿಮಿಷದ ವೇಳೆಗೆ ರೈಲು ಆಗಮಿಸಿದ ಸಂದರ್ಭದಲ್ಲಿ ಏಕಾಏಕಿ ಆನೌನ್ಸ್ ಉಲ್ಟಾಪಲ್ಟಾವಾಗಿತ್ತು. ಮೊದಲು ಶೀಘ್ರದಲ್ಲೇ ಒಂದನೇ ಪ್ಲಾಟ್ ಫಾರ್ಮ್ ಅಂತಾ ಪ್ರಕಟಿಸಿದ ಸ್ವಲ್ಪ ಹೊತ್ತಿನಲ್ಲೇ ಎರಡನೇ ಪ್ಲಾಟ್ ಫಾರ್ಮ್ ಅಂತಾ ಧ್ವನಿ ಮುದ್ರಿತ ಸಂದೇಶದಿಂದ ಘೋಷಣೆ ಮಾಡಲಾಯಿತು. ಈ ವೇಳೆ ಬಹಳಷ್ಟು ಪ್ರಯಾಣಿಕರು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ಗಡಿಬಿಡಿಯಲ್ಲಿ ಅತ್ತಿಂದಿತ್ತ ಪುನಃ ಪ್ಲಾಟ್ ಫಾರ್ಮ್ ಹತ್ತಿಳಿದು ಹೈರಾಣರಾದರು. ಕೊನೆಗೂ ಧಾವಂತದಿಂದ ರೈಲೊಳಗೆ ಶೀಟ್ ಹಿಡಿದು ನೆಮ್ಮದಿಯಿಂದ ಉಸರಿಸಿ ಕುಳಿತರು. ಆದರೆ ಆ ಪ್ಯಾಸೆಂಜರ್ ಹುಬ್ಬಳ್ಳಿ- ಸೋಲಾಪೂರ ರೈಲು ಅರ್ಧಗಂಟೆಗೂ ಹೆಚ್ಚು ಕಾಲ ಮುಂದೆ ಚಲಿಸಲಿಲ್ಲ. ಆಲಮಟ್ಟಿಯ ಪ್ಲಾಟ್ ಫಾರ್ಮ್ ಎರಡರಲ್ಲೇ ಅರ್ಧಗಂಟೆಗಳ ಕಾಲ ಠಿಕಾಣಿ ಹೂಡಿತು. ಕಾರಣ ಈ ವೇಳೆ ಪಂಢರಪುರದಿಂದ ಮೈಸೂರಿನತ್ತ ಹೊರಟಿದ್ದ ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲಿಗೆ ಆಲಮಟ್ಟಿಯಲ್ಲಿ ಕ್ರಾಸಿಂಗ್ ನೀಡಲಾಗಿತ್ತು. ಹೀಗಾಗಿ ಮತ್ತಿಷ್ಟು ಪ್ಯಾಸೆಂಜರ್ ರೈಲು ಪ್ರಯಾಣಿಕರಿಗೆ ಕಸಿವಿಸಿ ಉಂಟಾಯಿತು.
ಮೊದಲು ಪ್ಲಾಟ್ ಫಾರ್ಮ್ ನಂಬರ ಒಂದು ಅಂತಾ ಧ್ವನಿಮುದ್ರಣದ ಮೂಲಕ ಪ್ರಕಟಿಸಿ ಸ್ವಲ್ಪ ಹೊತ್ತಿನ ಬಳಿಕ ಪ್ಲಾಟ್ ಫಾರ್ಮ್ ನಂಬರ ಎರಡರಲ್ಲಿ ಕೆಲವೇ ಕ್ಷಣದಲ್ಲಿ ರೈಲು ಬಂದು ಸೇರಲಿದೆ ಎಂದು ಆಗಾಗ ಹೀಗೆ ಎಡವಟ್ಟು ರೀತಿಯಲ್ಲಿ ಆನೌನ್ಸ್ ಮಾಡುತ್ತಾ ಪ್ರಯಾಣಿಕರಿಗೆ ಕೊನೆ ಘಳಿಗೆಯಲ್ಲಿ ಸಾಕಷ್ಟು ತೊಂದರೆ ಅನುಭಿಸುವಂತೆ ಮಾಡುವುದು ಸರಿ ಅಲ್ಲಾ. ಒಮ್ಮೆ ಇತ್ತ ಮತ್ತೊಮ್ಮೆ ಅತ್ತ ಪ್ಲಾಟ್ ಫಾರ್ಮ್ ಅಂತಾ ಘೋಷಿಸಿದರೆ ಪ್ರಯಾಣಿಕರಿಗೆ ಎಷ್ಟು ತೊಂದರೆಯಾದೀತು ಅಂತಾ ಯೋಚಿಸಬೇಕು ಎಂದು ಹೆಸರು ಹೇಳಲ್ಚಿಸದ ಪ್ರಯಾಣಿಕರೊಬ್ಬರು ಇಲ್ಲಿನ ರೈಲ್ವೆ ಸ್ಟೇಷನ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
Subscribe to Updates
Get the latest creative news from FooBar about art, design and business.
Related Posts
Add A Comment

