ವಿಜಯಪುರ: ವಿಜಯಪುರದ ಶ್ರೀ ಸಿದ್ದೇಶ್ವರ ಜಾತ್ರೆಗೆ ಸಮರ್ಪಕವಾಗಿ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ೧೧ಕೆವ್ಹಿ ಮಾರ್ಗಗಳಿಗೆ ದುರಸ್ತಿ ಕಾಮಗಾರಿ ಕೈಗೊಳ್ಳುವುದರಿಂದ ೧೧೦/೧೧ ಕೆವ್ಹಿ ಕೆಐಎಡಿಬಿ ವಿಜಯಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಓಲ್ಡ್ ಇಂಡಸ್ಟ್ರಿ ಫೀಡರ್ ಮತ್ತು ಎಲ್.ಬಿ.ಎಸ್.ಫೀಡರ್‌ಗಳ ಮೇಲೆ ಬರುವ ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಜ.೮ ರಂದು ಓಲ್ಡ್ ಇಂಡಸ್ಟ್ರಿ ಫೀಡರ್ ಮೇಲೆ ಬರುವ ಪಾನಿ ನಗರ, ಪರಮೇಶ್ವರ ನಗರ, ಆದಿಲ್‌ಶಾಹಿ, ಶಿಕಾರಖಾನೆ, ಸ್ಟೇಶನ್ ಬ್ಯಾಕ್ ರಸ್ತೆ, ಸಾ ಮಿಲ್ ಏರಿಯಾ, ಸ್ಟೇಡಿಯಂ ರೋಡ್ ಎಪಿಎಂಸಿ ಮಾರ್ಗಗಳಿಗೆ ಬೆಳಿಗ್ಗೆ ೮ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಜ.೧೦ ರಂದು ಎಲ್.ಬಿ.ಎಸ್. ಫೀಡರ್ ಮೇಲೆ ಬರುವ ಇಂಡಿ ರಸ್ತೆ, ವಿಜಯ ಟೈರ‍್ಸ್, ಎನ್.ಎಚ್.-೫೨, ಬೊಂಬಾಳ ಅಗಸಿ, ರಜಪೂತ ಗಲ್ಲಿ, ಮಿನಿ ಮಾದರ ಓಣಿ, ಕೋರಿ ಚೌಕ್, ನಾಲಬಂದ್ ಚೌಕ್, ಸಿ.ಬಿ.ಎಸ್. ಮಾರ್ಕೆಟ್, ಬಾರಾಕಮಾನ್ ಹಾಗೂ ಜೋಳದ ಮಾರ್ಕೆಟ್ ಪ್ರದೇಶಗಳಿಗೆ ಬೆಳಿಗ್ಗೆ ೯ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
