ನಾಲತವಾಡದ ಶ್ರೀ ವೀರೇಶ್ವರ ಕೃಷಿ ಪತ್ತಿನ ಸಹಕಾರಿ ಸಂಘ | ಸಿಬ್ಬಂದಿ ಗೈರು ಸಹಿ ಇಲ್ಲದ ಹಾಜರಿ ಪುಸ್ತಕಗಳು!
ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಪಟ್ಟಣದ ಶ್ರೀ ವೀರೇಶ್ವರ ಪಿಕೆಪಿಎಸ್‌ನಲ್ಲಿ ಸೇವೆಯಲ್ಲಿದ್ದ ಸಿಬ್ಬಂದಿ ಗೈರಾಗಿದ್ದರೂ ವೇತನ ಬಟವಡೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಅಕೌಂಟಂಟ್ ಹುದ್ದೆಯಲ್ಲಿರುವ ವಿ.ಎಂ.ಗಂಗನಗೌಡರ ಮತ್ತು ಕಂಪ್ಯೂಟರ್ ಆಪರೇಟರ್ ಎಸ್.ಬಿ.ಬಿರಾದಾರ ತಮ್ಮ ಸೇವೆಯಲ್ಲಿ ೩ ತಿಂಗಳು ಗೈರಾಗಿದ್ದರು ಎನ್ನಲಾದ ಬಗ್ಗೆ ಹಾಜರಿ ಪುಸ್ತಕಗಳು ರುಜುವಾತು ಪಡಿಸಿವೆ.
ಹಾಜರಿ ಪುಸ್ತಕದಲ್ಲಿ ಮೇಲಿನ ಸಿಬ್ಬಂದಿಗಳ ಕಳೆದ ಸೆಪ್ಟಂಬರ ೧೨ ರಿಂದ ಡಿಸೆಂಬರ ಅಂತ್ಯದವರೆಗೆ ಒಟ್ಟು ೩ ತಿಂಗಳ ಕಾಲ ಯಾವುದೇ ರುಜು ಇಲ್ಲ. ಈ ಸಿಬ್ಬಂದಿ ಸೇವೆಗೆ ಹಾಜರಾಗದೇ ಇದ್ದರೂ ಇವರ ವೇತನವನ್ನು ಬಟವಡೆ ಮಾಡಿ ಸಂಬಂಧಿಸಿದ ಅಧಿಕಾರಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದ್ದು, ಇವರ ಅನಧಿಕೃತ ಗೈರಿನಿಂದಾಗಿ ರೈತರು ದಿನಂಪ್ರತಿ ಗೋಳಾಡುವಂತಾಗಿದ್ದು ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಸಿಬ್ಬಂದಿಗಳಿಗೆ ಸೂಕ್ತ ಎಚ್ಚರಿಕೆ ನೀಡಿ ರೈತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


