ದೇವರಹಿಪ್ಪರಗಿ: ನಮ್ಮ ಬದುಕು ಎಂಬ ಪುಸ್ತಕದ ಪ್ರತಿ ಪುಟವು ಬೇರೆಯವರಿಗೆ ಪಾಠವಾಗಬೇಕು ಆ ರೀತಿಯಾದ ಬದುಕು ನಮ್ಮದಾಗಬೇಕು ಎಂದು ಎಮ್ಮಿಗನೂರು ಹಂಪಿಸಾವಿರದೇವರಮಠದ ವಾಮದೇವಶ್ರೀ ಹೇಳಿದರು.
ಪಟ್ಟಣದಲ್ಲಿ ಶನಿವಾರ ಅಪ್ಪಾಜಿ ಶ್ರೀವೀರ ಸೋಮೇಶ್ವರ(ಎವ್ಹಿಎಮ್) ಪ್ರಾಜೆಕ್ಟ್ಸ್ ಅಡಿಯಲ್ಲಿ ರಂಭಾಪುರಿಶ್ರೀಗಳ ೬೮ನೇ ಜನ್ಮದಿನದ ಅಂಗವಾಗಿ ಜರುಗಿದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಭೂಮಿ ಒಂದೇ ಆದರೆ ಬೆಳೆಯುವ ಮರಗಳು ನೂರಾರು, ಈ ಎಲ್ಲ ಮರಗಳಲ್ಲಿ ಶ್ರೀಗಂಧಕ್ಕೆ ಯಾವ ರೀತಿಯಾಗಿ ಪವಿತ್ರ ಹಾಗೂ ವಿಶಿಷ್ಟ ಸ್ಥಾನವಿದೆಯೋ ಅದೇ ರೀತಿಯಾಗಿ ಇಂದು ಜಗದ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಹಲವಾರು ಮಹನೀಯರಿದ್ದಾರೆ. ಇವರುಗಳಲ್ಲಿ ರಂಭಾಪುರಿ ಸನ್ನಿಧಿಯವರು ತಮ್ಮ ಬದುಕನ್ನು ಗಂಧದಂತೆ ತೇದು ಸಮಾಜಕ್ಕೆ ದೀಪವಾಗಿದ್ದಾರೆ. ಇಂದು ಅವರ ೬೮ನೇ ಜನ್ಮದಿನದ ನಿಮಿತ್ತ ಅವರ ಪರಮಶಿಷ್ಯರಾದ ಬಾಳಯ್ಯ ಇಂಡಿಮಠ ದಿನದರ್ಶಿಕೆ ಬಿಡುಗಡೆಗೊಳಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.
ಈ ಸಂದರ್ಭದಲ್ಲಿ ಪುರ್ತಗೇರಿಶ್ರೀಗಳು, ಎವ್ಹಿಎಮ್ ಮುಖ್ಯಸ್ಥ ಬಾಳಯ್ಯ ಇಂಡಿಮಠ, ತಾಲ್ಲೂಕು ಜಂಗಮ ಸಂಘದ ಅಧ್ಯಕ್ಷ ಸೋಮಶೇಖರ ಹಿರೇಮಠ, ಸಿದ್ದು ಪಾಟೀಲ (ಜಾಲವಾದ), ಕುಮಾರಸ್ವಾಮಿ ಸಾಲಿಮಠ, ಅಕ್ಷಯಕುಮಾರ ಮಠ, ಪ್ರಶಾಂತ ಬಡಿಗೇರ, ಚಂದ್ರಶೇಖರ ದಾನಗೊಂಡ, ಮಲ್ಲು ಭಂಡಾರಿ, ಮಂಜುನಾಥ ಮಲ್ಲಿಕಾರ್ಜುನಮಠ, ಶಿವಾನಂದ ಕುಂಬಾರ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

