ಸಿಂದಗಿ: ವಿಜಯಪುರ ಜಿಲ್ಲೆಯನ್ನು ವಿಭಜನೆ ಮಾಡಿ ಹೊಸ ಜಿಲ್ಲೆ ಸೃಷ್ಟಿ ಮಾಡುವುದಾದರೆ ಸಿಂದಗಿ ತಾಲೂಕಾ ಜಿಲ್ಲಾ ಕೇಂದ್ರವಾಗಿ ಮಾರ್ಪಡಿಸಲು ವಿವಿಧ ಮಹಿಳಾ ಸಂಘಟನೆಯ ಪದಾಧಿಕಾರಿಗಳು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ಉಪವಿಭಾಗಾಧಿಕಾರಿಗಳು ಇಂಡಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷೆ ಶಿಲ್ಪಾ ಕುದರಗೊಂಡ, ಸಾಧನಾ ಸಂಘಟನೆಯ ಅನಸುಭಾಯಿ ಪರಗೊಂಡ, ಜನಜಾಗೃತಿ ಸಂಘಟನೆಯ ನೀಲಮ್ಮ ಯಡ್ರಾಮಿ, ಶಾಮಲಾ ಮಂದೇವಾಲಿ, ಅನುಸುಬಾಯಿ ಮೇಲಿನಮನಿ, ಗೌಸಿಯಾ ಶೇಖ, ಜಯಶ್ರೀ ನಾಟೀಕಾರ, ಲಕ್ಷ್ಮೀ ಕಲಾಲ, ಯಮನಾಬಾಯಿ ಮಾದರ, ಅನ್ನಪೂರ್ಣ ದೇವಕರ ಸೇರಿದಂತೆ ಅನೇಕರು ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿಯೇ ಸಿಂದಗಿ ತಾಲೂಕು ಅತೀ ಹೆಚ್ಚು ಭೌಗೋಳಿಕವಾಗಿ ಜನಸಂಖ್ಯೆಯನ್ನು ಹೊಂದಿದ್ದು, ವಿಸ್ತೀರ್ಣದಲ್ಲಿಯೂ ದೊಡ್ಡದಾಗಿದೆ. ಸಿಂದಗಿಯು ಪ್ರಸ್ತುತ ಕೇಂದ್ರಸ್ಥಾನದಲ್ಲಿದ್ದು ಸುತ್ತ ಮುತ್ತಲಿನ ಕಲಬುರ್ಗಿ, ಯಾದಗಿರಿ, ರಾಯಚೂರ ಹಾಗೂ ವಿಜಯಪುರ ಜಿಲ್ಲೆಗಳ ಹೆಚ್ಚಿನ ಸಂಪರ್ಕ ಹೊಂದಿದೆ. ಮತ್ತು ಕಂದಾಯ ಇಲಾಖೆಯಲ್ಲಿ ಅತೀ ಹೆಚ್ಚಿನ ಆದಾಯವನ್ನು ಸಿಂದಗಿ ತಾಲೂಕಿನಿಂದ ಸಂಗ್ರಹವಾಗುತ್ತಿದ್ದು ವ್ಯವಸ್ಥಿತ ನಗರ ವ್ಯವಸ್ಥೆಯನ್ನು ಹೊಂದಿದೆ. ಕಾರಣ ಸಿಂದಗಿ ಜಿಲ್ಲಾ ಕೇಂದ್ರವೆಂದು ಪರಿಗಣಿಸಿ ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

