Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಜಿಲ್ಲೆಯ ಮದಭಾವಿ-ಕವಲಗಿ ಹತ್ತಿರ ಶನಿವಾರ ಸಂಭವಿಸಿದ ಸಾರಿಗೆ ಬಸ್‌ಗಳ ಅಪಘಾತಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ. ಪಾಟೀಲ ಅವರು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಗಾಯಾಳುಗಳನ್ನು ದಾಖಲಿಸಿರುವ ಆಸ್ಪತ್ರೆಯ ವೈದ್ಯಾಧಿಕಾರಿ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಸೂಕ್ತ ಸೂಚನೆಗಳನ್ನು ನೀಡಿದ್ದಾರೆ.ಅಪಘಾತದ ಸುದ್ದಿ ತಿಳಿದ ಕೂಡಲೇ ಸಚಿವರು, ಅಪಘಾತದ ಬಗ್ಗೆ ಮಾಹಿತಿ ಪಡೆದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ದೊರೆಯಲು ಅಗತ್ಯ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ವಿಜಯಪುರ: ವಿಜಯಪುರ ಜಿಲ್ಲೆಯ ಮದಭಾವಿ-ಕವಲಗಿ ಹತ್ತಿರ ಶನಿವಾರ ಸಂಭವಿಸಿದ ಸಾರಿಗೆ ಬಸ್‌ಗಳ ಅಪಘಾತದಲ್ಲಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಭೇಟಿ ಮಾಡಿ, ಗಾಯಾಳುಗಳ ಅಗತ್ಯ ಚಿಕಿತ್ಸೆಗೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಶನಿವಾರ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಗಾಯಾಳುಗಳ ಕುರಿತು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದು, ಗಾಯಾಳುಗಳಿಗೆ ಅಗತ್ಯವಿರುವ ಎಕ್ಸರೇ, ಸಿಟಿ ಸ್ಕ್ಯಾನ್ ಸೇರಿದಂತೆ ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವಂತೆ ಸೂಚನೆ ನೀಡಿದ್ದಾರೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೂ ಅಗತ್ಯ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ವಿಜಯಪುರ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯುವನಿಧಿ ಯೋಜನೆಯ ನೋಂದಣಿ ಮಾಡಿಕೊಳ್ಳಲು ಡಿಸೆಂಬರ್ ೨೬, ೨೦೨೩ರಿಂದ ಆರಂಭಗೊಂಡಿದೆ. ೨೦೨೨-೨೩ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡಿ ೨೦೨೩ರಲ್ಲಿ ತೇರ್ಗಡೆಯಾಗಿ ಫಲಿತಾಂಶ ಪ್ರಕಟಗೊಂಡ ೧೮೦ ದಿವಸದ ಒಳಗಡೆ ಕೆಲಸ ದೊರೆಯದ ಪದವಿಧರ ಹಾಗೂ ಡಿಪ್ಲೋಮಾ ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.ಈ ಯೋಜನೆಯಡಿ ಅರ್ಹ ಪದವಿಧರರಿಗೆ ಮಾಸಿಕ ೩,೦೦೦ರೂ ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ರೂ ೧,೫೦೦ ಮಾಸಿಕ ಭತ್ಯೆ ಸಿಗಲಿದೆ. ಹಾಗಾಗಿ ೨೦೨೨-೨೩ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗ ಯುವಕ/ಯುವತಿಯರು ನೋಂದಾಯಿಸಿಕೊಳ್ಲಬಹುದಾಗಿದೆ. ಸರ್ಕಾರಿ, ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ, ಸ್ವಯಂ ಉದ್ಯೋಗ ಮಾಡುತ್ತಿರುವ ಹಾಗೂ ಪದವಿ/ಡಿಪ್ಲೋಮಾ ಮುಗಿದ ನಂತರ ಮುಂದಿನ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಹರಿರುವುದಿಲ್ಲ.ಅರ್ಹ ಅಭ್ಯರ್ಥಿಗಳು sevasindhugs.karnataka.gov.in ಲಾಗಿನ್ ಆಗಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ಪದವಿ/ಡಿಪ್ಲೋಮಾ ತೇರ್ಗಡೆಯಾದ ಅಭ್ಯರ್ಥಿಗಳ ಶೈಕ್ಷಣಿಕ ಪ್ರಮಾಣ ಪತ್ರವನ್ನು ಓಂಆ ಪೋರ್ಟಲ್‌ನಲ್ಲಿ ಸಂಬಂಧಪಟ್ಟ ವಿಶ್ವ ವಿದ್ಯಾಲಯಗಳು, ಶೈಕ್ಷಣಿಕ ಸಂಸ್ಥೆಗಳು, ಮಂಡಳಿಗಳು ಇಂದೀಕರಿಸಿರುವುದನ್ನು ಖಚಿತಪಡಿಸಿಕೊಳ್ಳಲು nad.karntaka.gov.in/#/Yuvnidhi ಜಾಲತಾಣದಲ್ಲಿ ಲಾಗಿನ್…
ವಿಜಯಪುರ: ವಿಜಯಪುರದ ಶ್ರೀ ಸಿದ್ದೇಶ್ವರ ಜಾತ್ರೆಗೆ ಸಮರ್ಪಕವಾಗಿ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ೧೧ಕೆವ್ಹಿ ಮಾರ್ಗಗಳಿಗೆ ದುರಸ್ತಿ ಕಾಮಗಾರಿ ಕೈಗೊಳ್ಳುವುದರಿಂದ ೧೧೦/೧೧ ಕೆವ್ಹಿ ಕೆಐಎಡಿಬಿ ವಿಜಯಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಓಲ್ಡ್ ಇಂಡಸ್ಟ್ರಿ ಫೀಡರ್ ಮತ್ತು ಎಲ್.ಬಿ.ಎಸ್.ಫೀಡರ್‌ಗಳ ಮೇಲೆ ಬರುವ ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.ಜ.೮ ರಂದು ಓಲ್ಡ್ ಇಂಡಸ್ಟ್ರಿ ಫೀಡರ್ ಮೇಲೆ ಬರುವ ಪಾನಿ ನಗರ, ಪರಮೇಶ್ವರ ನಗರ, ಆದಿಲ್‌ಶಾಹಿ, ಶಿಕಾರಖಾನೆ, ಸ್ಟೇಶನ್ ಬ್ಯಾಕ್ ರಸ್ತೆ, ಸಾ ಮಿಲ್ ಏರಿಯಾ, ಸ್ಟೇಡಿಯಂ ರೋಡ್ ಎಪಿಎಂಸಿ ಮಾರ್ಗಗಳಿಗೆ ಬೆಳಿಗ್ಗೆ ೮ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.ಜ.೧೦ ರಂದು ಎಲ್.ಬಿ.ಎಸ್. ಫೀಡರ್ ಮೇಲೆ ಬರುವ ಇಂಡಿ ರಸ್ತೆ, ವಿಜಯ ಟೈರ‍್ಸ್, ಎನ್.ಎಚ್.-೫೨, ಬೊಂಬಾಳ ಅಗಸಿ, ರಜಪೂತ ಗಲ್ಲಿ, ಮಿನಿ ಮಾದರ ಓಣಿ, ಕೋರಿ ಚೌಕ್, ನಾಲಬಂದ್ ಚೌಕ್, ಸಿ.ಬಿ.ಎಸ್. ಮಾರ್ಕೆಟ್, ಬಾರಾಕಮಾನ್ ಹಾಗೂ ಜೋಳದ ಮಾರ್ಕೆಟ್ ಪ್ರದೇಶಗಳಿಗೆ ಬೆಳಿಗ್ಗೆ ೯ ರಿಂದ ಸಂಜೆ ೫ ಗಂಟೆಯವರೆಗೆ…
ಸಿಂದಗಿ: ವಿಜಯಪುರ ಜಿಲ್ಲೆಯನ್ನು ವಿಭಜನೆ ಮಾಡಿ ಹೊಸ ಜಿಲ್ಲೆ ಸೃಷ್ಟಿ ಮಾಡುವುದಾದರೆ ಸಿಂದಗಿ ತಾಲೂಕಾ ಜಿಲ್ಲಾ ಕೇಂದ್ರವಾಗಿ ಮಾರ್ಪಡಿಸಲು ವಿವಿಧ ಮಹಿಳಾ ಸಂಘಟನೆಯ ಪದಾಧಿಕಾರಿಗಳು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ಉಪವಿಭಾಗಾಧಿಕಾರಿಗಳು ಇಂಡಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷೆ ಶಿಲ್ಪಾ ಕುದರಗೊಂಡ, ಸಾಧನಾ ಸಂಘಟನೆಯ ಅನಸುಭಾಯಿ ಪರಗೊಂಡ, ಜನಜಾಗೃತಿ ಸಂಘಟನೆಯ ನೀಲಮ್ಮ ಯಡ್ರಾಮಿ, ಶಾಮಲಾ ಮಂದೇವಾಲಿ, ಅನುಸುಬಾಯಿ ಮೇಲಿನಮನಿ, ಗೌಸಿಯಾ ಶೇಖ, ಜಯಶ್ರೀ ನಾಟೀಕಾರ, ಲಕ್ಷ್ಮೀ ಕಲಾಲ, ಯಮನಾಬಾಯಿ ಮಾದರ, ಅನ್ನಪೂರ್ಣ ದೇವಕರ ಸೇರಿದಂತೆ ಅನೇಕರು ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿಯೇ ಸಿಂದಗಿ ತಾಲೂಕು ಅತೀ ಹೆಚ್ಚು ಭೌಗೋಳಿಕವಾಗಿ ಜನಸಂಖ್ಯೆಯನ್ನು ಹೊಂದಿದ್ದು, ವಿಸ್ತೀರ್ಣದಲ್ಲಿಯೂ ದೊಡ್ಡದಾಗಿದೆ. ಸಿಂದಗಿಯು ಪ್ರಸ್ತುತ ಕೇಂದ್ರಸ್ಥಾನದಲ್ಲಿದ್ದು ಸುತ್ತ ಮುತ್ತಲಿನ ಕಲಬುರ್ಗಿ, ಯಾದಗಿರಿ, ರಾಯಚೂರ ಹಾಗೂ ವಿಜಯಪುರ ಜಿಲ್ಲೆಗಳ ಹೆಚ್ಚಿನ ಸಂಪರ್ಕ ಹೊಂದಿದೆ. ಮತ್ತು ಕಂದಾಯ ಇಲಾಖೆಯಲ್ಲಿ ಅತೀ ಹೆಚ್ಚಿನ ಆದಾಯವನ್ನು ಸಿಂದಗಿ ತಾಲೂಕಿನಿಂದ ಸಂಗ್ರಹವಾಗುತ್ತಿದ್ದು ವ್ಯವಸ್ಥಿತ ನಗರ ವ್ಯವಸ್ಥೆಯನ್ನು ಹೊಂದಿದೆ. ಕಾರಣ…
ಸಿಂದಗಿ: ಮನೆಯಿಂದ ಶಾಲೆಗೆ ಬಂದ ಮಗುವಿನಲ್ಲಿ ಉತ್ತಮ ಸಂಸ್ಕಾರ ತುಂಬಿ ಪೂರ್ಣಪ್ರಜ್ಞನನ್ನಾಗಿ ಮಾಡಿ ಸಮಾಜಕ್ಕೆ ಕೊಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಆದರ್ಶ ಶಿಕ್ಷಕ ಎಚ್.ಟಿ. ಕುಲಕರ್ಣಿ ಹೇಳಿದರು.ಪಟ್ಟಣದ ಕ್ರಿಯೇಟಿವ್ ಕಿಡ್ಸ್ ಹೋಮ್‌ದ ಸಭಾಭವನದಲ್ಲಿ ಹಮ್ಮಿಕೊಂಡ ಕ್ರಿಯೇಟಿವ್ ಕಿಡ್ಸ್ ಫೆಸ್ಟಿವಲ್-೨೦೨೪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳ ಹೃದಯವು ಹದವಾದ ಭೂಮಿಯಿದ್ದಂತೆ ಅವರಿಗೆ ಶಿಕ್ಷಣ ನೀಡುವ ಜೊತೆಗೆ ಸಂಸ್ಕಾರ ನೀಡಬೇಕು. ಉತ್ತಮ ನಾಗರಿಕರನ್ನಾಗಿ ಸಿದ್ದಪಡಿಸಬೇಕು. ಮಕ್ಕಳಿಗೆ ಪರಿಸರದ ಪರಿಕಲ್ಪನೆ ಮೂಡಿಸಬೇಕು. ಕ್ರಿಯೇಟಿವ್ ಕಿಡ್ಸ್ ಹೋಮ್ ಪೂರ್ವಪ್ರಾಥಮಿಕ ಶಾಲೆ ತನ್ನ ವಾರ್ಷಿಕ ಸ್ನೇಹ ಸಮ್ಮೇಳವನ್ನು ಕ್ರಿಯೇಟಿವ್ ಕಿಡ್ಸ್ ಫೆಸ್ಟಿವಲ್-೨೦೨೪ ಎಂದು ಈ ದೇಶಪ್ರೇಮದ ಬಗ್ಗೆ ಪರಿಕಲ್ಪನೆ ಇಟ್ಟುಕೊಂಡು ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಈ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಗೆ ಸಂಸ್ಕಾರ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.ರಾಷ್ಟ್ರಪ್ರಶಸ್ತಿ ಪುರಸ್ಕೃತ ಆದರ್ಶ ಶಿಕ್ಷಕ ಹ.ಮ. ಪೂಜಾರ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಕ್ರಿಯೇಟಿವ್ ಕಿಡ್ಸ್ ಹೋಮ್ ಮೌಲ್ಯಾಧಾರಿತ ಶಿಕ್ಷಣ ನೀಡುವ ಜೊತೆಗೆ ಕ್ರೀಯಾತ್ಮಕ…
ಮುದ್ದೇಬಿಹಾಳ: ಒಮ್ಮೆ ಮಾದಕ ವಸ್ತುಗಳ ಸೇವನೆಗೆ ಒಳಗಾದಲ್ಲ್ಲಿ ಅದರಿಂದ ಹೊರಬರುವದು ಕಷ್ಟ. ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಗೆ ಬಲಿಯಾದಲ್ಲಿ ನಿಮ್ಮ ಭವಿಷ್ಯ ಹಾಳುಮಾಡಿಕೊಳ್ಳುವದು ಮಾತ್ರವಲ್ಲದೇ ನಿಮ್ಮನ್ನೇ ನಂಬಿರುವ ನಿಮ್ಮ ತಂದೆ ತಾಯಿಗಳು ಸೇರಿದಂತೆ ಇಡೀ ಕುಟುಂಬದವರ ಬದುಕನ್ನೂ ನಾಶಮಾಡಿದಂತೆ ಎಂದು ಪಿಎಸ್‌ಐ ಸಂಜೀವ ತಿಪರೆಡ್ಡಿ ಹೇಳಿದರು.ಪಟ್ಟಣದ ಜ್ಞಾನ ಭಾರತಿ ಶಾಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಜ್ಞಾನ ಭಾರತಿ ಶಾಲೆಯ ಸಹದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾದಕ ವಸ್ತುಗಳ ಮಾರಾಟದ ಕುರಿತು ಮುಂಜಾಗ್ರತಾ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.ಮಾದಕ ವಸ್ತುಗಳಿಗೆ ಬಲಿಯಾದವರ ಪೈಕಿ ಅತೀ ಹೆಚ್ಚು ವಿದ್ಯಾರ್ಥಿಗಳೇ ಇದ್ದು ತಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಮಾಡಿಕೊಂಡು ಆಸ್ಪತ್ರೆಯಲ್ಲಿ ನರಳಿ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಗೋಜಿಗೆ ಹೋಗದೇ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ದೊಡ್ಡ ಹುದ್ದೆಯನ್ನು ಅಲಂಕರಿಸಿ ಹೆತ್ತವರ ಮತ್ತು ದೇಶದ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.ಕ್ರೈಂ ಪಿಸೈ ಆರ್.ಎಲ್.ಮನ್ನಾಬಾಯಿ ಮಾತನಾಡಿದರು.ಕಾರ್ಯಕ್ರಮಕ್ಕೂ ಮೊದಲು ಶಾಲೆಯಿಂದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂದಿ ಮಾದಕ…
ನಾಲತವಾಡದ ಶ್ರೀ ವೀರೇಶ್ವರ ಕೃಷಿ ಪತ್ತಿನ ಸಹಕಾರಿ ಸಂಘ | ಸಿಬ್ಬಂದಿ ಗೈರು ಸಹಿ ಇಲ್ಲದ ಹಾಜರಿ ಪುಸ್ತಕಗಳು! ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಪಟ್ಟಣದ ಶ್ರೀ ವೀರೇಶ್ವರ ಪಿಕೆಪಿಎಸ್‌ನಲ್ಲಿ ಸೇವೆಯಲ್ಲಿದ್ದ ಸಿಬ್ಬಂದಿ ಗೈರಾಗಿದ್ದರೂ ವೇತನ ಬಟವಡೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ಅಕೌಂಟಂಟ್ ಹುದ್ದೆಯಲ್ಲಿರುವ ವಿ.ಎಂ.ಗಂಗನಗೌಡರ ಮತ್ತು ಕಂಪ್ಯೂಟರ್ ಆಪರೇಟರ್ ಎಸ್.ಬಿ.ಬಿರಾದಾರ ತಮ್ಮ ಸೇವೆಯಲ್ಲಿ ೩ ತಿಂಗಳು ಗೈರಾಗಿದ್ದರು ಎನ್ನಲಾದ ಬಗ್ಗೆ ಹಾಜರಿ ಪುಸ್ತಕಗಳು ರುಜುವಾತು ಪಡಿಸಿವೆ.ಹಾಜರಿ ಪುಸ್ತಕದಲ್ಲಿ ಮೇಲಿನ ಸಿಬ್ಬಂದಿಗಳ ಕಳೆದ ಸೆಪ್ಟಂಬರ ೧೨ ರಿಂದ ಡಿಸೆಂಬರ ಅಂತ್ಯದವರೆಗೆ ಒಟ್ಟು ೩ ತಿಂಗಳ ಕಾಲ ಯಾವುದೇ ರುಜು ಇಲ್ಲ. ಈ ಸಿಬ್ಬಂದಿ ಸೇವೆಗೆ ಹಾಜರಾಗದೇ ಇದ್ದರೂ ಇವರ ವೇತನವನ್ನು ಬಟವಡೆ ಮಾಡಿ ಸಂಬಂಧಿಸಿದ ಅಧಿಕಾರಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದ್ದು, ಇವರ ಅನಧಿಕೃತ ಗೈರಿನಿಂದಾಗಿ ರೈತರು ದಿನಂಪ್ರತಿ ಗೋಳಾಡುವಂತಾಗಿದ್ದು ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು…
ದೇವರಹಿಪ್ಪರಗಿ: ನಮ್ಮ ಬದುಕು ಎಂಬ ಪುಸ್ತಕದ ಪ್ರತಿ ಪುಟವು ಬೇರೆಯವರಿಗೆ ಪಾಠವಾಗಬೇಕು ಆ ರೀತಿಯಾದ ಬದುಕು ನಮ್ಮದಾಗಬೇಕು ಎಂದು ಎಮ್ಮಿಗನೂರು ಹಂಪಿಸಾವಿರದೇವರಮಠದ ವಾಮದೇವಶ್ರೀ ಹೇಳಿದರು.ಪಟ್ಟಣದಲ್ಲಿ ಶನಿವಾರ ಅಪ್ಪಾಜಿ ಶ್ರೀವೀರ ಸೋಮೇಶ್ವರ(ಎವ್ಹಿಎಮ್) ಪ್ರಾಜೆಕ್ಟ್ಸ್ ಅಡಿಯಲ್ಲಿ ರಂಭಾಪುರಿಶ್ರೀಗಳ ೬೮ನೇ ಜನ್ಮದಿನದ ಅಂಗವಾಗಿ ಜರುಗಿದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಈ ಭೂಮಿ ಒಂದೇ ಆದರೆ ಬೆಳೆಯುವ ಮರಗಳು ನೂರಾರು, ಈ ಎಲ್ಲ ಮರಗಳಲ್ಲಿ ಶ್ರೀಗಂಧಕ್ಕೆ ಯಾವ ರೀತಿಯಾಗಿ ಪವಿತ್ರ ಹಾಗೂ ವಿಶಿಷ್ಟ ಸ್ಥಾನವಿದೆಯೋ ಅದೇ ರೀತಿಯಾಗಿ ಇಂದು ಜಗದ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಹಲವಾರು ಮಹನೀಯರಿದ್ದಾರೆ. ಇವರುಗಳಲ್ಲಿ ರಂಭಾಪುರಿ ಸನ್ನಿಧಿಯವರು ತಮ್ಮ ಬದುಕನ್ನು ಗಂಧದಂತೆ ತೇದು ಸಮಾಜಕ್ಕೆ ದೀಪವಾಗಿದ್ದಾರೆ. ಇಂದು ಅವರ ೬೮ನೇ ಜನ್ಮದಿನದ ನಿಮಿತ್ತ ಅವರ ಪರಮಶಿಷ್ಯರಾದ ಬಾಳಯ್ಯ ಇಂಡಿಮಠ ದಿನದರ್ಶಿಕೆ ಬಿಡುಗಡೆಗೊಳಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.ಈ ಸಂದರ್ಭದಲ್ಲಿ ಪುರ್ತಗೇರಿಶ್ರೀಗಳು, ಎವ್ಹಿಎಮ್ ಮುಖ್ಯಸ್ಥ ಬಾಳಯ್ಯ ಇಂಡಿಮಠ, ತಾಲ್ಲೂಕು ಜಂಗಮ ಸಂಘದ ಅಧ್ಯಕ್ಷ ಸೋಮಶೇಖರ ಹಿರೇಮಠ, ಸಿದ್ದು ಪಾಟೀಲ (ಜಾಲವಾದ), ಕುಮಾರಸ್ವಾಮಿ ಸಾಲಿಮಠ,…
ವಿಜಯಪುರ: ನಗರ ಶಿಕ್ಷಕರ ಕಛೇರಿಯಿಂದ ಬಾಕಿ ಉಳಿದಿರುವ ಸೇವಾ ಪುಸ್ತಕದ ಕೆಲಸವನ್ನು ಸ್ಥಳದಲ್ಲಿಯೇ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಶನಿವಾರ ನಗರದ ಗೋಲಗುಮ್ಮಟ ವಲಯದ ಸುಮಾರು 205 ಶಿಕ್ಷಕರ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸೇವಾ ಪುಸ್ತಕವನ್ನು ಪರಿಶೀಲಿಸಿ ಅದರಲ್ಲಿನ ಬಾಕಿ ಉಳಿದಿರುವ ಸೇವಾ ವಿವರಗಳನ್ನು ಅವರ ಗಮನಕ್ಕೆ ತಂದಾಗ ಸ್ಥಳದಲ್ಲಿಯೇ ಸೇವಾ ಪುಸ್ತಕಕ್ಕೆ ಸಹಿ ಹಾಕಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘದ ಈ ಕಾರ್ಯಕ್ಕೆ ಎಲ್ಲ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಲಯದ ಎಲ್ಲಾ ಪ್ರತಿಯೊಬ್ಬ ಶಿಕ್ಷಕರಿಗೆ ನೌಕರರ ಸಂಘದ ಡೈರಿ 2024 ರ ಕ್ಯಾಲೆಂಡರ್ ಸೂಟಿ ಪತ್ರಿಕೆಯನ್ನು ವಿತರಿಸಿದರು. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತವರ ಕಛೇರಿಯ ಎಲ್ಲ ಸಿಬ್ಬಂದಿ, ನೌಕರರ ಸಂಘದ ಜಿಲ್ಲಾ ಖಜಾಂಚಿ ಸಯ್ಯದ್ ಜುಬೇರ ಕೆರೂರ ಶಿಕ್ಷಕರ ಸಂಘದ ನಗರ ಘಟಕದ ಅಧ್ಯಕ್ಷ ಎಸ್ ಎನ್ ಪಡಶೆಟ್ಟಿ ಕಾರ್ಯದರ್ಶಿ ಅಜೀಜ ಅರಳಿಮಟ್ಟಿ ಬಸೀರ ನದಾಫ ಜಗದೀಶ ಅಕ್ಕಿ ವೀರಭದ್ರಪ್ಪ…
